Just In
- 7 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 7 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 8 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 8 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಯಿ ದುರ್ವಾಸನೆಯ ಸಮಸ್ಯೆಗೆ ಚಿಟಿಕೆಯಷ್ಟು 'ಅಡುಗೆ ಸೋಡಾ' ಸಾಕು!
*ಕೆಲವರು ಎದುರು ನಿಂತು ಮಾತನಾಡಿದರೆ ಸಾಕು ಅವರ ಬಾಯಿಯಿಂದ ಬರುವಂತಹ ದುರ್ವಾಸನೆಯಿಂದ ಅಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಇದು ನಮಗೆ ಮಾತ್ರವಲ್ಲದೆ ಇತರರಿಗೂ ತುಂಬಾ ಮುಜುಗರವನ್ನು ಉಂಟು ಮಾಡುತ್ತದೆ.
ಕೆಲವೊಮ್ಮೆ ನಮಗರಿವಿಲ್ಲದಂತೆಯೇ ನಮ್ಮ ಬಾಯಿಯಿಂದ ದುರ್ವಾಸನೆ ಸೂಸುತ್ತಿದ್ದು ಎದುರಿನವರಿಗೆ ವಾಕರಿಕೆ ಹಾಗೂ ನಮಗೆ ಬಹಳಷ್ಟು ಮುಜುಗರ ಉಂಟಾಗಬಹುದು. ಬಾಯಿಯ ದುರ್ಗಂಧಕ್ಕೆ ಹಲವಾರು ಕಾರಣಗಳಿವೆ.
ಊಟದ ನಡುವೆ ಅಥವಾ ಬಳಿಕ ಸೇವಿಸಿದ್ದ ಈರುಳ್ಳಿ, ಸರಿಯಾಗಿ ಹಲ್ಲುಜ್ಜಿಕೊಳ್ಳದೇ ಇದ್ದದ್ದು, ಊಟದ ಬಳಿಕ ಮುಕ್ಕಳಿಸದೇ ಇದ್ದದ್ದು (ಸಿದ್ಧ ಆಹಾರ ತಿನ್ನುವವರದ್ದೆಲ್ಲಾ ಇದೇ ಅವಸ್ಥೆ), ಹಲ್ಲುಗಳ ಸಂದುಗಳಲ್ಲಿ ಉಳಿದಿರುವ ಆಹಾರದ ತುಣುಕುಗಳು, ಹಲ್ಲುಗಳಲ್ಲಿ ಕುಳಿ, ನೀರು ಕುಡಿಯದೇ ನಿರ್ಜಲೀಕರಣವಾಗಿರುವುದು ಮೊದಲಾದವು ಇದರ ಸಾಮಾನ್ಯ ಕಾರಣಗಳು.
ಆದರೆ ಕೆಲವೊಮ್ಮೆ ಸಮಸ್ಯೆಯು ಇದರ ಹೊರತಾಗಿ ಸಹ ನಿಲ್ಲುತ್ತದೆ. ಬಾಯಿಯ ದುರ್ವಾಸನೆಯು ಯಾವಾಗ ದಿನವಿಡೀ ಇರುತ್ತದೆಯೋ, ಆಗ ಇದು ತೀರಾ ಗಂಭೀರ ಸಮಸ್ಯೆಯಾಗುತ್ತದೆ. ಆಗ ನೀವು ಬಾಯಿ ಮುಕ್ಕಳಿಸುವಿಕೆ, ಬ್ರಷ್ ಮತ್ತು ಫ್ಲಾಸ್ಸಿಂಗ್ ಇತ್ಯಾದಿಗಳನ್ನು ಹೊರತುಪಡಿಸಿ ಒಂದು ಪರಿಹಾರವನ್ನು ಕಂಡು ಕೊಳ್ಳಬೇಕಾಗುತ್ತದೆ. ಬಾಯಿಯ ದುರ್ವಾಸನೆ ತಡೆಯಲು 7 ಟಿಪ್ಸ್
ಅಸಲಿಗೆ ನಿಮ್ಮ ಬಾಯಿ ದುರ್ವಾಸನೆ ಬೀರುತ್ತಿದೆಯೇ ಇಲ್ಲವೇ ಎಂದು ತಿಳಿಯಲು ಒಂದು ಪರೀಕ್ಷೆ ನಡೆಸಿ. ಸಣ್ಣದಾದ ಬಿಳಿ ಬಟ್ಟೆಯ ತುಂಡನ್ನು ತೆಗೆದುಕೊಳ್ಳಿ. ಇದನ್ನು ನಾಲಿಗೆಯ ಮೇಲೆ ಇರಿಸಿ ತಿಕ್ಕಿ. ಒಂದು ವೇಳೆ ಈ ಬಟ್ಟೆ ಹಳದಿ ಬಣ್ಣಕ್ಕೆ ತಿರುಗಿದರೆ ನಿಮ್ಮ ಬಾಯಿಯಲ್ಲಿ ದುರ್ವಾಸನೆ ಇದೆ ಎಂದರ್ಥ.
ಜೊತೆಗೆ
ಇದು
ನಿಮ್ಮ
ದೇಹದಲ್ಲಿ
ಸಲ್ಫರ್
ಅಂಶ
ಹೆಚ್ಚಾಗಿದೆ
ಎಂದು
ತಿಳಿಸುತ್ತದೆ.
ಸಲ್ಫೈಡ್
ಉಸಿರಿನ
ದುರ್ವಾಸನೆಗೆ
ಕಾರಣವಾಗುವ
ಅಂಶವಾಗಿರುತ್ತದೆ.
ಈ
ಅಂಕಣದಲ್ಲಿ
ನಾವು
ಉಸಿರಿನ
ದುರ್ವಾಸನೆಯನ್ನು
ತೊಲಗಿಸಲು
ಇರುವ
ಉತ್ತಮ
ಸ್ವಾಭಾವಿಕ
ಮಾರ್ಗಗಳನ್ನು
ನಾವು
ನಿಮಗೆ
ತಿಳಿಸುತ್ತೇವೆ.
ಮುಂದೆ
ಓದಿ
ಉಸಿರಿನ
ದುರ್ವಾಸನೆಯನ್ನು
ನಿವಾರಿಸಿಕೊಳ್ಳಿ.
ಅಡುಗೆ
ಸೋಡಾದಿಂದ
ಬರೋಬ್ಬರಿ
ಏಳು
ಪ್ರಯೋಜನಗಳಿವೆ!
#1
ನಾವು
ಮಾತನಾಡುತ್ತಿರುವ
ಪದಾರ್ಥ
ಯಾವುದೆಂದರೆ
ಬೇಕಿಂಗ್
ಸೋಡಾ
ಅಥವಾ
ಅಡುಗೆ
ಸೋಡಾ.
ಇದು
ಬಾಯಿಯ
ದುರ್ವಾಸನೆಯನ್ನು
ನಿವಾರಿಸಲು
ಇರುವ
ಒಂದು
ಉತ್ತಮ
ಪರಿಹಾರವಾಗಿದೆ.
#2 ಇದು ಹಲ್ಲುಗಳ ಮೇಲೆ ಕುಳಿತಿರುವ ಆಸಿಡ್ ಅನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಉಸಿರನ್ನು ತಾಜಾ ಮಾಡುತ್ತದೆ.
#3 ಈ ಉಪಯೋಗವನ್ನು ನಿಮ್ಮದಾಗಿಸಿಕೊಳ್ಳಲು ಬೇಕಿಂಗ್ ಸೋಡಾವನ್ನು ಎರಡು ಬಗೆಯಲ್ಲಿ ಬಳಸಬಹುದು.
#4 ಬೇಕಿಂಗ್ ಸೋಡಾವನ್ನು ಅರ್ಧ ಚಮಚ ತೆಗೆದುಕೊಂಡು ನೀರಿನಲ್ಲಿ ಬೆರೆಸಿ ಮತ್ತು ಅದನ್ನು ನಿಮ್ಮ ಬಾಯಿ ಮುಕ್ಕಳಿಸಲು ಬಳಸಿ.
#5 ಇನ್ನೊಂದು ವಿಧಾನದಲ್ಲಿ ನೀವು ನಿಮ್ಮ ಟೂತ್ ಬ್ರಶ್ ಅನ್ನು ಈ ನೀರಿನಲ್ಲಿ ಅದ್ದಿ, ಅದರಿಂದ ಸಹ ಬ್ರಶ್ ಮಾಡಬಹುದು.
#6 ಇದನ್ನು ನೀವು ನಿಯಮಿತವಾಗಿ ಮಾಡಿದಲ್ಲಿ, ಮುಂದಿನ ದಿನಗಳಲ್ಲಿ ಬಾಯಿಯ ದುರ್ವಾಸನೆಯಿಂದ ಮುಕ್ತರಾಗಬಹುದು. ಜೊತೆಗೆ ಇದು ದಂತ ಕುಳಿಯನ್ನು ಸಹ ತಪ್ಪಿಸುತ್ತದೆ. ಬಾಯಿ ದುರ್ವಾಸನೆ ತಡೆಗೆ, ಸ್ಟೆಪ್ ಬೈ ಸ್ಟೆಪ್ ಟಿಪ್ಸ್