For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಮನೆಗೆ ಲೈಟಿಂಗ್ ಐಡಿಯಾ

By Hemanth P
|

ಚಳಿಗಾಲದಲ್ಲಿ ನೀವು ಇತರ ಋತುವಿನಂತೆ ಹೊರಗಡೆ ತಿರುಗಾಡಲು ಬಯಸದೆ ಮನೆಯ ಒಳಗಡೆ ತುಂಬಾ ಹಿತಕರ ಮತ್ತು ಬೆಚ್ಚಗಿನ ವಾತಾವರಣದಲ್ಲಿ ಸಮಯ ಕಳೆಯಲು ಬಯಸುವುದು ಸಹಜ. ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗೆ ಮತ್ತು ಉತ್ತಮವಾಗಿಟ್ಟುಕೊಳ್ಳಲು ನೀವು ಈಗಾಗಲೇ ತಯಾರಿ ನಡೆಸಿರಬಹುದು. ಶೀತ, ಶುಷ್ಕ ಮತ್ತು ಕೆಲವೊಂದು ಸಲ ಮಂಜು ಬೀಳುವ ಚಳಿಗಾಲದಲ್ಲಿ ಬೆಂಕಿಗೂಡಿನ ಮುಂದೆ ಕುರ್ಚಿ ಹಾಕಿ ಕುಳಿತು ಒಂದು ಕಪ್ ಕಾಫಿ ಹೀರುವುದು ತುಂಬಾ ಹಿತವೆನಿಸುತ್ತದೆ.

ಮನೆಯನ್ನು ಬೆಚ್ಚಗಿರಿಸಲು ಮನೆಯ ಅಲಂಕಾರದೊಂದಿಗೆ ಚಳಿಗಾಲಕ್ಕೆ ತಯಾರಾಗಲು ಬೆಳಕು ಕೂಡ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಚಳಿಗಾಲದ ಮನೆ ಮತ್ತು ಅಲಂಕಾರಕ್ಕೆ ಲೈಟಿಂಗ್ ನ ಕೆಲವೊಂದು ಐಡಿಯಾಗಳು

Lighting ideas for a winter home

1. ಗಾಢ ಬೆಳಕು
ಚಳಿಗಾಲದ ವೇಳೆ ಸೂರ್ಯ ತುಂಬಾ ಬೇಗನೆ ಮುಳುಗುತ್ತಾನೆ ಮತ್ತು ಇತರ ಋತುವಿಗಿಂತ ಚಳಿಗಾಲದಲ್ಲಿ ಬೇಗ ಕತ್ತಲಾಗುತ್ತದೆ. ಚಳಿಗಾಲದಲ್ಲಿ ಮನೆಯಲ್ಲಿ ಗಾಢ ಬೆಳಕು ತುಂಬಾ ಒಳ್ಳೆಯದು. ತುಂಬಾ ಬೆಳಕು ನೀಡಬಲ್ಲ ಸೀಲಿಂಗ್ ಲೈಟ್ ಗಳನ್ನು ಬಳಸಿ. ಇದು ಚಳಿಗಾಲದ ತುಂಬಾ ಮಂದ ಮತ್ತು ತುಚ್ಛ ಮೂಡ್ ನ್ನು ಹೋಗಲಾಡಿಸಲು ನೆರವಾಗುತ್ತದೆ. ಗಾಢ ಬೆಳಕಿನಿಂದ ಮನೆ ತುಂಬಾ ತಾಜಾ ಮತ್ತು ಚುರುಕಿನಂತೆ ಮಾಡುತ್ತದೆ.

2. ಪ್ರತೀ ಮೂಲೆಯಲ್ಲೂ ಲೈಟ್ ಅಳವಡಿಸಿ
ಮನೆಯಲ್ಲಿರುವ ಪ್ರತಿಯೊಂದು ಮೂಲೆ ಮತ್ತು ಭಾಗದಲ್ಲಿ ಲೈಟ್ ಅಳವಡಿಸಿ. ಇಂತಹ ಭಾಗಗಳು ಸಾಮಾನ್ಯವಾಗಿ ಕಾರಿಡಾರ್, ಕಿಟಕಿ ಸಮೀಪ ಮತ್ತು ಕೋಣೆಗಳ ಮೂಲೆಗಳಲ್ಲಿ ಕಂಡುಬರುತ್ತದೆ. ಸಣ್ಣ ಬಲ್ಬ್ ಅಥವಾ ಗೋಡೆಗಳಿಗೆ ಅಳವಡಿಸಿದ ಲೈಟ್ ಗಳನ್ನು ಚಳಿಗಾಲದ ಮನೆಗೆ ಬಳಸಿ.

3. ಕ್ಯಾಂಡಲ್ ಬಳಸಿ
ಕ್ಯಾಂಡಲ್ ಗಳು ತುಂಬಾ ರೋಮ್ಯಾಂಟಿಕ್ ಮತ್ತು ಇದು ಚಳಿಗಾಲದ ಅಲಂಕಾರಕ್ಕೆ ತುಂಬಾ ಒಳ್ಳೆಯದು. ಡೈನಿಂಗ್, ಮುಖಮಂಟಪ ಹೊರಗೆ, ಮನೆಬಾಗಿಲಿನ ಮೆಟ್ಟಿಲು ಮತ್ತು ಕಿಟಕಿ ಹೊರಗಡೆ ಕ್ಯಾಂಡಲ್ ಹಚ್ಚಿ ಚಳಿಗಾಲದ ಮನೆಯನ್ನು ಬೆಳಗಿಸಿ. ಕೇವಲ ಕ್ಯಾಂಡಲ್ ನಿಂದ ನಿಮ್ಮ ಮನೆ ಹೆಚ್ಚು ಪ್ರಕಾಶಮಾನವಾಗುವುದಿಲ್ಲ. ಆದರೆ ಛಾವಣಿಗೆ ಹಾಕಿರುವ ಡಿಮ್ ಲೈಟ್ ನೊಂದಿಗೆ ಇದನ್ನು ಬಳಸಿ. ಇದು ನಿಮ್ಮ ಮನೆಗೆ ಅತ್ಯಾಕರ್ಷಕ ನೋಟ ನೀಡಲಿದೆ ಮತ್ತು ಚಳಿಗಾಲದ ಅಲಂಕಾರಕ್ಕೆ ಇದು ತುಂಬಾ ಒಳ್ಳೆಯದು.

4. ಕ್ರಿಸ್ಮಸ್ ಅಲಂಕಾರ
ಚಳಿಗಾಲವೆಂದರೆ ಕ್ರಿಸ್ಮಸ್. ಇದರಿಂದ ಎಲ್ಲಾ ಕ್ರಿಸ್ಮಸ್ ಲೈಟಿಂಗ್ ಐಡಿಯಾವನ್ನು ನೀವು ಆರಂಭಿಸಿ. ನಿಮ್ಮ ಮನೆಯ ಒಳಗೆ ಮತ್ತು ಹೊರಗೆ ಬಣ್ಣಬಣ್ಣದ ಲೈಟ್ ಗಳನ್ನು ಅಳವಡಿಸಿ. ಇದು ಚಳಿಗಾಲದ ಒಳ್ಳೆಯ ಅಲಂಕಾರವಾಗಲಿದೆ. ಬಣ್ಣಬಣ್ಣದ ಬಲ್ಬ್ ಗಳಿರುವ ಬಲ್ಬ್ ಗಳ ಸರಪಣಿಯನ್ನು ಬಳಸಿ. ಮನೆಯ ಅಲಂಕಾರಕ್ಕೆ ಉಪಯೋಗಿಸುವ ಮರ ಮತ್ತು ಇತರ ಸಸ್ಯಗಳಿಗೆ ಕೂಡ ಬಲ್ಬ್ ಹಾಕಿ. ಮನೆಯ ಗಾರ್ಡನ್ ಗೂ ಇಂತಹ ಲೈಟ್ ಗಳನ್ನು ಅಳವಡಿಸಿ.

5. ಟೇಬಲ್ ಲೈಟ್ ಮತ್ತು ಲ್ಯಾಂಪ್ ಬಳಸಿ
ಸಂಜೆಯಾಗುತ್ತಿದ್ದಂತೆ ನಿಮ್ಮ ಮನೆಯ ಎಲ್ಲಾ ದೀಪಗಳನ್ನು ಉರಿಸಿ ವಿದ್ಯುತ್ ಬಿಲ್ ಹೆಚ್ಚು ಮಾಡುವ ಬದಲು ಬಣ್ಣಬಣ್ಣದ ಲ್ಯಾಂಪ್ ಮತ್ತು ಲಾಟರ್ನ್ ಗಳನ್ನು ನೀವು ಬಳಸದ ಕೋಣೆಯಲ್ಲಿ ಉಪಯೋಗಿಸಬಹುದು. ವಿಭಿನ್ನ ರೀತಿಯ ಲ್ಯಾಟರ್ನ್ ಮತ್ತು ಲ್ಯಾಂಪ್ ಗಳು ಚಳಿಗಾಲದ ಅಲಂಕಾರಕ್ಕೆ ಒಳ್ಳೆಯ ಐಡಿಯಾ ಮತ್ತು ನಿಮ್ಮ ಕಿಸೆಗೆ ಭಾರವಾಗದು.

ಚಳಿಗಾಲಕ್ಕೆ ನಿಮ್ಮ ಮನೆಯ ಈ ಅಲಂಕಾರ ಮತ್ತು ಲೈಟಿಂಗ್ ಐಡಿಯಾವನ್ನು ಬಳಸಿಕೊಂಡು ಮನೆಯನ್ನು ಸುಂದರ ಮತ್ತು ಬೆಚ್ಚಗಿನ ಪ್ರದೇಶವನ್ನಾಗಿ.

Read more about: decor ಅಲಂಕಾರ
English summary

Lighting ideas for a winter home

Winters are here and it is the time of the year you prefer to sit inside your comfortable and cozy houses rather than strolling outside iAn the chilly winds.
Story first published: Saturday, December 7, 2013, 12:43 [IST]
X
Desktop Bottom Promotion