For Quick Alerts
ALLOW NOTIFICATIONS  
For Daily Alerts

ಮೈಗ್ರೇನ್ ತಲೆನೋವಿಗೆ ಅಡುಗೆ ಮನೆಯಲ್ಲಿಯೇ ಇದೆ ಔಷಧಿ!

ಮೈಗ್ರೇನ್ ತಲೆನೊವನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳು ಲಭ್ಯವಿದ್ದು ಮೈಗ್ರೇನ್ ಕಡಿಮೆಗೊಳಿಸಲು ನೆರವಾಗುತ್ತವೆ. ಇದಕ್ಕಾಗಿ ಹೆಚ್ಚು ಕಷ್ಟಪಡಬೇಕಾಗಿಲ್ಲ, ನಿಮ್ಮ ಅಡುಗೆಮನೆಯಲ್ಲಿರುವ ಸರಳ ಸಾಮಾಗ್ರಿಗಳೇ ಸಾಕು... ಮುಂದೆ ಓದಿ....

|

ಮೈಗ್ರೇನ್ ಎಂಬುವುದು ತಲೆನೋವುಗಳಲ್ಲಿಯೇ ಅತ್ಯುಗ್ರ ರೂಪವಾಗಿದ್ದು ರೋಗಿಯನ್ನು ಇಡಿಯ ದಿನ, ಕೆಲವೊಮ್ಮೆ ವಾರಗಟ್ಟಲೇ ಹಿಂಡಿ ಹಿಪ್ಪೆ ಮಾಡಿ ಹಾಕುತ್ತದೆ. ಅದರಲ್ಲು ಇದು ಸಾಮಾನ್ಯಮಟ್ಟದಿಂದ ಹಿಡಿದು ಯೋಚಿಸಲೂ ಅಸಾಧ್ಯವಾಗುವಷ್ಟು ಉಗ್ರರೂಪದಲ್ಲಿರಬಹುದು.

ಈ ನೋವಿದ್ದಾಗ ವಾಂತಿ ಬರುವಂತಾಗುವುದು, ವಾಂತಿಯಾಗುವುದು, ಬೆಳಕು ಮತ್ತು ಶಬ್ದಗಳಿಗೆ ತೀರಾ ಸಂವೇದಿಯಾಗುವುದು, ದೃಷ್ಟಿಯ ಕೇಂದ್ರಭಾಗ ಮಾಯವಾಗುವುದು ಮೊದಲಾದವು ಇದರ ಪ್ರಮುಖ ಲಕ್ಷಣಗಳು. ಮೈಗ್ರೇನ್ ತಲೆನೋವೇ? ಒಮ್ಮೆ ಈ ಜ್ಯೂಸ್ ಕುಡಿದು ನೋಡಿ...

ಆದರೆ ಈ ನೋವನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳು ಲಭ್ಯವಿದ್ದು ಮೈಗ್ರೇನ್ ಕಡಿಮೆಗೊಳಿಸಲು ನೆರವಾಗುತ್ತವೆ. ಇದಕ್ಕಾಗಿ ಹೆಚ್ಚು ಕಷ್ಟಪಡಬೇಕಾಗಿಲ್ಲ, ನಿಮ್ಮ ಅಡುಗೆಮನೆಯಲ್ಲಿರುವ ಸರಳ ಸಾಮಾಗ್ರಿಗಳೇ ಸಾಕು! ಅಚ್ಚರಿಯಾಯಿತೇ ಹಾಗಾದರೆ ಮುಂದೆ ಓದಿ....

ಹಸಿಶುಂಠಿ

ಹಸಿಶುಂಠಿ

ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಜಗಿಯುವುದು ಅಥವಾ ಹಸಿಶುಂಠಿಯನ್ನು ಜಜ್ಜಿ ಬೆರೆಸಿದ ಟೀ ಕುಡಿಯುಮ ಮೂಲಕ ಉತ್ತಮ ಶಮನ ಪಡೆಯಬಹುದು. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ನಿಮ್ಮ ನಿತ್ಯದ ಆಹಾರದ ಜೊತೆಗೆ ಹೆಚ್ಚು ಹೆಚ್ಚಾಗಿ ಹಸಿರು ತರಕಾರಿ ಸೊಪ್ಪುಗಳನ್ನು ಸೇವಿಸುವ ಮೂಲಕ ಹೆಚ್ಚಿನ ವಿಟಮಿನ್ ಮತ್ತು ಆಂಟಿ ಆಕ್ಸಿಡೆಂಟುಗಳನ್ನು ಪಡೆಯಬಹುದು. ಇದರಿಂದ ಮೆದುಳಿಗೆ ರಕ್ತಸಂಚಾರ ಉತ್ತಮಗೊಂಡು ತಲೆನೋವನ್ನು ನಿಭಾಯಿಸಲು ಹೆಚ್ಚಿನ ಶಕ್ತಿ ಪಡೆಯುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆಯಲ್ಲಿ ಹಾರ್ಮೋನುಗಳ ಏರುಪೇರನ್ನು ಸರಿಪಡಿಸುವ ಗುಣವಿದೆ. ಈ ಕಾರಣದಿಂದ ಎದುರಾದ ತಲೆನೋವಿನ ಶಮನಕ್ಕೆ ನಿಮ್ಮ ನಿತ್ಯದ ಆಹಾರವನ್ನು ಆಲಿವ್ ಎಣ್ಣೆಯಲ್ಲಿ ತಯಾರಿಸಿ ಅಥವಾ ಊಟದಲ್ಲಿ ಒಂದೆರಡು ಚಮಚ ಬೆರೆಸಿ ಸೇವಿಸುವ ಮೂಲಕ ಈ ನೋವು ಬರದಂತೆ ತಡೆಗಟ್ಟಬಹುದು.

ಕೊತ್ತಂಬರಿ ಕಾಳಿನ ಆರೈಕೆ

ಕೊತ್ತಂಬರಿ ಕಾಳಿನ ಆರೈಕೆ

ಒಂದು ದೊಡ್ಡಚಮಚ ಧನಿಯ ಅಥವಾ ಕೊತ್ತಂಬರಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಇಡಿಯ ರಾತ್ರಿ ನೆನೆಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ಮರುದಿನ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ. ಧನಿಯ ಬೀಜಗಳಲ್ಲಿರುವ ಉರಿಯೂತ ನಿವಾರಕ ಗುಣ ತಕ್ಷಣ ರಕ್ತದ ಮೂಲಕ ಮೆದುಳನ್ನು ತಲುಪಿ ಈ ನೋವನ್ನು ಬುಡದಲ್ಲಿಯೇ ಚಿವುಟಿಬಿಡುತ್ತದೆ.

ಐದು ಒಣದ್ರಾಕ್ಷಿ ಮತ್ತು ಐದು ಬಾದಾಮಿಗಳು

ಐದು ಒಣದ್ರಾಕ್ಷಿ ಮತ್ತು ಐದು ಬಾದಾಮಿಗಳು

ರಾತ್ರಿ ಮಲಗುವ ಮುನ್ನ ಒಂದು ಲೋಟ ತಣ್ಣೀರಿನಲ್ಲಿ ಐದು ಒಣದ್ರಾಕ್ಷಿ ಮತ್ತು ಐದು ಬಾದಾಮಿಗಳನ್ನು ನೆನೆಸಿಡಿ. ಬಳಿಗ್ಗೆ ಇವನ್ನು ಜಗಿದು ನುಂಗಿ, ನೆನೆಸಿದ ನೀರನ್ನೂ ಕುಡಿಯಿರಿ. ಇದರಿಂದ ಪ್ರಾರಂಭಿಕ ಹಂತದ ಮೈಗ್ರೇನ್ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ತಲೆನೋವನ್ನು ಹೆಚ್ಚಿಸುವ ಇವುಗಳಿಂದ ದೂರವಿರಿ

ತಲೆನೋವನ್ನು ಹೆಚ್ಚಿಸುವ ಇವುಗಳಿಂದ ದೂರವಿರಿ

ದೊಡ್ಡ ಶಬ್ದ, ಯಾವುದೇ ರೂಪದ ಹೊಗೆ, ಪರಿಮಳ ಬೀರುವ ಕೃತಕ ಸುಗಂಧಗಳು ಮೊದಲಾದವುಗಳಿಂದ ಸಾಧ್ಯವಾದಷ್ಟು ದೂರವಿರಿ. ಅಲ್ಲದೇ ಸಾಕಷ್ಟು ಬೆಚ್ಚಗಿರಬೇಕು, ಏಸಿಯ ತಂಪುಹವೆಯ ಸೇವನೆಯೂ ಮೈಗ್ರೇನ್ ಅನ್ನು ಹೆಚ್ಚಿಸಬಹುದು.

English summary

Natural Home Remedies for migraine pain That Actually Work

Treating the migraine headache with the homemade remedies is the best. Read to know the natural ways to treat migraine headache.
X
Desktop Bottom Promotion