For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಒಂದು ಕಪ್ ಮೊಸರು ಸೇವಿಸಿದರೆ-ಆರೋಗ್ಯಕ್ಕೆ ದುಪ್ಪಟ್ಟು ಲಾಭ!

ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ವಿಟಮಿನ್ ಡಿ, ವಿಟಮಿನ್ ಬಿ12, ಸತು ಮತ್ತು ಪ್ರೋಸ್ಪರಸ್ ಇದರಲ್ಲಿದೆ. ಹಾಗಾಗಿ ತಂಪು ಪಾನೀಯಗಳನ್ನು ಕುಡಿಯುವ ಬದಲು ಲಸ್ಸಿ ಅಥವಾ ಮೊಸರನ್ನು ಸೇವಿಸಿದರೆ ತುಂಬಾ ಒಳ್ಳೆಯದು.

By Hemanth
|

ಹೇಗಪ್ಪಾ ಈ ಬಿಸಿಲಿನ ಬೇಗೆಯಿಂದ ಪಾರಾಗುವುದು, ಸೆಕೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತನ್ನು ನಾವು ಹೇಳುತ್ತಾ ಇರುತ್ತೇವೆ. ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ತಂಪು ಹಾಗೂ ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ. ಇದಕ್ಕಾಗಿ ಹಲವಾರು ರೀತಿಯ ಹಣ್ಣುಗಳು ಸಿಗುತ್ತದೆ.

ಹಣ್ಣುಗಳಲ್ಲಿ ಇರುವಂತಹ ನೀರಿನಾಂಶವು ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಂಡು ನಿರ್ಜಲೀಕರಣದಿಂದ ನಮ್ಮನ್ನು ರಕ್ಷಿಸುತ್ತದೆ. ಕಲ್ಲಂಗಡಿ, ಮುಳ್ಳುಸೌತೆ, ಪುದೀನಾ, ಎಳನೀರು, ಕಿತ್ತಳೆ ಮತ್ತು ಇತರ ಕೆಲವೊಂದು ಹಣ್ಣುಗಳು ದೇಹವನ್ನು ತೇವಾಂಶದಿಂದ ಇಡಬಲ್ಲದು.

ಗರ್ಭಿಣಿಯರ ಆರೋಗ್ಯಕ್ಕೆ 'ಮೊಸರು' ಬಹಳ ಒಳ್ಳೆಯದು

ಇಷ್ಟೇ ಅಲ್ಲದೆ ಮೊಸರು ಕೂಡ ದೇಹವನ್ನು ತಂಪಾಗಿ ಇಡುವಂತಹ ಕೆಲಸ ಮಾಡುತ್ತದೆ. ಮೊಸರನ್ನು ಬಳಸಿಕೊಂಡು ಹಲವಾರು ರೀತಿಯ ಖಾದ್ಯಗಳನ್ನು ರಚಿಸಬಹುದು. ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ವಿಟಮಿನ್ ಡಿ, ವಿಟಮಿನ್ ಬಿ12, ಸತು ಮತ್ತು ಪ್ರೋಸ್ಪರಸ್ ಇದರಲ್ಲಿದೆ. ಹಾಗಾಗಿ ತಂಪು ಪಾನೀಯಗಳನ್ನು ಕುಡಿಯುವ ಬದಲು ಲಸ್ಸಿ ಅಥವಾ ಮೊಸರನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ಮೊಸರು ಯಾವ ರೀತಿಯಲ್ಲಿ ಲಾಭಕಾರಿ ಎಂದು ತಿಳಿಯಲು ಲೇಖನವನ್ನು ಓದುತ್ತಾ ಸಾಗಿ....

ಹೃದಯವನ್ನು ಆರೋಗ್ಯವಾಗಿಡುವುದು

ಹೃದಯವನ್ನು ಆರೋಗ್ಯವಾಗಿಡುವುದು

ಅಪಧಮನಿಗಳಲ್ಲಿ ಸಂಗ್ರವಾಗುವಂತಹ ಕೊಲೆಸ್ಟ್ರಾಲ್ ಅನ್ನು ಮೊಸರು ಕಡಿಮೆ ಮಾಡುತ್ತದೆ ಮತ್ತು ಇದರಿಂದ ಹೃದಯಾಘಾತದ ಅಪಾಯವು ಕಡಿಮೆಯಾಗುವುದು. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಆರಾಮ ನೀಡುವುದು

ಆರಾಮ ನೀಡುವುದು

ಬೇಸಿಗೆಯಲ್ಲಿ ನೀವು ತುಂಬಾ ಬಳಲಿದವರಂತೆ ಕಾಣಬಹುದು. ಮೊಸರನ್ನು ಪ್ರತೀ ದಿನ ಸೇವಿಸಿದರೆ ಆತಂಕ ಮತ್ತು ಒತ್ತಡವು ಕಡಿಮೆಯಾಗುವುದು. ಮೊಸರು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವ ಕೆಲಸ ಮಾಡುವುದು. ತುಂಬಾ ಬಳಲಿದ್ದರೆ ಅಥವಾ ಬೇಸರದಿಂದ ಇದ್ದರೆ ತಂಪಾದ ಮೊಸರನ್ನು ಸೇವಿಸಿದರೆ ನಿಮ್ಮ ಮನಸ್ಥಿತಿ ಸರಿಯಾಗುತ್ತದೆ.

ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಹಾಲಿಗೆ ಪರ್ಯಾಯ

ಹಾಲಿಗೆ ಪರ್ಯಾಯ

ಹಾಲು ಕುಡಿಯಲು ನಿಮಗೆ ಇಷ್ಟವಿಲ್ಲವೆಂದಾದರೆ ಅದಕ್ಕೆ ಪರ್ಯಾಯವಾಗಿ ಮೊಸರನ್ನು ಸೇವಿಸಬಹುದು. ಇದರಲ್ಲಿ ಹಾಲಿನಷ್ಟೇ ಕ್ಯಾಲರಿಯಿದೆ. ಹಾಲನ್ನು ಕರಗಿಸಲು ವಿಫಲವಾಗುವಂತಹವರಿಗೆ ಇದು ಒಳ್ಳೆಯದು.

ಮೂಳೆಗಳನ್ನು ಬಲಿಷ್ಠಗೊಳಿಸುವುದು

ಮೂಳೆಗಳನ್ನು ಬಲಿಷ್ಠಗೊಳಿಸುವುದು

ಮೊಸರಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಇದು ಮೂಳೆ ಹಾಗೂ ಹಲ್ಲುಗಳನ್ನು ಬಲಗೊಳಿಸಲು ನೆರವಾಗುವುದು. ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ನ್ನು ತಡೆಯುತ್ತದೆ.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಮೊಸರು ಕಡಿಮೆ ಕೊಬ್ಬು ಮತ್ತು ಉನ್ನತ ಮಟ್ಟದ ಪ್ರೋಟೀನ್ ನ್ನು ಒಳಗೊಂಡಿದೆ. ಕೊರ್ಟಿಸೊಲ್ ನ ಅಸಮತೋಲನದಿಂದಾಗಿ ಬೊಜ್ಜು ಬೆಳೆಯುತ್ತಾ ಇರುತ್ತದೆ. ಮೊಸರು ದೇಹದಲ್ಲಿ ಕೊರ್ಟಿಸೊಲ್ ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಬೇಸಿಗೆಯಲ್ಲಿ ಒಂದು ಪಿಂಗಾಣಿ ಮೊಸರು ಸೇವಿಸಿದರೆ ಅದು ದೇಹಕ್ಕೆ ತುಂಬಾ ಒಳ್ಳೆಯದು.

ತ್ವಚೆಯ ಸುಧಾರಣೆ

ತ್ವಚೆಯ ಸುಧಾರಣೆ

ಬೇಸಿಗೆಯಲ್ಲಿ ಬಿಸಿಲಿನಿಂದಾಗಿ ಚರ್ಮವು ಒಣಗುತ್ತದೆ ಮತ್ತು ತುರಿಕೆ ಆರಂಭವಾಗುತ್ತದೆ. ಚರ್ಮವು ತುಂಬಾ ಮೃಧು ಹಾಗೂ ಹೊಳಪನ್ನು ಉಂಟು ಮಾಡುವಲ್ಲಿ ಮೊಸರು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ವಿಟಮಿನ್ ಇ, ಸತು ಮತ್ತು ಪೋಸ್ಪರಸ್ ತ್ವಚೆಯ ಬಣ್ಣವನ್ನು ಬದಲಾಯಿಸುತ್ತದೆ. ಮೊಸರನ್ನು ಊಟದೊಂದಿಗೆ ಸೇವನೆ ಮಾಡಿದರೆ ಅದರಿಂದ ಆರೋಗ್ಯಕ್ಕೂ ಒಳ್ಳೆಯದು ಮತ್ತು ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಡುತ್ತದೆ. ಮೊಸರಿನಿಂದ ಸಿಹಿಯಾದ ಲಸ್ಸಿ ತಯಾರಿಸಬಹುದು ಅಥವಾ ಮೊಸರಿಗೆ ಬೇರೆ ಬೇರೆ ಹಣ್ಣುಗಳನ್ನು ಹಾಕಿ ತಿನ್ನಬಹುದು.

ಒಂದು ಕಪ್ ಮೊಸರಿನಲ್ಲಿದೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳು!

English summary

Why Curd (Dahi) Is A Must-Have During Summer

Curd is a delicious and nutritious coolant. You can try different recipes with curd. The most interesting part is that even your children will love to have curd. It is one of the richest sources of calcium and a good source of protein. It also has vitamin D, vitamin B12, zinc and phosphorus. Avoid aerated drinks and enjoy chilled lassi or dahi which keeps you hydrated throughout summer. Read on to know why curd is a must-have during summer. Let us go through the health benefits of curd during summer.
Story first published: Friday, May 19, 2017, 20:19 [IST]
X
Desktop Bottom Promotion