For Quick Alerts
ALLOW NOTIFICATIONS  
For Daily Alerts

ಹುಣಸೆ ಹಣ್ಣಿನ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

ಹುಣಸೆ ಮರದಲ್ಲಿ ದೆವ್ವ ಇರುತ್ತದೆ ಎಂಬ ಕಟ್ಟುಕಥೆ ನಂಬುವ ಜನ ಹುಣಸೆ ಮರದತ್ತ ಸುಳಿಯುವುದನ್ನು ನಿಲ್ಲಿಸುತ್ತಾರೆಯೇ ವಿನಃ ಹುಣಸೆಹಣ್ಣಿನ ಬಳಕೆಯನ್ನಲ್ಲ. ಏಕೆಂದರೆ ಭಾರತೀಯ ಅಡುಗೆಗಳಲ್ಲಿ ಹುಣಸೆ ಹಣ್ಣು ಪಾತ್ರ ಮಹತ್ವದ್ದಾಗಿದೆ.

By Arshad
|

ದಕ್ಷಿಣ ಭಾರತೀಯ ಅಡುಗೆಯ ಪ್ರಮುಖ ಆಕರ್ಷಣೆಯ ಅಂಗವಾಗಿರುವ ಸಾಂಬಾರ್ ಮತ್ತು ರಸಂಗಳಿಗೆ ರುಚಿ ನೀಡುವುದೇ ಹುಣಸೆ ಹುಳಿ. ಇದು ರುಚಿ ನೀಡುವುದರೊಂದಿಗೆ ಆರೋಗ್ಯಕ್ಕೂ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ಇದನ್ನು ಹಲವಾರು ರೀತಿಯಲ್ಲಿ ಬಳಸಲಾಗುತ್ತದೆ. ತ್ವಚೆಯ ಸರ್ವ ರೋಗಕ್ಕೂ- ಹುಣಸೆ ಹಣ್ಣಿನ ಫೇಸ್ ಪ್ಯಾಕ್

ಚಟ್ನಿ, ಸಾಸ್, ಪಾನಿ ಪೂರಿ, ಲಘು ಪಾನೀಯ, ಕರಿ ಮೊದಲಾದವುಗಳಲ್ಲಿ ಹುಳಿಯನ್ನು ಕರಗಿಸಿದ ನೀರನ್ನು ಬಳಸಲಾಗುತ್ತದೆ. ಇದರಲ್ಲಿ ಏನಿದೆ ಆರೋಗ್ಯಕರ ಅಂಶ ಎಂಬ ಕುತೂಹಲವುಳ್ಳವರಿಗೆ ಇಂದಿನ ಲೇಖನ ಖಂಡಿತಾ ನೆರವಾಗಲಿದೆ. ಬನ್ನಿ, ಹುಣಸೆ ಹುಳಿಯ ಹೆಗ್ಗಳಿಕೆಯನ್ನು ಸಾರುವ ಕೆಲವು ಸಂಗತಿಗಳನ್ನು ಅರಿಯೋಣ....

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳ ಗುಣ ಮತ್ತು ಕರಗುವ ನಾರಿನಿಂದಾಗಿ ಹುಳಿಯ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಸಾಧಾರಣ ಮಟ್ಟಕ್ಕೆ ಬರಲು ನೆರವಾಗುತ್ತದೆ. ತನ್ಮೂಲಕ ಹೃದಯ ಸಂಭಂಧಿ ತೊಂದರೆಗಳ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಹುಣಸೆ ಹುಳಿಯಲ್ಲಿ ಹೈಡ್ರೋಸಿಟ್ರಿಕ್ ಆಮ್ಲ ಎಂಬ ಮುಖ್ಯವಾದ ಪೋಷಕಾಂಶವಿದ್ದು ಇದು ದೇಹದಲ್ಲಿ ಕೊಬ್ಬಿನ ಸಂಗ್ರಹವನ್ನು ತಡೆಯುತ್ತದೆ. ಅಲ್ಲದೇ ಹುಳಿಯ ಸೇವನೆಯ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆಯನ್ನು ತಡೆಯುತ್ತದೆ. ಈ ಮೂಲಕ ಹೆಚ್ಚುವರಿ ತೂಕ ಹೆಚ್ಚುವುದನ್ನು ತಪ್ಪಿಸಿ ತೂಕ ಇಳಿಕೆಗೆ ನೆರವಾಗುತ್ತದೆ.

ರಕ್ತದೊತ್ತಡ ಸಮರ್ಪಕವಾಗಲು ನೆರವಾಗುತ್ತದೆ

ರಕ್ತದೊತ್ತಡ ಸಮರ್ಪಕವಾಗಲು ನೆರವಾಗುತ್ತದೆ

ಇದರಲ್ಲಿ ಕಬ್ಬಿಣ ಮತ್ತು ಪೊಟ್ಯಾಶಿಯಂ ಉತ್ತಮ ಪ್ರಮಾಣದಲ್ಲಿರುವ ಕಾರಣ ರಕ್ತದ ಒತ್ತಡ ಸರಿಯಾದ ಮಟ್ಟದಲ್ಲಿರಲು ಸಹಕರಿಸುತ್ತದೆ ಹಾಗೂ ಉತ್ತಮ ಪ್ರಮಾಣದ ಕೆಂಪು ರಕ್ತಕಣಗಳ ಉತ್ಪಾದನೆಯಲ್ಲಿ ನೆರವಾಗುತ್ತದೆ.

ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ

ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ

ಹುಣಸೆ ಹುಳಿಯ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ನೆರವಾಗುತ್ತದೆ. ಅಲ್ಲದೇ ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟುಗಳನ್ನು ಹೀರಿಕೊಳ್ಳುವುದರಿಂದ ತಪ್ಪಿಸಿ ಈ ಮೂಲಕ ಏರುಪೇರಾಗುವ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ನಿಯಮಿತವಾಗಿ ಒಂದು ಚಿಕ್ಕ ಲೋಟ ಹುಳಿಯನ್ನು ಬೆರೆಸಿದ ನೀರನ್ನು ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ

ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ

ಹುಳಿಯಲ್ಲಿ ಉತ್ತಮ ಪ್ರಮಾಣದ ಪೆಕ್ಟಿನ್ ಮತ್ತು ಟ್ಯಾನಿನ್ ಮೊದಲಾದ ಕರಗುವ ನಾರುಗಳಿದ್ದು ಇವು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತವೆ ಹಾಗೂ ಮಲಬದ್ದತೆಯಾಗದಂತೆ ನೋಡಿಕೊಳ್ಳುತ್ತವೆ.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಹುಣಸೆ ಹಣ್ಣು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟಾಶಿಯಂ ಈ ಕೆಲಸವನ್ನು ಸರಳವಾಗಿ ಮಾಡಿ ಮುಗಿಸುತ್ತದೆ. ಹುಣಸೆ ಹಣ್ಣಿನಲ್ಲಿರುವ ನಾರಿನಂಶವು ದೇಹದಲ್ಲಿರುವ ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಜೊತೆಗೆ ಇದರಲ್ಲಿನ ಆಂಟಿ-ಆಕ್ಸಿಡೆಂಟ್‌ಗಳು ನಮ್ಮ ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‌ಗಳನ್ನು ನಿಯಂತ್ರಣದಲ್ಲಿಡುತ್ತವೆ. ಇವೆಲ್ಲವು ಸೇರಿ ನಮ್ಮ ಹೃದಯವನ್ನು ಆರೋಗ್ಯವಾಗಿಡುತ್ತವೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ದಿನ ಅರ್ಧ ಸ್ಪೂನ್ ಹುಣಸೆಹಣ್ಣನ್ನು ಸೇವಿಸುವುದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿಡುವ ಜೊತೆಗೆ ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ.

English summary

Surprising Health Benefits Of Tamarind You Need To Know

For those of you who are keen on knowing the health benefits of tamarind, then this article is a must read. We will be explaining about a few of the benefits of consuming tamarind. Listed here are a few of the health benefits of tamarind....
X
Desktop Bottom Promotion