ಶೌಚಾಲಯದಲ್ಲಿ ಬಳಸುವ 'ಟಾಯ್ಲೆಟ್ ಪೇಪರ್' ತುಂಬಾನೇ ಡೇಂಜರ್!

ಮನೆಯ ಶೌಚಾಲಯದ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕ ಶೌಚಾಲಯವನ್ನು ಕಾಪಾಡಿ ಕೊಳ್ಳುವುದು ಅಸಾಧ್ಯ. ಶೌಚಾಲಯದ ಒಳಗಿನ ಕಮೋಡ್ ಮೇಲ್ಭಾಗ, ಮೂಲೆಗಳು, ಬಾಗಿಲ ಹಿಡಿಕೆ, ಚಿಲಕ ಎಲ್ಲಾ ಸ್ಥಳಗಳಲ್ಲಿ ಕ್ರಿಮಿಗಳು ರಾರಾಜಿಸುತ್ತಿರುತ್ತವೆ.

By: Hemanth
Subscribe to Boldsky

ಭಾರತೀಯ ಶೌಚಾಲಯಗಳಲ್ಲಿ ಈ ಸಮಸ್ಯೆಯೇ ಇರುವುದಿಲ್ಲ. ಆದರೆ ವಿದೇಶಿ ಶೌಚಾಲಯಗಳಲ್ಲಿ ಅದರ ಸೀಟ್ ಮೇಲೆ ಕುಳಿತುಕೊಳ್ಳುವ ಮೊದಲು ಅದರಲ್ಲಿನ ನೀರು ತಾಗದಿರಲೆಂದು ಟಾಯ್ಲೆಟ್ ಪೇಪರ್‌ ಅನ್ನು ಸೀಟ್ ಮೇಲೆ ಹಾಕಿಕೊಳ್ಳುತ್ತೇವೆ. ಸೀಟ್ ನಲ್ಲಿ ಇರುವ ಬ್ಯಾಕ್ಟೀರಿಯಾಗಳು ಚರ್ಮದ ಸಂಪರ್ಕಕ್ಕೆ ಬರದಿರಲೆಂದು ಕೆಲವರು ಈ ರೀತಿ ಮಾಡುತ್ತಾರೆ. ಸಾರ್ವಜನಿಕ ಶೌಚಾಲಯ ಬಳಸುವಾಗ ಜಾಗರೂಕರಾಗಿರಿ!

ಆದರೆ ಇದು ಸರಿಯಲ್ಲವೆನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಹೀಗೆ ಮಾಡುವುದರಿಂದ ಮತ್ತಷ್ಟು ಬ್ಯಾಕ್ಟೀರಿಯಾಗಳು ಚರ್ಮದ ಸಂಪರ್ಕಕ್ಕೆ ಬರಬಹುದು ಎಂದು ತಜ್ಞರು ಹೇಳುತ್ತಾರೆ. ಟಾಯ್ಲೆಟ್ ಸೀಟ್ ಅನ್ನು ಟಾಯ್ಲೆಟ್ ಪೇಪರ್‌ನಿಂದ ಮುಚ್ಚಬಾರದು ಯಾಕೆ ಎಂದು ಈ ಲೇಖನದ ಮೂಲಕ ತಿಳಿಯಿರಿ....

#1

#1

ಶೌಚಾಲಯದಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾಗಳು ತುಂಬಿರುತ್ತದೆ ಎಂದು ನಾವೆಲ್ಲರೂ ನಂಬಿದ್ದೇವೆ. ಆದರೆ ಇದು ನಿಜ ಕೂಡ. ಆದರೆ ಟಾಯ್ಲೆಟ್ ಸೀಟ್‌ಗಳನ್ನು ಯಾವುದೇ ರೀತಿಯ ಬ್ಯಾಕ್ಟೀರಿಯಾ ಬಾರದಂತೆ ನಿರ್ಮಿಸಲಾಗಿದೆ. ಟಾಯ್ಲೆಟ್ ಸೀಟ್‌ನ ನಯವಾದ ಮೇಲ್ಮೈ ಮತ್ತು ಅದರ ಸುತ್ತಳತೆಯನ್ನು ನೋಡಬಹುದು. ಸೀಟ್ನಿಂದ ಬ್ಯಾಕ್ಟೀರಿಯಾಗಳು ದೂರವಿರುವಂತೆ ಅವುಗಳನ್ನು ನಿರ್ಮಿಸಲಾಗಿದೆ.

#2

#2

ಟಾಯ್ಲೆಟ್‌ನಲ್ಲಿ ಇರುವಂತಹ ಹೆಚ್ಚಿನ ಕೀಟಾಣುಗಳು ಚರ್ಮದಲ್ಲಿ ಸೇರಿಕೊಂಡರೆ ಅದು ಸಂತಾನ ಬೆಳೆಸಲು ಅಥವಾ ದ್ವಿಗುಣಗೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ.

#2

#2

ಸ್ವಚ್ಛ ಶೌಚಾಲಯ ಬಳಸದೆ ಇರುವುದರಿಂದ ಮಾತ್ರ ಮನುಷ್ಯರು ಕಾಯಿಲೆ ಬೀಳುವುದಿಲ್ಲ. ಅದರಲ್ಲೂ ಸಾರ್ವಜನಿಕ ಶೌಚಾಲಯಗಳು ತುಂಬಾ ಕೊಳಕಾಗಿರುತ್ತದೆ. ಇದನ್ನು ಬಳಸುವುದನ್ನು ಕಡಿಮೆ ಮಾಡಿ. ಟಾಯ್ಲೆಟ್ ಪೇಪರ್ ಬ್ಯಾಕ್ಟೀರಿಯಾ ತಡೆಯುವುದಿಲ್ಲ. ಅದು ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ.

#4

#4

ದೇಹದ ಒಳಗಿನ ಭಾಗ ಹಾಗೂ ಹೊರ ಜಗತ್ತಿನ ಮಧ್ಯೆ ಚರ್ಮವು ಒಂದು ಅಡ್ಡಗೋಡೆಯಾಗಿ ಕೆಲಸ ಮಾಡುತ್ತದೆ. ಚರ್ಮವು ಹಲವಾರು ರೀತಿಯ ಚರ್ಮಗಳಿಗೆ ಒಳಗೆ ಪ್ರವೇಶ ಮಾಡಲು ಬಿಡುವುದಿಲ್ಲ. ಟಾಯ್ಲೆಟ್ ನಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು ಮನುಷ್ಯರ ದೇಹದಲ್ಲೂ ಇರುತ್ತದೆ.

#5

#5

ಟಾಯ್ಲೆಟ್ ಮಾತ್ರ ಬ್ಯಾಕ್ಟೀರಿಯಾಗಳ ವಾಸಸ್ಥಾನವೆಂದು ನಾವು ಭಾವಿಸುತ್ತೇವೆ. ಆದರೆ ಅಡುಗೆ ಮನೆಯ ಸಿಂಕ್ ಮತ್ತು ಸ್ಪಂಜ್ ಕೂಡ ಹಲವಾರು ರೀತಿಯ ಬ್ಯಾಕ್ಟೀರಿಯಾಗಳನ್ನು ಹೊಂದಿದೆ.

#5

#5

ಹೆಚ್ಚಿನ ಬ್ಯಾಕ್ಟೀರಿಯಾಗಳು ಟಾಯ್ಲೆಟ್ ಪೇಪರ್, ಬಾಗಿಲಿನ ಹಿಡಿ ಮತ್ತು ಹ್ಯಾಂಡ್ ಡ್ರೈಯರ್ ಗಳಲ್ಲಿ ಕಂಡುಬರುತ್ತದೆ.

#6

#6

ಟಾಯ್ಲೆಟ್ ನ ಪೇಪರ್ ನಲ್ಲಿ ಬ್ಯಾಕ್ಟೀರಿಯಾಗಳು ನೆಲೆನಿಲ್ಲುತ್ತದೆ. ಇದರಿಂದ ಟಾಯ್ಲೆಟ್ ಪೇಪರ್ ನ್ನು ಮುಖ, ಮೂಗು ಅಥವಾ ದೇಹದ ಬೇರೆ ಭಾಗವನ್ನು ಒರೆಸಲು ಬಳಸಿಕೊಳ್ಳಬಾರದು. ಹೀಗೆ ಮಾಡಿದರೆ ಬ್ಯಾಕ್ಟೀರಿಯಾಗಳು ದೇಹದೊಳಗೆ ಪ್ರವೇಶಿಸಬಹುದು.

#8

#8

ಬ್ಯಾಕ್ಟೀರಿಯಾವನ್ನು ತಡೆಯಲು ಕೈಯನ್ನು ಬಿಸಿ ನೀರು ಮತ್ತು ಸಾಬೂನಿನಿಂದ ತೊಳೆಯಿರಿ. ಸಾಬೂನು ಹಾಕಿ ಎರಡು ಅಂಗೈಗಳನ್ನು ಸರಿಯಾಗಿ ಉಜ್ಜಿಕೊಳ್ಳಿ.

#9

#9

ಸಾರ್ವಜನಿಕ ಶೌಚಾಲಯಗಳಿಗೆ ಹೋದಾಗ ನಿಮ್ಮದೇ ಆದ ನ್ಯಾಪ್ಕಿನ್ ತೆಗೆದುಕೊಂಡು ಹೋಗಿ. ಹ್ಯಾಂಡ್ ಡ್ರೈಯರ್ ಬಳಸಬೇಡಿ. ಬಾಗಿಲ ಚಿಲಕಗಳನ್ನು ಮುಟ್ಟಬೇಡಿ. ಬಾಗಿಲನ್ನು ಕಾಲಿನಿಂದ ತೆಗೆಯಿರಿ.

#10

#10

ಕೈಗಳನ್ನು ಒಣಗಿಸುವ ಯಂತ್ರವನ್ನು ಬಳಸದಿರಿ ಕೈ ತೊಳೆದಾದ ಬಳಿಕ ಕೈಗಳನ್ನು ಒಣಗಿಸಲು ವಿವಿಧ ಯಂತ್ರಗಳು ಇಂದು ಲಭ್ಯವಿವೆ. ಇವುಗಳಿಂದ ಬಿಸಿಗಾಳಿ ಒತ್ತಡದಲ್ಲಿ ಚಿಮ್ಮುತ್ತಿರುವಾಗ ಕೈಗಳನ್ನು ಅಡ್ಡ ಹಿಡಿದರೆ ಶೀಘ್ರದಲ್ಲಿಯೇ ಕೈಗಳು ಒಣಗುತ್ತವೆ. ಆದರೆ ಚಿಮ್ಮುತ್ತಿರುವ ಗಾಳಿಯೇ ಕೈಗಳಲ್ಲಿರುವ ಕ್ರಿಮಿಗಳನ್ನು ಊದಿ ಇಡಿಯ ಕೋಣೆಯ ತುಂಬಾ ಹರಡುತ್ತದೆ. ಶೌಚಾಲಯಕ್ಕೆ ಬರುವ ಎಲ್ಲರೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡಿರುತ್ತಾರೆ ಎಂದು ಹೇಳಲಾಗದು. ಈ ಯಂತ್ರದ ಬಳಿ ಬಂದಾಗ ಅನೈಚ್ಛಿಕವಾಗಿ ಕ್ರಿಮಿಗಳ ಧಾಳಿಗೆ ತುತ್ತಾಗಬಹುದು. ಶೌಚಾಲಯದ ಬಗ್ಗೆ ನೀವು ತಿಳಿಯದೆ ಇರುವ ಸತ್ಯಾಸತ್ಯತೆ

Story first published: Friday, April 21, 2017, 11:22 [IST]
English summary

Never Put Toilet Paper On The Toilet Seat! Read This!

Most of us have the habit of covering the toilet seat's edge with a roll of toilet paper. Why do we do it? For protection. We think that that paper acts like a layer of protection and prevents all the bacteria and microorganisms from coming into contact with the skin.
Please Wait while comments are loading...
Subscribe Newsletter