For Quick Alerts
ALLOW NOTIFICATIONS  
For Daily Alerts

ಬೆನ್ನು ನೋವು ಖತರ್ನಾಕ್ ಕಾಯಿಲೆ!! ಯಾವುದಕ್ಕೂ ಹುಷಾರಾಗಿರಿ...

ಬೆನ್ನು ನೋವು ಇಂದು ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ಈ ಬೆನ್ನು ನೋವಿನಿಂದ ಬಳಲಿರುತ್ತಾರೆ, ಆದರೆ ವಿಪರೀತವಾಗಿ ಪದೇ ಪದೇ ಕಾಡುವ ಬೆನ್ನು ನೋವನ್ನು ನಿರ್ಕ್ಷಿಸದಿರಿ...

By Arshad
|

ನೋವು ಅನುಭವಿಸದ ವ್ಯಕ್ತಿಯೇ ಈ ಜಗತ್ತಿನಲ್ಲಿಲ್ಲ. ಪ್ರತಿಯೊಬ್ಬರಿಗೂ ಏನಾದರೊಂದು ನೋವು ಕಾಡುತ್ತದೆ. ಹೆಚ್ಚಿನವು ತಾತ್ಕಾಲಿಕವಾದರೆ ಉಳಿದವು ಆಗಾಗ ಬರುತ್ತಲೇ ಇರುತ್ತವೆ. ಉದಾಹರಣೆಗೆ ಬೆನ್ನು ನೋವು. ಯಾವುದೋ ಒಂದು ಭಂಗಿಯಲ್ಲಿ ಬಗ್ಗಿದಾಗ ಮಾತ್ರ ಕಾಡುವ ನೋವು ಇತರ ಸಮಯಗಳಲ್ಲಿರುವುದಿಲ್ಲ. ಇದಕ್ಕೆ ಎಷ್ಟೇ ಮದ್ದು ಮಾಡಿದರೂ ಈ ನೋವು ಹಾಗೇ ಉಳಿದುಕೊಳ್ಳುತ್ತದೆ. ಜಾಣರಾದ ನಾವೆಲ್ಲಾ ನೋವು ಕೊಡುವ ಆ ಭಂಗಿಯಲ್ಲಿ ಬಗ್ಗುವುದನ್ನೇ ಬಿಟ್ಟುಬಿಡುತ್ತೇವೆ. ಬೆನ್ನು ನೋವಿಗೆ ಮನೆ ಔಷಧ- ಒಮ್ಮೆ ಪ್ರಯತ್ನಿಸಿ ನೋಡಿ

ಆದರೆ ಇದರಿಂದ ದಿನನಿತ್ಯದ ಕೆಲವು ಕಾರ್ಯಗಳಾದರೂ ಬಾಧೆಗೊಳಗಾಗುತ್ತವೆ. ನಿತ್ಯದ ಚಟುವಟಿಕೆಗಳನ್ನು ಅತಿ ಹೆಚ್ಚಾಗಿ ಬಾಧಿಸುವ ನೋವೆಂದರೆ ಬೆನ್ನು ನೋವು ಎಂದು ಕಂಡುಕೊಳ್ಳಲಾಗಿದೆ. ಏಕೆಂದರೆ ನಿತ್ಯದ ಬಹುತೇಕ ಎಲ್ಲಾ ಕಾರ್ಯಗಳಿಗೂ ದೇಹದ ಭಾರವನ್ನು ಹೊತ್ತು ಚಲನೆಗಳನ್ನು ನಿರ್ವಹಿಸಬೇಕಾಗುತ್ತದೆ. ನಿಂತಾಗಲೂ, ಕುಳಿತಾಗಲೂ, ಮಲಗಿದಾಗಲೂ, ಬಗ್ಗುವಾಗಲೂ, ನಡೆಯುವಾಗಲೂ ಬೆನ್ನಿನ ಸ್ನಾಯುಗಳು ಮತ್ತು ಮೂಳೆಗಳು ತಮ್ಮ ಕಾರ್ಯ ನಿರ್ವಹಿಸಬೇಕಾಗುತ್ತದೆ. ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ!

ಒಂದು ವೇಳೆ ಬೆನ್ನುನೋವು ತುಂಬಾ ಕಾಲದಿಂದ ತೊಂದರೆ ನೀಡುತ್ತಾ ಬಂದಿದ್ದರೆ ಈ ನೋವಿಗೆ ಅನುಸಾರವಾಗಿ ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡಿರುವ ಕಾರಣ ಜೀವನವೂ ಕೊಂಚ ಮಟ್ಟಿಗೆ ನಿಧಾನವಾಗಿಯೇ ಇರಬಹುದು ಅಥವಾ ಬೆನ್ನು ನೋವಿನ ಕಾರಣದಿಂದ ಕೆಲವು ಅವಕಾಶಗಳನ್ನೂ ಕಳೆದುಕೊಂಡಿರಬಹುದು. ಬೆನ್ನುನೋವಿಗೆ ಕೆಲವಾರು ಕಾರಣಗಳಿವೆ. ಬೆನ್ನು ನೋವನ್ನು ಶಮನಗೊಳಿಸಲು ಸೂಕ್ತ ಸಲಹೆಗಳು

ಹಿಂದೆಂದೋ ಬಿದ್ದು ಆದ ಪೆಟ್ಟು, ವ್ಯಾಯಾಮರಹಿತ ಜೀವನ, ತಪ್ಪಾದ ಕುಳಿತುಕೊಳ್ಳುವ ಭಂಗಿ, ಶಿಥಿಲಗೊಂಡ ಮೂಳೆಗಳು ಅಥವಾ ಮೂಳೆಸಂಧುಗಳು, ಮೂಳೆಸಂಧುಗಳಲ್ಲಿ ಸೋಂಕು ಇತ್ಯಾದಿ. ಆದರೆ ಎಷ್ಟೋ ಸಲ ಈ ಕಾರಣಗಳಿಗೂ ಹೊರತಾಗಿ ಕೊಂಚ ವಿಚಿತ್ರವೇ ಎನಿಸುವಂತೆ ಬೆನ್ನುನೋವು ಕಾಡುತ್ತದೆ. ಇದು ವಾಸ್ತವವಾಗಿ ಬೆನ್ನಿಗೆ ಸಂಬಂಧಿಸಿದ್ದಲ್ಲದೇ ಬೇರಾವುದೋ ತೊಂದರೆಯ ಸಂಕೇತವಾಗಿದೆ. ಯಾವ ಸಂಕೇತವನ್ನು ನೀಡುತ್ತಿವೆ ಎಂಬ ಪ್ರಶ್ನೆಗೆ ಕೆಳಗಿನ ಏಳು ಮಾಹಿತಿಗಳು ಉತ್ತರವನ್ನು ನೀಡಲಿವೆ...

ಒತ್ತಡ

ಒತ್ತಡ

ಮಾನಸಿಕ ಒತ್ತಡದಿಂದ ಸ್ನಾಯುಗಳು ಮತ್ತು ಅಂಗಾಂಶಗಳು ಬಿಗಿಗೊಳ್ಳುತ್ತವೆ. ವಿಶೇಷವಾಗಿ ಭುಜ ಮತ್ತು ಸೊಂಟದ ಸ್ನಾಯುಗಳು ಅತಿ ಹೆಚ್ಚು ಪ್ರಭಾವಿತವಾಗುತ್ತವೆ. ಒತ್ತಡದ ಸಮಯದಲ್ಲಿ ಮೆದುಳಿಗೆ ಅತಿ ಹೆಚ್ಚು ರಕ್ತದ ಅಗತ್ಯವಿರುವ ಕಾರಣ ಅನಿವಾರ್ಯವಾಗಿ ಹೃದಯ ತಲೆಗೆ ಹೆಚ್ಚು ರಕ್ತವನ್ನು ಪೂರೈಸುವ ಕಾರಣ ಹೆಚ್ಚು ಭಾರ ಹೊರುವ ಸ್ನಾಯು ಮತ್ತು ಭುಜಗಳಿಗೆ ಕಡಿಮೆಯೇ ರಕ್ತ ಲಭಿಸುತ್ತದೆ. ಪರಿಣಾಮವಾಗಿ ಇವು ಕುಗ್ಗುತ್ತವೆ ಹಾಗೂ ನೋವು ಕಾಣಿಸಿಕೊಳ್ಳುತ್ತದೆ.

ಒತ್ತಡ

ಒತ್ತಡ

ಮಾನಸಿಕ ಒತ್ತಡದಿಂದ ಸ್ನಾಯುಗಳು ಮತ್ತು ಅಂಗಾಂಶಗಳು ಬಿಗಿಗೊಳ್ಳುತ್ತವೆ. ವಿಶೇಷವಾಗಿ ಭುಜ ಮತ್ತು ಸೊಂಟದ ಸ್ನಾಯುಗಳು ಅತಿ ಹೆಚ್ಚು ಪ್ರಭಾವಿತವಾಗುತ್ತವೆ. ಒತ್ತಡದ ಸಮಯದಲ್ಲಿ ಮೆದುಳಿಗೆ ಅತಿ ಹೆಚ್ಚು ರಕ್ತದ ಅಗತ್ಯವಿರುವ ಕಾರಣ ಅನಿವಾರ್ಯವಾಗಿ ಹೃದಯ ತಲೆಗೆ ಹೆಚ್ಚು ರಕ್ತವನ್ನು ಪೂರೈಸುವ ಕಾರಣ ಹೆಚ್ಚು ಭಾರ ಹೊರುವ ಸ್ನಾಯು ಮತ್ತು ಭುಜಗಳಿಗೆ ಕಡಿಮೆಯೇ ರಕ್ತ ಲಭಿಸುತ್ತದೆ. ಪರಿಣಾಮವಾಗಿ ಇವು ಕುಗ್ಗುತ್ತವೆ ಹಾಗೂ ನೋವು ಕಾಣಿಸಿಕೊಳ್ಳುತ್ತದೆ.

ಅತಿ ಹೆಚ್ಚು ಕುಳಿತುಕೊಳ್ಳುವುದು

ಅತಿ ಹೆಚ್ಚು ಕುಳಿತುಕೊಳ್ಳುವುದು

ನಮ್ಮ ದೇಹ ಕುಳಿತುಕೊಂಡಿರುವುದಕ್ಕಾಗಿಯೇ ಸರ್ವಥಾ ನಿರ್ಮಿಸಲಾಗಿಲ್ಲ. ಬದಲಿಗೆ ನಡೆಯುವುದು, ಹತ್ತುವುದು, ಓಡುವುದು ಮೊದಲಾದ ಶ್ರಮದಾಯಕ ಕೆಲಸಗಳಿಗಾಗಿಯೇ ನಿರ್ಮಿಸಲಾಗಿದೆ. ಹೀಗಿರುವಾಗ ದಿನವಿಡೀ ಹೆಚ್ಚಿನ ಸಮಯ ಕುಳಿತೇ ಇದ್ದರೆ ಇದು ಬೆನ್ನಿನ ಸ್ನಾಯುಗಳ ಮೇಲೆ ಒಂದೇ ಕಡೆ ಸತತವಾಗಿ ಭಾರ ಹಾಕುವ ಮೂಲಕ ಒತ್ತಡದಲ್ಲಿಯೇ ಇರಿಸುತ್ತದೆ. ಕಂಪ್ಯೂಟರ್ ಹಾಗೂ ಫೋನ್ ಆಧಾರಿತ ಉದ್ಯೋಗಗಳಲ್ಲಿರುವವರಿಗೆ ಕುಳಿತುಕೊಳ್ಳುವುದು ಅನಿವಾರ್ಯವಾದರೂ ದಿನದ ಎಂಟು ಗಂಟೆಗೂ ಹೆಚ್ಚು ಕುಳಿತುಕೊಳ್ಳುವವರ ಬೆನ್ನಿನ ಸ್ನಾಯುಗಳು ಸತತ ಭಾರದಿಂದ ಸಂಕುಚಿತಗೊಂಡಿದ್ದು ಇದು ವಿಕಸಿತಗೊಳ್ಳಲು ಸಮಯಾವಕಾಶ ನೀಡದಿರುವುದೇ ಈ ನೋವಿಗೆ ಕಾರಣವಾಗಿದೆ.

ತಪ್ಪಾದ ಪಾದರಕ್ಷೆ

ತಪ್ಪಾದ ಪಾದರಕ್ಷೆ

ನಮ್ಮ ಪಾದಗಳು ನೆಲಕ್ಕೆ ಚಪ್ಪಟೆಯಾಗಿಯೇ ನೆಲಕ್ಕೆ ತಾಕಿ ನಡೆಯುವಂತೆ ರಚಿಸಲಾಗಿದೆ. ಒಂದು ವೇಳೆ ಪಾದರಕ್ಷೆ ತೀರಾ ಬಿಗಿಯಾಗಿದ್ದರೆ ಅಥವಾ ಹಿಮ್ಮಡಿ ತೀರಾ ಹೆಚ್ಚಾಗಿದ್ದರೆ ಇದು ಪಾದಗಳ ಮೇಲಿನ ಸ್ನಾಯುಗಳಿಗೆ ಹೆಚ್ಚಿನ ಒತ್ತಡ ನೀಡುತ್ತದೆ. ಅಲ್ಲದೇ ಈ ಮೂಲಕ ಬದಲಾಗುವ ನಡಿಗೆಯ ಮೂಲಕ ದೇಹದ ಸಮತೋಲನ ಕಾಯ್ದಿರಿಸಲು ಸೊಂಟ ಕೊಂಚವೇ ಹಿಮ್ಮುಖವಾಗಿ ಬಾಗಬೇಕಾಗುತ್ತದೆ. (ಮಹಿಳೆಯರಿಗೆ ಹೀಗೆ ಆಗಬೇಕೆಂದೇ ಹೈ ಹೀಲ್ಡ್ ಮತ್ತು ಚೂಪಾದ ತುದಿಯ ಹಿಮ್ಮಡಿಯ ಚಪ್ಪಲಿಗಳನ್ನು ತೊಡಿಸಿ ಈ ಹಿಂಬದಿ ಬಳುಕುವಂತೆ ಮಾಡಲಾಗುತ್ತದೆ). ಆದರೆ ಈ ವಿಧಾನದಿಂದ ಪಾದಗಳು ಹಾಗೂ ಸೊಂಟಕ್ಕೆ ಅತಿ ಹೆಚ್ಚಿನ ಒತ್ತಡ ಬಿದ್ದು ನೋವು ಈಗಲ್ಲದಿದ್ದರೂ ಮುಂದಿನ ದಿನಗಳಲ್ಲಿ ಕಾಡಲಿದೆ ಹಾಗೂ ಕೊಂಚ ಸಮತೋಲನ ತಪ್ಪಿದರೂ ಉಳುಕುವ, ಗಾಯವಾಗುವ ಸಾಧ್ಯತೆ ಇದೆ.

ಸ್ನಾಯುಗಳಲ್ಲಿ ಅಸಮತೋಲನ

ಸ್ನಾಯುಗಳಲ್ಲಿ ಅಸಮತೋಲನ

ಒಂದು ವೇಳೆ ಬೆನ್ನುನೋವು ತೀರಾ ಹೆಚ್ಚಾಗಿದ್ದು ಸತತವಾಗಿ ಮರುಕಳಿಸುತ್ತಿದ್ದರೆ ಇದು ಸ್ನಾಯುಗಳಲ್ಲಿ ಅಸಮತೋಲನ (muscular imbalance disorder) ಎಂಬ ತೊಂದರೆಯ ಸ್ಪಷ್ಟ ಸಂಕೇತವಾಗಿದ್ದು ಇದು ಬೆನ್ನುಹುರಿಯ ಸಹಿತ ಇಡಿಯ ನರವ್ಯವಸ್ಥೆಯನ್ನೇ ಕುಸಿಯುವ ಸಾಧ್ಯತೆ ಇದೆ.

ಬೆನ್ನುಮೂಳೆಯ ಭಾಗದಲ್ಲಿ ಬಿರುಕು

ಬೆನ್ನುಮೂಳೆಯ ಭಾಗದಲ್ಲಿ ಬಿರುಕು

ನಮ್ಮ ಬೆನ್ನುಮೂಳೆ 23 ಭಾಗಗಳಿದ್ದು ಪ್ರತಿಭಾಗವೂ ದುಂಡಗಿನ ಬಿಲ್ಲೆಯಂತಿರುತ್ತದೆ. (disc). ಈ ಬಿಲ್ಲೆಗಳು ಒಂದರ ಮೇಲೊಂದು ಕುಳಿತು ಬೆನ್ನು ಬಾಗಲು ನೆರವಾಗುತ್ತವೆ. ಒಂದು ವೇಳೆ ಕೆಳಭಾಗದ ಬಿಲ್ಲೆಗಳಲ್ಲಿ ಬಿರುಕು ಬಂದಿದ್ದರೆ ಅಥವಾ ಕೊಂಚವೇ ಜಾರಿ ಪಕ್ಕಕ್ಕೆ ಸರಿದಿದ್ದರೆ (slip disc) ಪರಿಣಾಮವಾಗಿ ಇದರೊಳಗಿನಿಂದ ಹಾದು ಹೋಗಿರುವ ನರವನ್ನು ಜಜ್ಜುತ್ತದೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ತಕ್ಷಣವೇ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿದೆ.

ಮೂಳೆಯ ಕ್ಯಾನ್ಸರ್

ಮೂಳೆಯ ಕ್ಯಾನ್ಸರ್

ಒಂದು ವೇಳೆ ಬೆನ್ನುನೋವು ಸೂಜಿ ಚುಚ್ಚಿದಂತೆ ಒಂದೆಡೆ ಕೇಂದ್ರೀಕೃತವಾಗಿದ್ದು ಸತತವಾಗಿ ಕಾಡುತ್ತಾ ಇದ್ದರೆ ಇದು ಮೂಳೆಯ ಕ್ಯಾನ್ಸರ್ ನ ಕಾರಣವಾಗಿರಬಹುದು. ಈ ಕ್ಯಾನ್ಸರ್ ಬೆನ್ನುಮೂಳೆ ಮತ್ತು ಸ್ನಾಯುಗಳು ಅಂಟಿಕೊಂಡಿರುವ ಭಾಗವನ್ನು ರೋಗಪೀಡಿತವಾಗಿಸಿ ಚುಚ್ಚಿದಂತಹ ನೋವಿಗೆ ಕಾರಣವಾಗುತ್ತದೆ.

ಕ್ರೀಡೆಯ ಸಮಯದಲ್ಲಿ ಆದ ಗಾಯ

ಕ್ರೀಡೆಯ ಸಮಯದಲ್ಲಿ ಆದ ಗಾಯ

ಆಟದ ಸಮಯದಲ್ಲಿ ಕ್ರೀಡಾಪಟುಗಳು ಬೀಳುವುದು ಸಾಮಾನ್ಯ. ಒಂದು ವೇಳೆ ವ್ಯಾಯಾಮ ಅಥವಾ ಕ್ರೀಡೆಯ ಸಮಯದಲ್ಲಿ ಪ್ರಷ್ಠಭಾಗ ನೆಲಕ್ಕೆ ಗುದ್ದುವಂತೆ ಬಿದ್ದರೆ ಆ ಕ್ಷಣದಲ್ಲಿ ಕೊಂಚ ನೋವಾಗಿದ್ದರೂ ಕೊಂಚ ವಿಶ್ರಾಂತಿಯ ಬಳಿಕ ನೋವು ಕಡಿಮೆಯಾಗಿರುವುದರಿಂದ ಎಲ್ಲಾ ಸರಿಹೋಯಿತು ಎಂಬಂತೆ ಕ್ರೀಡಾಪಟುಗಳು ತಮ್ಮ ಕೆಲಸ ಮುಂದುವರೆಸುತ್ತಾರೆ. ಆದರೆ ಈ ಆಘಾತದಿಂದ ಬೆನ್ನುಮೂಳೆ, ಹುರಿ ಅಥವಾ ಸ್ನಾಯುಗಳಲ್ಲಿ ಸೂಕ್ಷ್ಮವಾದ ಬಿರುಕು ಮೂಡಿಸಿದ್ದು ಆ ಕ್ಷಣಕ್ಕೆ ಏನೂ ಆಗದೇ ಇದ್ದರೂ ನಿಧಾನವಾಗಿ ಈ ಭಾಗದಲ್ಲಿ ರಕ್ತಸ್ರಾವ, ಸೋಂಕು ಆಗುವ ಮೂಲಕ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಮಯದಲ್ಲಿ ಈ ನೋವು ಅತಿ ತೀಕ್ಷ್ಣವಾಗಿರದೇ ಯಾವುದೋ ಒಂದು ಭಂಗಿಯಲ್ಲಿ ಮಾತ್ರವೇ ನೀಡುತ್ತದೆ.

English summary

Things Your Back Pain Is Trying To Tell You!

There may be a number of reasons for the development of back pain such as injuries, an unhealthy lifestyle, bad posture, weak bones, infection of the bone ligaments, etc. Many a times, a back ache may not be just that and may be an indication of something more! So, here are things your back ache could be a sign of.
X
Desktop Bottom Promotion