For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಮೂರು ಬಾರಿಯಾದರೂ ನಾಲಗೆಯನ್ನು ಸ್ವಚ್ಛಗೊಳಿಸಿ!

By Divya
|

ಪ್ರತಿದಿನ ಎರಡು ಬಾರಿ ಹಲ್ಲನ್ನು ಉಜ್ಜಬೇಕು, ನಾಲಗೆಯನ್ನು ತೊಳೆಯಬೇಕು, ಪ್ರತಿಬಾರಿ ಊಟ-ತಿಂಡಿಯಾದ ತಕ್ಷಣ ಬಾಯಿ ಮುಕ್ಕುಳಿಸಬೇಕು ಎನ್ನುವುದನ್ನು ಚಿಕ್ಕವರಿರುವಾಗಲಿಂದಲೂ ಕೇಳಿಕೊಂಡು ಬಂದಂತಹ ವಿಷಯ. ಇದನ್ನೇ ನಮ್ಮ ಮಕ್ಕಳಿಗೂ ಪ್ರತಿದಿನ ಹೇಳಿ ಒಳ್ಳೆಯ ಹವ್ಯಾಸ ಎನ್ನುವುದನ್ನು ಪರಿಚಯಿಸುತ್ತೇವೆ. ಆದರೆ ಅದರ ಪಾಲನೆಯನ್ನು ನಾವು ಅನ್ವಯಿಸುವಲ್ಲಿ ಎಡವುತ್ತಿರುತ್ತೇವೆ.

ನಮ್ಮ ಮಕ್ಕಳಿಗೆ ಹೇಳುವ ನಾವು, ನಮ್ಮ ಬಾಯಿ ಮತ್ತು ನಾಲಗೆಯನ್ನು ಸ್ವಚ್ಛಗೊಳಿಸದೆ ಇದ್ದರೆ ಏನಾಗುತ್ತದೆ ಎನ್ನುವುದನ್ನು ಒಂದು ನಿಮಿಷ ಯೋಚಿಸಿ... ದೊಡ್ಡವರಾದ ನಮ್ಮ ಬಾಯಿ ಹೆಚ್ಚು ದುರ್ಗಂಧವನ್ನು ಸೂಸುತ್ತವೆ. ಇದರ ಸ್ವಚ್ಛತೆಯ ಬಗ್ಗೆ ಗಮನ ನೀಡದಿದ್ದರೆ ಗಂಭೀರ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಗರ್ಭಿಣಿಯಾಗಿದ್ದರೆ ಅಥವಾ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದರೆ ಬಾಯಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹೆಚ್ಚುತ್ತವೆ. ಬಾಯಿಂದ ಕೆಟ್ಟ ವಾಸನೆ ಸೂಸುತ್ತದೆ.

ಇದನ್ನೂ ಓದಿ- ನಾಲಗೆಯಲ್ಲಿ ಬಿಳಿ ಪದರ ಆಗಿದ್ರೆ ಚಿಂತಿಸದಿರಿ, ಇಲ್ಲಿದೆ ಪರಿಹಾರ

ನಿಧಾನವಾಗಿ ಇವು ಸೋಂಕುಗಳಾಗಿ ಗಂಭೀರ ಸಮಸ್ಯೆಯಾಗಲು ಕಾರಣವಾಗುತ್ತವೆ. ಪ್ರತಿದಿನ ಕನಿಷ್ಠವೆಂದರೂ ಮೂರು ಬಾರಿ ನಾಲಗೆಯನ್ನು ಸ್ವಚ್ಛಗೊಳಿಸಬೇಕು. ದಿನದಲ್ಲಿ 5 ನಿಮಿಷ ನಾಲಿಗೆಯ ಸ್ವಚ್ಛತೆಗೆ ಗಮನ ನೀಡದಿದ್ದರೆ ಉಂಟಾಗುವ ಸಮಸ್ಯೆಗಳುಯಾವವು ಎನ್ನುವುದನ್ನು ತಿಳಿಯಿರಿ...

ಬಾಯಿಂದ ದುರ್ಗಂಧ

ಬಾಯಿಂದ ದುರ್ಗಂಧ

ಪ್ರತಿದಿನ ನಾಲಿಗೆ ಸ್ವಚ್ಛಮಾಡದೆ ಇದ್ದರೆ ಬ್ಯಾಕ್ಟೀರಿಯಗಳ ಉತ್ಪಾದನೆ ಹೆಚ್ಚಾಗುತ್ತದೆ. ಇವು ಸದಾ ಬಾಯಲ್ಲಿ ದುರ್ಗಂಧವನ್ನು ಹೊರ ಹೊಮ್ಮಿಸುತ್ತವೆ. ಮಾತನಾಡುವಾಗ ಇತರರಿಗೂ ಅದರ ದುರ್ಗಂಧ ತಲುಪುತ್ತದೆ.

ಇದನ್ನೂ ಓದಿ- ನಾಲಗೆಯ ಸ್ವಚ್ಛತೆಗೆ ಒಂದಿಷ್ಟು ಪವರ್ ಫುಲ್ ಮನೆ ಔಷಧಿ....

ಒಸಡುಗಳ ಅನಾರೋಗ್ಯ

ಒಸಡುಗಳ ಅನಾರೋಗ್ಯ

ಅಶುಚಿಯಾದ ನಾಲಿಗೆಯಿಂದ ಹುಟ್ಟಿಕೊಂಡ ಬ್ಯಾಕ್ಟೀರಿಯಾದ ಸೋಂಕುಗಳು ಒಸಡಿನ ಮೇಲೂ ಪ್ರಭಾವ ಬೀರುತ್ತದೆ. ಕ್ರಮೇಣ ಒಸಡಿನಲ್ಲಿ ಊತ ಹಾಗೂ ರಕ್ತಸ್ರಾವ ಉಂಟಾಗುತ್ತದೆ.

ಹಲ್ಲು ಹಾಳಾಗುವುದು

ಹಲ್ಲು ಹಾಳಾಗುವುದು

ನಾಲಗೆಯಿಂದ ಉತ್ಪತ್ತಿಯಾದ ಸೋಂಕು ಒಸಡಿಗೆ ತೊಂದರೆ ಉಂಟುಮಾಡುವುದಲ್ಲದೆ ಹಲ್ಲುಗಳ ಮೇಲೂ ಧಾಳಿಮಾಡುತ್ತವೆ. ಇವುಗಳ ಧಾಳಿಯಿಂದ ಹಲ್ಲು ಹುಳುಕಾಗುವುದು ಹಾಗೂ ನೋವಿನಿಂದ ಕೂಡಿರುತ್ತದೆ.

ಬಣ್ಣದ ಬದಲಾವಣೆ

ಬಣ್ಣದ ಬದಲಾವಣೆ

ಅಶುದ್ಧ ನಾಲಗೆಯಿಂದ ಫಂಗಸ್‍ನಂತಹ ಸೋಂಕು ನಾಲಿಗೆಯನ್ನು ಆವರಿಸಿಕೊಳ್ಳುತ್ತವೆ. ಇದರಿಂದ ನಾಲಗೆಯು ಬಿಳಿಯ ಬಣ್ಣಕ್ಕೆ ತಿರುಗಿ ದುರ್ವಾಸನೆಯನ್ನು ಸೂಸುತ್ತದೆ.

ಯೀಸ್ಟ್ ಸೋಂಕು

ಯೀಸ್ಟ್ ಸೋಂಕು

ನಿಯಮಿತವಾಗಿ ನಾಲಗೆಯನ್ನು ಸ್ವಚ್ಛಗೊಳಿಸದಿದ್ದರೆ ಯೀಸ್ಟ್ ಸೊಂಕು ಆವರಿಸುವ ಸಾಧ್ಯತೆ ಇರುತ್ತದೆ. ಇದು ನಾಲಗೆಯಲ್ಲಿ ವಾಸನೆ, ನೋವು ಉಂಟಾಗುವಂತೆ ಮಾಡುತ್ತದೆ.

ನಾಲಗೆ ಕಪ್ಪಾಗುವುದು!

ನಾಲಗೆ ಕಪ್ಪಾಗುವುದು!

ನಾಲಗೆಯ ಅಶುದ್ಧತೆ ಅಂತಿಮ ಹಂತ ತಲುಪಿದಾಗ ಕಪ್ಪು ಕೂದಲುಳ್ಳ ನಾಲಗೆಯಂತಾಗುತ್ತದೆ. ಹಾಗಂತ ನಾಲಗೆಯಲ್ಲಿ ಕೂದಲು ಹುಟ್ಟುವುದಿಲ್ಲ. ಅದರ ಅಶುದ್ಧತೆಯ ಹಂತಕ್ಕೆ ನೀಡುವ ಹೆಸರಷ್ಟೆ.

ನಿಮ್ಮ ನೋಟವನ್ನು ಹಾಳುಮಾಡುವುದು

ನಿಮ್ಮ ನೋಟವನ್ನು ಹಾಳುಮಾಡುವುದು

ಸ್ಪರ್ಧಾತ್ಮ ಜಗತ್ತಿನಲ್ಲಿ ನಿಮ್ಮನ್ನು ನೀವು ಇತರರ ಮುಂದೆ ಪರಿಚಯಿಸಿಕೊಳ್ಳುವಾಗ ಬಾಯಿಂದ ಸೂಸುವ ವಾಸನೆ ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇತರರ ದೂಷಣೆಗೂ ಒಳಗಾಗಬೇಕಾಗುತ್ತದೆ.

ಇದನ್ನೂ ಓದಿ - ನೆನಪಿಡಿ, ನಾಲಗೆ ಸ್ವಚ್ಛಗೊಳಿಸದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ!

English summary

What Happens When You Don't Clean Your Tongue?

You don't have to spend hours to practice good oral health. Spending 5 minutes a day is worth for our overall health. You can get a tongue cleaner or a tongue brush to clean your tongue. Whether it is to prevent bad breath or to keep good oral hygiene, it is very crucial. Let us see what happens when you don't clean your tongue regularly.
Story first published: Wednesday, May 17, 2017, 20:26 [IST]
X
Desktop Bottom Promotion