For Quick Alerts
ALLOW NOTIFICATIONS  
For Daily Alerts

ಕಾಫಿ-ಟೀ ಬದಲು, ಒಂದು ಗ್ಲಾಸ್ ಲಿಂಬೆ ಜ್ಯೂಸ್ ಕುಡಿಯಿರಿ!

ಚಹಾ ಅಥವಾ ಕಾಫಿ ಕುಡಿಯುವುದು ದೇಹದ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇದರ ಬದಲಿಗೆ ಬಿಸಿ ನೀರಿಗೆ ಲಿಂಬೆರಸವನ್ನು ಹಾಕಿ ಕುಡಿದರೆ ಅದು ದೇಹದ ಆರೋಗ್ಯವನ್ನು ಕಾಪಾಡುವುದರಲ್ಲಿ ಸಂಶಯವೇ ಇಲ್ಲ.

By Manu
|

ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿಕೊಂಡು ಒಂದು ಕಪ್ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಪ್ರತಿಯೊಬ್ಬರಿಗೂ ಇರುತ್ತದೆ. ಈ ಅಭ್ಯಾಸವನ್ನು ನಮಗೆ ಬಾಲ್ಯದಿಂದಲೇ ಬಂದಿರುತ್ತದೆ. ಇದನ್ನು ಬಿಡಲು ಸಾಧ್ಯವಾಗುವುದೇ ಇಲ್ಲ. ಬೆಳಿಗ್ಗಿನ ಚಹಾ ಅಥವಾ ಕಾಫಿ ಕುಡಿಯದೆ ಇದ್ದರೆ ಏನೋ ಕಳೆದುಕೊಂಡ ಭಾವನೆ ನಮ್ಮಲ್ಲಿ ಮೂಡುತ್ತದೆ. ಆದರೆ ಚಹಾ ಅಥವಾ ಕಾಫಿ ಕುಡಿಯುವುದು ದೇಹದ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಇದರ ಬದಲಿಗೆ ಬಿಸಿ ನೀರಿಗೆ ಲಿಂಬೆರಸವನ್ನು ಹಾಕಿ ಕುಡಿದರೆ ಅದು ದೇಹದ ಆರೋಗ್ಯವನ್ನು ಕಾಪಾಡುವುದರಲ್ಲಿ ಸಂಶಯವೇ ಇಲ್ಲ. ಲಿಂಬೆಯಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಹಾಗೂ ಇನ್ನಿತರ ಕೆಲವೊಂದು ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ, ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಲಿಂಬೆರಸವನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಲಿಂಬೆರಸವನ್ನು ಸೇವನೆ ಮಾಡಿದರೆ ಯಾವ್ಯಾವ ಆರೋಗ್ಯ ಲಾಭಗಳು ಇವೆ ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ....

 ಲಿಂಬೆ ನೀರಿನಿಂದ ಶೀತ ಮತ್ತು ಜ್ವರ ನಿವಾರಣೆ

ಲಿಂಬೆ ನೀರಿನಿಂದ ಶೀತ ಮತ್ತು ಜ್ವರ ನಿವಾರಣೆ

ಲಿಂಬೆಯಲ್ಲಿ ನೈಸರ್ಗಿಕದತ್ತವಾಗಿರುವ ಆ್ಯಂಟಿಆಕ್ಸಿಡೆಂಟ್ ಆಗಿರುವ ವಿಟಮಿನ್ ಸಿ ಇದೆ. ವಿಟಮಿನ್ ಸಿ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಶೀತ ಹಾಗೂ ಜ್ವರದಂತಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಲಿಂಬೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು ಮತ್ತು ದೇಹಕ್ಕೆ ಶಮನ ನೀಡುವುದು.

ಉರಿಯೂತ ನಿವಾರಣೆ

ಉರಿಯೂತ ನಿವಾರಣೆ

ಆಮ್ಲೀಯ ಪರಿಸ್ಥಿತಿಯಲ್ಲಿ ಉರಿಯೂತವು ಹೆಚ್ಚಾಗಿ ಕಾಣಿಸಿಕೊಳ್ಳುವುದು. ಲಿಂಬೆಯು ದೇಹದಲ್ಲಿ ಆಮ್ಲೀಯತೆಯನ್ನು ತಟಸ್ಥಗೊಳಿಸುತ್ತದೆ ಮತ್ತು ಉರಿಯೂತವನ್ನು ತಡೆಯುತ್ತದೆ. ಇದರಿಂದ ಊತ ಕಡಿಮೆಯಾಗುವುದು. ಸಂಧಿವಾತದಂತಹ ಉರಿಯೂತದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರು ಲಿಂಬೆಯ ನೀರನ್ನು ಬಳಸಿಕೊಳ್ಳಬಹುದು.

ಜೀರ್ಣಕ್ರಿಯೆ ಹೆಚ್ಚಿಸುವುದು

ಜೀರ್ಣಕ್ರಿಯೆ ಹೆಚ್ಚಿಸುವುದು

ಹೊಟ್ಟೆಯಲ್ಲಿ ಕಂಡುಬರುವಂತಹ ಜೀರ್ಣರಸವು ಲಿಂಬೆರಸಕ್ಕೆ ಸಮಾನವಾಗಿದೆ. ಇದರಿಂದ ಲಿಂಬೆನೀರನ್ನು ಕುಡಿದರೆ ಯಕೃತ್ ಬೈಲೆಯನ್ನು ಬಿಡುಗಡೆ ಮಾಡಲು ಪ್ರೋತ್ಸಾಹಿಸುತ್ತದೆ. ಇದರಿಂದ ಅಜೀರ್ಣ ನಿವಾರಣೆಯಾಗಿ ಹೊಟ್ಟೆಯ ತಳಮಳ ದೂರವಾಗುವುದು.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ಪ್ರಾಣಿಗಳ ಮೇಲೆ ನಡೆಸಿರುವಂತಹ ಅಧ್ಯಯನದ ಪ್ರಕಾರ ಲಿಂಬೆಯಲ್ಲಿರುವ ಪಾಲಿಫೆನಾಲ್ ಎನ್ನುವ ಆ್ಯಂಟಿಆಕ್ಸಿಡೆಂಟ್ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಇದೇ ರೀತಿಯ ಪರಿಣಾಮವು ಮನುಷ್ಯರಲ್ಲಿ ಕೂಡ ಆಗಬಹುದು ಎಂದು ಅಧ್ಯಯನಗಳು ಹೇಳಿವೆ.

ಕಿಡ್ನಿ ಕಲ್ಲು ನಿವಾರಣೆ

ಕಿಡ್ನಿ ಕಲ್ಲು ನಿವಾರಣೆ

ಲಿಂಬೆಯಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ತಡೆಯುತ್ತದೆ. ಸಿಟ್ರಿಕ್ ಆಮ್ಲವನ್ನು ಹೆಚ್ಚು ಸೇವಿಸುವುದರಿಂದ ಕ್ಯಾಲ್ಸಿಯಂನಿಂದ ಉಂಟಾಗುವ ಕಲ್ಲುಗಳನ್ನು ಅಪಾಯವನ್ನು ತಗ್ಗಿಸುತ್ತದೆ. ಲಿಂಬೆ ನೀರು ಸೇವನೆ ಮಾಡಿದರೆ ಸಿಟ್ರಿಕ್ ಆಮ್ಲದೊಂದಿಗೆ ನೀರಿನ ಸೇವನೆಯು ಹೆಚ್ಚಾಗಿ ಕಲ್ಲುಗಳು ಆಗದಂತೆ ತಡೆಯುತ್ತದೆ.

ದೇಹಕ್ಕೆ ಎಲೆಕ್ಟ್ರೋಲೈಟ್‌ಗಳನ್ನು ನೀಡುತ್ತದೆ

ದೇಹಕ್ಕೆ ಎಲೆಕ್ಟ್ರೋಲೈಟ್‌ಗಳನ್ನು ನೀಡುತ್ತದೆ

ದೇಹದ ಚಟುವಟಿಕೆಗೆ ಅಗತ್ಯವಿರುವ ಎಲೆಕ್ಟ್ರೋಲೈಟುಗಳಾದ ಪೊಟ್ಯಾಶಿಯಂ, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂಗಳನ್ನು ಲಿಂಬೆ ಉತ್ತಮ ಪ್ರಮಾಣದಲ್ಲಿ ಒದಗಿಸುತ್ತದೆ.

ರಕ್ತಶುದ್ಧಿಗೊಳಿಸುತ್ತದೆ

ರಕ್ತಶುದ್ಧಿಗೊಳಿಸುತ್ತದೆ

ಲಿಂಬೆಯ ಅತ್ಯುತ್ತಮ ಗುಣವೆಂದರೆ ರಕ್ತಶುದ್ಧಿ, ರಕ್ತದಲ್ಲಿದ್ದ ವಿಷಕಾರಿ ವಸ್ತುಗಳನ್ನು ವಿಸರ್ಜಸುವ ಮೂಲಕ ರಕ್ತನಾಳ ಮತ್ತು ರಕ್ತಪರಿಚಲನಾ ವ್ಯವಸ್ಥೆ ಸುಸ್ಥಿತಿಯಲ್ಲಿರುವಂತೆ ನೆರವಾಗುತ್ತದೆ.

ಬಾಯಿಯ ದುರ್ವಾಸನೆ ನಿವಾರಿಸುತ್ತದೆ

ಬಾಯಿಯ ದುರ್ವಾಸನೆ ನಿವಾರಿಸುತ್ತದೆ

ಲಿಂಬೆರಸದ ಸೇವೆನೆಯಿಂದ ಬಾಯಿಯಲ್ಲಿ ದುರ್ವಾಸನೆಯಾಗುವುದು ಕಡಿಮೆಯಾಗುತ್ತದೆ ಹಾಗೂ ಹಲ್ಲು ಮತ್ತು ಒಸಡುಗಳು ಸಹಾ ಸುಸ್ಥಿತಿಯಲ್ಲಿರುತ್ತವೆ. ಹಲ್ಲುನೋವು ಮೊದಲಾದ ತೊಂದರೆಗಳಿಂದ ಶೀಘ್ರವೇ ಶಮನಹೊಂದಲೂ ನೆರವಾಗುತ್ತದೆ.

English summary

Lemon juice benefits: 8 problems 1 solution

Having a glass of warm lemon water each morning might just be one of the most beneficial things you can do for your body. Lemons are packed with antioxidants, vitamins and other nutrients that support your digestive system, immune system and even your body’s detoxification process.
Story first published: Monday, April 17, 2017, 20:34 [IST]
X
Desktop Bottom Promotion