ಅಡುಗೆ ಮನೆಯ ಬಂಗಾರ 'ಅರಿಶಿನ'ದ ಚಿನ್ನದಂತಹ ಗುಣಗಳು

ಅರಿಶಿನವನ್ನು ಅಡುಗೆಯಲ್ಲಿ ಮುನ್ನೆಚ್ಚರಿಕೆಯಿಂದ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಅರಿಶಿನವು ಸದ್ದಿಲ್ಲದೆ ಕೆಲವೊಂದು ಕಾಯಿಲೆಗಳನ್ನು ನಿವಾರಿಸುತ್ತದೆ.

By: Hemanth
Subscribe to Boldsky

ನಾವು ಅಡುಗೆಗೆ ಬಳಸುವ ಸಾಂಬಾರ ಪದಾರ್ಥಗಳಲ್ಲಿ ಯಾವುದರಲ್ಲಿ ಔಷಧೀಯ ಗುಣಗಳು ಇಲ್ಲವೆಂದು ಹೇಳಲು ನಿಮ್ಮಿಂದ ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಯಾಕೆಂದರೆ ನಾವು ಬಳಸುವಂತಹ ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿಯೂ ಔಷಧೀಯ ಗುಣಗಳು ಇವೆ. ತುಳಸಿ-ಅರಿಶಿನ ಬೆರೆಸಿದ ನೀರಿನಲ್ಲಿದೆ ಹತ್ತಾರು ಲಾಭ!

ಇದರಿಂದಾಗಿಯೇ ಭಾರತೀಯರು ಆಯುರ್ವೇದದಲ್ಲಿ ಕೂಡ ಕೆಲವು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡಿದ್ದಾರೆ. ನಾವು ಪ್ರತಿನಿತ್ಯವೂ ಈ ಸಾಂಬಾರ ಪದಾರ್ಥಗಳಲ್ಲಿ ಒಂದಾನ್ನಾದರೂ ಸೇವನೆ ಮಾಡುವ ಕಾರಣದಿಂದಾಗಿ ನಮ್ಮ ಆರೋಗ್ಯವೂ ಉತ್ತಮವಾಗಿಯೇ ಇದೆ. ಕೆಮ್ಮು , ಶೀತಕ್ಕೆ ಅರಿಶಿನ-ಕರಿಮೆಣಸಿನ ಬಿಸಿ ಬಿಸಿ ಹಾಲು!

ಅದರಲ್ಲೂ ಅರಿಶಿನ, ಬೆಳ್ಳುಳ್ಳಿಯಂತಹ ಸಾಂಬಾರ ಪದಾರ್ಥಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿದೆ. ಅರಿಶಿನದಲ್ಲಿ ನಮ್ಮ ಆರೋಗ್ಯವನ್ನು ರಕ್ಷಿಸುವಂತಹ ಅಪಾರ ಗುಣಗಳು ಇವೆ. ಇದು ಕೆಮ್ಮಿನಿಂದ ಹಿಡಿದು ಮೈಯಲ್ಲಿ ಆಗುವಂತಹ ಗಾಯದ ತನಕ ಪ್ರತಿಯೊಂದಕ್ಕೂ ತುಂಬಾ ಉಪಕಾರಿ...ಬನ್ನಿ ಅರಿಶಿನವನ್ನು ಯಾವೆಲ್ಲಾ ರೀತಿಯಿಂದ ಸೇವನೆ ಮಾಡಿದರೆ ಅದು ನಮ್ಮ ದೇಹದ ಆರೋಗ್ಯಕ್ಕೆ ನೆರವಾಗಬಹುದು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ....

ಅರಿಶಿನ ಹಾಲು

ಅರಿಶಿನ ಹಾಲು

ಇದು ತುಂಬಾ ಹಿಂದಿನಿಂದಲೂ ಭಾರತೀಯರು ಅನುಸರಿಸಿಕೊಂಡು ಬಂದಿರುವಂತಹ ಔಷಧಿ. ಮನೆಯಲ್ಲಿ ಯಾರಿಗಾದರೂ ಶೀತ, ಕೆಮ್ಮು ಅಥವಾ ಮೈಕೈ ನೋವು ಆದಾಗ ಅರಶಿನ ಹಾಲು ನೀಡಲಾಗುತ್ತದೆ. ಅರ್ಧ ಚಮಚ ಅರಿಶಿನ ಹುಡಿಯನ್ನು ಕುದಿಯುತ್ತಿರುವ ಹಾಲಿಗೆ ಹಾಕಿ ಬಳಿಕ ಅದನ್ನು ಸೇವಿಸಬೇಕು.ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಮೊಡವೆಗೆ ಜೆಲ್

ಮೊಡವೆಗೆ ಜೆಲ್

ಅರಿಶಿನವು ಚರ್ಮಕ್ಕೆ ತುಂಬಾ ಪರಿಣಾಮಕಾರಿ ಮತ್ತು ಇದನ್ನು ಮೊಡವೆ ನಿವಾರಣೆಗೆ ಬಳಸಲಾಗುತ್ತದೆ. 1/3 ಚಮಚದಷ್ಟು ಅರಿಶಿನವನ್ನು ಅಷ್ಟೇ ಪ್ರಮಾಣದ ಜೇನುತುಪ್ಪದೊಂದಿಗೆ ಬೆರೆಸಿಕೊಳ್ಳಿ. ಜೇನುತುಪ್ಪವನ್ನು ಹೆಚ್ಚಿಸಿದರೆ ಅರಶಿನ ಹುಡಿಯ ಪ್ರಮಾಣವನ್ನು ಕೂಡ ಹೆಚ್ಚಿಸಿ. ಇದನ್ನು ಮೊಡವೆ ಹಚ್ಚಿಕೊಂಡು ಹಾಗೆ ಒಣಗಲು ಬಿಡಿ. ಸ್ವಲ್ಪ ಸಮಯ ಕಳೆದ ಬಳಿಕ ನೀರಿನಿಂದ ತೊಳೆಯಿರಿ.

ನಿರ್ವಿಷಗೊಳಿಸುವ ಪಾನೀಯ

ನಿರ್ವಿಷಗೊಳಿಸುವ ಪಾನೀಯ

ಅರಿಶಿನದಲ್ಲಿ ದೇಹವನ್ನು ನಿರ್ವಿಷಗೊಳಿಸುವಂತಹ ಗುಣವಿದೆ ಮತ್ತು ಪ್ರತೀ ದಿನ ಅರಿಶಿನ ನೀರನ್ನು ಕುಡಿದರೆ ದೇಹಕ್ಕೆ ಒಳ್ಳೆಯದು. ನಿರ್ವಿಷಗೊಳಿಸುವ ಪಾನೀಯವನ್ನು ಮಾಡಬೇಕಾದರೆ 1/4 ಚಮಚ ಅರಿಶಿನ ಹುಡಿ, ರುಚಿಗೆ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆರಸವನ್ನು ಬಿಸಿ ನೀರಿಗೆ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

ಗ್ಯಾಸ್ಟ್ರಿಕ್(ಜಠರದುರಿ) ಕಡಿಮೆಗೊಳಿಸುವುದು

ಗ್ಯಾಸ್ಟ್ರಿಕ್(ಜಠರದುರಿ) ಕಡಿಮೆಗೊಳಿಸುವುದು

ಹೊಟ್ಟೆಯಲ್ಲಿನ ಆಮ್ಲದ ಮಟ್ಟವನ್ನು ತಟಸ್ಥವಾಗಿಸುವ ಅರಿಶಿನವು ಅಸಿಡಿಟಿ, ಗ್ಯಾಸ್ಟ್ರಿಕ್ ಮತ್ತು ಎದೆಯುರಿಯಂತಹ ಸಮಸ್ಯೆಯನ್ನು ದೂರವಾಗಿಸುತ್ತದೆ. ತಂಪಾದ ಅರಿಶಿನ ಹಾಲನ್ನು ಸೇವನೆ ಮಾಡಿದರೆ ಸಮಸ್ಯೆ ಕಡಿಮೆಯಾಗುವುದು.

ಕರುಳಿನ ಕ್ಯಾನ್ಸರ್ ತಡೆಯುವುದು

ಕರುಳಿನ ಕ್ಯಾನ್ಸರ್ ತಡೆಯುವುದು

ಅರಿಶಿನದಲ್ಲಿರುವ ಪೈಥೋನ್ಯೂಟ್ರಿಯಂಟ್ಸ್ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಹೊಂದಿದೆ. ಇದು ಕರುಳು ಹಾಗೂ ಹೊಟ್ಟೆಯ ಕ್ಯಾನ್ಸರ್ ಬರದಂತೆ ತಡೆಯಬಲ್ಲದು.

Story first published: Thursday, January 19, 2017, 10:17 [IST]
English summary

Turmeric can work wonders for your body

There are various ways in which you can consume this herb. Following is a list of easy and efficient recipes which combine turmeric with various other things, to add to its effect.
Please Wait while comments are loading...
Subscribe Newsletter