ಮನೆ ಔಷಧ: ರಕ್ತದೊತ್ತಡ-ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನೈಸರ್ಗಿಕ ಟಿಪ್ಸ್

ಈ ಲೇಖನದಲ್ಲಿ ರಕ್ತದೊತ್ತಡ-ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ತಿಳಿಸಿಕೊಡಲಿದ್ದೇವೆ.ಸುಲಭವಾಗಿ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಈ ಔಷಧಿಯನ್ನು ತಯಾರಿಸಲಾಗಿದೆ....

By: Hemanth
Subscribe to Boldsky

ದೇಹದಲ್ಲಿ ಹೃದಯದ ಪಾತ್ರ ಅತೀ ಅಗತ್ಯವಾಗಿರುತ್ತದೆ. ಹೃದಯವು ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಸರಬರಾಜು ಮಾಡುವ ಕೆಲಸ ಮಾಡುತ್ತದೆ. ಇಂತಹ ಕ್ರಿಯೆ ಮಾಡಲು ಹೃದಯವು ಆರೋಗ್ಯವಾಗಿರಬೇಕಾಗುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕಾದರೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಏಳು ಪವರ್‌ಫುಲ್ ಜ್ಯೂಸ್

ಹೀಗೆ ಮಾಡಲು ತುಂಬಾ ಶ್ರಮ ವಹಿಸಬೇಕೆಂದೇನಿಲ್ಲ. ಈ ಲೇಖನದಲ್ಲಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನೈಸರ್ಗಿಕವಾಗಿ ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ನಿಮಗೆ ಸುಲಭವಾಗಿ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಈ ನೈಸರ್ಗಿಕ ಔಷಧಿಯನ್ನು ತಯಾರಿಸಲಾಗಿದೆ. ಇದು ತುಂಬಾ ಪರಿಣಾಮಕಾರಿ.  ಮೌನ ಕೊಲೆಗಾರ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಸೂತ್ರ

ಇದರಲ್ಲಿ ಉರಿಯೂತ ಶಮನಕಾರಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವುದು ಖಚಿತ. ಇದರ ಬಗ್ಗೆ ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ.... 

ಬೇಕಾಗುವ ಸಾಮಗ್ರಿಗಳು

*½ ಲಿಂಬೆ
*½ ತುರಿದ ಶುಂಠಿ
*1 ಎಸಲು ಬೆಳ್ಳುಳ್ಳಿ
*ಒಂದು ಚಮಚ ಜೇನುತುಪ್ಪ
*ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್

ತಯಾರಿಸುವ ವಿಧಾನ

ಮೊದಲು ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿಕೊಳ್ಳಿ, ತದನಂತರ ಇದನ್ನು ಪೇಸ್ಟ್ ಆಗುವ ತನಕ ರುಬ್ಬಿಕೊಳ್ಳಿ, ಇಷ್ಟೆಲ್ಲಾ ಆದ ಮೇಲೆ ಒಂದು ಬಾಟಲಿಗೆ ಹಾಕಿ ಇದನ್ನು ಫ್ರಿಜ್‌ನಲ್ಲಿಡಿ. ಇನ್ನು ಪ್ರತೀ ದಿನ ಊಟಕ್ಕೆ ಮೊದಲು ಒಂದು ಚಮಚ ಸೇವಿಸಿ. ಒಂದು ತಿಂಗಳ ಒಳಗಡೆ ನಿಮ್ಮ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದಲ್ಲಿ ನಿಯಂತ್ರಣ ಪಡೆಯಬಹುದು. ಈ ಆಯುರ್ವೇದ ಮದ್ದಿನಿಂದ ಯಾವೆಲ್ಲಾ ಲಾಭಗಳು ಸಿಗುತ್ತದೆ ಎಂದು ತಿಳಿದುಕೊಳ್ಳುವ, ಮುಂದೆ ಓದಿ... 

ಬೆಳ್ಳುಳ್ಳಿಯ ಲಾಭಗಳು

ಬೆಳ್ಳುಳ್ಳಿಯ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದರಿಂದ ಹೃದಯಾಘಾತ ಮತ್ತು
ಪಾರ್ಶ್ವವಾಯುವನ್ನು ತಡೆಯಬಹುದು. ಇದರಿಂದ ರಕ್ತವು ತೆಳುವಾಗುವುದು. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮನೆ ಔಷಧ: ಬೆಳ್ಳುಳ್ಳಿ ಹಾಗೂ ಜೇನುತುಪ್ಪದ ಜಬರ್ದಸ್ತ್ ಪವರ್

ಶುಂಠಿಯ ಲಾಭಗಳು

ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಅಪಧಮನಿಗಳ ಗೋಡೆಗಳಲ್ಲಿ ಪದರ ನಿರ್ಮಾಣವಾಗುವುದನ್ನು ತಡೆಯುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಬೇಗನೆ ನಿಯಂತ್ರಿಸುವುದು ಹೇಗೆಂದು ತಿಳಿಯಬೇಕಾದರೆ ಇದು ಒಳ್ಳೆಯ ವಿಧಾನ....  ಮುಂಜಾನೆ ಎದ್ದು ಶುಂಠಿ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಆ್ಯಪಲ್ ಸೀಡರ್ ವಿನೇಗರ್

ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಇದು ತುಂಬಾ ಪರಿಣಾಮಕಾರಿ.

 

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Saturday, February 4, 2017, 15:38 [IST]
English summary

reduce-bad-cholesterol-high-blood-pressure-with-this-mixture

These are proven natural remedies to reduce cholesterol levels and high blood pressure. Read this article to know about the natural remedies to reduce high blood pressure and cholesterol.
Please Wait while comments are loading...
Subscribe Newsletter