For Quick Alerts
ALLOW NOTIFICATIONS  
For Daily Alerts

ಚೂಯಿಂಗ್ ಗಮ್ ಜಗಿದು-ಜಗಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ!

By Manu
|

ಹೆಚ್ಚಿನವರಿಗೆ ಏನಾದರೊಂದು ಅಭ್ಯಾಸಗಳು ಇದ್ದೇ ಇರುತ್ತದೆ. ಕೆಲವರಿಗೆ ಸಿಗರೇಟ್ ಸೇದುವುದು ಚಟವಾಗಿ ಬೆಳೆದರೆ ಇನ್ನು ಕೆಲವರು ತಂಬಾಕು ಸೇವನೆಯನ್ನೇ ಅಭ್ಯಾಸ ಮಾಡಿಕೊಂಡಿರುತ್ತದೆ. ಈ ಕೆಟ್ಟ ಚಟಗಳನ್ನು ಹೊರತುಪಡಿಸಿ ಇನ್ನು ಕೆಲವು ಮಂದಿ ಚೂಯಿಂಗ್ ಗಮ್ ಜಗಿಯುವಂತಹ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಚೂಯಿಂಗ್ ಗಮ್ ಅನ್ನು ಹೆಚ್ಚಿನವರಿಗೆ ಇಷ್ಟವಾಗಿರುತ್ತದೆ. ಆದರೆ ಇದೊಂದು ಚಟವಾಗಿ ಬೆಳೆದರೆ ಅದು ತುಂಬಾ ಕಷ್ಟ.

ಚೂಯಿಂಗ್ ಗಮ್, ಜಗಿದು ಜಗಿದು ನುಂಗಿ ಬಿಟ್ಟಿರಿ ಜೋಕೆ!

ಚೂಯಿಂಗ್ ಗಮ್ ತಿಂದು ಬಿಸಾಕಿದಾಗ ಅದು ಎಲ್ಲಿಯಾದರೂ ಅಂಟಿಕೊಂಡರೆ ಅದರಿಂದ ಬಿಡಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಅದೇ ರೀತಿ ಚೂಯಿಂಗ್ ಗಮ್ ಜಗಿಯುವುದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇದೆ. ಚೂಯಿಂಗ್ ಗಮ್ ನಿಂದ ಆಗುವಂತಹ ಅಡ್ಡಪರಿಣಾಮಗಳು ಯಾವುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ...

ಜಂಕ್ ಫುಡ್ ತಿನ್ನುವಂತೆ ಪ್ರೇರಣೆ

ಜಂಕ್ ಫುಡ್ ತಿನ್ನುವಂತೆ ಪ್ರೇರಣೆ

ಪುದೀನಾದ ಸ್ವಾದವಿರುವಂತಹ ಚೂಯಿಂಗ್ ಗಮ್ ವ್ಯಕ್ತಿಯೊಬ್ಬನು ಹಣ್ಣು ಹಾಗೂ ತರಕಾರಿಯಂತಹ ಆರೋಗ್ಯಕರ ಆಹಾರ ತಿನ್ನುವುದರಿಂದ ತಡೆಯುತ್ತದೆ ಎಂದು ಅಧ್ಯಯನಗಳು ಹೇಳಿವೆ. ಇಷ್ಟು ಮಾತ್ರವಲ್ಲದೆ ಚೂಯಿಂಗ್ ಗಮ್ ನಿಂದ ವ್ಯಕ್ತಿಯೊಬ್ಬ ಜಂಕ್ ಫುಡ್ ತಿನ್ನಲು ಪ್ರೇರೇಪಿಸುತ್ತದೆ.

ಗಂಟು ನೋವು

ಗಂಟು ನೋವು

ಬಾಯಿಯ ಸ್ನಾಯುಗಳನ್ನು ಅತಿಯಾಗಿ ಬಳಸುವುದರಿಂದ ಹಾನಿಯಾಗಬಹುದು. ಚೂಯಿಂಗ್ ಗಮ್ ನ್ನು ಅತಿಯಾಗಿ ಸೇವನೆ ಮಾಡಿದರೆ ಟೆಂಪೊರೋಮ್ಯಾಂಡಿಬ್ಯುಲರ್ ಗಂಟಿನ ಸಮಸ್ಯೆ ಕಾಣಿಸುತ್ತದೆ. ಈ ಪರಿಸ್ಥಿತಿಯಲ್ಲಿ ಗಂಟಿನಲ್ಲಿ ಅತಿಯಾದ ನೋವಿರುತ್ತದೆ. ದವಡೆಯನ್ನು ತಲೆಬುರುಡೆಗೆ ಸಂಪರ್ಕಿಸುವ ಸ್ನಾಯುಗಳಲ್ಲೂ ನೋವಿರುತ್ತದೆ.

ಜೀರ್ಣಾಂಗವ್ಯೂಹದ ಸಮಸ್ಯೆ

ಜೀರ್ಣಾಂಗವ್ಯೂಹದ ಸಮಸ್ಯೆ

ಚೂಯಿಂಗ್ ಗಮ್ ಜಗಿಯುವಾಗ ಗಾಳಿ ಕೂಡ ಹೊಟ್ಟೆಯೊಳಗೆ ಹೋಗುತ್ತದೆ. ಇದರಿಂದ ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ನೋವು ಕಾಣಿಸುತ್ತದೆ. ಅಜೀರ್ಣ ಮತ್ತು ಎದೆಯುರಿ ಉಂಟಾಗುತ್ತದೆ. ಇದು ಚೂಯಿಂಗ್ ಗಮ್ ನ ದುಷ್ಪರಿಣಾಮಗಳು.

ತಲೆನೋವು ಮತ್ತು ಅಲರ್ಜಿ

ತಲೆನೋವು ಮತ್ತು ಅಲರ್ಜಿ

ತಲೆನೋವು ಮತ್ತು ಅಲರ್ಜಿಯು ಚೂಯಿಂಗ್ ಗಮ್ ಜಗಿಯುವ ಹಾನಿಕಾರಕ ಪರಿಣಾಮವಾಗಿದೆ. ಚೂಯಿಂಗ್ ಗಮ್ ನ್ನು ಅತಿಯಾಗಿ ಸೇವನೆ ಮಾಡುವುದರಿಂದ ತಲೆನೋವು ಮತ್ತು ಅಲರ್ಜಿ ಉಂಟಾಗುತ್ತದೆ. ಚೂಯಿಂಗ್ ಗಮ್ ನಲ್ಲಿ ಇರುವಂತಹ ಕೃತಕ ಸುವಾಸನೆ ಮತ್ತು ಕೃತಕ ಸಕ್ಕರೆ ವಿಷಕಾರಿಯಾಗಿದೆ. ಇದು ಅಲರ್ಜಿ ಮತ್ತು ತಲೆನೋವನ್ನು ಉಂಟು ಮಾಡುತ್ತದೆ.

ಹಲ್ಲುಗಳಿಗೆ ತೊಂದರೆ

ಹಲ್ಲುಗಳಿಗೆ ತೊಂದರೆ

ಚೂಯಿಂಗ್ ಗಮ್ ಅನ್ನು ಯಾವಾಗಲೊಮ್ಮೆ ಸೇವನೆ ಮಾಡಿದರೆ ಅದು ಒಸಡು ಮತ್ತು ಹಲ್ಲುಗಳಿಗೆ ಒಳ್ಳೆಯದು. ಆದರೆ ಅತಿಯಾಗಿ ಚೂಯಿಂಗ್ ಗಮ್ ಸೇವಿಸುವುದರಿಂದ ಹಲ್ಲುಗಳಿಗೆ ಹಾನಿಯಾಗಬಹುದು ಮತ್ತು ಹಲ್ಲುಗಳು ಕೆಡಬಹುದು. ಚೂಯಿಂಗ್ ಗಮ್ ನಲ್ಲಿ ಇರುವಂತಹ ಕೃತಕ ಸಕ್ಕರೆ ಅಂಶವು ಹಲ್ಲುಗಳಲ್ಲಿ ಬ್ಯಾಕ್ಟೀರಿಯಾವನ್ನು ಉಂಟು ಮಾಡಿ ಹಾನಿ ಉಂಟು ಮಾಡುತ್ತದೆ.

ಭೇದಿ

ಭೇದಿ

ಚೂಯಿಂಗ್ ಗಮ್ ಅನ್ನು ಅತಿಯಾಗಿ ಸೇವನೆ ಮಾಡುವುದರಿಂದ ಭೇದಿ ಉಂಟಾಗಬಹುದು. ಕೃತಕ ಸಿಹಿ ಉಂಟು ಮಾಡುವ ವಸ್ತುಗಳಾದ ಮನ್ನಿಟೊಲ್ ಮತ್ತು ಸೊರ್ಬಿಟೊಲ್ ಕರುಳಿನಲ್ಲಿ ಕಿರಿಕಿರಿಯನ್ನು ಉಂಟು ಮಾಡುವುದು. ಕಿರಿಕಿರಿ ಅತಿಯಾದಾಗ ಭೇದಿ ಮತ್ತು ದೇಹದಲ್ಲಿ ನಿರ್ಜಲೀಕರಣದಿಂದ ಭೇದಿ ಉಂಟಾಗಬಹುದು.

ವಿಷಕಾರಿ ಪಾದರಸ

ವಿಷಕಾರಿ ಪಾದರಸ

ಹಲ್ಲು ಕೆಡುವಾಗ ಕೆಲವು ಮಂದಿ ಅದಕ್ಕೆ ಫಿಲ್ಲಿಂಗ್ ಹಾಕಿಸಿಕೊಳ್ಳುತ್ತಾರೆ. ಈ ಫಿಲ್ಲಿಂಗ್ ಅನ್ನು ಪಾದರಸ, ಬೆಳ್ಳಿ ಮತ್ತು ಟಿನ್‌ನಿಂದ ಮಾಡಲಾಗಿರುತ್ತದೆ. ಅತಿಯಾಗಿ ಚೂಯಿಂಗ್ ಗಮ್ ಸೇವನೆ ಮಾಡುವುದರಿಂದ ಹಲ್ಲುಗಳ ಫಿಲ್ಲಿಂಗ್‌ನಲ್ಲಿ ಇರುವಂತಹ ಪಾದರಸವು ದೇಹದೊಳಗೆ ಹೋಗುತ್ತದೆ. ಇದು ಮನುಷ್ಯನ ದೇಹಕ್ಕೆ ತುಂಬಾ ಹಾನಿಕಾರಕ.

English summary

what happens if you chew too much chewing gum

Many a times your teacher might have scolded you for chewing a gum in the class room. Just not for it's side effects but only for other etiquette reasons. However, today we will share with you few reasons as to why not to eat a chewing gum. Let's take a look at some of the disadvantages of chewing gum. Following are some bad-effects of chewing gum.
Story first published: Thursday, May 25, 2017, 20:22 [IST]
X
Desktop Bottom Promotion