ಗಟ್ಟಿ ಮನಸ್ಸು ಮಾಡಿ, ಆದಷ್ಟು ಬೇಗ ಮದ್ಯಪಾನ ಬಿಟ್ಟುಬಿಡಿ!

ಒಂದು ವೇಳೆ ನೀವು ಸಹಾ ಅಪರೂಪದ ಮದ್ಯಪಾನಿಯಾಗಿದ್ದು ಇದರಿಂದ ನಿಜವಾಗಿಯೂ ಬಿಡಗಡೆ ಹೊಂದಬೇಕೆಂದು ಬಯಸಿದ್ದರೆ ಇದಕ್ಕೆ ಒಂದು ಬಾರಿ ಮೂರು ವಾರಗಳವರೆಗೆ ಅಂದರೆ ಇಪ್ಪತ್ತೊಂದು ದಿನ ಸರ್ವಥಾ ಒಂದು ತೊಟ್ಟೂ ಕುಡಿಯದೇ ಇದ್ದು ನೋಡಿ....

By: Arshad
Subscribe to Boldsky

ಮದ್ಯಪಾನ ಕೆಟ್ಟದ್ದು ಎಂದು ವಿಜ್ಞಾನ, ಧರ್ಮ, ಹಿರಿಯರ ಬುದ್ಧಿವಾದ ಎಲ್ಲವೂ ಹೇಳುತ್ತವೆ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳುವವರು ಮಾತ್ರ ಕಡಿಮೆ. ವಾಸ್ತವವಾಗಿ ಅತಿ ಕಡಿಮೆ ಪ್ರಮಾಣದಲ್ಲಿ ಮದ್ಯದ ಸೇವನೆಯಿಂದ ಮೈ ಬಿಸಿ ಹೆಚ್ಚುವ ಮೂಲಕ ಆರೋಗ್ಯ ಸುಧಾರಣೆಯಾಗುವುದು ವಿಜ್ಞಾನ ಕಂಡುಕೊಂಡ ಸತ್ಯವಾದರೂ ಸಾಮಾನ್ಯವಾಗಿ ಈ ವ್ಯಸನಕ್ಕೆ ತುತ್ತಾದವರು ಚಿಕ್ಕ ಪ್ರಮಾಣಕ್ಕೆ ಬಗ್ಗುವುದೇ ಇಲ್ಲ. ಮಹಿಳೆಯರೇ ಮೊದಲು ಮದ್ಯಪಾನದ ಸಹವಾಸ ಬಿಟ್ಟು ಬಿಡಿ....

ಕೆಲವರು ಅಪರೂಪಕ್ಕೆ ಕೊಂಚ ತೆಗೆದುಕೊಂಡರೆ ಪರವಾಗಿಲ್ಲ ಎಂಬ ಮನಃಸ್ಥಿತಿಯುಳ್ಳವರಾಗಿರುತ್ತಾರೆ. ಆದರೆ ಪಕ್ಕಾ ವ್ಯಸನಿಗಳಾದ ಹೊರತು ಉಳಿದ ಎಲ್ಲರಿಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಆದ್ದರಿಂದ ಈ ವ್ಯಸನದಿಂದ ಹೊರಬರಲು ಅರ್ಧ ಮನಸ್ಸು ಹೊಂದಿದ್ದರೂ ಸದಾ ಇದೇ ಕೊನೆಯ ಸಲ ಎಂದು ದೂಡುತ್ತಾ ಬಂದಿರುತ್ತಾರೆ. ಕೊಡು ತಾಯೆ ವರವ, ಕುಡುಕನಲ್ಲದ ಗಂಡನ..!

ಆದರೆ ಒಂದು ವೇಳೆ ನೀವು ಸಹಾ ಅಪರೂಪದ ಮದ್ಯಪಾನಿಯಾಗಿದ್ದು ಇದರಿಂದ ನಿಜವಾಗಿಯೂ ಬಿಡಗಡೆ ಹೊಂದಬೇಕೆಂದು ಬಯಸಿದ್ದರೆ ಇದಕ್ಕೆ ಒಂದು ಬಾರಿ ಮೂರು ವಾರಗಳವರೆಗೆ ಅಂದರೆ ಇಪ್ಪತ್ತೊಂದು ದಿನ ಸರ್ವಥಾ ಒಂದು ತೊಟ್ಟೂ ಕುಡಿಯದೇ ಇದ್ದು ನೋಡಿ. ಈ ಮಾತನ್ನು ಸುಮ್ಮನೇ ಹೀಗೇ ಆಡುತ್ತಿಲ್ಲ. ಈ ನಿಟ್ಟಿನಲ್ಲಿ ಕೆಲವು ವಿಜ್ಞಾನಿಗಳು ಸತತವಾಗಿ ಹಲವು ಸಂಶೋಧನೆಗಳನ್ನು ನಡೆಸಿದ್ದು ಕೆಲವಾರು ಸಮೀಕ್ಷೆಗಳ ಮೂಲಕ ಈ ವಿವರಗಳನ್ನು ಪಡೆದಿದ್ದಾರೆ.

ಅಲ್ಲದೇ ಒಂದು ಸಮೀಕ್ಷೆಯ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಧೂಮಪಾನಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರೂ ಮದ್ಯಪಾನಿಗಳ ಸಂಖ್ಯೆ ಮಾತ್ರ ಅಪರಿಮಿತವಾಗಿ ಏರಿದೆ. ಅಲ್ಲದೇ ಇದರಲ್ಲಿ ಹೆಚ್ಚಿನವರು ಅಪರೂಪಕ್ಕೆ ತೆಗೆದುಕೊಳ್ಳುವವರಾಗಿದ್ದಾರೆ. ಬನ್ನಿ, ಈ ವಿಜ್ಞಾನಿಗಳು ಕಂಡುಕೊಂಡ ಪ್ರಕಾರ ಮೂರು ವಾರ ಮದ್ಯಪಾನದಿಂದ ವಿಹಿತರಾದರೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....  

ತೂಕದಲ್ಲಿ ಇಳಿಕೆ

ಮದ್ಯದಲ್ಲಿ ಪ್ರಮುಖವಾಗಿರುವ ಅಂಶವೆಂದರೆ ಆಲ್ಕೋಹಾಲ್. ಆಲ್ಕೋಹಾಲ್ ಆಮ್ಲೀಯವಾಗಿರುವ ಕಾರಣ ಇದನ್ನು ನೇರವಾಗಿ ಸೇವಿಸಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ಇತರ ದ್ರವಗಳೊಂದಿಗೆ ಮಿಶ್ರಣಗೊಳಿಸಿ ಆಮ್ಲೀಯತೆಯನ್ನು ಕಡಿಮೆಗೊಳಿಸಲಾಗುತ್ತದೆ. ಇದಕ್ಕನುಗುಣವಾಗಿ ಇದರ ಪ್ರಾಬಲ್ಯ ಹಾಗೂ ಶೇಖಡಾವಾರು ಪ್ರಮಾಣ ನಿಗದಿಯಾಗುತ್ತದೆ. ಆದರೆ ಯಾವುದೇ ಮದ್ಯವಾದರೂ ಇದು ಕಡಿಮೆ ಆಮ್ಲೀಯವಾಗಿರುತ್ತದೆಯೇ ಹೊರತು ಆಮ್ಲೀಯತೆ ಇಲ್ಲದೇ ಇರುವುದಿಲ್ಲ.

ತೂಕದಲ್ಲಿ ಇಳಿಕೆ

ಇದು ಹಸಿವು ಹೆಚ್ಚಿಸಲು ಮತ್ತು ಕುರುಕು ತಿಂಡಿಯನ್ನು ತಿನ್ನಿಸಲು ಪ್ರೇರೇಪಿಸುತ್ತದೆ. ಪರಿಣಾಮವಾಗಿ ಸ್ಥೂಲಕಾಯ ಹೆಚ್ಚುತ್ತದೆ. ಇಪ್ಪತ್ತೊಂದು ದಿನಗಳವರೆಗೆ ಮದ್ಯ ಸೇವಿಸದೇ ಇದ್ದರೆ ಇದಕ್ಕೆ ಒಗ್ಗಿಕೊಂಡಿದ್ದ ದೇಹ ಈಗ ಮದ್ಯದ ಹೊರತಾಗಿಯೂ ಜೀರ್ಣಶಕ್ತಿಯನ್ನು ಪೂರ್ಣಗೊಳಿಸಿ ಸ್ಥೂಲಕಾಯದಿಂದ ಬಿಡುಗಡೆ ಪಡೆಯಲು ನೆರವಾಗುತ್ತದೆ.

ಚರ್ಮದ ಬಣ್ಣದಲ್ಲಿ ಬದಲಾವಣೆ

ನಿಯಮಿತವಾಗಿ ಮದ್ಯ ಸೇವಿಸುವವರ ಚರ್ಮ ಅಲ್ಲಲ್ಲಿ ಕೆಂಪುಗುಳ್ಳೆ, ಮೊಡವೆಗಳಿಂದ ತುಂಬಿದ್ದು ತುಟಿಗಳು ಕಪ್ಪಾಗಿ, ಉಗುರುಗಳೂ ಕಪ್ಪಾಗಿರುತ್ತವೆ. ಕಣ್ಣುಗಳೂ ಕ್ಷೋಭೆ ಕಳೆದುಕೊಂಡು ನಿಸ್ತೇಜವಾಗಿ ರುವಂತನ್ನಿಸುತ್ತದೆ. ಆದರೆ ಇಪ್ಪತ್ತೊಂದು ದಿನ ಮದ್ಯರಹಿತರಾದರೆ ಚರ್ಮ ತನ್ನ ಸಹಜವರ್ಣ ಪಡೆಯಲು ಪ್ರಾರಂಭಿಸುತ್ತದೆ. ಮೊಡವೆಗಳೂ ಮಾಯವಾಗುತ್ತವೆ.

ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ

ಆಲ್ಕೋಹಾಲ್ ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಾಂದ್ರಿತ ಸಕ್ಕರೆ ಮತ್ತು ಕೊಬ್ಬು ಇರುತ್ತದೆ. ಇದು ರಕ್ತಕ್ಕೆ ನೇರವಾಗಿ ಹೀರಲ್ಪಡುವ ಮೂಲಕ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗುತ್ತದೆ.

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

ಇಪ್ಪತ್ತೊಂದು ದಿನ ರಕ್ತದಲ್ಲಿ ಆಲ್ಕೋಹಾಲ್ ಬರದೇ ಇದ್ದರೆ ಇದುವರೆಗೆ ಮದ್ಯದ ಕಾರಣ ಸಂಗ್ರಹಗೊಂಡಿದ್ದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಬರೀ ಎರಡೇ ಎರಡು ವಾರದಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ!

ಮಧುಮೇಹವನ್ನು ಕಡಿಮೆಗೊಳಿಸುತ್ತದೆ

ಮೂರುವಾರಗಳ ಕಾಲ ಮದ್ಯ ದೇಹ ಪ್ರವೇಶಿಸದೇ ಇದ್ದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಂತುಲಿತಗೊಂಡು ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ. ಇದರ ಮೂಲಕ ಬರಬಹುದಾಗಿದ್ದ ಮಧುಮೇಹ ಮೊದಲಾದ ಕಾಯಿಲೆಗಳು ಆವರಿಸುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಕೊಂಚ ಮಟ್ಟಿನ ಆಲ್ಕೋಹಾಲ್ ಸೇವನೆಯಿಂದ ಮೈಬೆಚ್ಚಗಾಗುತ್ತದೆ ಆದರೆ ಮೆದುಳಿಗೆ ಕೆಟ್ಟದಲ್ಲ. ಆದರೆ ಈ ಪ್ರಮಾಣ ಹೆಚ್ಚಿತೋ, ಇದು ನೇರವಾಗಿ ಮೆದುಳಿನ ಕ್ಷಮತೆಯನ್ನೇ ಉಡುಗಿಸುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಇದೇ ಕಾರಣಕ್ಕೆ ಮದ್ಯಪಾನದ ಬಳಿಕ ವಾಹನ ಚಾಲನೆ ಮಾಡಬಾರದು. ಅಲ್ಲದೇ ಈ ಅಭ್ಯಾಸ ಸತತವಾದರೆ ಮೆದುಳಿನ ಜೀವಕೋಶಗಳು ಶಾಶ್ವತವಾಗಿ ನಾಶವಾಗುತ್ತವೆ. ಮೂರು ವಾರ ಮದ್ಯಬಿಟ್ಟರೆ ಹಿಂದಿನ ಅಮಲೆಲ್ಲಾ ಇಳಿದು ಮೆದುಳಿನ ಕ್ಷಮತೆ ಹೆಚ್ಚುತ್ತದೆ. ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು

ಸ್ನಾಯುಗಳು ಉತ್ತಮಗೊಳ್ಳುತ್ತವೆ

ಮದ್ಯ ದೇಹದಲ್ಲಿದ್ದಷ್ಟೂ ಸ್ನಾಯುಗಳ ಬೆಳವಣಿಗೆಗೆ ಅಡ್ಡಿಯುಂಟಾಗುತ್ತದೆ. ಇದೇ ಕಾರಣಕ್ಕೆ ಮದ್ಯವ್ಯಸನಿಗಳ ಹೊಟ್ಟೆ ದೊಡ್ಡದಾಗಿಯೂ ಕೈಕಾಲುಗಳು ಬಿದಿರಿನಂತೆಯೂ ಇರುತ್ತದೆ. ಯಾವಾಗ ಮದ್ಯ ದೇಹ ಸೇರುವುದು ತಪ್ಪುತ್ತದೆಯೋ ಆಗ ಅಗತ್ಯಪ್ರಮಾಣದ ಸ್ನಾಯುಗಳು ಬೆಳೆಯಲು ಪ್ರಾರಂಭಿಸುತ್ತವೆ. ಇದರಿಂದ ದೇಹದಾರ್ಢ್ಯತೆ ಉತ್ತಮಗೊಳ್ಳುತ್ತಾ ಹೋಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಮದ್ಯಪಾನವನ್ನು ಕನಿಷ್ಠ- ಮೂರು ವಾರಗಳವರೆಗೆ ಮಾಡದೇ ಇದ್ದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದನ್ನು ಕಂಡುಕೊಳ್ಳಲಾಗಿದೆ. ಇದರಿಂದ ಹತ್ತು ಹಲವು ರೋಗಗಳಿಂದ ರಕ್ಷಣೆ ಪಡೆಯಬಹುದು. ಆದರೆ ಮೂರು ವಾರಗಳ ಬಳಿಕ ಮದ್ಯ ಸೇವಿಸಲು ಮತ್ತೆ ಪ್ರಾರಂಭಿಸಿದರೆ ಪಡೆದುಕೊಂಡಿದ್ದ ರೋಗ ನಿರೋಧಕ ಶಕ್ತಿ ಮತ್ತೆ ಕುಂಠಿತಗೊಳ್ಳಬಹುದು.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, January 5, 2017, 14:50 [IST]
English summary

What Happens When You Give Up Alcohol For 21 Days?

Are you someone who takes "occasional drinking" up a notch and indulges in drinking alcohol at least a few times in a week? Then, you must learn about what happens to your health when you completely give up on alcohol for 21 days.
Please Wait while comments are loading...
Subscribe Newsletter