For Quick Alerts
ALLOW NOTIFICATIONS  
For Daily Alerts

ಸ್ನಾನದ ಕೊಠಡಿಯನ್ನು ಅಂದವಾಗಿಸಲು ಸರಳ ಟಿಪ್ಸ್

By Super
|

ನಮ್ಮ ಮನೆಯಲ್ಲಿ ದಿನವಿಡೀ ಬಳಸಲ್ಪಡುವಂತಹ ಕೆಲವೊಂದು ಸ್ಥಳಗಳಲ್ಲಿ ಬಾತ್‍ರೂಮ್ (ಸ್ನಾನಗೃಹ) ಸಹ ಒಂದು. ಇಲ್ಲಿ ನಾವು ನಮ್ಮ ದೇಹದ ಕಶ್ಮಲಗಳನ್ನು ಹೊರ ಹಾಕುವ ಮೂಲಕ ಪ್ರತಿ ಸಲವು ಹೊಸ ಹುರುಪನ್ನು ಪಡೆಯುತ್ತಿರುತ್ತೇವೆ. ಇದನ್ನು ಸ್ವಚ್ಛವಾಗಿರಿಸಿಕೊಳ್ಳುವ ಕೆಲಸದ ಜೊತೆಗೆ, ಇದನ್ನು ಅಂದವಾಗಿ ಸಹ ಇಡುವ ಹೊಣೆ ನಮ್ಮ ಮೇಲೆ ಇರುತ್ತದೆ.

ಇದಕ್ಕಾಗಿಯೇ ನಾವು ಬಾತ್‍ರೂಮ್ ಸಿದ್ಧಪಡಿಸುವ ಸಮಯದಲ್ಲಿಯೇ ವಿಶೇಷವಾದ ಕಾಳಜಿಗಳನ್ನು ತೋರುತ್ತೇವೆ. ಕಮೋಡ್ ಮತ್ತು ವಾಟರ್ ಔಟ್‍ಲೆಟ್ ಅಳವಡಿಸುವಾಗಲೇ ಅದು ಸೋರದಿರುವಂತೆ ಎಚ್ಚರಿಕೆಯನ್ನು ವಹಿಸುತ್ತೇವೆ. ಇನ್ನೂ ನೀರು ಬೀಳದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ದೂರವಿಡುತ್ತೇವೆ, ನೆಲ ಬೇಗ ಒಣಗಲು ಅನುಕೂಲವಾಗುವಂತಹ ಟೈಲ್ಸ್ ಖರೀದಿಸುತ್ತೇವೆ. ಗ್ರ್ಯಾಬ್ ಬಾರ್‌ಗಳನ್ನು ಅಳವಡಿಸಿಕೊಳ್ಳುತ್ತೇವೆ. ಜಾರದಂತಹ ಮ್ಯಾಟ್ ಮತ್ತು ಟೈಲ್ಸ್‌ಗೆ ಆಧ್ಯತೆ ನೀಡುತ್ತೇವೆ. ಜೊತೆಗೆ ಅದನ್ನು ಬೆಳಗಲು ಬೇಕಾಗುವ ವಸ್ತುಗಳನ್ನು.....

ಹೌದು, ನಾವು ಈ ಮೊದಲು ಹೇಳಿದ ಎಲ್ಲವು ಪ್ರಮುಖ ವಿಚಾರಗಳೆ, ಅದನ್ನು ನಾವು ಒಪ್ಪುತ್ತೇವೆ. ಹಾಗೆಂದು ಬಾತ್‍ರೂಮಿಗೆ ಒಳ್ಳೆಯ ಲೈಟ್‍ಗಳನ್ನು ಹಾಕಲಿಲ್ಲವೆಂದರೆ ಹೇಗೆ. ಕಣ್ಣು ಕತ್ತಲೆ ಬರುವ ಬಾತ್‍ರೂಮಿನಲ್ಲಿ ನೀವು ನಿಮ್ಮ ನಿತ್ಯ ಕರ್ಮಗಳನ್ನು ಮಾಡಲು ಇಷ್ಟಪಡುವುದಿಲ್ಲ. ಸುಮ್ಮನೆ ಅದರ ಒಳಗೆ ಹೋಗಿ ಏನೋ ಒಂದು ಮಾಡಿ ಬರುವುದು ತಾನೇ ಎನ್ನಲು ಸಹ ಆಗುವುದಿಲ್ಲ, ಅದು ಸುರಕ್ಷಿತವು ಅಲ್ಲ.

7 Tips on How to Light a Bathroom

ಇದರ ಜೊತೆಗೆ ಲೈಟಿಂಗ್ ನಿಮ್ಮ ನಿತ್ಯ ಕರ್ಮಗಳಿಗೆ ಒಂದು ನಾಟಕೀಯ ಸ್ಪರ್ಶ ನೀಡುವುದರ ಜೊತೆಗೆ, ನಿಮಗೆ ವಿಶ್ರಾಂತಿಯ ಮನೋಭಾವವನ್ನು ಸಹ ನೀಡುತ್ತದೆ. ಹಾಗಾದರೆ ಬನ್ನಿ ನಾವು ನಿಮಗೆ ಈ ದಿನ ಬಾತ್‍ರೂಮನ್ನು ಬೆಳಗಲು ಕೆಲವೊಂದು ಸಲಹೆಗಳನ್ನು ನಿಮಗಾಗಿ ನೀಡುತ್ತಿದ್ದೇವೆ. ಇವುಗಳನ್ನು ಪಾಲಿಸಿ ನಿಮ್ಮ ಬಾತ್‍ರೂಮನ್ನು ಮತ್ತಷ್ಟು ಅಂದವಾಗಿರಿಸಿಕೊಳ್ಳಿ. ನಿಮ್ಮ ಅಡುಗೆ ಕೋಣೆಯ ಸ್ವಚ್ಛತೆ ಹೀಗಿರಲಿ!

ಟಾಸ್ಕ್ ಲೈಟಿಂಗ್ ಅಳವಡಿಸಿಕೊಳ್ಳಿ


ನಿಮ್ಮ ಬಾತ್‍ರೂಮಿನ ಮೆರಗನ್ನು ಹೆಚ್ಚಿಸಲು ಟಾಸ್ಕ್ ಲೈಟಿಂಗ್ ಅಳವಡಿಸಬಹುದು. ಇದನ್ನು ನಿಮ್ಮ ವ್ಯಾನಿಟಿ ಮತ್ತು ಶಾವರಿನ ಮೇಲೆ ಅಳವಡಿಸಿದರೆ ಉತ್ತಮ. ಒಂದು ವೇಳೆ ನಿಮ್ಮ ಬಾತ್‍ರೂಮ್ ಚಿಕ್ಕದಾಗಿದ್ದರೆ ಇದರ ಅವಶ್ಯಕತೆ ನಿಮಗಿರುವುದಿಲ್ಲ. ಇಲ್ಲವಾದಲ್ಲಿ, ಎರಡು ಟಾಸ್ಕ್ ಲೈಟ್ ಅಳವಡಿಸಿಕೊಳ್ಳಿ. ಒಂದು ಟಾಸ್ಕ್ ಲೈಟ್ ಸಂಪೂರ್ಣ ಪ್ರದೇಶವನ್ನು ಬೆಳಗಿದರೆ, ಮತ್ತೊಂದು ನೀವು ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಟಾಸ್ಕ್ ಲೈಟ್‍ಗಳನ್ನು ಕನ್ನಡಿಯ ಮೇಲೆ ಹಾಕಬೇಡಿ


ಕನ್ನಡಿಯ ಮೇಲೆ ಹಾಕುವ ದೀಪಗಳು ನಿಮ್ಮ ಮುಖದ ಮೇಲೆ ನೆರಳನ್ನು ಸೃಷ್ಟಿಮಾಡುತ್ತವೆ. ಇದರಿಂದ ನಿಮಗೆ ಮೇಕಪ್ ಮಾಡಿಕೊಳ್ಳಲು ಮತ್ತು ಶೇವಿಂಗ್ ಮಾಡಿಕೊಳ್ಳಲು ಸರಿ ಹೋಗುವುದಿಲ್ಲ. ಲೈಟಿಂಗ್ ನಿಮ್ಮ ಕಾರ್ಯಗಳಿಗೆ ಯಾವುದೇ ವಿನಾಯಿತಿಯನ್ನು ಒದಗಿಸುವುದಿಲ್ಲ. ಆದ್ದರಿಂದ ದೀಪವನ್ನು ಕನ್ನಡಿಯ ಮೇಲೆ ಅಳವಡಿಸುವುದಕ್ಕೆ ಬದಲಾಗಿ, ಅದನ್ನು ಅಕ್ಕ-ಪಕ್ಕ ಎಲ್ಲಾದರು ಅಳವಡಿಸಿ. ಬೆಳಕು ಮುಖದ ಮೇಲೆ ಬಿದ್ದರು ಪರವಾಗಿಲ್ಲ. ಒಂದು ವೇಳೆ ನಿಮ್ಮ ವ್ಯಾನಿಟಿಯ ಬಳಿ ಇದಕ್ಕೆ ಸ್ಥಳಾವಕಾಶವಿಲ್ಲದಿದ್ದಲ್ಲಿ, ಆಗ ದೀಪವನ್ನು ಕನ್ನಡಿಯ ಮೇಲೆ ಅಳವಡಿಸಿ. ಮನೆ ವಿಶಾಲವಾಗಿ ಕಾಣಲು ಕೆಲವೊಂದು ಸಲಹೆಗಳು

ಟಾಸ್ಕ್ ಲೈಟ್ ವ್ಯಾಟ್


ಗೆಸ್ಟ್ ಹಾಗು ಮಾಸ್ಟರ್ ಬಾತ್‍ರೂಮುಗಳಿಗೆ ಆದಷ್ಟು 75-100 ವ್ಯಾಟ್ ಸಾಮರ್ಥ್ಯದ ಲೈಟುಗಳನ್ನು ಬಳಸಿ. ಒಂದು ವೇಳೆ ನೀವು ಕಾಂಪ್ಯಾಕ್ಟ್ ಫ್ಲೋರೊಸೆಂಟ್ ದೀಪಗಳನ್ನು ಬಳಸುತ್ತಿದ್ದಲ್ಲಿ, 24-26 ವ್ಯಾಟ್‍ಗಳಿರುವ ದೀಪಗಳನ್ನು ಬಳಸಿ. ಇನ್ನು ಎಲ್‍ಇಡಿ ಬಳಸಿದಲ್ಲಿ, ಅದು 20-25 ವ್ಯಾಟ್ ಇದ್ದರೆ ಸಾಕು. ಇದಕ್ಕೆ ಡಿಮ್ಮರ್‌ಗಳನ್ನು ಸಹ ನಿಮಗೆ ಅಗತ್ಯವಿದ್ದಲ್ಲಿ ಬಳಸಬಹುದು. ಬೆಳಗ್ಗೆ ನೀವು ಬೇಗ ಎದ್ದಾಗ ಪೌಡರ್ ರೂಮಿನಲ್ಲಿ 45 ವ್ಯಾಟ್ ಲೈಟಿಂಗ್ ಬಳಸಬಹುದು.

ಆಂಬಿಯೆಂಟ್ ಸೋರ್ಸ್ ಲೈಟಿಂಗ್ ಸೇರಿಸಿ


ಆಂಬಿಯೆಂಟ್ ಲೈಟಿಂಗ್ ಎಂಬುದು ಒಂದು ಫಿಲ್ಲ್ ಲೈಟ್, ಇದು ಸ್ವಾಭಾವಿಕವಾದ ಬೆಳಕಿನ ಸ್ಥಾನವನ್ನು ತುಂಬುತ್ತದೆ. ಒಂದು ವೇಳೆ ನಿಮ್ಮ ಬಾತ್‍ರೂಮ್‍ಗೆ ಎತ್ತರವಾದ ಸೀಲಿಂಗ್, ಕೋವ್ ಡಿಸೈನ್ ಅಥವಾ ಕ್ಯಾಂಟಿಲಿವರ್ ಡಿಟೇಲ್ಸ್ ಇದ್ದಲ್ಲಿ, ನೀವು ಪೆಂಡೆಂಟ್ ಫಿಕ್ಸ್ಚರಿನ ಅರೆ ಪಾರದರ್ಶಕ ಶೇಡಿನ ಆಂಬಿಯೆಂಟ್ ಡಿಸೈನ್ ಲೈಟುಗಳನ್ನು ಬಳಸಬಹುದು. ಪೆಂಡೆಂಟ್ ಮತ್ತು ಶಾಂಡೆಲಿಯರ್ ಲೈಟ್‍ಗಳ ಜೊತೆಗೆ ನೀವು ಕೋವ್ ಲೈಟಿಂಗ್ ಅನ್ನು ಸಹ ಬಳಸಬಹುದು. ಇದು ಇಡೀ ಕೋಣೆಗೆ ಮೃದುವಾದ ಮೆರಗನ್ನು ನೀಡುತ್ತದೆ.

ಆಕ್ಸೆಂಟ್ ಲೈಟಿಂಗನ್ನು ಮರೆಯಬೇಡಿ


ನಿಮ್ಮ ಬಾತ್‍ರೂಮಿಗೆ ಆಕ್ಸೆಂಟ್ ಲೈಟಿಂಗಿನ ನಾಟಕೀಯ ಸ್ಪರ್ಶವನ್ನು ನೀಡಲು ಮರೆಯಬೇಡಿ. ಇದಕ್ಕಾಗಿ ನೀವು ಒಂದು ಚಿಕ್ಕದಾದ ಸ್ಪಾಟ್ ಲೈಟುಗಳನ್ನು ಬೇಕಾದರು ಬಳಸಬಹುದು. ಈ ಸ್ಪಾಟ್‍ಲೈಟುಗಳನ್ನು ಯಾವುದಾದರು ಆರ್ಟ್ ವರ್ಕ್‍ನತ್ತ ಹಾಯಿಸಿದರೆ ನಿಮ್ಮ ಬಾತ್‍ರೂಮಿನ ಸೌಂದರ್ಯ ದ್ವಿಗುಣವಾಗುತ್ತದೆ. ಇದನ್ನು ಬೇಕಾದರೆ ಪೌಡರ್ ರೂಮಿನ ಬೇಸಿನ್‍ನತ್ತ ಬೇಕಾದರು ಗುರಿ ಮಾಡಿ ಫಿಟ್ ಮಾಡಬಹುದು. ಇದನ್ನು 35 ಡಿಗ್ರಿ ಕೋನದಲ್ಲಿ ಬಾಗಿಸಿ, ಶಾವರ್ ಪ್ರದೇಶದತ್ತ ಇದರ ಬೆಳಕು ಹಾಯುವಂತೆ ಮಾಡಿ, ಇದರಿಂದ ನಿಮ್ಮ ಬಾತ್‍ರೂಮಿನ ಅದ್ಭುತವಾದ ಟೈಲ್ಸ್‌ಗಳ ಅಂದ ಎದ್ದು ಕಾಣುತ್ತದೆ.
English summary

7 Tips on How to Light a Bathroom

The bathroom is a place in our homes that we get to use all day. We have a private time while in there as we clean and refresh ourselves. Aside from that, lighting would add drama to your bathroom which can contribute to its relaxing feel. So, today we will give you tips on how you can use light the right way for your bathrooms.
Story first published: Wednesday, November 19, 2014, 17:14 [IST]
X
Desktop Bottom Promotion