For Quick Alerts
ALLOW NOTIFICATIONS  
For Daily Alerts

ಮಧುಮೇಹ ಇರುವ ವ್ಯಕ್ತಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಾರದು!

By Manu
|

ಭೂ ಮೇಲಿರುವ ಪ್ರತಿಯೊಬ್ಬ ಮನುಷ್ಯ ಕೂಡ ಹೊಟ್ಟೆಪಾಡಿಗಾಗಿ ಏನಾದರೂ ಕೆಲಸ ಮಾಡಲೇಬೇಕಾಗುತ್ತದೆ. ಪ್ರತಿದಿನ ಶ್ರಮ ವಹಿಸದೆ ಇದ್ದರೆ ಹೊಟ್ಟೆ ತುಂಬುವುದು ಕಷ್ಟವಾಗುತ್ತದೆ. ಅವರವರ ಸಾಮರ್ಥ್ಯ ಹಾಗೂ ಶಿಕ್ಷಣಕ್ಕೆ ಅನುಗುಣವಾಗಿ ಏನಾದರೊಂದು ವೃತ್ತಿ ಮಾಡಿಕೊಂಡಿರುತ್ತಾರೆ. ಕೆಲವೊಂದು ಅನಾರೋಗ್ಯಗಳು ವೃತ್ತಿಗೆ ತೊಂದರೆಯುಂಟು ಮಾಡುತ್ತದೆ.

ಇದರಲ್ಲಿ ಪ್ರಮುಖವಾಗಿ ಮಧುಮೇಹ(ಡಯಾಬಿಟಿಸ್) ಇರುವವವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಎರಡನೇ ಹಂತ(ಟೈಪ್ 2)ದ ಮಧುಮೇಹ ಇರುವವರಿಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಎರಡನೇ ಹಂತದ ಮಧುಮೇಹ ಇರುವ ವ್ಯಕ್ತಿಗಳು ರಾತ್ರಿ ಪಾಲಿಯಲ್ಲಿ ಕೆಲಸ ಮಾಡಬಾರದು ಎಂದು ಅಧ್ಯಯನಗಳು ಹೇಳಿವೆ.

Diabetics

ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವಂತಹ ಎರಡನೇ ಹಂತದ ಮಧುಮೇಹ ರೋಗಿಗಳು ಗ್ಲೈಸೆಮಿಕ್ ಮಟ್ಟವು ಸರಾಸರಿ ಶೇ. 8.2ರಷ್ಟು ಇರುತ್ತದೆ. ಇದು ದಿನದಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಸರಾಸರಿ ಶೇ. 7.6 ರಷ್ಟಿರುತ್ತದೆ. ಕೆಲಸ ಮಾಡದೆ ಇರುವವರಲ್ಲಿ ಇದು 7.5 ರಷ್ಟು ಇರುತ್ತದೆ. ಮಧುಮೇಹ ನಿಯಂತ್ರಿಸುವ ನೈಸರ್ಗಿಕ 'ಜ್ಯೂಸ್'-ಶೀಘ್ರ ಪರಿಹಾರ

ಮಧುಮೇಹ ಇರುವಂತಹ ಹೆಚ್ಚಿನ ಜನರು ಶೇ.7ಕ್ಕಿಂತ ಕಡಿಮೆ ಎಐಸಿಗಾಗಿ ಶ್ರಮಿಸಬೆಕು ಎಂದು ಹಾರ್ಮೊನು ಹೆಲ್ತ್ ನೆಟ್ ವರ್ಕ್ ಹೇಳಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತಹ ವ್ಯಕ್ತಿಗಳ ಮಧುಮೇಹ ಮಟ್ಟವನ್ನು ನಿಯಂತ್ರಿಸುವ ಕಠಿಣತೆಗಳ ಬಗ್ಗೆ ಅಧ್ಯಯನವು ಜಾಗೃತಿಯನ್ನು ಮೂಡಿಸಿದೆ ಎಂದು ಥಾಯ್ಲೆಂಡ್ ನ ಮಹಿಡೊಲ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಸಿರಿಮೊನ್ ರೆಯುತ್ರಕುಲ್ ತಿಳಿಸಿದರು.

ದಿನದಲ್ಲಿ ಕೆಲಸ ಮಾಡುವವರು ಅಥವಾ ನಿರುದ್ಯೋಗಿಗಳಿಗಿಂತ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವವರು ನಿದ್ರೆಯ ಸಮಯದ ತೊಂದರೆ ಹಾಗೂ ನಿದ್ರಾ ಕ್ರಮದಲ್ಲಿ ಆಗುವಂತಹ ಬದಲಾವಣೆಗಳಿಂದ ಸಮಸ್ಯೆಯಾಗುತ್ತದೆ ಎಂದು ಅಧ್ಯಯನವು ಹೇಳಿದೆ. ಈ ಅಧ್ಯಯನದ ವರದಿಯನ್ನು ಒರ್ಲಾಂಡೊದಲ್ಲಿ ನಡೆದ 2017ರ 99ನೇ ವಾರ್ಷಿಕ ಎಂಡೋ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. ಈ ಅಧ್ಯಯನಕ್ಕಾಗಿ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವ ಸುಮಾರು 260 ಮಂದಿ ಹಾಗೂ ದಿನದಲ್ಲಿ ಕೆಲಸ ಮಾಡು 94 ಮತ್ತು 104 ಮಂದಿ ನಿರುದ್ಯೋಗಿಗಳನ್ನು ಸೇರಿಸಿಕೊಳ್ಳಲಾಯಿತು.

ದಿನದಲ್ಲಿ ಕೆಲಸ ಮಾಡುವವರು ಮತ್ತು ನಿರುದ್ಯೋಗಿಗಳಿಗಿಂತ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವಂತವರ ನಿದ್ರೆಯ ಅವಧಿ ತುಂಬಾ ಕಡಿಮೆಯಿರುತ್ತದೆ. ಇವರ ಕ್ಯಾಲರಿ ಸೇವನೆಯು ಹೆಚ್ಚಿರುತ್ತದೆ ಮತ್ತು ಬಿಎಂಐ ಕೂಡ ಹೆಚ್ಚಿರುತ್ತದೆ. ಎರಡನೇ ಹಂತದ ಮಧುಮೇಹ ಹೊಂದಿರುವ ವ್ಯಕ್ತಿಗಳು ರಾತ್ರಿ ಪಾಲಿಯಲ್ಲಿ ಕೆಲಸ ಮಾಡುತ್ತಾ ಇದ್ದರೆ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ವೈದ್ಯರು ಸೂಚಿಸಿದಂತಹ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಾ ಇರಬೇಕು ಎಂದು ರೆಯುತ್ರಕುಲ್ ತಿಳಿಸಿದರು....

English summary

Night-workers-may-find-diabetes-harder-to-control

why diabetics should not work in the night, does night shift cause diabetes,risk for diabetes
Story first published: Thursday, April 6, 2017, 19:43 [IST]
X
Desktop Bottom Promotion