For Quick Alerts
ALLOW NOTIFICATIONS  
For Daily Alerts

ಈ ದೀಪಾವಳಿಗೆ 8 ಸೂಪರ್ ರಂಗೋಲಿ ಐಡಿಯಾ

|

ದೀಪಾವಳಿ ಹಬ್ಬಕ್ಕೆ ಮನೆಯನ್ನು ಶುಚಿ ಮಾಡುವುದು, ಅಲಂಕಾರ ಮಾಡುವುದನ್ನು ಇವತ್ತಿನಿಂದಲೇ ಪ್ರಾರಂಭಿಸಿರುತ್ತೀರಿ. ನೆನ್ನೆ ನಾವು ದೀಪಾವಳಿಗೆ ನಿಮ್ಮ ಮನೆಗೆ ಲಕ್ಷ್ಮಿ ಒಲಿದು ಹೆಚ್ಚಿನ ಸಮೃದ್ಧಿ, ಸೌಭಾಗ್ಯ ದೊರೆಯಲು ವಾಸ್ತುಶಾಸ್ತ್ರದ ಪ್ರಕಾರ ಮನೆ ಹೇಗಿರಬೇಕೆಂದು ತಿಳಿಸಿದ್ದೆವು.

ಅದರಲ್ಲಿ ಮನೆಯ ಮುಂಬಾಗಿಲನ್ನು ತೆರೆದು ಇಡಬೇಕು, ಬಾಗಿಲನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು, ಮನೆ ಮುಂದೆ ರಂಗೋಲಿ ಹಾಕಬೇಕೆಂದು ಹೇಳಿದ್ದೆವು. ಆದ್ದರಿಂದ ಇಲ್ಲಿ ನಾವು ಈ ದೀಪಾವಳಿಯಲ್ಲಿ ನೀವು ಹಕಿದ ರಂಗೋಲಿಯು ಮತ್ತಷ್ಟು ಸುಂದರವಾಗಿ ಕಾಣಲು ಕೆಲವು ರಂಗೋಲಿ ಐಡಿಯಾಗಳನ್ನು ಹೇಳಿದ್ದೇವೆ. ಇಲ್ಲಿ ಹೇಳಿದಂತೆ ರಂಗೋಲಿಯ ನಡುವೆ ಹಣತೆಗಳನ್ನು ಹಚ್ಚಿಟ್ಟರೆ ನಿಮ್ಮ ಮನೆ ಮತ್ತಷ್ಟು ಭವ್ಯವಾಗಿ ಕಾಣುವುದು.

9 ಹಣತೆ ಇಡುವ ರಂಗೋಲಿ:

9 ಹಣತೆ ಇಡುವ ರಂಗೋಲಿ:

ಚಿತ್ರದಲ್ಲಿ ತೋರಿಸಿರುವಂತೆ ರಂಗೋಲಿ ಹಾಕಿ ಸುತ್ತ 8 ದೀಪ ಮಧ್ಯದಲ್ಲಿ ಒಂದು ದೀಪವಿಟ್ಟರೆ ರಂಗೋಲಿ ಆಕರ್ಷಕವಾಗಿ ಕಂಡು ಮನೆಯ ಚೆಲುವು ಹೆಚ್ಚುವುದು.

ರಂಗೋಲಿಯ ಮಧ್ಯ ದೀಪದ ಅಲಂಕಾರ:

ರಂಗೋಲಿಯ ಮಧ್ಯ ದೀಪದ ಅಲಂಕಾರ:

ಸಿಂಪಲ್ ಆದ ರಂಗೋಲಿ ಹಾಕಿ ಅದರ ಮಧ್ಯದಲ್ಲಿ ಚಿಕ್ಕ-ಚಿಕ್ಕ ಹಣತೆಗಳನ್ನು ಇಟ್ಟು ಮಧ್ಯದಲ್ಲಿ ಒಂದು ಮಣ್ಣಿನ ಮಡಿಕೆ ಇಟ್ಟು ಅದರ ಮೇಲೆ ಒಂದು ಹಣತೆ ಇಟ್ಟರೆ ರಂಗೋಲಿ ಆಕರ್ಷಕವಾಗಿ ಕಾಣುವುದು.

5 ಹಣತೆಗಳ ರಂಗೋಲಿ:

5 ಹಣತೆಗಳ ರಂಗೋಲಿ:

ಬಣ್ಣದ ರಂಗೋಲಿ ಹಾಕಿ ಅದರಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಆಕರ್ಷಕ ಹಣತೆಗಳನ್ನು ಇಟ್ಟು ಅಲಂಕರಿಸಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಹಣತೆಗಳು ಬಣ್ಣದಿಂದ ಕೂಡಿರಲಿ.

ಗುಲಾಬಿ ಹಾಗೂ ಹಣತೆಗಳ ಮೆರುಗು:

ಗುಲಾಬಿ ಹಾಗೂ ಹಣತೆಗಳ ಮೆರುಗು:

ರಂಗೋಲಿ ಹಾಕಿ ಮಧ್ಯದಲ್ಲಿ ಒಂದು ದೀಪ ಹಚ್ಚಿಟ್ಟು ಸುತ್ತ ಹಣತೆಗಳು ಹಾಗೂ ಕೆಂಪು ಗುಲಾಬಿ ಹೂಗಳಿಂದ ಅಲಂಕರಿಸಿ.

ಸುತ್ತ ಹಣತೆ ಮಧ್ಯದಲ್ಲಿ ಗುಲಾಬಿಯ ಚೆಲುವು:

ಸುತ್ತ ಹಣತೆ ಮಧ್ಯದಲ್ಲಿ ಗುಲಾಬಿಯ ಚೆಲುವು:

ರಂಗೋಲಿ ಹಾಕಿ ಸುತ್ತ ದೀಪ ಹಚ್ಚಿ ಮಧ್ಯದಲ್ಲಿ ಚಿತ್ರದಲ್ಲಿ ತೋರಿಸಿದಂತೆ ಗುಲಾಬಿ ಹೂಗಳಿಂದ ಅಲಂಕರಿಸಿದರೆ ಆಕರ್ಷಕವಾಗಿ ಕಾಣುವುದು.

 ತಾವರೆ ಹಣತೆಯ ಚೆಲುವು:

ತಾವರೆ ಹಣತೆಯ ಚೆಲುವು:

ದೊಡ್ಡ ಬಣ್ಣದ ರಂಗೋಲಿ ಹಾಕಿ ಮಧ್ಯದಲ್ಲಿ ತಾವರೆಯ ರೀತಿಯಿರುವ ಹಣತೆಯನ್ನು ಇಟ್ಟು ದೀಪ ಹಚ್ಚಿದರೆ ಸುಂದರವಾಗಿ ಕಾಣುವುದು.

ಶಂಖದ ರಂಗೋಲಿಗೆ ದೀಪದ ಮೆರುಗು:

ಶಂಖದ ರಂಗೋಲಿಗೆ ದೀಪದ ಮೆರುಗು:

ರಂಗೋಲಿಯನ್ನು ಶಂಖದ ರೀತಿಯಲ್ಲಿ ಹಾಕಿ ಅದರ ಸುತ್ತ ದೀಪ ಇಟ್ಟು ಚಿಕ್ಕ 2 ಬಟ್ಟಲಿನಲ್ಲಿ ಗುಲಾಬಿಯ ದಳಗಳನ್ನು ಹಾಕಿ ಪೂರ್ವ-ಪಕ್ಷಿಮವಾಗಿಟ್ಟರೆ ಆಕರ್ಷಕವಾಗಿ ಕಾಣುವುದು. ಈ ರಗೋಲಿಯನ್ನು ಮನೆ ಒಳಗೆ ಹಾಕಿ ಲಕ್ಷ್ಮಿ ದೇವಿಯನ್ನು ಸ್ವಾಗತಿಸಿ.

English summary

Super Easy and Creative Ideas For Deepavali Rangoli Designs

Here is a fabulous array of Diwali Rangoli designs! Get inspired from these traditional yet extremely artistic Rangoli designs for Diwali. Just have a look..
X
Desktop Bottom Promotion