ಮಕ್ಕಳ ರೂಂ ಅಲಂಕಾರಕ್ಕೆ ಟಿಪ್ಸ್

Posted by:
 
ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ
    ಇದನ್ನು ಹಂಚಿರಿ    ಇದನ್ನು ಟ್ವೀಟಿಸಿ    ಇದನ್ನು ಹಂಚಿರಿ ಕಾಮೆಂಟ್ಸ್   ಇ ಮೇಲ್

ಮಕ್ಕಳ ಕೋಣೆಯನ್ನು ಪ್ಲೇನ್ ಆಗಿ ಇಡುವ ಬದಲು ಗೊಂಬೆಗಳಿಂದ ಹಾಗೂ ಬಣ್ಣ-ಬಣ್ಣದ ಚಿತ್ತಾರಗಳಿಂದ ಅಲಂಕರಿಸಿದರೆ ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಅಲ್ಲದೆ ಮಕ್ಕಳು ಬಣ್ಣದ ವಸ್ತುಗಳನ್ನು ತುಂಬಾ ಇಷ್ಟಪಡುತ್ತಾರೆ. ಮಕ್ಕಳ ಕೋಣೆಯನ್ನು ಈ ಕೆಳಗಿನಂತೆ ಅಲಂಕರಿಸಿದರೆ ತುಂಬಾ ಆಕರ್ಷಕವಾಗಿ ಕಾಣುವುದು.

ಆಕರ್ಷಕವಾದ ಡೆಸ್ಕ್ ಟಾಪ್: ಅವರ ಡೆಸ್ಕ್ ಅನ್ನು ಸನ್ ಫ್ಲವರ್ ಅಥವಾ ಸೂಪರ್ ಹೀರೋಗಳ ಚಿತ್ರ, ಹೂವಿನ ಚಿತ್ರ ಈ ರೀತಿಯ ವಸ್ತುಗಳಿಂದ ಅಲಂಕರಿಸಿ. ಹೀಗೆ ಅಲಂಕರಿಸುವಾಗ ಡೆಸ್ಕ್ ಅನ್ನು ಯಾವ ರೀತಿಯ ಚಿತ್ರಗಳಿಂದ ಅಲಂಕರಿಸಬೇಕೆಂದು ಮಕ್ಕಳ ಹತ್ತಿರನೇ ಕೇಳಿ.  ಅವರ ರೂಂ ಹೇಗಿರಬೇಕೆಂದು ನಮಗಿಂತ ಚೆನ್ನಾಗಿ  ಅವರಿಗೆ ಐಡಿಯಾ ಇರುತ್ತದೆ.

Desk Ideas For Kids Room

ಗೋಡೆಯ ಬಣ್ಣ: ಗೋಡೆಗೆ ಒಂದೇ ಬಣ್ಣ ಹೊಡೆಯುವ ಬದಲು 2-3 ಬಣ್ಣದಿಂದ ಅಲಂಕರಿಸಿದರೆ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಪಿಂಕ್ ಕಲರ್ ಮಕ್ಕಳಿಗೆ ತುಂಬ ಇಷ್ಟವಾಗುತ್ತದೆ, ಗೋಡೆಗೆ ಹಚ್ಚಿದಂತಹ  ಬಣ್ಣದ ಚೇರ್ ಗಳನ್ನೇ ತಂದಿಡಿ. ಈ ರೀತಿ ಅಲಂಕರಿಸಿದರೆ ಕೋಣೆ ತುಂಬಾ ಆಕರ್ಷಕವಾಗಿ ಕಾಣುವುದು.

ಗೊಂಬೆ: ಮಕ್ಕಳ ಕೋಣೆಯನ್ನು ಗೊಂಬೆಗಳಿಂದ ಅಲಂಕರಿಸಿ, ಟೇಬಲ್ ಮೇಲೆ ಪೆನ್ ಸ್ಟ್ಯಾಂಡ್ ಇಡಿ. ಬುಕ್ ಗಳನ್ನು ಜೋಡಿಸಲು ಕಬೋರ್ಡ್ ಇರಲಿ. ಸಾಧ್ಯವಾದರೆ ಒಂದು ಬ್ಯಾಕ್ ಬೋರ್ಡ್ ಇಡುವುದು ಒಳ್ಳೆಯದು. ಈ ರೀತಿ ಕೋಣೆ ತುಂಬಾ ಅಚ್ಚುಕಟ್ಟಾಗಿದ್ದರೆ ಮಕ್ಕಳಿಗೆ ಓದಲು ಸೂಕ್ತ ವಾತಾವರಣ ಒದಗಿಸಿಕೊಟ್ಟಂತೆ ಆಗುವುದು. ಮಕ್ಕಳ ರೂಂನಲ್ಲಿ ಗಾಳಿ, ಬೆಳಕು ಸರಿಯಾಗಿ ಬರುವಂತೆ ಇರಲಿ.

English summary

Desk Ideas For Kids Room | Tips For Parents | ಮಕ್ಕಳ ಕೋಣೆಯ ಅಲಂಕಾರಕ್ಕೆ ಕೆಲ ಸಲಹೆಗಳು | ಪೋಷಕರಿಗೆ ಕೆಲ ಸಲಹೆಗಳು

Why not give your kids an interesting desk that would inspire them to study. Decorate your kids room with some of these unique desk ideas to bring a smile on your child's face.
Story first published: Wednesday, November 14, 2012, 16:54 [IST]
Please Wait while comments are loading...
Subscribe Newsletter
Your Fashion Voice