For Quick Alerts
ALLOW NOTIFICATIONS  
For Daily Alerts

ಹೂ ಗುಚ್ಛದ ಗುಲಾಬಿ ಬೇಗನೆ ಬಾಡಬಾರದೇ?

|

ಹೆಚ್ಚಿನ ಮನೆಯ ಹಾಲಿನಲ್ಲಿ ಹೂ ಗುಚ್ಛ ಇಟ್ಟಿರುತ್ತಾರೆ. ಹೂ ಗುಚ್ಛ ಮನೆಯ ಅಂದ ಹೆಚ್ಚಿಸುವುದು ಮಾತ್ರವಲ್ಲ, ಮನೆಗೆ ಬಂದವರು ಅದನ್ನು ನೋಡಿದಾಗ ನೀವು ಮನೆಯನ್ನು ಆಕರ್ಷಕವಾಗಿ ಇಟ್ಟಿದ್ದೀರಿ ಎಂದು ನಿಮ್ಮನ್ನು ಮೆಚ್ಚುಗೆಯಿಂದ ನೋಡುವಂತಾಗುವುದು.

ಸುಂದರವಾದ ಗುಲಾಬಿಯನ್ನು ಹೂಗುಚ್ಛದಲ್ಲಿ ಇಡುವಾಗ ಆ ಗುಚ್ಛ ನೋಡಲು ಖುಷಿಯಾಗುತ್ತದೆ. ಆದರೆ ಸುಂದರವಾದ ಆ ಗುಲಾಬಿ ದಳಗಳು ಎರಡೇ ದಿನದಲ್ಲಿ ಬಾಡುವಾಗ ಬೇಜಾರಾಗುತ್ತದೆ.

ಹೂ ಬೇಗನೆ ಬಾಡದಿರಲು ಕೆಲವು ಟಿಪ್ಸ್ ನೀಡಿದ್ದೇವೆ, ನೋಡಿ:

How To Keep Rose Stalks Fresh For Long?

* ಹೂಗುಚ್ಛ ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿರಬೇಕು. ಆದ್ದರಿಂದ ಹೂ ಗುಚ್ಛವನ್ನು ಬಿಸಿ ನೀರಿನಲ್ಲಿ ತೊಳೆದು, ಬ್ಯಾಕ್ಟೀರಿಯಾವನ್ನು ಕೊಲ್ಲುವ ಬ್ಲೀಚ್ ಹಾಕಿಯೂ ತೊಳೆದು, ಅದರಲ್ಲಿ ತಾಜಾ ಗುಲಾಬಿ ಹೂಗಳನ್ನು ಇಡಿ.

* ಹೂ ಗುಚ್ಛವನ್ನು ತಂಪಾದ ಜಾಗದಲ್ಲಿ ಇಡುವುದು ಒಳ್ಳೆಯದು. ಸೂರ್ಯನ ಬೆಳಕು, ಬಲ್ಭ್ ನ ಶಾಖ ನೇರವಾಗಿ ಬೀಳುವಲ್ಲಿ ಇಡಬೇಡಿ. ರಾತ್ರಿ ರೋಸ್ ಅನ್ನು ಫ್ರಿಜ್ ನಲ್ಲಿಟ್ಟು, ಬೆಳಗ್ಗೆ ಗೂ ಗುಚ್ಛದಲ್ಲಿಡಿ.

* ಹೂವನ್ನು ಹೂ ಗುಚ್ಛಕ್ಕೆ ಇಡುವ ಮುನ್ನ ನೀರಿಗೆ ಬ್ಲೀಚ್ ಚಿಮುಕಿಸಿ ಅದರಲ್ಲಿ ಹೂವಿನ ಕಡ್ಡ ಇಡುವುದು ಒಳ್ಳೆಯದು.

* ತಣ್ಣೀರ ಬದಲು ಬಿಸಿ ನೀರು ಹಾಕಿ, ಅದರಲ್ಲಿ ಹೂವಿನ ಕಡ್ಡಿ ಇಟ್ಟರರೆ, ಹೂ ಬೇಗನೆ ಬಾಡುವುದಿಲ್ಲ.

* ಕಡ್ಡಿಯಲ್ಲಿರುವ ಎಲೆಗಳನ್ನು ತೆಗೆದು ಇಡುವುದು ಒಳ್ಳೆಯದು.

* ದಿನಾ ಕಡ್ಡಿಯ ಬುಡವನ್ನು ಕತ್ತರಿಸಿ, ಹಾಗೂ ಬಾಡಿದ ಹೂವನ್ನು ಕಿತ್ತು ಬಿಸಾಡಿ. ಆಗ ಹೂ ತಾಜಾದಂತೆ ಕಾಣುವುದು.

* ಹೂ ಗುಚ್ಛದಲ್ಲಿರುವ ನೀರನ್ನು ಪ್ರತೀದಿನ ಬದಲಾಯಿಸಿ.
ಇಷ್ಟು ಮಾಡಿದರೆ ಗುಲಾಬಿ ಹೂ ಬೇಗನೆ ಬಾಡುವುದಿಲ್ಲ.

English summary

How To Keep Rose Stalks Fresh For Long? | ಹೂ ಗುಚ್ಚದಲ್ಲಿರುವ ಗುಲಾಬಿ ಬಾಡದಿರಲು ಟಿಪ್ಸ್

To keep the flower vase bright and lively with fresh rose stalks, here are few tips to maintain the rose flowers and make them last longer.
X
Desktop Bottom Promotion