For Quick Alerts
ALLOW NOTIFICATIONS  
For Daily Alerts

ಉಷ್ಣಕ್ಕೆ ಕಾಡುವ 'ಮೂತ್ರಕೋಶದ ಸೋಂಕು'! ಇಲ್ಲಿದೆ ನೋಡಿ ಪರಿಹಾರ

ಮೂತ್ರ ಹೊರಹರಿಯುತ್ತಿರುವಾಗ ಒಳಗಿನಿಂದ ಉರಿ,ಪದೇ ಪದೇ ಕಡಿಮೆ ಪ್ರಮಾಣದಲ್ಲಿ ಮೂತ್ರವಾಗುತ್ತಿರುವುದು, ಅನೈಚ್ಛಿಕವಾಗಿ ಮೂತ್ರ ಹೊರಹೋಗುವುದು,ಮೂತ್ರಹೊರಹರಿಸಲು ಹೆಚ್ಚಿನ ಒತ್ತಡ ಬೇಕಾಗುವುದು ಮತ್ತು ನೋವು ಕಾಣಿಸಿಕೊಳ್ಳುವುದು ಈ ಸೋಂಕಿನ ಲಕ್ಷಣಗಳು

By Manasa K M
|

ಮೂತ್ರಕೋಶದ ಸೋಂಕು ಅಥವಾ ಉರಿ ಮೂತ್ರದ ಬಹಳ ಕಿರಿ ಕಿರಿ ಉಂಟು ಮಾಡುವ ಸಮಸ್ಯೆ. ನಮ್ಮ ಮೂತ್ರ ಕೋಶದ ಯಾವುದೇ ಭಾಗದಲ್ಲಿ ಆಗುವ ಬ್ಯಾಕ್ಟೀರಿಯಾ ಸೋಂಕಿನಿಂದ ಈ ರೀತಿಯ ಸೋಂಕು ಉಂಟಾಗುತ್ತದೆ. ಉರಿ ಮೂತ್ರವು ಈ ಸೋಂಕಿನ ಒಂದು ರೋಗ ಲಕ್ಷಣ. ಇದಲ್ಲದೆ ಬಹಳ ಚಳಿಯಾಗುವುದು, ಜ್ವರದ ಲಕ್ಷಣಗಳು ಕೂಡ ಸೋಂಕು ಹೆಚ್ಚಾದಾಗ ಕಾಣಿಸಿಕೊಳ್ಳುತ್ತವೆ. ಜೀವಹಿಂಡುವ ಉರಿಮೂತ್ರದ ಸಮಸ್ಯೆಗೆ ಅಂತ್ಯಹಾಡುವ ಮದ್ದುಗಳು

ಈ ಸೋಂಕು ತಟ್ಟನೆ ಹೆಚ್ಚು ಆಗದಿದ್ದರೂ ನಾವು ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಅದರಲ್ಲೂ ಬೇಸಿಗೆಯಲ್ಲಿ ನಮ್ಮ ದೇಹದ ಉಷ್ಣವು ಹೆಚ್ಚಾಗಿ ಇದರಿಂದ ಮೊದಲಿಗೆ ಉರಿ ಮೂತ್ರ ತೊಂದರೆ ಕಾಣಿಸಿಕೊಳ್ಳಬಹುದು. ಇದನ್ನು ಸರಿಪಡಿಸಿಕೊಳ್ಳದೆ ಇದ್ದರೆ ಸೋಂಕು ತಗಲುವುದು ಖಚಿತ....

ತೊಂದರೆಯ ಲಕ್ಷಣಗಳು

ತೊಂದರೆಯ ಲಕ್ಷಣಗಳು

ದೇಹದ ಉಷ್ಣಾಂಶ ಹೆಚ್ಚಾದಾಗ ಮೂತ್ರದ ಬಣ್ಣ ಹೆಚ್ಚು ಹೆಚ್ಚು ಹಳದಿಯಾಗಿರುತ್ತದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಅಥವಾ ಉರಿಯುತ್ತದೆ. ಕೆಲವರಿಗೆ ಇದರಿಂದ ಮೂಗು ಕಟ್ಟಿ ನೆಗಡಿಯಾದಂತೆ ಅನುಭವವಾಗುತ್ತದೆ. ಇನ್ನೂ ಕೆಲವರಿಗೆ ಮೊಡವೆಗಳು ಏಳುವುದು ಕೂಡ ಸಹಜ. ಸಮಸ್ಯೆ ಇನ್ನೂ ಒಂದು ಹಂತ ಹೆಚ್ಚಾದಾಗ, ನಿಮಿಷಕ್ಕೊಮ್ಮೆ ಮೂತ್ರ ವಿಸರ್ಜನೆಯ ಮಾಡಬೇಕಿನಿಸುತ್ತದೆ ಆದರೆ ಆಗುವುದಿಲ್ಲ.

ತೊಂದರೆಗೆ ಕಾರಣಗಳು

ತೊಂದರೆಗೆ ಕಾರಣಗಳು

ಇದಕ್ಕೆ ಮೂಲ ಕಾರಣ ದೇಹದಲ್ಲಿ ಉಷ್ಣದ ಅಂಶ ಹೆಚ್ಚಾಗುವುದು. ದೇಹದ ಉಷ್ಣಾಂಶ ಹಲವಾರು ಕಾರಣಗಳಿಂದ ಹೆಚ್ಚಾಗುತ್ತದೆ. ಬೇಸಿಗೆಯ ಸಮಯದಲ್ಲಿ ಇದು ಇನ್ನೂ ಹೆಚ್ಚು. ನಮ್ಮ ದೇಹವು ಪ್ರತಿಯೊಂದು ಸರಿ ಮೂತ್ರ ವಿಸರ್ಜನೆಯ ಸಮಯದಲ್ಲಿ ದೇಹದಲ್ಲಿ ಸೇರಿರುವ ಅನಗತ್ಯ ಹಾಗೂ ಅಹಿತ ಕೀಟಾಣುಗಳನ್ನು ಮೂತ್ರದೊಂದಿಗೆ ಹೊರಹಾಕುತ್ತದೆ. ಆದರೆ ಕೆಲವು ಬಾರಿ ಕೀಟಾಣುಗಳು ಹೆಚ್ಚು ಇದ್ದು ಅವು ಮೂತ್ರನಾಳಕ್ಕೆ ಅಂಟಿಕೊಂಡು ಅಲ್ಲೇ ಬೆಳೆದು ಬಿಡುತ್ತವೆ. ಹಾಗೆಯೇ ನಮ್ಮ ಮೂತ್ರಕೋಶದ ಭಾಗಗಳಾದ ಕಿಡ್ನಿ, ಮೂತ್ರನಾಳ, ಎಲ್ಲಾದರೂ ಹೀಗಿ ಬ್ಯಾಕ್ಟೀರಿಯಾಗಳು ಬೆಳೆದು ಇಂತಹ ಸೋಂಕು ತಗಲಬಹುದು. ಇನ್ನೂ ಕೆಲವು ಬಾರಿ ನಾವು ಸಾರ್ವಜನಿಕ ಶೌಚಾಲಯ ಬಳಸಿದಾಗ ಇಂತಹ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ.

ಮುನ್ನೆಚ್ಚರಿಕೆಯ ಕ್ರಮಗಳು

ಮುನ್ನೆಚ್ಚರಿಕೆಯ ಕ್ರಮಗಳು

ನೀರು

ನೀರು ಜೀವ ಜಲ. ನಮ್ಮ ದೇಹಕ್ಕೆ ಅತಿ ಮುಖ್ಯವಾಗಿ ಬೇಕಾದ ಪದಾರ್ಥ ನೀರು. ಅದರಲ್ಲೂ ಬೇಸಿಗೆಯಲ್ಲಿ ಬೆವರಿನ ರೂಪದಲ್ಲಿ ಹಾಗೂ ದೇಹದ ಉಷ್ಣಾಂಶ ಕಾಪಾಡಿಕೊಳ್ಳುವಲ್ಲಿ ನಮ್ಮ ದೇಹವು ಬಹಳಷ್ಟು ನೀರನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಅದನ್ನು ಸರಿದೂಗಿಸಲು ನಾವು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಬಾಯಾರಿದ ಮೇಲೆ ಅಲ್ಲದೆ, ಬಾಯಾರುವ ಮುನ್ನ ನೀರನ್ನು ಸೇವಿಸುತ್ತಿರಿ. ನಾವು ಕಛೇರಿಯಲ್ಲಿ ಎ ಸಿ ಯಲ್ಲಿ ಕೂತು ಅಥವಾ ಮನೆಯೊಳಗೆ ಇದ್ದು ನಮಗೆ ಬಾಯಾರಿಕೆ ಆಗದೆ ಇದ್ದರೂ ಸಹ, ನೀರು ಕುಡಿಯುವುದನ್ನು ನಾವು ನಮ್ಮ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

ಎಳನೀರು

ಎಳನೀರು

ಎಳನೀರು ನಮ್ಮ ಕಲ್ಪವೃಕ್ಷ ನಮಗಾಗಿ ಕೊಡುವ ಕೊಡುಗೆ. ಎಳನೀರು ಉರಿಮೂತ್ರ ಹಾಗೂ ಮೂತ್ರ ಕೋಶದ ಸೋಂಕಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ನಮಗೆ ಸುಲಭವಾಗಿ ಸಿಗುವ ಎಳನೀರನ್ನು ಬೇಸಿಗೆಯಲ್ಲಿ ದಿನಕ್ಕೊಮ್ಮೆ ಆದರೂ ತಪ್ಪದೆ ಸೇವಿಸಿ. ಎಳನೀರು ನಮ್ಮ ಮೂತ್ರವನ್ನು ಶುದ್ದಿ ಮಾಡುತ್ತದೆ. ಹಾಗೆಯೇ, ಎಳನೀರು ಕುಡಿದಾಗ ನಾವು ಹೆಚ್ಚು ಮೂತ್ರ ವಿಸರ್ಜಿಸುವುದರಿಂದ ಸೋಕು ಕೂಡ ಕಡಿಮೆಯಾಗುತ್ತದೆ.

ಕ್ರಾನ್ ಬೆರ್ರಿ ಜ್ಯೂಸ್

ಕ್ರಾನ್ ಬೆರ್ರಿ ಜ್ಯೂಸ್

ಈಗ ಬಹಳ ಜನಪ್ರಿಯ ಈ ಕ್ರಾನ್ ಬೆರ್ರಿ ಜ್ಯೂಸ್. ಎಲ್ಲ ಹಣ್ಣಿನ ರಸದ ಅಂಗಡಿಗಳಲ್ಲಿ ಸಿಗುತ್ತದೆ. ಹಾಗೆಯೇ ದೊಡ್ಡ ದೊಡ್ಡ ಕಂಪನಿಗಳು ಪ್ಯಾಕ್ ಮಾಡಿ ಮಾರುತ್ತಾರೆ. ಈ ಹಣ್ಣಿನ ರಸವು ಉರಿ ಮೂತ್ರದ ಸಮಸ್ಯೆಗೆ ಬಹಳ ಉತ್ತಮ ಪರಿಹಾರ. ಮುನ್ನೆಚ್ಚರಿಕೆ ಕ್ರಮವಾಗಿ ನಿಯಮಿತವಾಗಿ ಸೇವಿಸುವುದು ಒಳ್ಳೆಯದು. ಈ ಹಣ್ಣಿನಲ್ಲಿರುವ ಅನೇಕಾನೇಕ ಪೋಷಕಾಂಶಗಳು ವಿಟಮಿನ್ಗಳು ನಮ್ಮ ದೇಹಕ್ಕೆ ಬಹಳವೇ ಒಳ್ಳೆಯದು. ಈ ರಸ ದೇಹಕ್ಕೆ ತಂಪನ್ನು ಕೂಡ ನೀಡುತ್ತದೆ.

ಬಾರ್ಲಿ ಗಂಜಿ

ಬಾರ್ಲಿ ಗಂಜಿ

ಬಾರ್ಲಿ ಗಂಜಿಯು ದೇಹದ ಉಷ್ಣಾಂಶವನ್ನು ಮಾಂತ್ರಿಕವಾಗಿ ನಿಯಂತ್ರಿಸುತ್ತದೆ. ಇದು ನಮ್ಮ ದೇಹಕ್ಕೆ ಬಹಳ ತಂಪು. ಬಾರ್ಲಿ ನಮಗೆ ಬೇಕಾದ ನಾರಿನ ಅಂಶವನ್ನು ಕೂಡ ನೀಡುತ್ತದೆ. ಬಾರ್ಲಿಯನ್ನು ನೆನೆಸಿ ನಂತರ ಕುದಿಸಿ ಗಂಜಿ ಮಾಡಿಕೊಂಡು ಕುಡಿಯುವುದರಿಂದ ಮುಕ್ರ ಕೋಶದ ಸೋಂಕು ಕಡಿಮೆಯಾಗುತ್ತದೆ. ದಿನ ನಿತ್ಯ ಸೇವಿಸುವುದರಿಂದ ಸೋಕು ತಗಲುವ ಸಾದ್ಯತೆಗಳೇ ಕಡಿಮೆ ಆಗುತ್ತವೆ.

ಶುಭ್ರ ಒಳ ಉಡುಪುಗಳು

ಶುಭ್ರ ಒಳ ಉಡುಪುಗಳು

ನಾವು ಶುಭ್ರತೆಯನ್ನು ನಮ್ಮ ಅಭ್ಯಾಸ ಮಾಡಿಕೊಳ್ಳಬೇಕು. ದಿನ ನಿತ್ಯ ಒಳ ಉಡುಪುಗಳನ್ನು ಬದಲಿಸಬೇಕು. ಬಳಸಿದ ಒಳ ಉಡುಪುಗಳನ್ನು ಚೆನ್ನಾಗಿ ಒಗೆದು ಆದಷ್ಟು ಬಿಸಿಲಿನಲ್ಲಿ ಒಣಗಿಸಿಡಬೇಕು. ಒಳ್ಳೆಯ ಹತ್ತಿಯಿಂದ ತಯಾರಿಸಿದ ಒಳ ಉಡುಪುಗಳು ದೇಹಕ್ಕೆ ಹಿತಕರ.

ಮುಟ್ಟಿನ ಸಮಯ

ಮುಟ್ಟಿನ ಸಮಯ

ಹೆಂಗಸರು ಮುಟ್ಟಿನ ಸಮಯದಲ್ಲಿ ಆದಷ್ಟು ನಿಯಮಿತವಾಗಿ ಪ್ಯಾಡ್ ಬದಲಿಸಬೇಕು. ತೇವಾಂಶ ಹೆಚ್ಚಾಗದಂತೆ ನೋಡಿಕೊಳ್ಳುವುದು ಕೂಡ ಮುಖ್ಯ. ಇವೆ ಅಲ್ಲದೆ ನಮ್ಮ ದೇಹಕ್ಕೆ ಬೇಕಾದ ತಂಪನ್ನು ನೀಡುವ ಅನೇಕ ಇತರೆ ಮಾರ್ಗಗಳನ್ನು ಅನುಸರಿಸಬಹುದು. ಇಂತಹ ಮುನ್ನೆಚ್ಚರಿಕೆ ಕ್ರಮಗಳು ನಮಗೆ ದೊಡ್ಡ ರೀತಿಯಲ್ಲಿ ನೋವು ಅನುಭವಿಸುವುದನ್ನು ತಪ್ಪಿಸುತ್ತವೆ. ಆದರೂ ಕೆಲವು ಬಾರಿ ಮನೆ ಔಷಧಿಗೆ ಮೀರಿದ ಸೋಂಕು ಆಗಿರುತ್ತದೆ. ಅಂತಹ ಸಮಯದಲ್ಲಿ ತಕ್ಷಣ ವೈದ್ಯರನ್ನು ಕಾಣಿರಿ.

English summary

Home remedies for urine infection due to body heat

Urine infections symptoms start from stomach pain, burning sensation in the urinary tract, dribble urination and can also lead to more serious illnesses. Home remedies for urine infection can cure the problem if started at an early stge of the disease.
X
Desktop Bottom Promotion