For Quick Alerts
ALLOW NOTIFICATIONS  
For Daily Alerts

ನೆನಪಿಡಿ ಅತಿಯಾದ ಮಾವಿನ ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ!

ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯ ಹಣ್ಣು ಎನಿಸಿಕೊಳ್ಳುವ ಮಾವಿನ ಹಣ್ಣನ್ನು ಅತಿಯಾಗಿ ತಿಂದರೆ ಆರೋಗ್ಯದಲ್ಲಿ ಕೆಲವು ಏರುಪೇರುಗಳಾಗುತ್ತವೆ. ಇವುಗಳನ್ನು ಮಗನದಲ್ಲಿಟ್ಟುಕೊಂಡೇ ಹಣ್ಣನ್ನು ಸೇವಿಸಬೇಕು.

By Divya
|

ಬೇಸಿಗೆ ಬಂತೆಂದರೆ ಮಾವಿನ ಹಣ್ಣುಗಳನ್ನು ತಿನ್ನಬಹುದು ಎನ್ನುವ ಖುಷಿ ಅನೇಕರಿಗಿರುತ್ತದೆ. ಒಂದು ವರ್ಷದಿಂದ ಹಿಡಿದಿಟ್ಟುಕೊಂಡ ಆಸೆಯನ್ನು ಒಮ್ಮೆಲೇ ಈಡೇರಿಸಿಕೊಳ್ಳುವ ಕಾತುರದಲ್ಲಿ ಮಾವಿನ ಪ್ರಿಯರು ಕುಳಿತಿರುತ್ತಾರೆ. ಬೇಸಿಗೆಯ ಉರಿಗೆ ತಂಪಾಗಲೆಂದು ಹಣ್ಣಿನ ಜ್ಯೂಸ್ ಕುಡಿಯುವುದು. ಊಟ-ತಿಂಡಿಗಳನ್ನು ಬಿಟ್ಟು ಹಣ್ಣನ್ನು ಸವಿಯುವುದು. ಇವೆಲ್ಲವೂ ಮಾವಿನ ಹಣ್ಣಿನ ಋತು ಮುಗಿಯುವವರೆಗೂ ನಡೆಯುತ್ತಲೇ ಇರುತ್ತದೆ. ಬಿರು ಬೇಸಿಗೆಗೆ ತಂಪಾದ ಪುದೀನಾ-ಮಾವಿನಕಾಯಿ ಪಾನಕ

ಹಣ್ಣುಗಳ ರಾಜ ಎಂದು ಪ್ರಸಿದ್ಧಿ ಪಡೆದ ಮಾವು ಚಿಕ್ಕ ಮಕ್ಕಳಿಂದ ಹಿಡಿದು-ಮುದುಕರ ವರೆಗೂ ಎಲ್ಲರೂ ಬಯಸುತ್ತಾರೆ. "ಅನಾಕಾರ್ಡಿಯಾಸಿಯ' ಕುಟುಂಬಕ್ಕೆ ಸೇರಿರುವ ಈ ಹಣ್ಣನ್ನು ವೈಜ್ಞಾನಿಕವಾಗಿ "ಮಂಗೀಫೇರಾ ಇಂಡಿಕಾ' ಎಂದು ಕರೆಯುತ್ತಾರೆ. ವಿಟಮಿನ್ "ಸಿ' ಯನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಈ ಹಣ್ಣು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಇದು ಮಾವಿನಹಣ್ಣಿನ ಫೇಸ್ ಪ್ಯಾಕ್‌! ಕೇಳಿ ಅಚ್ಚರಿಯಾಯಿತೇ?

ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯ ಹಣ್ಣು ಎನಿಸಿಕೊಳ್ಳುವ ಈ ಹಣ್ಣನ್ನು ಅತಿಯಾಗಿ ತಿಂದರೆ ಆರೋಗ್ಯದಲ್ಲಿ ಕೆಲವು ಏರುಪೇರುಗಳಾಗುತ್ತವೆ. ಇವುಗಳನ್ನು ಮಗನದಲ್ಲಿಟ್ಟುಕೊಂಡೇ ಹಣ್ಣನ್ನು ಸೇವಿಸಬೇಕು. ಇಷ್ಟವೆಂದು ದಿನವಿಡೀ ಮಾವಿನ ಹಣ್ಣನ್ನು ಸೇವಿಸುತ್ತಿದ್ದರೆ ಏನೆಲ್ಲಾ ಸಮಸ್ಯೆ ಬರುವುದು ಎನ್ನುವ ಮಾಹಿತಿ ಇಲ್ಲಿದೆ......

ತೂಕದಲ್ಲಿ ಏರಿಕೆ

ತೂಕದಲ್ಲಿ ಏರಿಕೆ

ಸಾಮಾನ್ಯವಾಗಿ ಮಾವಿನ ಹಣ್ಣಿನಲ್ಲಿ 135 ಕ್ಯಾಲೋರಿ ಇರುತ್ತದೆ. ಇದನ್ನು ಪ್ರತಿದಿನ ತಿಂದರೆ ತೂಕದಲ್ಲಿ ಗಣನೀಯವಾಗಿ ಏರಿಕೆ ಕಾಣಬಹುದು. ಅದೇ ವ್ಯಾಯಾಮ ಮಾಡುವ 30 ನಿಮಿಷಗಳ ಮುಂಚೆ ತಿಂದರೆ ತೂಕವು ಅದೇ ಪ್ರಮಾಣದಲ್ಲಿ ಇರಲು ಸಹಾಯ ಮಾಡುತ್ತದೆ.

ಸಕ್ಕರೆ ಪ್ರಮಾಣ ಏರಿಕೆ

ಸಕ್ಕರೆ ಪ್ರಮಾಣ ಏರಿಕೆ

ಈ ಹಣ್ಣಿನಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಿರುವುದರಿಂದ ಅಧಿಕ ಸೇವನೆಯು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಮಧುಮೇಹಿಗಳು ಇದನ್ನು ಹೆಚ್ಚು ತಿನ್ನಬಾರದು.

ಕೃತಕವಾಗಿ ಹಣ್ಣಾದ ಮಾವು

ಕೃತಕವಾಗಿ ಹಣ್ಣಾದ ಮಾವು

ಕೃತಕವಾಗಿ ಹಣ್ಣು ಮಾಡಲಾದ ಮಾವಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್‍ಅನ್ನು ಬಳಸಲಾಗಿರುತ್ತದೆ. ಈ ಪದಾರ್ಥವು ದೇಹಕ್ಕೆ ಹೆಚ್ಚು ಹೋದಂತೆ ಮರಗಟ್ಟುವಿಕೆ, ನರರೋಗ ಹಾಗೂ ಕ್ಯಾನ್ಸರ್‌ಗಳಂತ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.

ಜೀರ್ಣದ ತೊಂದರೆ

ಜೀರ್ಣದ ತೊಂದರೆ

ಅತಿಯಾಗಿ ಮಾವಿನ ಹಣ್ಣನ್ನು ಸೇವಿಸುವುದರಿಂದ ಅಜೀರ್ಣ ಕಾಣಿಸಿಕೊಳ್ಳುತ್ತದೆ. ಇದರಿಂದ ಜೀರ್ಣಾಂಗವ್ಯೂಹದಲ್ಲೂ ಕೆಲವು ತೊಂದರೆಗಳು ಉಂಟಾಗುವುದು.

ಕಿರಿ ಕಿರಿ

ಕಿರಿ ಕಿರಿ

ಹಣ್ಣಿನಲ್ಲಿರುವ ನೀರಿನಂಶ ಗಂಟಲಿಗೆ ಒಂದು ಬಗೆಯ ಕಿರಿ ಕಿರಿ ಉಂಟುಮಾಡುತ್ತದೆ. ಅತಿಯಾದ ಸೇವನೆಯಿಂದ ನಾಲಿಗೆ ಒಡೆಯುವುದು, ಗಂಟಲಲ್ಲಿ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಬಾಯಲ್ಲಿ ಉರಿ ಊತ

ಬಾಯಲ್ಲಿ ಉರಿ ಊತ

ಅತಿಯಾದ ಹಣ್ಣಿನ ಸೇವನೆಯಿಂದ ಬಾಯಲ್ಲಿ ಉರಿ ಊತಗಳು, ನೀರಿನ ಗುಳ್ಳೆ, ತುಟಿಯಲ್ಲಿ ಉರಿ, ಬಾವುಗಳು ಏಳುವ ಸಂಭವ ಇರುತ್ತದೆ.

ಸಾಲ್ಮೊನೆಲ್ಲಾ ಸೋಂಕು

ಸಾಲ್ಮೊನೆಲ್ಲಾ ಸೋಂಕು

1999ರಲ್ಲಿ ಯುನೈಟೆಡ್ ಸ್ಟೇಟ್‍ಗಳಲ್ಲಿ ನಡೆಸಿದ ಸಂಶೋಧನೆಯಿಂದ "ಸಾಲ್ಮೊನೆಲ್ಲಾ ಸೋಂಕು' ಬರುವುದು ಎನ್ನುವುದನ್ನು ಕಂಡು ಹಿಡಿಯಲಾಗಿದೆ. ಅತಿಯಾದ ಮಾವಿನ ಹಣ್ಣಿನ ಸೇವನೆಯಿಂದ ಈ ಸೋಂಕು ಹರಡುತ್ತದೆ. ಈ ವರದಿಯ ಪ್ರಕಾರ 13 ರಾಜ್ಯಗಳಲ್ಲಿ 25 ರೋಗಿಗಳು ಸೋಂಕಿಗೆ ತುತ್ತಾದರು ಎಂದು ವರದಿಯಾಗಿದೆ.

English summary

What Happens If You Eat Too Many Mangoes?

It is the season of mangoes. Mango trees produce fruits from January-June. They are 100% pure fruits, which you can take at any time. It is called the 'King of Fruits' and there are good reasons why. However, eating excess of mangoes can have its share of side effects as well. To know more, continue reading.
X
Desktop Bottom Promotion