For Quick Alerts
ALLOW NOTIFICATIONS  
For Daily Alerts

ನಿಮ್ಮ ಬಜೆಟ್ ನಲ್ಲೇ ಮನೆ ನವೀಕರಿಸಿ

By Hemanth P
|

ಎಲ್ಲಾ ಚಿಂತೆ, ಒತ್ತಡ ಮರೆತು ಖುಷಿಯಿಂದ ಇರಬಹುದಾದ ಸ್ಥಳವೆಂದರೆ ಅದು ಮನೆ. ಮನೆ ಎನ್ನುವುದು ಸ್ವರ್ಗದಂತೆ. ಅದನ್ನು ಸೂಕ್ತ ರೀತಿ ನಿರ್ವಹಣೆ ಮಾಡಬೇಕು. ಮನೆಯ ಅಂದ, ಹೊಳಪನ್ನು ಉಳಿಸಿಕೊಳ್ಳಲು ಕಾಲಕಾಲಕ್ಕೆ ಮನೆಯ ನವೀಕರಣ ಮಾಡುವುದು ಅತ್ಯಗತ್ಯ. ಮನೆ ನವೀಕರಿಸುವ ಯೋಚನೆ ನಿಮ್ಮದಾಗಿದ್ದರೆ ಆಗ ಕೆಲವೊಂದು ವಿಷಯಗಳು ಮತ್ತು ಬಜೆಟ್ ಬಗ್ಗೆ ಗಮನಹರಿಸಬೇಕಾಗುತ್ತದೆ.

ಮನೆಯ ನವೀಕರಣ ಮಾಡುವಾಗ ನೀವು ಏನಾದರೂ ನಿರೀಕ್ಷೆಯಲ್ಲಿರುತ್ತೀರಿ ಮತ್ತು ಬಜೆಟ್ ನಿಮಗೆ ಸಪ್ರೈಸ್ ನೀಡಬಹುದು. ಮನೆ ನವೀಕರಣದ ವೇಳೆ ಯಾವಾಗಲೂ ನಿಮ್ಮ ಬಜೆಟ್ ಮೀರಿ ವ್ಯಯವಾಗಬಹುದು. ಚಳಿಗಾಲದ ಋತುವಿನಲ್ಲಿ ನಿಮ್ಮ ಬಜೆಟ್ ನೊಳಗೆ ಮನೆ ನವೀಕರಿಸುವುದು ಒಳ್ಳೆಯ ಐಡಿಯಾ ಮತ್ತು ಕೆಲವೊಂದು ವಿಧಾನಗಳನ್ನು ಪಾಲಿಸಿ ನೀವು ಮನೆ ನವೀಕರಣವನ್ನು ಬಜೆಟ್ ನಲ್ಲೇ ಮುಗಿಸಬಹುದು.

Renovate your home on a budget: Winter Spcl

1. ಯೋಜನೆ ಅದ್ಭುತವಾಗಿರಲಿ

ಬಜೆಟ್ ನಲ್ಲಿ ಮನೆ ನವೀಕರಿಸಲು ನೀವು ಮೊದಲು ಅದ್ಭುತವಾಗಿ ಯೋಜನೆ ಹಾಕಿಕೊಳ್ಳಬೇಕು. ಮನೆಯ ವಾಸಸ್ಥಾನದ ಗಾತ್ರ ಹೆಚ್ಚಿಸುವ ಬದಲು ನೀವು ಅದರ ದಕ್ಷತೆ ಹೆಚ್ಚಿಸಬೇಕು. ಉದಾಹರಣೆಗೆ ನೀವು ಮನೆಯ ನವೀಕರಣ ಮಾಡುತ್ತಿದ್ದರೆ ಆಗ ಅಡುಗೆ ಕೋಣೆಯನ್ನು ಕೆಲವೊಂದು ಸರಳ ಮರುಜೋಡಣೆಯೊಂದಿಗೆ ನವೀಕರಿಸಬೇಕು. ನಿಮ್ಮ ಅಡುಗೆ ಮನೆಯು ಕಪಾಟುಗಳಿಂದ ತುಂಬಿದ್ದರೆ ಆಗ ಕ್ಯಾಬಿನೆಟ್ ಅಳವಡಿಸಿ. ಇದರಿಂದ ನಿಮ್ಮ ಅಡುಗೆ ಕೋಣಿಯ ಗಾತ್ರ ಹಿರಿದಾಗಿ ನಿಮಗೆ ಹೆಚ್ಚಿನ ಸ್ಥಳಾವಕಾಶ ಸಿಗುತ್ತದೆ.

2. ಬಳಸಿಕೊಳ್ಳುವುದನ್ನು ತಿಳಿಯಿರಿ
ನಿಮ್ಮ ಬಜೆಟ್ ನಲ್ಲೇ ಮನೆಯ ನವೀಕರಣ ಕೆಲಸ ಮಾಡಬೇಕೆಂದಿದ್ದರೆ ಆಗ ವಸ್ತುಗಳನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳಿ. ಅಗತ್ಯವಿಲ್ಲದ ವಸ್ತುಗಳ ಮೇಲೆ ಹಣ ವ್ಯರ್ಥ ಮಾಡುವ ಬದಲು ವಸ್ತುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಯೋಚಿಸಿ. ನಿಮ್ಮ ಮನೆಯ ಒಳಗಡೆ ಹೆಚ್ಚಿನ ಬೆಳಕು ಬೇಕೆಂದಿದ್ದರೆ ಆಗ ಗೋಡೆ ಅಗೆದು ಕಿಟಕಿ ಇಡುವ ಬದಲು ಒಂದು ಟ್ಯೂಬ್ ಲೈಟ್ ಹಾಕಿ.

3. ಮರುಬಳಕೆ ಕೆಲಸ ಮಾಡಬಹುದು
ಬಜೆಟ್ ನೊಳಗೆ ನಿಮ್ಮ ಮನೆಯ ನವೀಕರಣ ಮಾಡಬೇಕೆಂದಿದ್ದರೆ ಆಗ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಮರುಬಳಕೆ ಮಾಡಿಕೊಳ್ಳಿ. ನಿಮ್ಮ ಕಂಟ್ರಾಕ್ಟರ್ ಇಂತಹ ಮರುಬಳಕೆ ವಸ್ತುಗಳೊಂದಿಗೆ ಕೆಲಸ ಮಾಡಲಿಕ್ಕಿಲ್ಲ, ಆದರೆ ಅದು ಒಳ್ಳೆಯದಾಗಿದೆ ಎಂದು ಮನವರಿಕೆ ಮಾಡಿ. ಇದು ಮನೆ ನವೀಕರಿಸಲು ಅತ್ಯಂತ ಸುಲಭ ವಿಧಾನ.

4. ದಾನ ಮತ್ತು ಮರುಮಾರಾಟ
ತುಂಬಾ ಮಿತವ್ಯಯದಲ್ಲಿ ನಿಮ್ಮ ಮನೆಯ ನವೀಕರಣ ಮಾಡಬೇಕೆಂದಿದ್ದರೆ ಆಗ ನೀವು ಸರಿಯಾಗಿ ಯೋಜನೆ ಹಾಕಿಕೊಂಡು ನೀವು ನಿಜವಾಗಿಯೂ ಬಳಸದೆ ಇರುವಂತಹ ವಸ್ತುಗಳನ್ನು ದಾನ ಮಾಡಿ. ನೀವು ದಾನ ಮಾಡಿದ ವಸ್ತುಗಳನ್ನು ಮರುಮಾರಾಟ ಮಾಡಬಹುದು. ಇದು ನಿಮ್ಮ ಮನೆಯನ್ನು ನವೀಕರಿಸಲು ಸರಳ ವಿಧಾನ.

5. ನಿಮ್ಮ ಮೇಲೆ ಅವಲಂಬಿತರಾಗಿ
ನೀವು ಯಾವಾಗಲೂ ಅವಲಂಬಿತವಾಗಿರುವ ವ್ಯಕ್ತಿಯೆಂದರೆ ಅದು ನೀವು ಮಾತ್ರ. ಮನೆಯನ್ನು ನವೀಕರಿಸುವ ವೇಳೆ ಕೆಲವೊಂದು ಕೆಲಸಗಳನ್ನು ನೀವಾಗಿಯೇ ಮಾಡಬಹುದು. ಇದರ ಮೂಲಕ ಹಣ ಉಳಿಸಬಹುದು. ಉದಾಹರಣೆಗೆ ಕೆಲವೊಂದು ಭಾಗಗಳ ಧ್ವಂಸ ಮಾಡಬೇಕಾದ ಕೆಲಸಗಳನ್ನು ನೀವಾಗಿಯೇ ಮಾಡಿ. ಇದರಿಂದ ಹೆಚ್ಚಿನ ಹಣ ಉಳಿತಾಯವಾಗುತ್ತದೆ.

6. ಅನಗತ್ಯ ಸೇರ್ಪಡೆ ಬೇಡ
ನೀವು ಲೈಟ್ ಹಾಕಬೇಕೆಂದು ಬಯಸಿದರೆ ಆಗ ಅಗತ್ಯವಿದ್ದಷ್ಟು ಮಾತ್ರ ಮಾಡಿ. ಅನಗತ್ಯವಾಗಿರುವ ಯಾವುದೇ ಲೈಟ್ ಗಳನ್ನು ಹಾಕಬೇಡಿ. ಇದು ಕಡಿಮೆ ವೆಚ್ಚದಲ್ಲಿ ಮನೆ ನವೀಕರಣ ಮಾಡಲು ಹೋದಾಗ ತುಂಬಾ ದುಬಾರಿ ವೆಚ್ಚವನ್ನುಂಟು ಮಾಡಬಹುದು.

ಮನೆಯ ನವೀಕರಣವನ್ನು ಹಲವಾರು ರೀತಿಯಿಂದ ಮಾಡಬಹುದು. ಇದಕ್ಕೆಲ್ಲಾ ಸರಳ ಯೋಜನೆ ಬೇಕಾಗಿದೆ. ಏನಾದರೂ ಮಾಡಬೇಕೆಂದು ನೀವು ಯೋಜನೆ ಹಾಕಿಕೊಂಡರೆ ಇದು ಅಗತ್ಯವಿದೆಯಾ ಎಂದು ಯೋಚಿಸಿ, ಮನೆ ನವೀಕರಿಸಿದ ಸ್ನೇಹಿತನೊಂದಿಗೆ ಮಾತನಾಡಿ ಯೋಜನೆಗಳ ಬಗ್ಗೆ ಆತನ ನೆರವು ಪಡೆಯಬಹುದು. ಇದರಿಂದ ನೀವು ಒಳ್ಳೆಯ ರೀತಿ ಯೋಜನೆ ಹಾಕಿಕೊಂಡು ಮನೆ ನವೀಕರಿಸಬಹುದು.

Read more about: winter ಬಜೆಟ್
English summary

Renovate your home on a budget: Winter Spcl

If you are looking for a real comfort, then it is only home. Your home is your heaven and it needs to be maintained well. Renovating your house once in a while becomes essential to retain its beauty and luster
Story first published: Monday, December 23, 2013, 17:10 [IST]
X
Desktop Bottom Promotion