For Quick Alerts
ALLOW NOTIFICATIONS  
For Daily Alerts

ಮನೆ ಔಷಧ: ಮಧುಮೇಹ ರೋಗಕ್ಕೆ ರಾಮಬಾಣ-'ಸಿಹಿ ಗೆಣಸು'

ಸಿಹಿಗೆಣಸುಗಳಲ್ಲಿ ಸ್ವಾಭಾವಿಕ ಸಕ್ಕರೆ ಅಂಶ ಇರುವುದರಿಂದ ಅದು ಮಧಮೇಹವನ್ನು ಕಡಿಮೆ ಮಾಡಿ, ಇನ್ಸುಲಿನ್ ಪ್ರಮಾಣವನ್ನು ಸ್ಥಿರವಾಗಿಡುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುತ್ತದೆ....

By Jaya Subramanya
|

ಸಿಹಿಯಾದ ಕಾಯಿಲೆ ಮಧುಮೇಹವು ಹೆಸರಿನಲ್ಲಿ ಸಿಹಿ ಅಂಶವನ್ನು ಹೊಂದಿದ್ದರೂ ಈ ಕಾಯಿಲೆಯ ಬಾಧೆ ಮಾತ್ರ ಸಹಿಸಲು ಅಸಾಧ್ಯವಾಗಿರುತ್ತದೆ. ರಕ್ತದಲ್ಲಿ ಸಿಹಿಯ ಪ್ರಮಾಣ ಕೊಂಚ ಎರಿಕೆಯಾಯಿತು ಎಂದಾದಲ್ಲಿ ತನ್ನ ಸಾಮರ್ಥ್ಯವನ್ನು ಇದು ದೇಹದಲ್ಲಿ ತೋರಿಸಿಬಿಡುತ್ತದೆ. ತಲೆಸುತ್ತು, ವಾಂತಿ, ನಿತ್ರಾಣ ಹೀಗೆ ನಮ್ಮನ್ನು ಅಲ್ಲೋಲ್ಲಕಲ್ಲೋಲ ಮಾಡಿಬಿಡುತ್ತದೆ.

Sweet Potato

ಆದ್ದರಿಂದ ಮಧುಮೇಹಿಗಳು ಯಾವಾಗಲೂ ಆಹಾರ ನಿಯಂತ್ರಣದಲ್ಲಿರಬೇಕಾಗುತ್ತದೆ. ಅದಾಗ್ಯೂ ನಿಸರ್ಗದಲ್ಲಿರುವ ಕೆಲವೊಂದು ಆಹಾರ ವಸ್ತುಗಳು ಕೂಡ ಯಾವುದೇ ರೋಗಕ್ಕೂ ರಾಮಬಾಣ ಎಂದೆನಿಸಿಬಿಡುತ್ತದೆ.

ಮಧುಮೇಹದ ವಿಚಾರದಲ್ಲಿ ಹೇಳುವುದಾದರೆ, ವೈದ್ಯರಿ೦ದ ಶಿಫಾರಿಸಲ್ಪಟ್ಟ, ಔಷಧಗಳ ಸೇವನೆಯು ಮುಖ್ಯವಾಗಿದ್ದರೂ ಸಹ, ನೈಸರ್ಗಿಕವಾದ ರೀತಿಯಲ್ಲಿ ಮಧುಮೇಹವನ್ನು ಸರಿದಾರಿಗೆ ತರುವುದು ಇನ್ನೂ ಸುಲಭ. ಸಿಹಿ ಗೆಣಸು ಮಧುಮೇಹಿ ರೋಗಿಗಳ ಪಾಲಿಗೆ ಸಂಜೀವಿನಿ

ಮಧುಮೇಹದ ನಿಯಂತ್ರಣಕ್ಕಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ ಸಿಹಿ ಗೆಣಸಿನಲ್ಲಿರುವ ಮಧುಮೇಹ ಸ೦ಬ೦ಧಿ ಪ್ರಯೋಜನಗಳ ಕುರಿತು ಹೆಚ್ಚು ಹೆಚ್ಚು ತಿಳಿದುಕೊ೦ಡಿರುವುದು ಒಳ್ಳೆಯದು. ಬಿಟಾ-ಕೆರೊಟಿನ್ ಹೆಚ್ಚಾಗಿರುವ ಈ ಸಿಹಿ ಗೆಣಸಿನಲ್ಲಿ ಆರೋಗ್ಯದ ದೃಷ್ಟಿಯಿಂದ ಮಧುಮೇಹಿ ರೋಗಿಗಳಿಗೆ ಅತ್ಯುತ್ತಮವಾಗಿದೆ.

ಇಷ್ಟೇ ಅಲ್ಲದೆ ನಿಮ್ಮ ಅನೇಕ ಆರೋಗ್ಯ ಸ೦ಬ೦ಧೀ ತೊ೦ದರೆಗಳಿಗೆ ಅದು ಪರಿಹಾರವನ್ನು ಒದಗಿಸಬಲ್ಲದು. ಇದರಲ್ಲಿರುವ ಬೃಹತ್ ಪ್ರಮಾಣದ acetogenin ಗಳು ಮಧುಮೇಹ ವಿರುದ್ಧ ಹೋರಾಡುವುದು ಮಾತ್ರವಲ್ಲದೇ, ಇವು ಇನ್ನೂ ಅನೇಕ ಇತರ ಆರೋಗ್ಯಕಾರಿ ಪ್ರಯೋಜನಗಳನ್ನು ಹೊ೦ದಿವೆ...ಹಾಗಿದ್ದರೆ ಇಂದಿನ ಲೇಖನದಲ್ಲಿ ಸಿಹಿಗೆಣಸು ಮಧುಮೇಹಿಗಳಿಗೆ ಕಲ್ಪವೃಕ್ಷ ಹೇಗೆ ಎಂಬುದನ್ನು ತಿಳಿದುಕೊಳ್ಳೋಣ....

ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ
ನಿಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಸಿಹಿಗೆಣಸು ಸಹಾಯ ಮಾಡುತ್ತದೆ. ರಕ್ತದ ಸಕ್ಕರೆ ಪ್ರಮಾಣವನ್ನು ಇಳಿಮುಖಗೊಳಿಸಲು ನಿಯಮಿತವಾಗಿ ಮಧುಮೇಹಿಗಳು ಈ ತರಕಾರಿಯ ಸೇವನೆಯನ್ನು ಮಾಡಬಹುದಾಗಿದೆ. ಇದು ಕಡಿಮೆ ಕ್ಯಾಲೊರಿಯನ್ನು ಹೊಂದಿದ್ದು, ಸುರಕ್ಷಿತವಾಗಿ ಇದನ್ನು ಸೇವಿಸಬಹುದಾಗಿದೆ. ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಮಧುಮೇಹಿಗಳಲ್ಲಿ ಹೆಚ್ಚಿನವರನ್ನು ಅರ್ಜೀರ್ಣ ಸಮಸ್ಯೆ ಕಾಡುತ್ತಿರುತ್ತದೆ. ಏಕೆಂದರೆ ತಮ್ಮ ಆಹಾರ ಪದ್ಧತಿಯಲ್ಲಿ ಅವರುಗಳು ಮಾರ್ಪಾಡುಗಳನ್ನು ಮಾಡುವುದರಿಂದ ಈ ಸಮಸ್ಯೆ ಎದುರಾಗುತ್ತಿರುತ್ತದೆ. ಸಿಹಿಗೆಣಸಿನಲ್ಲಿ ನಾರಿನಂಶ ಹೇರಳವಾಗಿದ್ದು, ನಿಮ್ಮ ಹೊಟ್ಟೆಯಲ್ಲಿರುವ ಕೆಟ್ಟ ಅಂಶಗಳನ್ನು ಹೊರಹಾಕುತ್ತದೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆ ರಸಗಳನ್ನು ಪೋಷಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಸಿಹಿಗೆಣಸು ನೆರವಾಗಲಿದೆ.

ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ
ಮಧುಮೇಹವು ಚಯಾಪಚಯ ಸಮಸ್ಯೆ ಎಂದೆನಿಸಿದ್ದು ದೇಹದ ಚಯಾಪಚಯ ಕ್ರಿಯೆಯ ಮೇಲೆ ಇದು ಪರಿಣಾಮವನ್ನು ಬೀರುತ್ತದೆ. ಸಿಹಿಗೆಣಸಿನಲ್ಲಿ ಹೇರಳ ನ್ಯೂಟ್ರೀನ್ ಮತ್ತು ಪ್ರೊಟೀನ್ ಅಂಶಗಳಿದ್ದು ವಿಟಮಿನ್‌ಗಳು ಮತ್ತು ಮಿನರಲ್‌ಗಳನ್ನು ಇದು ಹೊಂದಿದೆ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುವಲ್ಲಿ ಸಿದ್ಧಹಸ್ತ ಎಂದೆನಿಸಿದೆ. ಇದು ಆರೋಗ್ಯಕರ ತೂಕ ಇಳಿಕೆಯಲ್ಲೂ ಗಮನಾರ್ಹವಾಗಿದೆ.

English summary

Reasons Why Sweet Potato Is Good To Treat Diabetes

Living with a disorder like diabetes can be rather challenging, as it involves a lot of drastic lifestyle changes. Did you know that sweet potatoes can be good to treat diabetes? Now, we know that diabetes is a condition in which the body's production of insulin is abnormal and it is not utilised well by the body
Story first published: Saturday, January 7, 2017, 18:19 [IST]
X
Desktop Bottom Promotion