For Quick Alerts
ALLOW NOTIFICATIONS  
For Daily Alerts

ನಂಬಲೇಬೇಕು, ಮಾತ್ರೆಯ ಹಂಗಿಲ್ಲದೇ 'ಬಿಪಿ' ನಿಯಂತ್ರಣ!

ಅಧಿಕ ರಕ್ತದೊತ್ತಡ ಇರುವವರು ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಪ್ರತಿದಿನವೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡು ಸರಿಯಾದ ರೀತಿಯ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಒಳ್ಳೆಯದು....

By Manu
|

ಒತ್ತಡದಲ್ಲಿ ಕೆಲಸ ಮಾಡುತ್ತೀರಾ? ಕುರುಕಲು ತಿಂಡಿಯನ್ನು ಹೆಚ್ಚಿಗೆ ತಿನ್ನುತ್ತೀರಾ? ಧೂಮಪಾನ ಮತ್ತು ಮದ್ಯಪಾನ ಮಾಡುತ್ತೀರಾ? ಹಾಗಾದರೆ ನಿಮಗೆ ರಕ್ತದೊತ್ತಡ ಬಂದಿದೆಯೇ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ. ಬಂದಿದೆ ಎಂದು ಖಚಿತವಾದಲ್ಲಿ ಹೆದರಬೇಡಿ, ಅದು ಬಂದರೆ ಅದನ್ನು ಹತೋಟಿಯಲ್ಲಿಡಲು ನಮ್ಮ ಬಳಿ ಮಾರ್ಗಗಳಿವೆ. ಅಧಿಕ ರಕ್ತದೊತ್ತಡವೇ? ನಿಯಂತ್ರಿಸಲು ಏಲಕ್ಕಿಯೇ ಸಾಕು!

ಈ ನಿಟ್ಟಿನಲ್ಲಿ ಹಲವಾರು ನೈಸರ್ಗಿಕ ಮನೆಮದ್ದುಗಳೂ ಸಹಾಯ ಮಾಡುತ್ತವೆ. ಆದರೆ ಅದಕ್ಕಿಂತ ಮೊದಲು ನಿಮ್ಮ ಜೀವನ ಶೈಲಿಯನ್ನು ಮೊದಲು ಬದಲಾಯಿಸಿಕೊಳ್ಳಿ. ಆಮೇಲೆ ರಕ್ತದೊತ್ತಡ ತನ್ನಷ್ಟಕ್ಕೆ ತಾನೇ ಸರಿಹೋಗುತ್ತದೆ. ಆರೋಗ್ಯಕರವಾದ ಆಹಾರ, ಸರಿಯಾದ ನಿದ್ದೆ ಮತ್ತು ಚಟುವಟಿಕೆಯಿಂದ ಕೂಡಿದ ಜೀವನ ಶೈಲಿ ರೂಢಿಸಿಕೊಳ್ಳಿ. ಬನ್ನಿ ಆ ಗಿಡಗಳ ಕುರಿತು ಮೊದಲು ತಿಳಿದುಕೊಳ್ಳೋಣ....

ಓಟ್ಸ್

ಓಟ್ಸ್

ಓಟ್ಸ್ ಡೈಯಾಸ್ಟೊಲಿಕ್ ಮತ್ತು ಸಿಸ್ಟೊಲಿಕ್ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಓಟ್ಸ್‌ನಲ್ಲಿರುವ ನಾರಿನಂಶವು ಜೀರ್ಣಾಂಗ ವ್ಯೂಹಕ್ಕೆ ಒಳ್ಳೆಯದು. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಶುಂಠಿ

ಶುಂಠಿ

ಶುಂಠಿಯು ರಕ್ತವನ್ನು ತೆಳ್ಳಗೆ ಮಾಡುತ್ತದೆ. ಇದರಲ್ಲಿ ಉರಿಯೂತ ನಿವಾರಕ ಅಂಶಗಳು ಇರುತ್ತವೆ. ಹಾಗಾಗಿ ಶುಂಠಿ ಟೀಯನ್ನು ಒಂದು ಕಪ್ ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ಹತೋಟಿಯಲ್ಲಿರಿಸಿಕೊಳ್ಳಬಹುದು.ಸರಳ ಟಿಪ್ಸ್: ಮನೆಯಲ್ಲಿಯೇ ಮಾಡಿ ನೋಡಿ-'ಶುಂಠಿ ಪೌಡರ್'

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್‌ನಲ್ಲಿ ಕೊಕೊವಾ ಇರುತ್ತದೆ. ಇದರಲ್ಲಿರುವ ಕೊಕೊವಾ ಫ್ಲಾವನೊಲ್‌ಗಳು ಹೃದ್ರೋಗದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತದೆ.

ಎಳ್ಳು

ಎಳ್ಳು

ಎಳ್ಳೆಣ್ಣೆಯಲ್ಲಿ ಸಿಸಮೊಲ್ ಮತ್ತು ಸಿಸೆಮಿನ್ ಎಂಬ ಆಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಇದರಲ್ಲಿ ವಿಟಮಿನ್ ಇ ಮತ್ತು ಸಿಸೆಮಿನ್ ಎಣ್ಣೆ ಇದ್ದು, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಮೂಲಂಗಿ

ಮೂಲಂಗಿ

ಮೂಲಂಗಿ ಹಾಗೂ ಅದರ ಎಲೆಗಳು ಬಿಪಿಯನ್ನು ಕಡಿಮೆ ಮಾಡುತ್ತವೆ. ಇದರಲ್ಲಿ ಪೊಟಾಶಿಯಂ ಇದ್ದು, ಅದು ದೇಹದಲ್ಲಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡುವುದರ ಜೊತೆಗೆ ಬಿಪಿಯನ್ನು ಸಹ ಕಡಿಮೆ ಮಾಡುತ್ತದೆ. ಮೂಲಂಗಿ ಜ್ಯೂಸ್‌+ಲಿಂಬೆ ರಸದ ಜೋಡಿಯ ಜಬರ್ದಸ್ತ್ ಪವರ್...

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆಯ ರಸವನ್ನು ಸೇವಿಸಿ. ಇದರಲ್ಲಿ ಪಾಲಿಫೆನೊಲಿಕ್ ಎಂಬ ಆಂಟಿಆಕ್ಸಿಡೆಂಟ್ ಇದ್ದು, ಇದು ಹೃದಯದ ನಾಳಗಳು ಕಟ್ಟಿಕೊಳ್ಳುವಿಕೆಯನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

ತುಳಸಿ

ತುಳಸಿ

ತುಳಸಿಯಲ್ಲಿ ಯೂಜೆನಲ್ ಎಂಬ ಅಂಶ ಇರುತ್ತದೆ. ಇದು ರಕ್ತದೊತ್ತಡವನ್ನು ಕಿರು ಅವಧಿಯಲ್ಲಿ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ನುಗ್ಗೆಸೊಪ್ಪು

ನುಗ್ಗೆಸೊಪ್ಪು

ಬಾಳೆಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟಾಶಿಯಂ ಇರುತ್ತದೆಯಂತೆ. ಇದು ಸಹ ದೇಹದಲ್ಲಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡುವುದರ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್, ಮಧುಮೇಹ ನಿಯಂತ್ರಿಸುವ ಪವರ್

ನುಗ್ಗೆಸೊಪ್ಪಿನಲ್ಲಿದೆ

ಟೊಮೇಟೊ

ಟೊಮೇಟೊ

ಟೊಮೇಟೊಗಳಲ್ಲಿ ಲೈಕೊಪೀನ್ ಎಂಬ ಅಂಶವಿರುತ್ತದೆ. ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಒಂದು ವೇಳೆ ನೀವು ಸಿಸ್ಟೊಲಿಕ್ ಒತ್ತಡದಿಂದ ಬಳಲುತ್ತಿದ್ದಲ್ಲಿ, ಬೆಳ್ಳುಳ್ಳಿಯನ್ನು ಸೇವಿಸುವುದು ಒಳ್ಳೆಯದು. ಇದರಿಂದ ದೇಹದಲ್ಲಿ ನೈಟ್ರಿಕ್ ಆಮ್ಲದ ಉತ್ಪಾದನೆ ಹೆಚ್ಚಾಗುತ್ತದೆ ಹಾಗು ಅದು ರಕ್ತದೊತ್ತಡವನ್ನು ಹತೋಟಿಗೆ ತರುತ್ತದೆ. ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್ ಎಂಬ ಅಂಶವು ತುಂಬಾ ಒಳ್ಳೆಯ ಔಷಧೀಯ ಅಂಶವಾಗಿರುತ್ತದೆ.ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

English summary

Natural Remedies to Treat High Blood Pressure

Do you have a stressful work week? Do you eat junk? Do you smoke and drink? Then you can blame your lifestyle if you ever suffer high blood pressure. Actually, there are more than 49 plant extracts which are said to work well when it comes to bringing down blood pressure.
X
Desktop Bottom Promotion