For Quick Alerts
ALLOW NOTIFICATIONS  
For Daily Alerts

ನಾವು ಹೇಳುವ ಈ ಟಿಪ್ಸ್ ಅನುಸರಿಸಿದರೆ-ಖಂಡಿತ ಹೊಟ್ಟೆಯ ಬೊಜ್ಜು ಕರಗುತ್ತೆ!

ಸಪಾಟಾದ ಹೊಟ್ಟೆ ಎಲ್ಲರಿಗೂ ಬೇಕು. ಆದರೆ ಇದಕ್ಕಾಗಿ ರುಚಿಯನ್ನು ತ್ಯಾಗ ಮಾಡುವುದು, ವ್ಯಾಯಾಮ ಮಾಡುವುದು ಮಾತ್ರ ಯಾರಿಗೂ ಬೇಕಾಗಿಲ್ಲ. ಆದ್ದರಿಂದ ಜಾಣತನದ ಕ್ರಮವೆಂದರೆ ನೈಸರ್ಗಿಕ ಟಿಪ್ಸ್ ಅನುಸರಿಸುವುದು....

|

ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ನಡುವಯಸ್ಸು ದಾಟುತ್ತಿದ್ದಂತೆಯೇ ಹೊಟ್ಟೆ ಮುಂದೆ ಬರುವುದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ಬೇರೆಲ್ಲಿ ಬೊಜ್ಜು ಬಂದರೂ ನಮಗೆ ಸಂಕಟವಾಗುವುದಿಲ್ಲ, ಆದರೆ ಹೊಟ್ಟೆ ಮುಂದೆ ಬಂದರೆ ಮಾತ್ರ ಅತೀವ ಸಂಕಟವಾಗುತ್ತದೆ.

ಇನ್ನು ಆರೋಗ್ಯಕ್ಕೆ ಮಾರಕವಾದ ಈ ಹೊಟ್ಟೆಯ ಬೊಜ್ಜನ್ನು ಕರಗಿಸಿ ಎಂದು ವೈದ್ಯರ ಸಹಿತ ಎಲ್ಲರೂ ಸಲಹೆ ನೀಡುವವರೇ. ಆದರೆ ಇದಕ್ಕೆ ಅನುಸರಿಸುವ ಮಾರ್ಗ ಯಾವುದು? ಬಹುತೇಕ ಸಮಯದ ಅಭಾವವಿರುವ ನಮಗೆ ವೈದ್ಯರು ತಿಳಿಸುವ ವ್ಯಾಯಮ, ಸರಿಯಾದ ನಿದ್ದೆ, ಆಹಾರ ಮೊದಲಾದವುಗಳು ಸಾಧಿಸಲು ಸಾಧ್ಯವೆಂದು ಅನ್ನಿಸುವುದೇ ಇಲ್ಲ...

ಇದೇ ಚಿಂತೆಯಲ್ಲಿ ದಿನ ಮುಂದೂಡುವ ನಮಗೆ ಹೊಟ್ಟೆ ಎಷ್ಟೋ ಮುಂದೆ ಬಂದಿರುವುದು ಗೊತ್ತೇ ಆಗಿರುವುದಿಲ್ಲ. ಆದರೆ ಇದಕ್ಕೊಂದು ಪರ್ಯಾಯ ವಿಧಾನವಿದೆ, ಅದೇ ನೈಸರ್ಗಿಕವಾದ ವಿಧಾನ, ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ಸರಳವಾಗಿ ಹೊಟ್ಟೆಯ ಬೊಜ್ಜು ಕರಗಿಸಬಹುದು....

ಲಿಂಬೆ ಹಣ್ಣಿನ ಜ್ಯೂಸ್

ಲಿಂಬೆ ಹಣ್ಣಿನ ಜ್ಯೂಸ್

*ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.

*ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ.

*ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು.

ಲಿಂಬೆ ಹಣ್ಣಿನ ಜ್ಯೂಸ್

ಲಿಂಬೆ ಹಣ್ಣಿನ ಜ್ಯೂಸ್

*ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ.

ಕನಿಷ್ಠ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.

*ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು.

ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಬೆಳ್ಳುಳ್ಳಿ ಎಸಳು

ಬೆಳ್ಳುಳ್ಳಿ ಎಸಳು

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ಎಂಟು ಲೋಟ ನೀರು ಕುಡಿಯಿರಿ

ಎಂಟು ಲೋಟ ನೀರು ಕುಡಿಯಿರಿ

ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು ಎಂಬ ಕಟ್ಟುಪಾಡುಗಳನ್ನೆಲ್ಲಬಿಟ್ಟುಬಿಡಿ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಇಲ್ಲದ ಕಾರಣ ಹೊಟ್ಟೆಯಿಂದ "ಬೇಕೇ ಬೇಕು ಊಟ ಬೇಕು" ಎಂಬ ಘೋಷಣೆಗಳು ಬರುತ್ತಲೇ ಇರುತ್ತವೆ. ಹೀಗೆ ಬಂದಾಗಲೆಲ್ಲಾ ಒಂದು ಲೋಟ ತಣ್ಣೀರು ಕುಡಿಯಿರಿ, ಇಡಿಯ ದಿನ ಕುಡಿಯುತ್ತಿರಿ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ.

ಗ್ರೀನ್ ಟೀ

ಗ್ರೀನ್ ಟೀ

ಉತ್ತಮ ಗುಣಮಟ್ಟದ ಹಸಿರು ಚಹಾ ಎಲೆಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಒಂದೆರಡು ನಿಮಿಷ ಕುದಿಸಬೇಕು.ನಂತರ ಈ ಹಸಿರು ಚಹಾವನ್ನು ಸೇವಿಸುವುದು. ಹೀಗೆ ಪ್ರತಿ ದಿನ ಎರಡು ಮೂರು ಸಲ ಮಾಡಿದಲ್ಲಿ ಕೆಲವೇ ದಿನಗಳಲ್ಲಿ ಪರಿಣಾಮವನ್ನು ಕಾಣಬಹುದು.

ಉಗುರುಬೆಚ್ಚಗಿನ ನೀರು

ಉಗುರುಬೆಚ್ಚಗಿನ ನೀರು

ಉಗುರುಬೆಚ್ಚಗಿನ ನೀರು ದೇಹದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸಬಲ್ಲದು. ನೀವು ಮಾಡಬೇಕಾದದು ಇಷ್ಟೇ ಊಟದ ಅರ್ಧ ಗಂಟೆ ಹಾಗೂ ಊಟದ ನಂತರ ಬಿಸಿ ನೀರನ್ನು ಕುಡಿಯಿರಿ. ಊಟದಾನಂತರ ತಕ್ಷಣವೇ ಎಂದೂ ನೀರು ಕುಡಿಯಬೇಡಿ.

ಶುಂಠಿ ಟೀ!

ಶುಂಠಿ ಟೀ!

ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ...

ಶುಂಠಿ ಟೀ ಮಾಡುವ ವಿಧಾನ

ಶುಂಠಿ ಟೀ ಮಾಡುವ ವಿಧಾನ

*ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ.

*ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

*ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ

*ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ.

*ಈ ಚಹಾ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ.

*ಒಂದು ದಿನಕ್ಕೆ ಕನಿಷ್ಠ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ.

English summary

Home remedies to lose belly fat fast and naturally at home

The majority of people on this world want to have a healthy weight. Most of them want to lose belly fat. Belly fat accumulates around the midsection which is a main concern for a lot of people. It not only causes an unattractive and ugly look but also it could be dangerous for your overall health
X
Desktop Bottom Promotion