For Quick Alerts
ALLOW NOTIFICATIONS  
For Daily Alerts

ತುಂಬಾ ಜ್ವರ ಇದೆಯೇ? ಹಾಗಾದರೆ ಈ ಆಹಾರಗಳನ್ನು ಸೇವಿಸಬೇಡಿ

ವೈರಲ್ ಜ್ವರಕ್ಕೆ ಸಾಧ್ಯವಾದಷ್ಟು ಇಂತಹ ಆಹಾರಗಳಿಂದ ದೂರವಿರಿ.....

By Arshad
|

ವೈರಸ್ಸುಗಳಿಂದ ಆಗಮಿಸುವ ಜ್ವರ ಮತ್ತು ಶೀತಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಏಕೆಂದರೆ ಈ ವೈರಸ್ಸುಗಳು ಗಾಳಿಯಲ್ಲಿ ತೇಲಾಡುತ್ತಾ ಬರುತ್ತವೆ ಹಾಗೂ ಉಸಿರಿನ ಮೂಲಕ ಮೂಗು ಗಂಟಲ ತೇವಭಾಗದಲ್ಲಿ ಅಂಟಿಕೊಂಡು ಸೋಂಕು ಹರಡುತ್ತವೆ.

ಈ ಸೋಂಕನ್ನು ಎದುರಿಸಲು ದೇಹದ ರೋಗ ನಿರೋಧಕ ರಕ್ಷಣಾ ವ್ಯವಸ್ಥೆ ಮಾಡುವ ವ್ಯವಸ್ಥೆಯೇ ಜ್ವರ ಮತ್ತು ಶೀತ. ಈ ಸಮಯದಲ್ಲಿ ಏನು ತಿನ್ನಬೇಕು ಏನು ತಿನ್ನಬಾರದು ಎಂಬುದನ್ನು ನಮ್ಮ ಸುತಮುತ್ತಲ ಜನರು ಪುಕ್ಕಟೆಯಾಗಿ ನೀಡುತ್ತಾರೆ. ಆದರೆ ವೈರಲ್ ಜ್ವರಕ್ಕೆ ಇನ್ಫ್ಲುಯೆಂಜಾ ಎಂಬ ವೈರಸ್ಸು ಕಾರಣವಾಗಿದ್ದು ಇದು ಅತೀವ ಸೋಂಕುಕಾರಕವಾಗಿದೆ. ಜ್ವರ ಬಂದ್ರೆ ಮಾತ್ರೆ ಬೇಕಿಲ್ಲ, ಸರಿಯಾದ 'ಆಹಾರ ಪಥ್ಯವೇ' ಸಾಕು

ಈ ವೈರಸ್ಸು ರೋಗಿಯ ಸೀನು ಮತ್ತು ಕೆಮ್ಮಿನ ಮೂಲಕ ಗಾಳಿಯಲ್ಲಿ ಹರಡಿ ಈ ಗಾಳಿಯನ್ನು ಉಸಿರಾಡುವ ಯಾರಿಗೂ ಸುಲಭವಾಗಿ ತಗಲಿಕೊಳ್ಳುತ್ತದೆ. ಈ ಜ್ವರ ಬಂದರೆ ಜೀವವನ್ನೇ ಹಿಂಡಿಬಿಡುವ ಕಾರಣ ದಿನದ ಎಲ್ಲಾ ಕೆಲಸಗಳೂ ಬಾಧೆಗೊಳಗಾಗಿ ಕಿರಿಕಿರಿಯಾಗುತ್ತದೆ. ಈ ವೈರಸ್ಸಿನ ವಿರುದ್ಧ ನಮ್ಮ ದೇಹ ಪೂರ್ಣ ಯಶಸ್ಸು ಪಡೆಯಲು ಒಂದು ವಾರ ಬೇಕು. ದಿಢೀರನೇ ಕಾಡುವ ವೈರಲ್ ಜ್ವರಕ್ಕೆ- ಪವರ್‌ಫುಲ್ ಮನೆಮದ್ದು

ಇದೇ ಕಾರಣಕ್ಕೆ ವೈದ್ಯರೂ 'ಶೀತಕ್ಕೆ ಔಷಧಿ ತೆಗೆದುಕೊಳ್ಳದಿದ್ದರೆ ಏಳು ದಿನ ಬೇಕು, ತೆಗೆದುಕೊಂಡರೆ ಒಂದೇ ವಾರ ಸಾಕು' ಎಂದು ಹಾಸ್ಯಚಟಾಕಿ ಹಾರಿಸುತ್ತಾರೆ. ಈ ಜ್ವರ ಬಂದ ಬಳಿಕ ಸಾಕಷ್ಟು ವಿಶ್ರಾಂತಿ ಹಾಗೂ ಸೂಕ್ತ ಆಹಾರಗಳನ್ನು ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿಗೆ ಅದರ ಕೆಲಸವನ್ನು ಇನ್ನೂ ಸುಗಮವಾಗಿ ಮಾಡಿಕೊಡಲು ಸಾಧ್ಯವಾಗಿ ಶೀತ ಬೇಗನೇ ಕಡಿಮೆಯಾಗುತ್ತದೆ. ಬನ್ನಿ, ಈ ಆಹಾರಗಳು ಯಾವುವು ಎಂದು ನೋಡೋಣ....

ಹಾಲು

ಹಾಲು

ಹಾಲು ಕುಡಿಯುವ ಮೂಲಕ ಶ್ವಾಸಕೋಶ ಮತ್ತು ಶ್ವಾಸನಾಳಗಳಲ್ಲಿ ಹೆಚ್ಚಿನ ಕಫ ಉತ್ಪತ್ತಿಯಾಗಲು ಕಾರಣವಾಗುತ್ತದೆ. ಆದ್ದರಿಂದ ವೈರಲ್ ಜ್ವರವಿದ್ದ ಸಮಯದಲ್ಲಿ ಹಾಲು ಕುಡಿಯುವುದನ್ನು ಆದಷ್ಟು ಕಡಿಮೆ ಮಾಡಬೇಕು. ಕುಡಿಯದೇ ಇದ್ದರೆ ಅತ್ಯುತ್ತಮ. ಕಫ ಹೆಚ್ಚಾದಷ್ಟೂ ಶ್ವಾಸನಾಳ, ಗಂಟಲು ಮತ್ತು ಮೂಗಿನ ಒಳಗೆ ಕಫ ಕಟ್ಟಿಕೊಳ್ಳುವ ಮೂಲಕ ಉಸಿರಾಟ ಕಷ್ಟಕರವಾಗುತ್ತದೆ.

ಖಾರವಾದ ಆಹಾರಗಳು

ಖಾರವಾದ ಆಹಾರಗಳು

ವೈರಲ್ ಜ್ವರ ಬಂದಾಗ ಸೇವಿಸಲೇ ಬಾರದ ಆಹಾರಗಳ ಪಟ್ಟಿಯಲ್ಲಿ ಖಾರವಾದ, ಮಸಾಲೆಯುಕ್ತ ಅಹಾರಗಳಿವೆ. ಈ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ ಮತ್ತು ಕರುಳುಗಳು ಹೀರುವ ಆಹಾರಗಳನ್ನೇ ಸೇವಿಸುವುದು ಉತ್ತಮ. ಸುಲಭವಾಗಿ ಜೀರ್ಣವಾಗುವಂತಹದ್ದೂ ಹಾಗೂ ಪೌಷ್ಟಿಕವೂ ಆಗಿರುವಂತಹ ಆಹಾರವೇ ಸೂಕ್ತ. ಉದಾಹರಣೆಗೆ ಅನ್ನದ ಗಂಜಿ.

ಎಣ್ಣೆಯ/ಕರಿದ/ಹುರಿದ ಆಹಾರಗಳು

ಎಣ್ಣೆಯ/ಕರಿದ/ಹುರಿದ ಆಹಾರಗಳು

ಜ್ವರವಿರುವ ಸಮಯದಲ್ಲಿ ನೀವು ಎಣ್ಣೆಯ/ಕರಿದ/ಹುರಿದ ಆಹಾರಗಳನ್ನು ಸೇವಿಸದೇ ಇದ್ದರೆ ನಿಮ್ಮ ಜೀರ್ಣಾಂಗಗಳು ನಿಮಗೆ ಋಣಿಯಾಗಿರುತ್ತವೆ. ಏಕೆಂದರೆ ಈ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಶಕ್ತಿ ಮತ್ತು ರಕ್ತಪರಿಚಲನೆಯನ್ನು ಜೀರ್ಣಂಗಗಳಿಗೆ ಅಗತ್ಯವಿರುವ ಕಾರಣ ವೈರಸ್ಸುಗಳ ವಿರುದ್ಧ ಹೋರಾಡಲು ಅಗತ್ಯವಾಗಿದ್ದ ಶಕ್ತಿ ಇಲ್ಲಿ ಬಳಕೆಯಾಗಿ ಅತ್ತ ವೈರಸ್ಸುಗಳ ಕೈ ಮೇಲಾಗಿರುತ್ತದೆ.

ಟೀ/ಕಾಫಿ

ಟೀ/ಕಾಫಿ

ಹಾಸಿಗೆಯಲ್ಲಿ ಮಲಗಿರುವ ಸಮಯದಲ್ಲಿ ಟೀ ಕಾಫಿಗಳನ್ನು ಕುಡಿಯಲು ಮನ ಹಾತೊರೆಯುತ್ತದೆ. ಆದರೆ ಜ್ವರ ಪೂರ್ಣವಾಗಿ ಬಿಡುವವರೆಗೂ ಈ ವ್ಯಾಮೋಹವನ್ನು ಕಷ್ಟವಾದರೂ ಸರಿ, ಹತ್ತಿಕ್ಕಿಕೊಳ್ಳಬೇಕು.

ಟೀ/ಕಾಫಿ

ಟೀ/ಕಾಫಿ

ಏಕೆಂದರೆ ಈ ಪಾನೀಯಗಳ ಸೇವನೆಯಿಂದ ಹೆಚ್ಚು ಮೂತ್ರವಿಸರ್ಜನೆಗೆ ಅವಸರವಾಗಿ ದೇಹದಿಂದ ನೀರು ಹೊರಹೋಗಬೇಕಾಗುತ್ತದೆ. ಆಗ ದೇಹದ ರೋಗ ನಿರೋಧಕಾ ಶಕ್ತಿಗೆ ನೀರಿನ ಕೊರತೆ ಎದುರಾಗುತ್ತದೆ ಹಾಗೂ ಜ್ವರದ ವಿರುದ್ಧ ಹೋರಾಡುವ ಶಕ್ತಿಗುಂದುತ್ತದೆ.ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ-ಅಪಾಯ ಬೆನ್ನೇರಿ ಕಾಡಲಿದೆ!

English summary

what not to eat when you have a Viral Flu

Having flu is an irritating experience, but you will get better within one week with proper rest and by opting for the right kinds of foods. So Here, we will discuss more on the foods you should avoid when you have viral flu. Take a look.
X
Desktop Bottom Promotion