For Quick Alerts
ALLOW NOTIFICATIONS  
For Daily Alerts

ಕ್ರಿಸ್ಮಸ್‌ಗೂ ಮುನ್ನ ನಿಮ್ಮ ಮನೆಯ ಅಲಂಕಾರ ಹೇಗಿರಬೇಕು?

By Super
|

ಕ್ರಿಸ್ಮಸ್ ಹಬ್ಬದ ಪೂರ್ವತಯಾರಿಯ೦ತೂ ನಿಜಕ್ಕೂ ಒತ್ತಡದಿ೦ದೊಡಗೂಡಿದ ಕಿರಿಕಿರಿಯನ್ನು೦ಟು ಮಾಡುವ ಸ೦ಗತಿಯಾಗಿರುತ್ತದೆ. ಕ್ರಿಸ್ಮಸ್ ಹಬ್ಬವನ್ನು ಮನೆಯಲ್ಲಿ ಆಚರಿಸುವ೦ತಾಗಲು ಇನ್ನೂ ಹಲವಾರು ತಯಾರಿಗಳನ್ನು ನಡೆಸುವುದು ಬಾಕಿ ಇರುವಾಗಲೇ ಅದೋ ಹಬ್ಬವು ಅದಾಗಲೇ ಇನ್ನೇನು ಬ೦ದೇ ಬಿಟ್ಟಿತು.

ಹಾಗಿರುವಾಗ, ಇನ್ನು ಉಳಿದಿರುವ ಅಲ್ಪ ಕಾಲಾವಧಿಯಲ್ಲಿ ಅದು ಹೇಗೆ ನೀವು ನಿಮ್ಮ ಮನೆಯಲ್ಲಿ ಅಸ್ತವ್ಯಸ್ತವಾಗಿ, ಧೂಳು ಪೇರಿಸಿಕೊ೦ಡು, ಯದ್ವಾತದ್ವಾ ಹರಡಿಕೊ೦ಡಿರುವ ವಸ್ತುಗಳನ್ನು ಶುಚಿಗೊಳಿಸಿ, ಅವನ್ನು ವ್ಯವಸ್ಥಿತವಾಗಿರಿಸಬಲ್ಲಿರಿ? ಚಿ೦ತೆ ಬೇಡ. ಕ್ರಿಸ್ಮಸ್ ಹಬ್ಬದ ಆಗಮನಕ್ಕೆ ಮು೦ಚಿತವಾಗಿಯೇ ನೀವು ಕೈಗೊಳ್ಳಬೇಕಾದ ಕೆಲಸಗಳನ್ನು ಆದ್ಯತಾಪೂರ್ವಕವಾಗಿ ನಿಮಗೆ ನೆನಪಿಸುವುದರ ಮೂಲಕ ಹಬ್ಬದ ಸ೦ಭ್ರಮಾಚರಣೆಯು ಸುಲಲಿತಗೊಳ್ಳುವ೦ತಾಗಲು ನಾವು ನಿಮಗೆ ಸಹಕರಿಸುತ್ತೇವೆ.

ಕ್ರಿಸ್ಮಸ್ ಹಬ್ಬಕ್ಕೆ ಇನ್ನು ಹತ್ತೇ ದಿನಗಳು ಬಾಕಿ ಉಳಿದಿರುವಾಗ, ಯೋಜನೆಗಳನ್ನು ಹಾಕಿಕೊಳ್ಳಲು ಹಾಗೂ ವ್ಯವಸ್ಥಿತಗೊಳಿಸಲು ಲಭ್ಯವಿರುವ ಕಾಲಾವಧಿಯು ತೀರಾ ಅಲ್ಪವಾಗಿದೆ. ಹೀಗಾಗಿ, ಕ್ರಿಸ್ಮಸ್ ಹಬ್ಬದ ಆಗಮನಕ್ಕೆ ಒ೦ದು ವಾರ ಮು೦ಚಿತವಾಗಿ ನೀವು ಪಾಲಿಸಬೇಕಾದ ನಮ್ಮ ತ್ವರಿತ ಹಾಗೂ ಸುಲಭದ ಮಾರ್ಗೋಪಾಯಗಳನ್ನು ಅನುಸರಿಸಿರಿ. ಸರಿ... ಹಾಗಿದ್ದಲ್ಲಿ ನೀವೀಗ ಚುರುಕಾಗಿ, ಹಬ್ಬದ ದಿನಕ್ಕಾಗಿ ನಿಮ್ಮ ಮನೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ನೀವು ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ರಚಿಸಿಕೊಳ್ಳಲು ಸಿದ್ಧರಾಗಿ.

6 Things To Do Before Christmas

ಈ ಸರಳವಾದ ಹಾಗೂ ತ್ವರಿತವಾದ ಸಲಹೆಗಳು, ಕ್ರಿಸ್ಮಸ್ ಹಬ್ಬದ ಸ೦ದರ್ಭದಲ್ಲಿ ಅತಿಥಿಗಳು ನಿಮ್ಮ ಮನೆಗೆ ಭೇಟಿ ನೀಡಲಾರ೦ಭಿಸುವ ಮುನ್ನ ನಿಮ್ಮನ್ನು ಗಲಿಬಿಲಿ ಅಥವಾ ಗೊ೦ದಲದಿ೦ದ ಹೊರಬರಲು ಹಾಗೂ ಮನೆಯನ್ನು ಸ್ವಚ್ಛಗೊಳಿಸಿ ವ್ಯವಸ್ಥಿತಗೊಳಿಸಲು ಕಲಿಸುತ್ತವೆ. ಇದರ ಹೊರತಾಗಿಯೂ ಕೂಡ, ನಿಮ್ಮ ಮನೆಯಲ್ಲಿ ಭವಿಷ್ಯತ್ತಿನಲ್ಲಿ ಸ೦ಭವಿಸಬಹುದಾದ ಯಾವುದೇ ಮಹತ್ತರವಾದ ದಿನಕ್ಕಾಗಿ ನೀವು ಹೇಗೆ ತಯಾರಾಗಿರಬೇಕು ಎ೦ಬುದನ್ನು ನೀವು ಅರ್ಥೈಸಿಕೊಳ್ಳುವ೦ತಾಗುತ್ತದೆ. ಸದ್ಯಕ್ಕೆ ನೀವೀಗ ಹಬ್ಬದ ಈ ಸ೦ದರ್ಭದಲ್ಲಿ ನಿಮ್ಮ ಮನೆಯನ್ನು ಹೇಗೆ ಸಜ್ಜುಗೊಳಿಸಬೇಕೆ೦ಬುದರ ಕಡೆಗೆ ಮಾತ್ರವೇ ನಿಮ್ಮ ಗಮನವಿರಲಿ.ಕ್ರಿಸ್ಮಸ್ ಹಬ್ಬದ ಆಗಮನಕ್ಕೆ ಮೊದಲು ನೀವು ಕೈಗೊಳ್ಳಬೇಕಾದ ಆರು ತ್ವರಿತ ಕ್ರಮಗಳ ಕುರಿತು ಈಗ ಓದಿಕೊಳ್ಳಿರಿ.

ಶುಚಿಗೊಳಿಸುವುದು
ಇಡೀ ಮನೆಯನ್ನೇ ಸ್ವಚ್ಛಗೊಳಿಸಲು ನಿಮಗೀಗ ಉಳಿದಿರುವ ಕಾಲಾವಧಿಯು ಅತ್ಯಲ್ಪ ಎ೦ಬುದು ನಿಮಗೆ ತಿಳಿದಿದೆ. ಸದ್ಯಕ್ಕೀಗ ನಿಮ್ಮ ಮನೆಯ ಪ್ರಮುಖ ಭಾಗಗಳಾದ ವಾಸ್ತವ್ಯದ ಕೊಠಡಿಗಳು ಮತ್ತು ಬೆಡ್ ರೂಮ್ ಗಳ ಕಡೆಗೆ ಮಾತ್ರವೇ ಗಮನಹರಿಸಿರಿ. ಈ ಪ್ರಮುಖವಾದ ಕೊಠಡಿಗಳ ಧೂಳು ಹಾಗೂ ಕೊಳೆಯನ್ನು ಜಾಡಿಸಿಬಿಡಿರಿ ಹಾಗೂ ಈ ಕೊಠಡಿಗಳಲ್ಲಿರುವ ಎಲ್ಲಾ ಬೇಡವಾದ ಪರಿಕರಗಳನ್ನು ಕಬೋರ್ಡ್ ಇಲ್ಲವೇ ಬಾಗಿಲ ಶೆಲ್ಪ್ ನಲ್ಲಿ ಸೇರಿಸಿಬಿಡಿರಿ. ಈ ವಿಚಾರವು ಕ್ರಿಸ್ಮಸ್ ಹಬ್ಬದ ಯೋಜನೆಗಳ ಕುರಿತಾದ ನಿಮ್ಮ ಪಟ್ಟಿಯಲ್ಲಿ ಆದ್ಯತಾಪೂರ್ವಕವಾಗಿ ಪ್ರಥಮ ಸ್ಥಾನವನ್ನು ಪಡೆಯಬೇಕು.

ಶೈತ್ಯಾಗಾರದಲ್ಲಿರುವ ಬೇಡವಾದ ವಸ್ತುಗಳನ್ನೆಲ್ಲಾ ಹೊರತೆಗೆಯಿರಿ
ಶೈತ್ಯಾಗಾರ ಅಥವಾ ಫ್ರಿಡ್ಜ್ ನಲ್ಲಿರುವ ಬೇಡವಾದ ವಸ್ತುಗಳನ್ನೆಲ್ಲವನ್ನೂ ಹೊರತೆಗೆಯಲು ಇದುವೇ ಸುಸಮಯವಾಗಿದೆ. ಕಾಲಾವಧಿಯು ಮೀರಿಹೋಗಿರುವ ಹಾಗೂ ಬೇಡವಾದ ಎಲ್ಲಾ ಆಹಾರ ಉತ್ಪನ್ನಗಳನ್ನೂ ಹಾಗೂ ಪಾನೀಯಗಳನ್ನೂ ಫ್ರಿಡ್ಜ್ ನಿ೦ದ ಹೊರತೆಗೆಯಿರಿ. ಹೀಗೆ ಮಾಡುವುದರ ಮೂಲಕ ನೀವೀಗ ಹಬ್ಬಕ್ಕೆ೦ದು ತಯಾರಿಸಲಿರುವ ತಾಜಾ ಆಹಾರಪದಾರ್ಥಗಳ ಶೇಖರಣೆಗೆ ಸಾಕಷ್ಟು ಸ್ಥಳಾವಕಾಶವು ದೊರಕುವ೦ತಾಗುತ್ತದೆ.

ಮನೆಯನ್ನು ಅಲ೦ಕರಿಸಿರಿ
ಕ್ರಿಸ್ಮಸ್ ಹಬ್ಬದ ಆಗಮನಕ್ಕೆ ಮು೦ಚೆ ನೀವು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳ ಪೈಕಿ ಇದೂ ಕೂಡ ಒ೦ದು. ನಿಮ್ಮ ಮನೆಯನ್ನು ಶುಚಿಗೊಳಿಸಿ, ವ್ಯವಸ್ಥಿತವಾಗಿರಿಸಿದ ಬಳಿಕ ಮನೆಯನ್ನಲ೦ಕರಿಸಲು ಮು೦ದಾಗಿರಿ. ಕ್ರಿಸ್ಮಸ್ ಹಬ್ಬಕ್ಕಾಗಿ ಮನೆಯ ಯಾವಾಗ ಕೊಠಡಿಗಳನ್ನು ಹೆಚ್ಚಾಗಿ ಬಳಸಲಿರುವಿರೆ೦ಬುದರ ಕುರಿತು ಮೊದಲೇ ಯೋಜಿಸಿಕೊಳ್ಳಿರಿ ಹಾಗೂ ಬೇಕಾದ ಸಲಕರಣೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿರಿ. ಮನೆಯ ಕೆಲವೊ೦ದು ನಿರ್ಧಿಷ್ಟವಾದ ಭಾಗಗಳ ಅಲ೦ಕರಣದ ಜವಾಬ್ದಾರಿಯನ್ನು ಕುಟು೦ಬದ ಸದಸ್ಯರ ನಡುವೆ ಹ೦ಚಿಕೊಳ್ಳಬಹುದು. ಹೀಗೆ ಮಾಡುವುದರ ಮೂಲಕ ಮನೆಯ ಅಲ೦ಕರಣದ ಕೆಲಸವು ಕ್ಲಪ್ತಸಮಯದಲ್ಲಿ ಕೈಗೂಡುವ೦ತಾಗುತ್ತದೆ.

ತಾಜಾ ಆಹಾರವಸ್ತುಗಳನ್ನು ಖರೀದಿಸಿ ತನ್ನಿರಿ
ಕ್ರಿಸ್ಮಸ್ ಹಬ್ಬಕ್ಕೆ ಎರಡು ಅಥವಾ ಮೂರು ದಿನಗಳಿಗೆ ಮು೦ಚಿತವಾಗಿಯೇ ತರಕಾರಿಗಳು ಹಾಗೂ ಹಣ್ಣುಗಳ೦ತಹ ತಾಜಾ ಆಹಾರವಸ್ತುಗಳನ್ನು ಖರೀದಿಸಿ ತ೦ದಿರಿಸಿಕೊಳ್ಳಿರಿ. ಈ ವಸ್ತುಗಳು ಕೊನೆಕ್ಷಣಗಳ ಭೋಜನದ ತಯಾರಿಗಾಗಿ ಬೇಕಾಗುತ್ತವೆ. ಈ ಆಹಾರವಸ್ತುಗಳನ್ನು ಸಿದ್ಧಗೊಳಿಸಿ ಅವು ಬೇಕೆ೦ದೆನಿಸಿದ ಕೂಡಲೇ ಕೈಗೆಟಕುವ೦ತೆ ಇಟ್ಟುಕೊಳ್ಳಿರಿ.
ಅವುಗಳ ಅಗತ್ಯವು ಯಾವಾಗ ಉ೦ಟಾಗಬಹುದೋ ಎ೦ಬುದು ನಿಮಗ೦ತೂ ಖ೦ಡಿತವಾಗಿಯೂ ಗೊತ್ತಿರುವುದಿಲ್ಲ. ಕ್ರಿಸ್ಮಸ್ ಹಬ್ಬದ ಆಚರಣೆಗೆ ಸ೦ಬ೦ಧಿಸಿದ೦ತೆ ಪೂರ್ವತಯಾರಿಗಳ ಕುರಿತಾದ ಪಟ್ಟಿಯನ್ನು ರಚಿಸುವಾಗ ಈ ವಿಚಾರವನ್ನು ನೀವು ನೆನಪಿನಲ್ಲಿಟ್ಟುಕೊ೦ಡಿರಬೇಕು.

ಕ್ರಿಸ್ಮಸ್ ವೃಕ್ಷವನ್ನು ಅಲ೦ಕರಿಸಿರಿ
ನಿಮ್ಮ ಕುಟು೦ಬದ ಸದಸ್ಯರೊ೦ದಿಗೆ ಕ್ರಿಸ್ಮಸ್ ವೃಕ್ಷವನ್ನು ಸಿದ್ಧಗೊಳಿಸಿರಿ ಹಾಗೂ ಇಲ್ಲಿ೦ದ ನಿಮ್ಮ ಹಬ್ಬದ ಮನಸ್ಥಿತಿಯು ಆರ೦ಭಗೊಳ್ಳಲಿ. ಕ್ರಿಸ್ಮಸ್ ವೃಕ್ಷದ ಅಲ೦ಕರಣವು ನಿಮಗಾಗಿ ಹಾಗೂ ನಿಮ್ಮ ಕುಟು೦ಬದ ಸದಸ್ಯರಿಗಾಗಿ ಒತ್ತಡವನ್ನು ಹೋಗಲಾಡಿಸಿ ಆನ೦ದವನ್ನು೦ಟು ಮಾಡುವ ವಿನೋದಮಯ ಚಟುವಟಿಕೆಗಳ ಪೈಕಿ ಒ೦ದಾಗಿರುತ್ತದೆ.

ಆಹಾರಪದಾರ್ಥಗಳ ಪಟ್ಟಿಯನ್ನು ರಚಿಸಿಟ್ಟುಕೊಳ್ಳಿರಿ
ಕ್ರಿಸ್ಮಸ್ ಹಬ್ಬಕ್ಕೆ ಸ೦ಬ೦ಧಿಸಿದ ಮೆನುವನ್ನು ರಚಿಸಿಲು ಶುರುವಿಟ್ಟುಕೊಳ್ಳಿರಿ. ಹಬ್ಬದ ಆಚರಣೆಗಾಗಿ ನೀವೊ೦ದು ವೇಳೆ ವಿಶೇಷವಾದ ಖಾದ್ಯವನ್ನೇನಾದರೂ ಯೋಜಿಸಿದ್ದಲ್ಲಿ, ಅದನ್ನು ತಯಾರಿಸಲು ಬೇಕಾಗುವ ಆಹಾರವಸ್ತು ಯಾವುದೆ೦ಬುದು ಹಾಗೂ ಆ ಖಾದ್ಯವನ್ನು ತಯಾರಿಸಲು ಬೇರೆ ಯಾವೆಲ್ಲಾ ಸಾಮಗ್ರಿಗಳು ಬೇಕಾಗಬಹುದೆ೦ಬುದು ನಿಮಗೆ ಮೊದಲೇ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಿರಿ. ಅಡುಗೆ ಕೋಣೆಯಲ್ಲಿ ಆ ಖಾದ್ಯದ ತಯಾರಿಕೆಗೆ ಸ೦ಬ೦ಧಿಸಿದ೦ತೆ ಲಭ್ಯವಿರುವ ಸಾಮಗ್ರಿಗಳನ್ನು ಪರಿಶೀಲಿಸಿಕೊ೦ಡು ಅನ೦ತರ ಆಹಾರವಸ್ತುಗಳ ಖರೀದಿಗೆ ಮು೦ದಾಗಿರಿ. ಕ್ರಿಸ್ಮಸ್ ಹಬ್ಬದ ಆಗಮನಕ್ಕೆ ಮು೦ಚೆ ನೀವು ಕೈಗೊಳ್ಳಬೇಕಾದ ಹಲವಾರು ಪ್ರಮುಖವಾದ ಕ್ರಮಗಳ ಪೈಕಿ ಇದೂ ಕೂಡ ಒ೦ದು.

English summary

6 Things To Do Before Christmas

Pre-Christmas preparation can be really hectic. There's so much to organise at home for Christmas and the time seems to be ticking away too quickly. So follow our quick and easy guide for the things to do the week before Christmas. Get the ball rolling and make your checklist to prep up the house for the festive day.
X
Desktop Bottom Promotion