For Quick Alerts
ALLOW NOTIFICATIONS  
For Daily Alerts

ಬಾಲ್ಕನಿ ಶೃಂಗರಿಸಲು ಕೆಲವು ಟಿಪ್ಸ್

By Super
|

ದೊಡ್ಡ ನಗರಗಳಲ್ಲಿ ಮತ್ತು ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವವರಿಗೆ ಸ್ವಚ್ಛಂದವಾಗಿ ತಮ್ಮದೇ ಆದ ಒಂದು ಹೂದೋಟವನ್ನು ಮಾಡಬೇಕೆಂಬ ಕನಸು ಯಾವತ್ತಿದ್ದರೂ ಕನಸೇ. ಅವರಿಗೆ ಸಣ್ಣ ಗಾರ್ಡನ್ ಎಂದರೆ ಅದು ಅಪಾರ್ಟ್ ಮೆಂಟ್ ನ ಬಾಲ್ಕನಿ. ಅಲ್ಲಿಂದ ಇಣುಕಿದರೆ ಪಕ್ಕದ ಮನೆಯ ಚಿತ್ರಣ ಸಿಗುತ್ತದೆ. ನಿಮ್ಮ ಬಾಲ್ಕನಿ ಸಣ್ಣ ಮತ್ತು ಮಬ್ಬಾಗಿದ್ದರೆ ಅದನ್ನು ಬದಲಾಯಿಸುವ ಸಮಯ ಬಂದಿದೆ. ನಿಮ್ಮ ಬಾಲ್ಕನಿಯನ್ನು ಸಿಂಗರಿಸಿ ಅದಕ್ಕೊಂದು ಒಳ್ಳೆಯ ರೂಪ ನೀಡಬೇಕು. ಅದಾಗ್ಯೂ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರೆ ಬಾಲ್ಕನಿಯನ್ನು ಒಪ್ಪಒರಣವಾಗಿ ಇಡುವುದು ಒಂದು ಸವಾಲಿನ ಕೆಲಸ. ಕೆಲವರು ಈ ಸವಾಲನ್ನು ಎದುರಿಸಲು ಹೋಗದೆ ಬಾಲ್ಕನಿಯನ್ನು ಖಾಲಿ ಮತ್ತು ಸಾಧಾರಣವಾಗಿಡುತ್ತಾರೆ. ಕೆಲವು ಬಾಲ್ಕನಿಯಲ್ಲಿ ಬೇಡವಾದ ವಸ್ತುಗಳು ಮತ್ತು ಹಾಲಿನ ಕ್ಯಾನ್ ಗಳನ್ನಿಡಲು ಬಳಸುತ್ತಾರೆ.

ಆರಂಭದಲ್ಲಿ ಇದು ಸ್ವಲ್ಪ ಕಷ್ಟವಾಗಬಹುದು. ಆದರೆ ನೀವು ಬಾಲ್ಕನಿಯನ್ನು ಕೆಲವೊಂದು ಆಕರ್ಷಕ ಗಿಡಗಳು, ಕುಳಿತುಕೊಳ್ಳಲು ವ್ಯವಸ್ಥೆ ಮತ್ತು ವಿದ್ಯುತ್ ದೀಪದಿಂದ ಶೃಂಗರಿಸಬಹುದು. ಬಾಲ್ಕನಿಯ ಸ್ಥಳವನ್ನು ಖಾಸಗಿಯಾಗಿ ಮತ್ತು ವಾರಾಂತ್ಯದಲ್ಲಿ ಬೇಸರ ತರಿಸುವಾಗ ಸಮಯ ಕಳೆಯಲು ಉಪಯೋಗಿಸಬೇಕು. ಬಾಲ್ಕನಿ ಶೃಂಗರಿಸಲು ಹೆಜ್ಜೆಯನ್ನಿಡುವ ಮೊದಲು ಅಲ್ಲಿನ ಸ್ಥಳವನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ಬಾಲ್ಕನಿಯ ನಿರ್ಮಾಣ ಮತ್ತು ಅದರ ಸ್ವರೂಪ ಹೇಗಿದೆ, ಅದನ್ನು ಯಾವ ರೀತಿಯಲ್ಲಿ ಕಟ್ಟಲಾಗಿದೆ ಎಂದು ತಿಳಿದುಕೊಳ್ಳಿ. ಈ ಎಲ್ಲಾ ಮಾಹಿತಿಯನ್ನು ಪಡೆದ ಬಳಿಕ ಬಾಲ್ಕನಿಗೆ ಬೇಕಾಗಿರುವಂತಹ ವ್ಯವಸ್ಥೆಯನ್ನು ಸರಿಯಾಗಿ ಮಾಡಿಕೊಳ್ಳಬಹುದು. ಬಾಲ್ಕನಿಯನ್ನು ಶೃಂಗರಿಸಲು ಮತ್ತು ಬಾಲ್ಕನಿಗಾಗಿ ಬೇಕಾದ ಕೆಲವು ಸಸ್ಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Decorate Your Balcony With Plants

1. ಬಾಲ್ಕನಿ ಮತ್ತೊಂದು ಕೋಣೆ: ಇದು ಗೋದಾಮು ಅಲ್ಲ
ಮನೆಯಲ್ಲಿನ ವಾಸಸ್ಥಳವನ್ನು ಮತ್ತಷ್ಟು ಅಪ್ಯಾಯಮಾನವಾಗಿ ಮಾಡಬೇಕೆಂದರೆ ಬಾಲ್ಕನಿಯನ್ನು ಮನೆಯಲ್ಲಿನ ಮತ್ತೊಂದು ಕೋಣೆಯೆಂದೇ ಪರಿಗಣಿಸಬೇಕು. ಇದನ್ನು ಬೇಡದ ವಸ್ತುಗಳನ್ನು ಇಡುವ ಗೋದಾಮನ್ನಾಗಿ ಮಾಡಬಾರದು. ಬಾಲ್ಕನಿಯಲ್ಲಿ ಹೆಚ್ಚಾಗಿ ಆಟಿಕೆಗಳು, ಉಪಯೋಗಿಸದ ಸೈಕಲ್ ಇತ್ಯಾದಿಗಳು ಬಾಲ್ಕನಿಯ ಸ್ಥಳವನ್ನು ಆಕ್ರಮಿಸಿರುತ್ತದೆ. ಹೀಗೆ ಆಗದಂತೆ ನೋಡಿಕೊಳ್ಳಿ. ಯಾಕೆಂದರೆ ಆಗ ಮನೆ ಗೊಂದಲಮಯವಾಗುವುದು ತಪ್ಪುತ್ತದೆ.

2. ನೆಲ ಪ್ರಮುಖ ಪಾತ್ರ
ಬಾಲ್ಕನಿಯನ್ನು ಶೃಂಗರಿಸಲು ನಿರ್ಧರಿಸಿದರೆ ಮೊದಲ ಹೆಜ್ಜೆಯಾಗಿ ನೀವು ನೆಲದ ಬಗ್ಗೆ ಗಮನಹರಿಸಬೇಕು. ಬಾಲ್ಕನಿ ಆಕರ್ಷಕವಾಗಿ ಕಾಣಿಸಲು ಸರಿಯಾದ ನೆಲವನ್ನು ಆಯ್ಕೆಮಾಡಿ. ಬಿಳಿ ಅಥವಾ ಹಗುರ ಬಣ್ಣದ ಟೈಲ್ಸ್ ಗಳನ್ನು ಬಾಲ್ಕನಿ ನೆಲಕ್ಕೆ ಬಳಸಿ ಅದು ಆಧುನಿಕ ಸ್ಪರ್ಶವನ್ನು ನೀಡುತ್ತದೆ.

3.ಸಸ್ಯಗಳನ್ನು ನೆಡುವುದು
ಬಾಲ್ಕನಿಯನ್ನು ಶೃಂಗರಿಸುವಾಗ ಎರಡನೇ ಹೆಜ್ಜೆಯಾಗಿ ನಿಮ್ಮ ಬಾಲ್ಕನಿಗೆ ಸರಿಯಾದ ಗಿಡಗಳನ್ನು ಆಯ್ಕೆ ಮಾಡಿ. ತಾಜಾ ಮತ್ತು ಸ್ಪಂದನಶೀಲ ಸಸ್ಯಗಳು ನಿಮ್ಮ ಮನಸ್ಥಿತಿ ಮತ್ತು ಆರಾಮವಾಗಿರುವಂತೆ ಮಾಡುತ್ತದೆ. ಸಸ್ಯಗಳಿಗಾಗಿ ನೀವು ವ್ಯಯಿಸಲು ಬಯಸುವ ಹಣಕ್ಕೆ ಸರಿಯಾದ ಮೌಲ್ಯಬರಲಿ. ಈಗಾಗಲೇ ನಿಮ್ಮ ಬಾಲ್ಕನಿಯಲ್ಲಿ ಸಸ್ಯಗಳು ಇದ್ದರೆ ಅದಕ್ಕೆ ಹೆಚ್ಚಿನ ಕಾಳಜಿ ನೀಡಿ. ಸಸ್ಯಗಳಲ್ಲಿ ಒಣಗಿರುವ ಎಲೆಗಳನ್ನು ತೆಗೆದು ಸರಿಯಾಗಿ ನೀರು ಹಾಕಿ.

4. ಖಾಲಿಯಾಗಿರುವ ಹೂಕುಂಡಗಳಲ್ಲಿ ಸಸ್ಯ ನೆಡಿ
ಬಾಲ್ಕನಿಯಲ್ಲಿ ಖಾಲಿ ಮತ್ತು ಸಸ್ಯಗಳು ಇಲ್ಲದ ಹೂಕುಂಡಗಳಿದ್ದರೆ ನೇರವಾಗಿ ಸಮೀಪದ ನರ್ಸರಿಗೆ ತೆರಳಿ ಮತ್ತು ಕೆಲವು ಸಸ್ಯಗಳನ್ನು ಖರೀದಿಸಿ. ಬಾಲ್ಕನಿಗೆ ಬೇಕಾಗುವ ಆರೋಗ್ಯಕರವಾಗಿರುವ ಸಸ್ಯಗಳನ್ನು ಖರೀದಿಸಿ. ಬಾಲ್ಕನಿಗೆ ಬೀಳುವ ಸೂರ್ಯನ ಬೆಳಕನ್ನು ಆಧರಿಸಿ ಸಸ್ಯಗಳನ್ನು ಆಯ್ಕೆ ಮಾಡಿ. ಬಾಲ್ಕನಿಯನ್ನು ಸಿಂಗರಿಸಲು ಇದು ಒಳ್ಳೆಯ ವಿಧಾನ

5. ಒಂದು ಸಣ್ಣ ಆಕರ್ಷಕ ಸೂಚನೆ
ಬಾಲ್ಕನಿಯನ್ನು ತುಂಬಾ ಸೊಗಸಾದ ರೀತಿಯಲ್ಲಿ ಅಲಂಕರಿಸಲು ಬಯಸದ ಮಂದಿ ತುಂಬಾ ಕಡಿಮೆ. ಸುಂದರ ಸಸ್ಯಗಳು ಮತ್ತು ಲೆವೆಂಡರ್ ಗಿಡಗಳನ್ನು ನೆಟ್ಟು ಬಾಲ್ಕನಿಯನ್ನು ಶೃಂಗರಿಸುವುದರಿಂದ ನಿಮ್ಮ ವಾಸಸ್ಥಳಕ್ಕೆ ಬಾಲ್ಕನಿ ವಿಶೇಷವಾದ ಮೆರಗನ್ನು ನೀಡಬಹುದು.

6. ಸ್ಪಷ್ಟ ಬೌಂಡರಿಯಿರಲಿ.
ನಿಮ್ಮ ಬಾಲ್ಕನಿಗೆ ಒಂದು ಸ್ಪಷ್ಟ ಬೌಂಡರಿಯಿರಲಿ. ಬಾಲ್ಕನಿಗೆ ಸರಿಯಾದ ಸಸ್ಯಗಳನ್ನು ಆಯ್ಕೆ ಮಾಡಿ ಅದನ್ನು ಬಾಲ್ಕನಿಯ ಅಂಚುಗಳಲ್ಲಿ ಇಡುವುದರಿಂದ ನಿಮ್ಮ ಒಳಾಂಗಣಕ್ಕೆ ವಿಶೇಷವಾದ ನೋಟ ನೀಡಬಹುದು. ಇದರಿಂದ ನಿಮ್ಮ ಬಾಲ್ಕನಿಯಲ್ಲಿ ಹೆಚ್ಚಿನ ಜಾಗವಿರುವಂತೆ ಕಾಣುತ್ತದೆ. ಬಾಲ್ಕನಿಯಲ್ಲಿ ಹೆಚ್ಚಿನ ಜಾಗವಿದ್ದರೆ ಅದರ ಅಂಚಿನಲ್ಲಿ ಸಸ್ಯಗಳನ್ನು ನೆಡುವುದು ಬೇಲಿಯಂತೆ ಕೆಲಸ ಮಾಡುತ್ತದೆ. ಅದಾಗ್ಯೂ ಸಣ್ಣ ಬಾಲ್ಕನಿಯಾಗಿದ್ದರೂ ಅದು ಆಕರ್ಷಕವಾಗಿ ಕಾಣಿಸುತ್ತದೆ. ನಿಮ್ಮ ಬಾಲ್ಕನಿಗೆ ಒಳ್ಳೆಯ ಬಣ್ಣವನ್ನು ಆಯ್ಕೆ ಮಾಡಿ. ಮೂರು ಬಣ್ಣಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಇದು ನಿಮ್ಮ ಬಾಲ್ಕನಿಯ ನೋಟ ಮತ್ತು ಸಮೃದ್ಧತೆಯನ್ನು ವರ್ಧಿಸುತ್ತದೆ.

English summary

Decorate Your Balcony With Plants

Knowing these details will help you decide on the right arrangement to be made for your balcony. Here are a few tips to decorate balcony and the right plants for balcony.
X
Desktop Bottom Promotion