For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಸಿಹಿ ಸಿಹಿ ಖರ್ಜೂರ ಸೇವಿಸಿ ಆರೋಗ್ಯ ಕಾಪಾಡಿ

By Jayasubramanya
|

ಸಿಹಿಯಾಗಿರುವ ಪದಾರ್ಥಗಳಿಂದ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ ಹೌದು ತಾನೇ? ಸಿಹಿ ಪದಾರ್ಥಗಳನ್ನು ವಿಪರೀತವಾಗಿ ಸೇವಿಸಿದಲ್ಲಿ ಕೊಬ್ಬು, ಸಕ್ಕರೆ ಕಾಯಿಲೆ ಮೊದಲಾದ ಸಮಸ್ಯೆಗಳು ಸರ್ವೇಸಾಮಾನ್ಯವಾಗಿ ಕಾಡುತ್ತದೆ. ಆದ್ದರಿಂದಲೇ ಆರೋಗ್ಯ ಕಾಳಜಿಯುಳ್ಳವರು ಸಿಹಿ ಎಂದರೆ ಮಾರುದೂರ ಹೋಗುತ್ತಾರೆ.

ಆದರೆ ತನ್ನ ಸಿಹಿ ಗುಣದಿಂದಲೇ ಆರೋಗ್ಯದ ಗುಟ್ಟನ್ನು ಹೊಂದಿರುವ ಖರ್ಜೂರ ಸಿಹಿಯಾಗಿದ್ದರೂ ಆರೋಗ್ಯಕ್ಕೆ ಅಮೃತವಾಗಿದೆ ಎಂಬುದು ನಿಮಗೆ ಗೊತ್ತೇ?

ಖಜೂರ್ ಎ೦ದೂ ಕರೆಯಲ್ಪಡುವ ಈ ಸಾದಾ ಖರ್ಜೂರವು ಅನೇಕ ದೈಹಿಕ ಚಟುವಟಿಕೆಗಳು ಸರಾಗವಾಗಿ ನೆರವೇರಲು ಬೇಕಾದ ಎಲ್ಲಾ ತೆರನಾದ ಪೋಷಕಾ೦ಶಗಳಿ೦ದ ಸಮೃದ್ಧವಾಗಿದೆ. ಖರ್ಜೂರವನ್ನು ನಿಮ್ಮ ದೈನ೦ದಿನ ಆಹಾರಕ್ರಮದಲ್ಲಿ ನೀವು ಅಳವಡಿಸಿಕೊಳ್ಳುವುದು ಏಕೆ ಅಗತ್ಯ ಎ೦ಬುದನ್ನು ಪುಷ್ಟೀಕರಿಸುವ ಕೆಲವು ಕಾರಣಗಳು ಇಲ್ಲಿವೆ. ಆರೋಗ್ಯದ ಆಗರ ಖರ್ಜೂರದ ಔಷಧೀಯ ಗುಣಗಳೇನು?

ಸಿಹಿ ಪ್ರಿಯರು ಖರ್ಜೂರವನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಗೆ ತಮ್ಮ ನಾಲಗೆಯ ಸ್ವಾದವನ್ನು ತೀರಿಸಿಕೊಳ್ಳಬಹುದಾಗಿದೆ. ಉತ್ತಮ ಪ್ರಮಾಣದ ಮೆಗ್ನೇಶಿಯಂ, ತಾಮ್ರ, ಮ್ಯಾಂಗನೀಸ್, ಗಂಧಕ, ಪೊಟ್ಯಾಶಿಯಂ, ಕಬ್ಬಿಣ, ಫಾಸ್ಪರಸ್, ಕ್ಯಾಲ್ಸಿಯಂ ಮತ್ತು ಅಲ್ಪ ಪ್ರಮಾಣದಲ್ಲಿ ಎಣ್ಣೆಯೂ ಇದೆ.

ಆದ್ದರಿಂದ ನಿತ್ಯವೂ ಕೊಂಚ ಖರ್ಜೂರವನ್ನು ಹಿತಮಿತವಾಗಿ ಸೇವಿಸುವ ಮೂಲಕ ಖರ್ಜೂರದ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇದಕ್ಕೂ ಒಂದು ಮಿತಿ ಅಗತ್ಯ....
(ನೆನಪಿಡಿ ಖರ್ಜೂರದಲ್ಲಿ ಪ್ರತಿ ನೂರು ಗ್ರಾಂನಲ್ಲಿ 63ಗ್ರಾಂ ಸಕ್ಕರೆ ಇದೆ. ಆ ಪ್ರಕಾರ ಸೂಕ್ತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು) ದಿನಂಪ್ರತಿ ಸಿಹಿಸಿಹಿ ಖರ್ಜೂರ ಸೇವಿಸಿದರೆ, ಅಪಾರ ಲಾಭ!

ಕಾಯಿಲೆಯಿಂದ ಚೇತರಿಸಿಕೊಳ್ಳುವವರಿಗೆ ಖರ್ಜೂರ ಅಮೃತಸಮಾನವಾಗಿದೆ. ನಿಯಮಿತವಾದ ಖರ್ಜೂರದ ಸೇವನೆಯಿಂದ ವಿಶೇಷವಾಗಿ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಖರ್ಜೂರದ ಇನ್ನಷ್ಟು ಪ್ರಯೋಜನಗಳನ್ನು ಅರಿತುಕೊಳ್ಳೋಣ.

ದೇಹಕ್ಕೆ ಬೆಚ್ಚನೆಯ ಅನುಭೂತಿಯನ್ನು ನೀಡುತ್ತದೆ

ದೇಹಕ್ಕೆ ಬೆಚ್ಚನೆಯ ಅನುಭೂತಿಯನ್ನು ನೀಡುತ್ತದೆ

ಖರ್ಜೂರದಲ್ಲಿ ನಾರಿನಂಶ, ಕಬ್ಬಿಣ, ಕ್ಯಾಲ್ಶಿಯಂ, ವಿಟಮಿನ್‌ಗಳು ಮತ್ತು ಮೆಗ್ನೇಶಿಯಂ ಇದ್ದು ದೇಹವನ್ನು ಬೆಚ್ಚಗಿರಿಸಲು ಇದು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಖರ್ಜೂರ ಸೇವನೆ ಉತ್ತಮ ಆಯ್ಕೆಯಾಗಿದೆ.

ಶೀತವನ್ನು ಹೋಗಲಾಡಿಸುತ್ತದೆ

ಶೀತವನ್ನು ಹೋಗಲಾಡಿಸುತ್ತದೆ

ನೀವು ಶೀತದಿಂದ ಬಳಲುತ್ತಿದ್ದರೆ 2-3 ಖರ್ಜೂರ, ಒಂದೆರಡು ಕಾಳುಮೆಣಸು ಮತ್ತು 1-2 ಏಲಕ್ಕಿಯನ್ನು ಚೆನ್ನಾಗಿ ಕುದಿಸಿಕೊಳ್ಳಿ. ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ. ಇದು ಪರಿಣಾಮಕಾರಿಯಾಗಿ ಶೀತವನ್ನು ಉಪಚರಿಸುತ್ತದೆ.

ಅಸ್ತಮಾ ಹೋಗಲಾಡಿಸುತ್ತದೆ

ಅಸ್ತಮಾ ಹೋಗಲಾಡಿಸುತ್ತದೆ

ಚಳಿಗಾಲದಲ್ಲಿ ಅಸ್ತಮಾ ಬಹುವಾಗಿ ಕಾಡುತ್ತದೆ. ಪ್ರತೀ ದಿನ ಬೆಳಗ್ಗೆ 1-2 ಖರ್ಜೂರವನ್ನು ಸೇವಿಸುವುದು ಅಸ್ತಮಾವನ್ನು ಹೋಗಲಾಡಿಸುತ್ತದೆ.

ಶಕ್ತಿಯ ವರ್ಧನೆ

ಶಕ್ತಿಯ ವರ್ಧನೆ

ನೈಸರ್ಗಿಕ ಸಕ್ಕರೆಯನ್ನು ಖರ್ಜೂರವು ಒಳಗೊಂಡಿರುವುದರಿಂದ ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆಗಾಗ್ಗೆ ಖರ್ಜೂರವನ್ನು ಮಿತವಾಗಿ ಸೇವಿಸುವುದು ನಿಮ್ಮಲ್ಲಿ ಶಕ್ತಿಯನ್ನು ಉತ್ಪಾದಿಸುತ್ತದೆ.

ಮಲಬದ್ಧತೆ ನಿವಾರಣೆಗೆ ಸಹಾಯಕ

ಮಲಬದ್ಧತೆ ನಿವಾರಣೆಗೆ ಸಹಾಯಕ

ಖರ್ಜೂರದಲ್ಲಿ ನಾರಿನಂಶ ಹೇರಳವಾಗಿದ್ದು ಒಂದೆರಡು ಖರ್ಜೂರವನ್ನು ರಾತ್ರಿ ಪೂರ್ತಿ ಒಂದು ಗ್ಲಾಸ್ ನೀರಿನಲ್ಲಿ ಮುಳುಗಿಸಿಡಿ. ಖರ್ಜೂರವನ್ನು ಹಿಸುಕಿ ಮತ್ತು ಇದರಿಂದ ಬರುವ ರಸವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದು ಮಲಬದ್ಧತೆ ನಿವಾರಣೆಯನ್ನು ಮಾಡುತ್ತದೆ.

ಹೃದಯಕ್ಕೆ ಉತ್ತಮ

ಹೃದಯಕ್ಕೆ ಉತ್ತಮ

ನಾರಿನಂಶ ಇರುವ ಹಣ್ಣು ಖರ್ಜೂರವಾಗಿದ್ದು ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಹೃದಯದ ವೇಗವನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಹೃದಯಾಘಾತದಂತಹ ಅಪಾಯವನ್ನು ದೂರವಾಗಿಸುತ್ತದೆ ಹೆಚ್ಚಾಗಿ ಚಳಿಗಾಲದ ತಾಪಮಾನದಲ್ಲಿ ಖರ್ಜೂರ ಹೃದಯಕ್ಕೆ ಉತ್ತಮ ಔಷಧ ಎಂದೆನಿಸಿದೆ.

ಸಂಧಿವಾತಕ್ಕೆ ಉತ್ತಮ ಚಿಕಿತ್ಸೆ

ಸಂಧಿವಾತಕ್ಕೆ ಉತ್ತಮ ಚಿಕಿತ್ಸೆ

ತಮ್ಮ ಉರಿಯೂತ ಗುಣಗಳಿಂದ ಸಮೃದ್ಧವಾಗಿರುವ ಖರ್ಜೂರ ಚಳಿಗಾದಲ್ಲಿ ಕಾಡುವ ಸಂಧಿವಾತಕ್ಕೆ ಉತ್ತಮ ಔಷಧಿ ಎಂದೆನಿಸಿದೆ. ಪ್ರತೀ ದಿನ ಮೂರು ನಾಲ್ಕು ಖರ್ಜೂರದ ಸೇವನೆಯನ್ನು ಮಾಡಿ.

ರಕ್ತದೊತ್ತಡದ ಇಳಿಕೆ

ರಕ್ತದೊತ್ತಡದ ಇಳಿಕೆ

ಮೆಗ್ನೇಶಿಯಂ ಮತ್ತು ಪೊಟಾಶಿಯಂ ಖರ್ಜೂರದಲ್ಲಿರುವುದರಿಂದ ಇದು ರಕ್ತದೊತ್ತಡವನ್ನು ಇಳಿಸುತ್ತದೆ. ಪ್ರತೀ ದಿನ 5-6 ಖರ್ಜೂರವನ್ನು ಸೇವಿಸುವುದು ನಿಮಗೆ ಒಳಿತನ್ನು ಉಂಟುಮಾಡುತ್ತದೆ.

English summary

ಚಳಿಗಾಲದಲ್ಲಿ ಸಿಹಿ ಸಿಹಿ ಖರ್ಜೂರ ಸೇವಿಸಿ ಆರೋಗ್ಯ ಕಾಪಾಡಿ

The health benefits of dates are plenty and there are several reasons why you should eat dates, especially during the winter season. Dates contain all the essential nutrients - vitamins, minerals, calcium, iron, potassium, natural glucose and fibre that are required to keep the body warm. Here are a few reasons why you should eat dates during the winter season. Take a look:
Story first published: Saturday, January 7, 2017, 18:14 [IST]
X
Desktop Bottom Promotion