For Quick Alerts
ALLOW NOTIFICATIONS  
For Daily Alerts

ಕಿವಿಯ ಆರೈಕೆಯ ವಿಷಯದಲ್ಲಿ, ಈ ಐದು ತಪ್ಪುಗಳನ್ನು ಮಾಡಬೇಡಿ!

ಕಣ್ಣು, ಮೂಗು, ಬಾಯಿ, ಕಿವಿ ದೇಹದ ಹೊರಭಾಗದ ಪ್ರಮುಖ ಅಂಗಾಂಗಗಳಾಗಿವೆ. ಇದರಲ್ಲಿ ಯಾವುದೇ ಒಂದು ಕಾರ್ಯನಿರ್ವಹಿಸದೆ ಇದ್ದರೂ ದೊಡ್ಡ ದುಷ್ಪರಿಣಾಮ ಉಂಟಾಗುತ್ತದೆ. ಅದರಲ್ಲೂ ಕಿವಿ ಕೇಳಿಸದೆ ಇದ್ದರೆ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ.

By Hemanth
|

ದೇಹದ ಪ್ರತಿಯೊಂದು ಭಾಗಗಳು ಕೂಡ ಅವುಗಳ ಕಾರ್ಯನಿರ್ವಹಣೆಗೆ ಅನುಗುಣವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಕಣ್ಣು, ಮೂಗು, ಬಾಯಿ ಹಾಗೂ ಕಿವಿ ದೇಹದ ಹೊರಭಾಗದ ಪ್ರಮುಖ ಅಂಗಾಂಗಗಳಾಗಿವೆ. ಈ ಅಂಗಾಂಗಗಳಲ್ಲಿ ಯಾವುದೇ ಒಂದು ಕಾರ್ಯನಿರ್ವಹಿಸದೆ ಇದ್ದರೂ ಅದರಿಂದ ದೊಡ್ಡ ದುಷ್ಪರಿಣಾಮ ಉಂಟಾಗುತ್ತದೆ. ಅದರಲ್ಲೂ ಕಿವಿ ಕೇಳಿಸದೆ ಇದ್ದರೆ ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕೆಲವೊಂದು ಸಲ ಕಿವಿ ಕೇಳದೆ ಇದ್ದರೆ ಜನರ ತಮಾಷೆಗೆ ಗುರಿಯಾಗಬೇಕಾಗುತ್ತದೆ. ಕಿವಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕಿವಿಯ ಹೊರಗಿನ ಭಾಗ, ಮಧ್ಯ ಭಾಗ ಮತ್ತು ಒಳಗಿನ ಭಾಗ. ಈ ಎಲ್ಲಾ ಮೂರು ಭಾಗಗಳು ಶಬ್ದ ಕೇಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಳಗಿನ ಭಾಗವು ನಿಯಂತ್ರಣವನ್ನು ಕಾಪಾಡಿಕೊಳ್ಳುತ್ತದೆ.

ಕಿವಿಯ ಹೊರಗಿನ ಭಾಗವು ಶಬ್ದವನ್ನು ಇಯರ್(ಕಿವಿ)ಡ್ರಮ್ ಗೆ ವರ್ಗಾವಣೆ ಮಾಡುತ್ತದೆ. ಇದನ್ನು ಟೈಂಪನಿಕ್ ಮೆಂಬರೆನ್ಸ್ ಎಂದೂ ಕರೆಯಲಾಗುತ್ತದೆ. ಇದು ಕಿವಿಯ ಮೇಣವನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಿವಿಯಲ್ಲಿರುವ ಮೇಣವು ತುಂಬಾ ಅಗತ್ಯವಾಗಿರುತ್ತದೆ.
ಇದನ್ನೂ ಓದಿ - ಕಿವಿ ನೋವಿಗೆ ಅಂತ್ಯಹಾಡುವ ಸರಳ ಮನೆಮದ್ದುಗಳು

ಯಾಕೆಂದರೆ ಇದು ಕಿವಿಯಲ್ಲಿ ಕೀಲೆಣ್ಣೆಯನ್ನು ಸರಿಯಾಗಿ ನೀಡುತ್ತದೆ. ಕಿವಿಯ ಒಳಗಿನ ಭಾಗವು ಗಾಳಿ ತುಂಬಿದ ಟ್ಯೂಬ್ ನಂತಿರುತ್ತದೆ. ಇದರಲ್ಲಿ ನೀರನಾಂಶವು ತುಂಬಿರುತ್ತದೆ. ಕಿವಿಯು ತುಂಬಾ ಸೂಕ್ಷ್ಮ ಭಾಗವಾದರೂ ನಿರ್ವಹಣೆ ತುಂಬಾ ಸರಳ. ಆದರೆ ಕಿವಿಯ ನಿರ್ವಹಣೆಯಲ್ಲಿ ಮಾಡುವಂತಹ ತಪ್ಪುಗಳನ್ನು ತಡೆಯುವುದು ಹೇಗೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ...

ಇಯರ್ ಫೋನ್‌ಗಳು

ಇಯರ್ ಫೋನ್‌ಗಳು

ಇಯರ್ ಫೋನ್ ಅಥವಾ ಹೆಡ್ ಫೋನ್ ನಲ್ಲಿ ಜೋರಾಗಿ ನಿರಂತರವಾಗಿ ಹಾಡು ಕೇಳುವುದರಿಂದ ಕಿವಿಯ ಡ್ರಮ್ ಛಿದ್ರವಾಗುವ ಸಾಧ್ಯತೆಯಿದೆ. ಶಬ್ದವನ್ನು ತುಂಬಾ ಕಡಿಮೆ ಮಾಡಿಕೊಂಡು ಸಂಗೀತ ಕೇಳಿದರೂ ಅದರಿಂದ ತಲೆನೋವು ಕಾಣಿಸಿಕೊಳ್ಳಬಹುದು. ನಿಮ್ಮ ಇಯರ್ ಫೋನ್ ನಲ್ಲಿ ಯಾವ ಸಂಗೀತವಿದೆ ಎಂದು ಹೊರಗಿನವರಿಗೆ ಕೇಳಿಸಿದರೆ ಆಗ ಖಂಡಿತವಾಗಿಯೂ ಅಪಾಯವಾಗಿಯೇ ಆಗುತ್ತದೆ. ಇದರಿಂದ ಶಬ್ದವನ್ನು ತುಂಬಾ ಕಡಿಮೆ ಮಟ್ಟದಲ್ಲಿಡಿ.

ಕಿವಿಯ ಮೇಣ ತೆಗೆಯುವುದು

ಕಿವಿಯ ಮೇಣ ತೆಗೆಯುವುದು

ಕಿವಿಯ ಮೇಣವು ತುಂಬಾ ಲಾಭಕಾರಿಯಾಗಿದೆ. ಕಿವಿಯು ತನ್ನಿಂದ ತಾನೇ ಸ್ವಚ್ಛವಾಗುತ್ತಾ ಹೋಗುತ್ತದೆ. ಕಿವಿಯ ಮೇಣವನ್ನು ಸ್ವಚ್ಛ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಯಾಕೆಂದರೆ ಕಿವಿಗೆ ಎಷ್ಟು ಬೇಕೋ ಅಷ್ಟು ಮೇಣವನ್ನು ಮಾತ್ರ ಕಿವಿ ಉತ್ಪಾದಿಸುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚು ಮೇಣವನ್ನು ಉತ್ಪಾದಿಸುವುದಿಲ್ಲ.

ಚೂಪಿನ ವಸ್ತುಗಳನ್ನು ಕಿವಿಯೊಳಗೆ ಹಾಕುವುದು

ಚೂಪಿನ ವಸ್ತುಗಳನ್ನು ಕಿವಿಯೊಳಗೆ ಹಾಕುವುದು

ಮೇಣವನ್ನು ಸ್ವಚ್ಛಗೊಳಿಸುವುದು ಅನಾರೋಗ್ಯಕರವಾದರೆ ಚೂಪಾದ ವಸ್ತುಗಳನ್ನು ಕಿವಿಯೊಳಗೆ ಹಾಕುವುದು ತುಂಬಾ ಅಪಾಯಕಾರಿ. ಪೆನ್, ಪೆನ್ಸಿಲ್ ಮತ್ತಿತರ ಚೂಪಾದ ವಸ್ತುಗಳನ್ನು ಹಾಕುವುದು ಅಪಾಯಕಾರಿ. ಇದರಿಂದ ಶಾಶ್ವತವಾಗಿ ಟೈಂಪನಿಕ್ ಮೆಂಬರೆನ್ಸ್ ಗೆ ಹಾನಿಯಾಗಬಹುದು. ಚೂಪಾದ ವಸ್ತುಗಳಿಂದ ಕಿವಿಯ ಒಳಗಿನ ಭಾಗದಲ್ಲಿ ಹಾನಿಯಾಗಬಹುದು. ಇದರಿಂದ ಸೋಂಕು ಕಾಣಿಸಿ ಕೊಳ್ಳಬಹುದು.

ಮನೆಮದ್ದು: ಕಿವಿನೋವಿಗೆ ಹಳ್ಳಿ ಮದ್ದು, ತ್ವರಿತ ಸಾಂತ್ವನ

ಕಿವಿ ಕೇಳಿಸದೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ

ಕಿವಿ ಕೇಳಿಸದೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ

ಕಿವಿ ಕೇಳಿಸದೆ ಇರುವುದರಿಂದ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಕಿವಿ ಕೇಳಿಸದೆ ಇರುವ ಸಮಸ್ಯೆಯನ್ನು ಆರಂಭದಲ್ಲೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರು ಸೂಚಿಸಿದರೆ ಕಿವಿ ಕೇಳುವಂತಹ ಸಾಧನ ಬಳಸಿಕೊಳ್ಳಿ.

ಇಯರ್ ಕ್ಯಾಂಡಲಿಂಗ್

ಇಯರ್ ಕ್ಯಾಂಡಲಿಂಗ್

ಇಯರ್ ಕ್ಯಾಂಡಲಿಂಗ್ ಕಿವಿಯ ಮೇಣವನ್ನು ಕರಗಿಸುವಲ್ಲಿ ತುಂಬಾ ಆರೋಗ್ಯಕಾರಿ ಎಂದು ನಂಬಲಾಗಿದೆ. ಇದರಿಂದ ಇಯರ್ ಕ್ಯಾಂಡಲಿಂಗ್ ಮೂಲಕ ಕಿವಿ ಸ್ವಚ್ಛಗೊಳಿಸಿ. ಇದು ಹೆಚ್ಚು ಪರಿಣಾಮಕಾರಿಯಲ್ಲವೆಂದು ಕೆಲವೊಂದು ಸಂಶೋಧನೆಗಳು ಹೇಳಿವೆ. ಕ್ಯಾಂಡಲ್ ಕಿವಿಯನ್ನು ಸುಡುವ ಸಾಧ್ಯತೆಗಳು ಇರುವ ಕಾರಣದಿಂದ ಇದನ್ನು ಬಳಸುವುದರಿಂದ ನೋವು ಹಾಗೂ ಸೋಂಕು ಕಾಣಿಸಿಕೊಳ್ಳಬಹುದು.

ಚಿಕ್ಕ ವಯಸ್ಸಿನಲ್ಲಿಯೇ ಕಿವಿ ಚುಚ್ಚಿದರೆ, ಪುಟಾಣಿಗಳ ಆರೋಗ್ಯ ವೃದ್ಧಿ

English summary

Mistakes You Need To Stop Making With Your Ears

Ears are vital organs of our body. Ears are not only important for our hearing but also are vital for maintaining balance. These are low-maintenance organs and a little care of the ear can go a long way to keep them hale and hearty. There are three parts of the ear: the outer ear, the middle ear and the inner ear. Though all of these three parts are involved in hearing, only the inner ear is functionally responsible for balance.
Story first published: Friday, May 19, 2017, 10:20 [IST]
X
Desktop Bottom Promotion