For Quick Alerts
ALLOW NOTIFICATIONS  
For Daily Alerts

ಊಟದ ಬಳಿಕ ಟೀ ಕುಡಿಯುವುದು, ಒಳ್ಳೆಯದಲ್ಲ ಹೇಳುತ್ತಾರೆ! ಹೌದೇ?

ಕೆಲವು ಅಧ್ಯಯನಗಳ ಪ್ರಕಾರ ಊಟದ ಬಳಿಕ ಟೀ ಸೇವಿಸುವುದರಿಂದ ಜೀರ್ಣಶಕ್ತಿಗೆ ಸಹಕಾರಿಯಾಗುತ್ತದೆ. ಆದರೆ ಕೆಲವರು ಟೀ ಯಲ್ಲಿರುವ ಕೆಫೀನ್ ಆಹಾರದಲ್ಲಿನ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತದೆ ಎನ್ನುತ್ತಾರೆ.

By Arshad
|

ಚಹಾ ಅಥವಾ ಟೀ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಷ್ಟೊಂದು ಹಾಸುಹೊಕ್ಕಾಗಿದೆ ಎಂದರೆ ನಮ್ಮ ಹಲವು ಸಾಮಾಜಿಕ ಕಾರ್ಯಕ್ರಮಗಳು ಚಹಾಕೂಟದಲ್ಲಿಯೇ ನಡೆಯುತ್ತವೆ. ಅಷ್ಟೇ ಏಕೆ, ನಮ್ಮ ಪ್ರಧಾನಿಗಳೂ ತಮ್ಮ ಕಾರ್ಯಕ್ರಮವೊಂದಕ್ಕೆ ಚಾಯ್ ಪೇ ಚರ್ಚಾ ಎಂದೇ ಹೆಸರಿಟ್ಟಿದ್ದಾರೆ. ಆದರೆ ಊಟದ ಬಳಿಕ ಟೀ ಸೇವಿಸುವುದು ಒಳ್ಳೆಯದೋ ಕೆಟ್ಟದ್ದೋ ಎಂಬುದು ಚರ್ಚೆಗೆ ಗ್ರಾಸವಾದ ವಿಷಯವಾಗಿದೆ.

ಮಸಾಲಾ ಚಹಾ-ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಕೆಲವು ಅಧ್ಯಯನಗಳ ಪ್ರಕಾರ ಊಟದ ಬಳಿಕ ಟೀ ಸೇವಿಸುವುದರಿಂದ ಜೀರ್ಣಶಕ್ತಿಗೆ ಸಹಕಾರಿಯಾಗುತ್ತದೆ. ಆದರೆ ಕೆಲವರು ಟೀ ಯಲ್ಲಿರುವ ಕೆಫೀನ್ ಆಹಾರದಲ್ಲಿನ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತದೆ ಎನ್ನುತ್ತಾರೆ. ಬನ್ನಿ, ಈ ಟೀ ಸೇವನೆ ಎಷ್ಟರ ಮಟ್ಟಿಗೆ ಒಳ್ಳೆಯದು ಅಥವಾ ಕೆಟ್ಟದ್ದು ಎಂಬ ಬಗ್ಗೆ ತಜ್ಞರು ಏನೆನ್ನುತ್ತಾರೆ ಎಂದು ನೋಡೋಣ....

ಜೀರ್ಣಶಕ್ತಿಯಲ್ಲಿ ಟೀ ಸೇವನೆಯ ಪಾತ್ರ

ಜೀರ್ಣಶಕ್ತಿಯಲ್ಲಿ ಟೀ ಸೇವನೆಯ ಪಾತ್ರ

ಕೆಲವು ಅಧ್ಯಯನಗಳಲ್ಲಿ ಸಿದ್ಧಪಡಿಸಿದಂತೆ ಊಟದ ಬಳಿಕ ಟೀ ಸೇವನೆಯಿಂದ ಹೊಟ್ಟೆಯಲ್ಲಿ ವಾಯು ಉತ್ಪನ್ನವಾಗಲು ಹಾಗೂ ವಾಯುಪ್ರಕೋಪಕ್ಕೆ ಕಾರಣವಾಗುತ್ತದೆ. ಆದರೆ ಟೀಯಲ್ಲಿ ಹಲವಾರು ವಿಧಗಳಿದ್ದು ಕೆಲವು ವಿಧದ ಟೀ ಸೇವನೆಯಿಂದ ನಿಜಕ್ಕೂ ಜೀರ್ಣಶಕ್ತಿಗೆ ಸಹಕಾರಿಯಾಗುತ್ತದೆ.

ಜೀರ್ಣಶಕ್ತಿಯಲ್ಲಿ ಟೀ ಸೇವನೆಯ ಪಾತ್ರ

ಜೀರ್ಣಶಕ್ತಿಯಲ್ಲಿ ಟೀ ಸೇವನೆಯ ಪಾತ್ರ

ಉದಾಹರಣೆಗೆ ಹಸಿರು ಟೀ ಹಾಗೂ ಗಿಡಮೂಲಿಕೆಗಳಾದ ಶುಂಠಿ, ತುಳಸಿ ಮೊದಲಾದ ಟೀ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕಾರಿಯಾಗಿದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಹಾಗೂ ಪಾಲಿಫಿನಾಲ್ ಗಳು ಈ ಕೆಲಸವನ್ನು ಮಾಡುತ್ತವೆ.

ಊಟದ ಜೊತೆಗೇ ಟೀ ಸೇವಿಸುವುದೇಕೆ ಒಳ್ಳೆಯದಲ್ಲ?

ಊಟದ ಜೊತೆಗೇ ಟೀ ಸೇವಿಸುವುದೇಕೆ ಒಳ್ಳೆಯದಲ್ಲ?

ಕೆಲವು ಅಧ್ಯಯನಗಳಲ್ಲಿ ಕಂಡುಬಂದಂತೆ ಟೀಯಲ್ಲಿರುವ ಫಿನಾಲಿಕ್ ಪೋಷಕಾಂಶಗಳು ಹೊಟ್ಟೆ ಮತ್ತು ಕರುಳುಗಳ ಒಳಗೆ ಆಹಾರಕಣಗಳೊಂದಿಗೆ ಬೆರೆತು ಕಬ್ಬಿಣದ ಸಂಯುಕ್ತಗಳಾಗಿ (iron-complexes) ಮಾರ್ಪಾಡು ಹೊಂದುತ್ತವೆ. ಇದರಿಂದ ಕಬ್ಬಿಣದ ಅಂಶವನ್ನು ಜೀರ್ಣಾಂಗಗಳು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಊಟದ ಜೊತೆಗೆ ಟೀ ಸೇವಿಸುವುದು ಒಳ್ಳೆಯದಲ್ಲ. ಆದರೆ ಇದಕ್ಕೆ ವ್ಯಸನಿಗಳಾದವರು ಕಬ್ಬಿಣ ಮತ್ತು ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಇವುಗಳೊಂದಿಗೆ ಟೀ ಸೇವಿಸಿದರೆ ಕಬ್ಬಿಣದ ಪ್ರಮಾಣವನ್ನು ಹೀರಿಕೊಳ್ಳದಿರುವ ಕ್ರಿಯೆಯನ್ನು ಕಡಿಮೆ ಮಾಡಬಹುದು.

ಇವರು ಮಾತ್ರ ಊಟದ ನಡುವೆ ಟೀ ಸೇವಿಸಬಾರದು...

ಇವರು ಮಾತ್ರ ಊಟದ ನಡುವೆ ಟೀ ಸೇವಿಸಬಾರದು...

ಆದ್ದರಿಂದ ಈಗಾಗಲೇ ದೇಹದಲ್ಲಿ ಕಬ್ಬಿಣದ ಕೊರತೆ ಇರುವ ವ್ಯಕ್ತಿಗಳು ಊಟದ ನಡುವೆ ಟೀ ಸರ್ವಥಾ ಸೇವಿಸಬಾರದು. ಟೀಯಲ್ಲಿರುವ ಟ್ಯಾನಿನ್ ಎಂಬ ಪೋಷಕಾಂಶ ಕಬ್ಬಿಣವನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ಅಲ್ಲದೇ ಊಟದ ನಡುವೆ ಟೀ ಸೇವಿಸುವ ಮೂಲಕ ದೇಹದಲ್ಲಿ ಅಗತ್ಯವಾಗಿ ಬೇಕಾಗಿರುವ ಕ್ಯಾಟೆಚಿನ್ (catechins) ಎಂಬ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೇ ಟೀಯಲ್ಲಿರುವ ಇತರ ಪೋಷಕಾಂಶಗಳು ಜೀವರಾಸಾಯನಿಕ ಕ್ರಿಯೆಯ ಮೇಲೂ ಪ್ರಭಾವ ಬೀರುತ್ತವೆ.

ಇವರು ಮಾತ್ರ ಊಟದ ನಡುವೆ ಟೀ ಸೇವಿಸಬಾರದು...

ಇವರು ಮಾತ್ರ ಊಟದ ನಡುವೆ ಟೀ ಸೇವಿಸಬಾರದು...

ಆದರೆ ಟೀ ಕುಡಿಯಬೇಕೆನಿಸಿದರೆ ಊಟದ ಬಳಿಕ ಸೇವಿಸಬಹುದು, ಅದೂ ಹಸಿರು ಅಥವಾ ಶುಂಠಿಯ ಟೀ ಆದರೆ ಉತ್ತಮ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹಾಲು ಬೆರೆಸಿದ, ಹಾಲಿನ ಪುಡಿಯ ಟೀ, ಘನೀಕೃತ ಹಾಲಿನಿಂದ ತಯಾರಿಸಿದ ಟೀ ಎಲ್ಲವೂ ವಾಯುಪ್ರಕೋಪಕ್ಕೆ ಪ್ರಚೋದನೆ ನೀಡುವ ಕಾರಣ ಇವುಗಳ ಸೇವನೆ ಹಿತಕರವಲ್ಲ.

ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಕುಟುಂಬ ವೈದ್ಯರ ಸಲಹೆ ಪಡೆಯಿರಿ

ಕುಟುಂಬ ವೈದ್ಯರ ಸಲಹೆ ಪಡೆಯಿರಿ

ಅಷ್ಟೇ ಅಲ್ಲ, ಕಬ್ಬಿಣದ ಕೊರತೆ ಇರುವ ವ್ಯಕ್ತಿಗಳು ಊಟದ ಬಳಿಕ ಅಥವಾ ನಡುವೆ ಟೀ ಸೇವಿಸಕೂಡದು. ಒಂದು ವೇಳೆ ವ್ಯಸನಿಗಳಾಗಿದ್ದಲ್ಲಿ ಯಾವುದೇ ತೊಡಕಿಗೆ ಒಳಗಾಗದಿರಲು ತಮ್ಮ ಕುಟುಂಬ ವೈದ್ಯರನ್ನು ಅಥವ ತಜ್ಞರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆಯಬೇಕು.

English summary

Is it better to drink tea after meals?

Drinking tea with meals is a controversial topic. There are several studies that report drinking tea is good for digestive health but some state that caffeine in tea hinders absorption of various nutrients. Let’s see find out if it affects our health.
Story first published: Wednesday, May 24, 2017, 20:29 [IST]
X
Desktop Bottom Promotion