For Quick Alerts
ALLOW NOTIFICATIONS  
For Daily Alerts

ಎಲೆಕೋಸು- ಇದರ ಎಲೆ ಎಲೆಗಳಲ್ಲೂ ಔಷಧೀಯ ಗುಣಗಳು

ಎಲೆಕೋಸಿನ ಎಲೆಗಳಲ್ಲಿ ವಿಶೇಷವಾಗಿ ಪಾದಗಳ ಊತವನ್ನು ನಿವಾರಿಸುವ ಗುಣವಿದೆ. ಅಲ್ಲದೇ ವಿಶೇಷವಾಗಿ ಸಂಧಿವಾತವನ್ನು ಕಡಿಮೆಗೊಳಿಸುವ ಗುಣವಿದೆ. ಹಲವು ಮೂಳೆಗಂಟುಗಳಲ್ಲಿ ನೋವು ನೀಡುವ ಸಂಧಿವಾತದ ನೋವನ್ನು ನಿವಾರಿಸುತ್ತದೆ.

By Manu
|

ಸಾಮಾನ್ಯವಾಗಿ ಹೋಟೆಲುಗಳಲ್ಲಿ ಸಾಂಬಾರ್ ಮತ್ತು ಪಲ್ಯ ಮಾಡಲು ಅಗ್ಗದ ತರಕಾರಿಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುವ ಕಾರಣ ಹೆಚ್ಚಿನ ದಿನಗಳಲ್ಲಿ ಮೂಲಂಗಿ ಸಾಂಬಾರ್ ಮತ್ತು ಎಲೆಕೋಸು ಪಲ್ಯ ತಯಾರಾಗಿರುತ್ತದೆ. ಆದರೆ ಅಗ್ಗವಾದ ಮಾತ್ರಕ್ಕೆ ಇದರ ಆರೋಗ್ಯಕರ ಗುಣಗಳೇನೂ ಕಡಿಮೆಯಲ್ಲ. ಹಸಿಯಾಗಿಯೂ ತಿನ್ನಬಹುದಾದ ಎಲೆಕೋಸಿನಲ್ಲಿ ಹಲವು ಪೋಷಕಾಂಶಗಳಿದ್ದು ಜೀರ್ಣಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಸಂಧಿವಾತ ಸಮಸ್ಯೆಗೆ 'ಎಲೆಕೋಸಿನ ಎಲೆಗಳೇ' ಪರ್ಫೆಕ್ಟ್ ಮನೆಮದ್ದು

ಇದರಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ವಿಟಮಿನ್ ಕೆ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ದಿಸುತ್ತವೆ. ಇದರಲ್ಲಿ ಉರಿಯೂತ ನಿವಾರಕ ಗುಣವೂ ಇದೆ ಹಾಗೂ ಕ್ಯಾನ್ಸರ್ ಉಂಟುಮಾಡುವ ಕಣಗಳ ವಿರುದ್ಧ ಹೋರಾಡುವ ಗುಣವೂ ಇದೆ. ಅಲ್ಲದೇ ಊದಿಕೊಂಡ ಮತ್ತು ಜರ್ಝರಿತವಾದ ಚರ್ಮಕ್ಕೆ ಉತ್ತಮ ಪೋಷಣೆಯನ್ನೂ ನೀಡುತ್ತದೆ. ಆಹಾ...! ಕ್ಯಾಬೇಜ್ ಜ್ಯೂಸ್‌ನ ಪ್ರಯೋಜನಗಳು ಒ೦ದೇ, ಎರಡೇ..?

ಇನ್ನು ಇದರಲ್ಲಿ ಅಡಗಿರುವ ಹಲವಾರು ವಿಟಮಿನ್ನುಗಳ ಸಹಿತ ಫೈಟೋ ನ್ಯೂಟ್ರಿಯೆಂಟುಗಳೂ, ಆಂಥೋಸಯಾನಿನ್, ಹಾಗೂ ಗ್ಲುಟಮೈನ್ ಎಂಬ ಪೋಷಕಾಂಶಗಳಿವೆ. ಈ ಪೋಷಕಾಂಶಗಳಲ್ಲಿರುವ ಉರಿಯೂತ ನಿವಾರಕ ಗುಣ ವಿಶೇಷವಾಗಿ ಮೂಳೆಸಂದುಗಳ ನೋವು ಮತ್ತು ಕ್ಯಾನ್ಸರ್ ತಡೆಗಟ್ಟಲು ನೆರವಾಗುತ್ತದೆ. ಎಲೆಕೋಸಿನ ಎಲೆಗಳಲ್ಲಿ ವಿಶೇಷವಾಗಿ ಪಾದಗಳ ಊತವನ್ನು ನಿವಾರಿಸುವ ಗುಣವಿದೆ. ಅಲ್ಲದೇ ವಿಶೇಷವಾಗಿ ಸಂಧಿವಾತವನ್ನು ಕಡಿಮೆಗೊಳಿಸುವ ಗುಣವಿದೆ. ಹಲವು ಮೂಳೆಗಂಟುಗಳಲ್ಲಿ ನೋವು ನೀಡುವ ಸಂಧಿವಾತದ ನೋವನ್ನು ಎಲೆಕೋಸು ಹೇಗೆ ನಿವಾರಿಸುತ್ತದೆ ಎಂಬುದನ್ನು ಇಂದು ನೋಡೋಣ....

ಅಗತ್ಯವಿರುವ ಸಾಮಗ್ರಿಗಳು

ಅಗತ್ಯವಿರುವ ಸಾಮಗ್ರಿಗಳು

*ಸಾವಯವ ವಿಧಾನದಲ್ಲಿ ಬೆಳೆದ ಎಲೆಕೋಸು

*ಅಲ್ಯೂಮಿನಿಯಂ ಫಾಯಿಲ್ ಹಾಳೆ

*ಲಟ್ಟಣಿಗೆ ಅಥವಾ ಬಾಟಲಿ

*ಹತ್ತಿಯ ಬ್ಯಾಂಡೇಜು ಅಥವಾ ತೆಳುವಾದ ಬಟ್ಟೆಯ ಪಟ್ಟಿ

*ಮೈಕ್ರೋವೇವ್ ಓವನ್

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಎಲೆಕೋಸಿನ ಹೊರಬದಿಯ ಪದರವನ್ನು ಬಿಡಿಸಿ ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ ಕಾಂಡದ ಭಾಗವನ್ನು ಕತ್ತರಿಸಿ ಎಲೆಗಳನ್ನು ಒಣಗಿಸಿ.

ಎಲೆಯನ್ನು ಲಟ್ಟಿಸಿ!

ಎಲೆಯನ್ನು ಲಟ್ಟಿಸಿ!

ಲಟ್ಟಣಿಗೆ ಅಥವಾ ಬಾಟಲಿಯಿಂದ ಎಲೆಯನ್ನು ಲಟ್ಟಿಸಿ ಎಲೆಯ ರಸ ಒಸರುವಂತೆ ಮಾಡಿ.

ಎಲೆಯನ್ನು ಬಿಸಿಮಾಡಿ...

ಎಲೆಯನ್ನು ಬಿಸಿಮಾಡಿ...

ಈ ಎಲೆಯನ್ನು ಒಂದು ಅಲ್ಯೂಮಿನಿಯಂ ಫಾಯಿಲ್ ಮೇಲೆ ಇರಿಸಿ ಮೈಕ್ರೋವೇವ್ ಓವನ್ ಒಳಗೆ ಕೆಲವು ಸೆಕೆಂಡುಗಳ ಕಾಲ ಬಿಸಿಮಾಡಿ. ಈಗ ಬಿಸಿಯಾಗಿರುವ ಎಲೆಯನ್ನು ಮೂಳೆಸಂಧುಗಳಲ್ಲಿ ನೋವಿರುವ ಭಾಗದ ಮೇಲೆ ಆವರಿಸುವಂತೆ ಹರಡಿ. ಬಳಿಕ ಹತ್ತಿಯ ಬ್ಯಾಂಡೇಜು ಅಥವಾ ಹತ್ತಿಯ ಪಟ್ಟಿಯಿಂದ ಎಲೆ ಅಲ್ಲಾಡದಂತೆ ಕಟ್ಟಿ.

ಒಂದು ಗಂಟೆ ಹಾಗೇ ಬಿಡಿ

ಒಂದು ಗಂಟೆ ಹಾಗೇ ಬಿಡಿ

ಈಗ ಪಟ್ಟಿಯನ್ನು ಸುಮಾರು ಒಂದು ಗಂಟೆ ಹಾಗೇ ಬಿಡಿ. ಅಷ್ಟೂ ಹೊತ್ತು ನಡೆದಾಡದಿರುವುದೇ ಲೇಸು. ಈ ವಿಧಾನವನ್ನು ದಿನಕ್ಕೆ ಮೂರು ಬಾರಿ ಅನುಸರಿಸಬೇಕು. ಮರುದಿನದಿಂದಲೇ ನಿಮ್ಮ ಸಂಧುನೋವು ಕಡಿಮೆಯಾಗಿರುವುದನ್ನು ಗಮನಿಸಬಹುದು.

ಬಿಸಿಯಾಗಿಸುವ ಬದಲಿಗೆ ತಣ್ಣಗೆ ಮಾಡಿಯೂ ಅನುಸರಿಸಬಹುದು

ಬಿಸಿಯಾಗಿಸುವ ಬದಲಿಗೆ ತಣ್ಣಗೆ ಮಾಡಿಯೂ ಅನುಸರಿಸಬಹುದು

ಬಿಸಿಯಾಗಿಸುವ ಬದಲಿಗೆ ತಣ್ಣಗೆ ಮಾಡಿಯೂ ಅನುಸರಿಸಬಹುದು. ಈ ವಿಧಾನದಲ್ಲಿ ಬಿಸಿ ಮಾಡುವ ಬದಲು ಎಲೆಯನ್ನು ಫ್ರಿಜ್ಜಿನಲ್ಲಿಟ್ಟು ತಣ್ಣಗಿದ್ದಂತಿದ್ದಾಗಲೇ ಹಚ್ಚಿ.

ಎಲೆಕೋಸಿನ ಎಲೆಯ ಪವರ್...

ಎಲೆಕೋಸಿನ ಎಲೆಯ ಪವರ್...

ಎಲೆಕೋಸಿನಲ್ಲಿರುವ ಆಂಥೋಸೈಯಾನಿನ್ ನೋವನ್ನು ಕಡಿಮೆಗೊಳಿಸಲು ಹಾಗೂ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಕೆಂಪು ಎಲೆಕೋಸಿನಲ್ಲಿ ಇದರ ಪ್ರಮಾಣ ಅತಿ ಹೆಚ್ಚಾಗಿರುತ್ತದೆ. ಸಂಧಿವಾತದ ಆರೈಕೆಯಲ್ಲಿ ಎಲೆಕೋಸಿನ ಈ ಗುಣ ಪ್ರಮುಖ ಪಾತ್ರ ವಹಿಸುತ್ತದೆ.

ಹಸಿರು ಮತ್ತು ಕೆಂಪು ಎಲೆಕೋಸುಗಳು

ಹಸಿರು ಮತ್ತು ಕೆಂಪು ಎಲೆಕೋಸುಗಳು

ಹಸಿರು ಮತ್ತು ಕೆಂಪು ಎಲೆಕೋಸುಗಳು ಅಲ್ಸರ್ ಅನ್ನೂ ಗುಣಪಡಿಸುವ ಕ್ಷಮತೆ ಹೊಂದಿದೆ.

ಎಚ್ಚರಿಕೆ

ಎಚ್ಚರಿಕೆ

ಕೆಲವರಿಗೆ ಎಲೆಕೋಸು ಅಲರ್ಜಿಕರವಾಗಿದ್ದು ಈ ವ್ಯಕ್ತಿಗಳು ಎಲೆಕೋಸನ್ನು ಬಳಸಬಾರದು. ಇದರಿಂದ ಇವರ ಚರ್ಮದಲ್ಲಿ ತುರಿಕೆ ಮತ್ತು ಊತವನ್ನು ಉಂಟುಮಾಡಬಹುದು. ಒಂದು ವೇಳೆ ಹಚ್ಚಿದ ಕೆಲವೇ ಕ್ಷಣಗಳಲ್ಲಿ ತುರಿಕೆ ಕಂಡುಬಂದರೆ ತಕ್ಷಣವೇ ನಿವಾರಿಸಿ ತಣ್ಣೀರಿನಿಂದ ತೊಳೆದುಕೊಳ್ಳಿ.

English summary

Wrap Your Leg With Cabbage For 1 Hour & See What Happens!

This article will let you know about one of the best remedies for joint pain, that is, by making use of cabbage leaves. This is a form of cabbage compress that is known to provide a quick relief from joint pain. So, continue reading to know more about the health benefits of cabbage, which can be utilised to treat joint pain.
X
Desktop Bottom Promotion