For Quick Alerts
ALLOW NOTIFICATIONS  
For Daily Alerts

ಈ ಹಣತೆಗಳ ಚೆಲುವನ್ನು ಒಮ್ಮೆ ನೋಡಿರಣ್ಣಾ...

|

ದೀಪಾವಳಿ ಸಮಯದಲ್ಲಿ ದೀಪಾವಳಿ ಬಗ್ಗೆ ಮಾತನಾಡುವುದಲ್ಲದೆ ಬೇರೇನು ಇರುತ್ತೆ ಅಲ್ವಾ? ದೀಪಾವಳಿಗೆ ಪ್ರಮುಖ ಆಕರ್ಷಣೆಯೆಂದರೆ ಹಣತೆಗಳು. ಕೆಲವರು ನೂರಕ್ಕೂ ಹೆಚ್ಚು ಹಣತೆಗಳನ್ನು ಹಚ್ಚಿಡುತ್ತಾರೆ. ಆಧುನಿಕತೆಯಿಂದ ಚಿಕ್ಕ-ಚಿಕ್ಕ ಬಲ್ಭ್ ಗಳನ್ನು ಬಳಸಿದರೂ ಹಣತೆಗಳನ್ನು ಹಚ್ಚಿ ಇಟ್ಟೇ ಇಡುತ್ತೇವೆ. ಹಣತೆಗಳಿಲ್ಲದೆ ದೀಪಾವಳಿಯಿಲ್ಲ. ಅಷ್ಟರ ಮಟ್ಟಿಗೆ ಹಣತೆ ಈ ದೀಪಾವಳಿಗೆ ಪ್ರಾಮುಖ್ಯತೆಯನ್ನು ಪಡೆದಿದೆ.

ಮಾರುಕಟ್ಟೆಗಳಲ್ಲಿ ವಾರದ ಹಿಂದೆಯೇ ನಾನಾ ವಿನ್ಯಾಸದ ದೀಪಗಳು ಬಂದಿವೆ. ಒಂದೊಂದು ದೀಪಗಳ ತಮ್ಮ ವಿನ್ಯಾಸದಿಂದ ನೋಡುಗರ ಮನ ಸೆಳೆಯುವಂತಿದೆ. ಇನ್ನು ಅದರಲ್ಲಿ ಬತ್ತಿ ಮತ್ತು ಎಣ್ಣೆ ಹಾಕಿ ದೀಪ ಹಚ್ಚಿದರೆ ಅವುಗಳ ಸೌಂದರ್ಯ ಮನ ಸೂರೆಗಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಜಯನಗರದಲ್ಲಿ ಬೋಲ್ಡ್ ಸ್ಕೈ ತಂಡ ಸೆರೆ ಹಿಡಿದ ಕೆಲವೊಂದು ಹಣತೆಗಳ ಸ್ಯಾಂಪಲ್ ನಿಮಗೆ ನೀಡಿದ್ದೇವೆ ನೋಡಿದ್ದೇವೆ ನೋಡಿ ಅದರ ಚೆಲುವನ್ನು ಕಣ್ತುಂಬಿಕೊಳ್ಳಿ.

ಗುಲಾಬಿ ದಳ:

ಗುಲಾಬಿ ದಳ:

ಈ ಹಣತೆಯಲ್ಲಿ ಗುಲಾಬಿಯ ದಳಗಳು ಅರಳಿ ನಿಂತ ವಿನ್ಯಾಸನ್ನು ಕಾಣಬಹುದು.

ಹೃದಯಾಕಾರ:

ಹೃದಯಾಕಾರ:

ಹೃದಯಾಕಾರದ ಈ ದೀಪದಲ್ಲಿ ನಮಃ ಎಂಬ ಚಿಹ್ನೆ ಇದೆ. ಅದನ್ನು ನೋಡುವಾಗಲೇ ನಮಗರಿವಿಲ್ಲದಂತೆಯೇ ಓಂ ನಮಃ ಎಂದು ಹೇಳಿ ಬಿಡುತ್ತೇವೆ.

ಶಂಖ:

ಶಂಖ:

ಶಂಖ ರೀತಿಯಲ್ಲಿರುವ ಈ ದೀಪದ ವಿನ್ಯಾಸ ನೋಡುಗರ ಮನ ಸೆಳೆಯುವಂತಿದೆ.

 ಜೋಡಿ ದೀಪ:

ಜೋಡಿ ದೀಪ:

ಈ ದೀಪ ನೋಡಲು ತುಂಬಾ ಆಕರ್ಷಕವಾಗಿದೆ. ಈ ಜೋಡಿ ದೀಪನ್ನು ಮನೆಯ ಹೊಸ್ತಿಲಿನಲ್ಲಿಟ್ಟರೆ ತುಂಬಾ ಆಕರ್ಷಕವಾಗಿರುತ್ತದೆ.

ಗಣೇಶ:

ಗಣೇಶ:

ಈ ದೀಪವನ್ನು ಸೂಕ್ಷ್ಮವಾಗಿ ಗಮನಿಸಿ ಗಣೇಶ ಕಾಣುತ್ತಿದ್ದಾನೆ ಅಲ್ಲವೇ? ಈ ಹಣತೆ ಮಾಡಿದವರ ಕೈಚಳಕವನ್ನು ಮೆಚ್ಚಲೇಬೇಕು.

ಹಕ್ಕಿ ಗೂಡು:

ಹಕ್ಕಿ ಗೂಡು:

ಈ ದೀಪಗಳನ್ನು ನೋಡಿ ಹಕ್ಕಿ ಗೂಡಿನಂತೆ ಕಾಣುವ ಇವುಗಳು ಎಷ್ಟೊಂದು ಸುಂದರವಾಗಿದೆಯಲ್ಲವೇ?

ಕಪ್ಪೆ ಚಿಪ್ಪು:

ಕಪ್ಪೆ ಚಿಪ್ಪು:

ಈ ಹಣತೆಗಳನ್ನು ನೋಡಿದಾಗ ಕಪ್ಪೆ ಚಿಪ್ಪಿನ ರೀತಿಯಲ್ಲಿರುವ ಇವುಗಳು ನೋಡಲು ಆಕರ್ಷಕವಾಗಿದ್ದು ಅಧಿಕ ಹಣತೆಗಳನ್ನು ಕೊಂಡು ಕೊಳ್ಳುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

ಬಣ್ಣದ ದೀಪ:

ಬಣ್ಣದ ದೀಪ:

ಈ ದೀಪವನ್ನು ಮನೆಯ ಮಧ್ಯಭಾಗದಲ್ಲಿ ಇಟ್ಟರೆ ತುಂಬಾ ಆಕರ್ಷಕವಾಗಿ ಕಾಣಬಹುದಲ್ಲವೇ? ಎಷ್ಟೊಂದು ಸುಂದರವಾಗಿದೆ, ನೋಡಿದಷ್ಟು ನೋಡಬೇಕೆನಿಸುತ್ತದೆ.

ಲಕ್ಷ್ಮಿ ಮತ್ತು ಗಣೇಶ:

ಲಕ್ಷ್ಮಿ ಮತ್ತು ಗಣೇಶ:

ಈ ಹಣತೆಯಲ್ಲಿ ಲಕ್ಷ್ಮಿ ಹಾಗೂ ಗಣೇಶನನ್ನು ಕಾಣಬಹುದು. ಈ ಹಣತೆಯನ್ನು ದೇವರ ಕೋಣೆಯಲ್ಲಿಡಲು ಸೂಕ್ತವಾಗಿದೆಯೆಲ್ಲಾ?

ತಾವರೆ:

ತಾವರೆ:

ಈ ಹಣತೆ ತಾವರೆ ಆಕಾರದಲ್ಲಿದ್ದು ಮಧ್ಯದಲ್ಲಿ ಹಾಗೂ ಸುತ್ತ ಬತ್ತಿ ಇಟ್ಟು ಎಣ್ಣೆಯನ್ನು ಹಾಕಿ ದೀಪ ಹಚ್ಚಿದರೆ ತುಂಬಾ ಆಕರ್ಷಕವಾಗಿ ಕಾಣುವುದು.

English summary

12 Diya Designs To Dazzle You This Diwali | Tips For Home Decoration | ದೀಪಾವಳಿಯ ಬೆಳಕನ್ನು ಮತ್ತಷ್ಟು ಸುಂದರವಾಗಿಸುವ 12 ದೀಪಗಳು | ಮನೆ ಅಲಂಕಾರಕ್ಕೆ ಕೆಲ ಸಲಹೆಗಳು

To help you select diyas for Diwali, Boldsky has picked 12 diya designs that are innovative and quite compelling. Take your pick now!
X
Desktop Bottom Promotion