For Quick Alerts
ALLOW NOTIFICATIONS  
For Daily Alerts

ಒಂದು ವೇಳೆ ಗಾಯದಿಂದ ರಕ್ತ ಬರುತ್ತಿದ್ದರೆ, ಈ ಟಿಪ್ಸ್ ಅನುಸರಿಸಿ

By Jaya Subramanya
|

ಮನೆಯಲ್ಲಿ ಪುಟಾಣಿ ಮಕ್ಕಳಿದ್ದಾಗ ಅವರ ಕಲರವ ತುಂಟಾಟ ಸಹಜವೇ ಆಗಿರುತ್ತದೆ ಮತ್ತು ಇದು ನಿಮ್ಮ ಮನಸ್ಸನ್ನು ತಣಿಸುವುದೂ ಖಂಡಿತ. ಹಿಂದಿನವರು ಹಾಡಿದಂತೆ ಮಕ್ಕಳಿರಲವ್ವ ಮನೆತುಂಬಾ ಇದರಿಂದ ಮನದ ಚಿಂತೆ ದೂರಾಗುತ್ತದಂತೆ. ಮಕ್ಕಳು ತಮ್ಮ ಆಟಪಾಠಗಳ ಸಮಯದಲ್ಲಿ ಬೀಳುವುದು ಗಾಯ ಮಾಡಿಕೊಳ್ಳುವುದು ನಂತರ ಬರುವ ಅಳು, ಪುನಃ ಅದುವೇ ತುಂಟಾಟ ಇದೆಲ್ಲಾ ಸಹಜವೇ ಆಗಿದೆ. ತ್ವಚೆಯ ಸುಟ್ಟ ಗಾಯ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ!

ಆದರೆ ನಿಮ್ಮ ಮಗುವಿನ ಗಾಯ ನಿಮ್ಮನ್ನಂತೂ ಹೈರಾಣಾಗಿಸಿಬಿಡುತ್ತದೆ. ಮಗುವಿಗೆ ಆಗಿರುವ ಗಾಯ ಸಣ್ಣದಾಗಿದ್ದರೂ ನಿಮಗೆ ಎಲ್ಲಿಲ್ಲದ ಗಾಬರಿ ಭಯ. ಇನ್ನು ರಕ್ತವನ್ನು ನೋಡಿದರಂತೂ ನಿಮ್ಮ ಕಂದನ ಅಳುವಿನೊಂದಿಗೆ, ನಿಮಗೂ ಟೆನ್ಷನ್ ಆಗಿಬಿಡುತ್ತದೆ... ಗಾಯ ಮಾಸಿದರೂ ಕಾಡುವ ಹಳೆ ಕಲೆಗಳು! ಇಲ್ಲಿದೆ ಮನೆಮದ್ದು

ಹಾಗಿದ್ದರೆ ಈ ಗಾಯಗಳನ್ನು ಕೂಡಲೇ ಪರಿಹರಿಸಲು ಉರಿಯನ್ನು ಶಮನ ಮಾಡಲು ಸೋರುತ್ತಿರುವ ರಕ್ತವನ್ನು ನಿಯಂತ್ರಿಸಲು ಇಂದಿನ ಲೇಖನದಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನಾವು ತಿಳಿಸುತ್ತಿದ್ದೇವೆ. ಈ ಮನೆಮದ್ದುಗಳನ್ನು ದೊಡ್ಡವರು ಮಾಡಿಕೊಂಡ ಗಾಯಕ್ಕೂ ಬಳಸಬಹುದಾಗಿದೆ. ಮನೆಯಲ್ಲೇ ಇರುವ ಸಾಮಾಗ್ರಿಗಳಿಂದ ನಿಮಗಾದ ನೋವಿಗೆ ಶಮನವನ್ನು ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಅದೇನು ಎಂಬುದನ್ನು ತಿಳಿದುಕೊಳ್ಳೋಣ....

ಕಾಫಿ ಹುಡಿ

ಕಾಫಿ ಹುಡಿ

ರಕ್ತ ಸೋರುತ್ತಿರುವ ಗಾಯಕ್ಕೆ ಕಾಫಿ ಹುಡಿಯನ್ನು ಹಾಕಿ. ಇದು ಗಾಯವನ್ನು ಮುಚ್ಚಲು ನೆರವುಕಾರಿಯಾಗಿದೆ. ಅಂತೆಯೇ ಗಾಯವನ್ನು ಗುಣಪಡಿಸುವ ಸರಳ ವಿಧಾನ ಕೂಡ ಹೌದು.

ಅರಿಶಿನ

ಅರಿಶಿನ

ರಕ್ತವನ್ನು ನಿಲ್ಲಿಸಲು ಗಾಯದ ಮೇಲೆ ಚಿಟಿಕೆಯಷ್ಟು ಅರಿಶಿನ ಹುಡಿಯ ಪ್ರಯೋಗವನ್ನು ಮಾಡಿ. ಉಳಿದ ಭಾಗಕ್ಕೆ ಸೋಂಕು ಹರಡದಂತೆ ಇದು ತಡೆಯುತ್ತದೆ ಮತ್ತು ಕೆಲವೇ ನಿಮಿಷಗಳಲ್ಲಿ ರಕ್ತವನ್ನು ನಿಯಂತ್ರಣಕ್ಕೆ ತರುತ್ತದೆ.

ಟೀ ಬ್ಯಾಗ್

ಟೀ ಬ್ಯಾಗ್

ಟೀ ಬ್ಯಾಗ್ ಅನ್ನು ತಣ್ಣೆಯ ನೀರಿನಲ್ಲಿ ಮುಳುಗಿಸಿ ಮತ್ತು ಅದನ್ನು ಗಾಯದ ಮೇಲೆ ಒತ್ತಿಹಿಡಿದುಕೊಳ್ಳಿ. ಇದೂ ಕೂಡ ಶೀಘ್ರದಲ್ಲೇ ರಕ್ತವನ್ನು ತಡೆಹಿಡಿಯುತ್ತದೆ.

ಟೂತ್‌ಪೇಸ್ಟ್

ಟೂತ್‌ಪೇಸ್ಟ್

ರಕ್ತ ನಿಲ್ಲುವಂತಾಗಲು ಟೂತ್ ಪೇಸ್ಟ್ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ. ಇದು ತ್ವಚೆಯಲ್ಲಿ ಸಂಕೋಚನವನ್ನು ಉಂಟುಮಾಡಿ ರಕ್ತಹರಿಯುವಿಕೆಯನ್ನು ತಡೆಯುತ್ತದೆ.

ಗ್ಲಾಸ್

ಗ್ಲಾಸ್

ಗಾಯದ ಮೇಲೆ ಚಿಕ್ಕ ತುಂಡಿನ ಗಾಜನ್ನು ಇರಿಸಿ ಮೃದುವಾಗಿ ಒತ್ತಿ. ಇದರಿಂದ ರಕ್ತ ನಿಯಂತ್ರಣಕ್ಕೆ ಬರುತ್ತದೆ. ಗಾಜು ಇಲೆಕ್ಟ್ರೊ ನೆಗೆಟೀವ್ ಚಾರ್ಜ್ ಅನ್ನು ಪಡೆದುಕೊಂಡಿದೆ. ಆದರೆ ಗಾಜು ಬಳಸುವಾಗ ಹೆಚ್ಚಿನ ಜಾಗರೂಕತೆಯನ್ನು ನೀವು ಪಾಲಿಸಬೇಕಾಗುತ್ತದೆ.

ಜೋಳದ ಗಂಜಿ

ಜೋಳದ ಗಂಜಿ

ಈ ಮನೆಮದ್ದಿನಿಂದ ಸರಳವಾಗಿ ನಿಮಗೆ ರಕ್ತವನ್ನು ತಡೆಹಿಡಿಯಬಹುದಾಗಿದೆ. ಗಾಯಕ್ಕೆ ನೇರವಾಗಿ ಜೋಳದ ಗಂಜಿಯನ್ನು ಹಚ್ಚಿರಿ. ಇದು ರಕ್ತವನ್ನು ಹೀರಿಕೊಳ್ಳುತ್ತದೆ ಮತ್ತು ಹೆಪ್ಪುಗಟ್ಟಲು ನೆರವಾಗುತ್ತದೆ.

ಐಸ್ ಕ್ಯೂಬ್ಸ್

ಐಸ್ ಕ್ಯೂಬ್ಸ್

ತೆರೆದ ಗಾಯದ ಮೇಲೆ ಐಸ್ ಕ್ಯೂಬ್‌ಗಳನ್ನು ಒತ್ತಿಹಿಡಿಯಿರಿ. ತ್ವಚೆಯ ಕೋಶಗಳನ್ನು ಮತ್ತು ಅಂಗಾಂಶಗಳನ್ನು ರಚಿಸಿಕೊಂಡು ಇದು ರಕ್ತ ಸೋರುವಿಕೆಯನ್ನು ನಿಯಂತ್ರಿಸುತ್ತದೆ.

ಸೇಂಟ್ ಜಾನ್ಸ್ ವೋರ್ಟ್

ಸೇಂಟ್ ಜಾನ್ಸ್ ವೋರ್ಟ್

ಇದು ಆಂಟಿಸೆಪ್ಟಿಕ್ ಮತ್ತು ಆಂಟಿವೈರಲ್ ಅಂಶಗಳನ್ನು ಹೊಂದಿದೆ. ಇದರ ಎಲೆಯನ್ನು ಗಾಯದ ಮೇಲೆ ಹಚ್ಚುವುದರಿಂದ ಇದು ಗಾಯವನ್ನು ಬೇಗನೇ ಒಣಗಿಸುತ್ತದೆ ಮತ್ತು ಸೋಂಕಿನಿಂದ ತಡೆಯುತ್ತದೆ.

ವಿಚ್ ಹೇಜಲ್

ವಿಚ್ ಹೇಜಲ್

ರಕ್ತಸ್ರಾವವನ್ನು ತಡೆಯಲು ಮತ್ತು ಗಾಯವನ್ನು ಒಣಗಿಸಲು ಇದು ನೈಸರ್ಗಿಕ ವಿಧಾನವಾಗಿದೆ. ಇದು ಸೋಂಕಿನಿಂದ ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ ಇದು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿದೆ.

ಉಪ್ಪು

ಉಪ್ಪು

ರಕ್ತವನ್ನು ನಿಲ್ಲಿಸಲು ಉಪ್ಪಿನ ಬಳಕೆಯನ್ನು ಮಾಡಬಹುದಾಗಿದೆ. ಇದು ಕೊಂಚ ನೋವನ್ನು ಉಂಟುಮಾಡಿದರೂ ಶೀಘ್ರದಲ್ಲೇ ಪರಿಣಾಮಕಾರಿ ಎಂದೆನಿಸಿದೆ. ಗಾಯದಿಂದ ಒಸರುತ್ತಿರುವ ರಕ್ತವನ್ನು ಹೀರಿಕೊಳ್ಳಲು ಉಪ್ಪು ಸಹಕಾರಿಯಾಗಿದೆ. ಇದು ಗಾಯವನ್ನು ಬೇಗನೇ ಮುಚ್ಚಲು ಸಹಕಾರಿಯಾಗಿದ್ದು ಮತ್ತು ಸೋಂಕು ಉಂಟಾಗದಂತೆ ತಡೆಯುತ್ತದೆ.

English summary

Quick Home Remedies For Bleeding Wounds

Whenever we get a cut accidentally, we usually stop the wound from bleeding by tying the area tight with a piece of cloth or by keeping the affected area under a running tap. We don't have to panic in such conditions and just have to use our minds on how to stop the bleeding effectively. Bleeding, sometimes, can be a medical emergency and we must take all measures to curb it at that instant...There are some best home remedies you can use to stop bleeding of a wound immediately at home.
Story first published: Thursday, March 23, 2017, 20:21 [IST]
X
Desktop Bottom Promotion