ಕಿರಿಕಿರಿ ನೀಡುವ ಚಳಿಗಾಲದ ಶೀತಕ್ಕೆ ಪವರ್ ಫುಲ್ ಮನೆಮದ್ದು

ಚಳಿಗಾಲದಲ್ಲಿ ಕಾಡುವ ಶೀತದ ಸಮಸ್ಯೆಯಿಂದ ಪಾರಾಗಲು ಯಾವಾಗಲೂ ಮಾತ್ರೆಗಳನ್ನು ಸೇವಿಸುವುದು ಒಳ್ಳೆಯದಲ್ಲ, ಅದಕ್ಕೆಂದೇ ಪವರ್ ಫುಲ್ ಮನೆಮದ್ದನ್ನು ನೀಡಿದ್ದೇವೆ ಪ್ರಯತ್ನಿಸಿ ನೋಡಿ....

By: manu
Subscribe to Boldsky

ಅನಿರೀಕ್ಷಿತವಾಗಿ ವಾತಾವರಣದಲ್ಲಿ ಬದಲಾವಣೆಯಾದರೆ ಮೊತ್ತ ಮೊದಲು ಕಾಡುವ ತೊಂದರೆ ಎಂದರೆ ಶೀತ. ಕಟ್ಟಿದ ಮೂಗು, ಗಂಟಲ ಬೇನೆ, ಬದಲಾದ ಸ್ವರ ಮೊದಲಾದವು ಇದರೊಂದಿಗೆ ಸಿಗುವ ಉಚಿತ ಉಡುಗೊರೆಗಳು. ಚಿಕ್ಕದಾಗಿ ಕಾಡುವ ಜ್ವರ, ನಡುಕವೂ ಕೆಲವರಿಗೆ ಬೋನಸ್ ರೂಪದಲ್ಲಿ ಸಿಗಬಹುದು. ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?

ಹೆಚ್ಚಿನವರು ಇದಕ್ಕಾಗಿ ಸಾಮಾನ್ಯ ಪ್ಯಾರಾಸೆಟಮಾಲ್ ಮಾತ್ರೆಗಳನ್ನು ವೈದ್ಯರ ಅಪ್ಪಣೆಯಿಲ್ಲದೇ ಸೇವಿಸುತ್ತಾರೆ. ವೈದ್ಯರನ್ನು ಭೇಟಿಯಾಗಲು ಸಮಯ ಸಿಗದವರು ತಮಗೆ ತೋಚಿದ ಇನ್ನಾವುದೋ ಔಷಧಿಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಶೀತ ಇದ್ದಾಗ ಆದಷ್ಟು ಇಂತಹ ಆಹಾರಗಳಿಂದ ದೂರವಿರಿ

ಆದರೆ ಈ ತೊಂದರೆ ಇಂದು ನಿನ್ನೆಯದ್ದಲ್ಲ, ಹಿಂದಿನಿಂದಲೇ ಕಾಡುತ್ತಾ ಬಂದಿದೆ. ಹಾಗಿದ್ದಾಗ ನಮ್ಮ ಹಿರಿಯರು ಈ ತೊಂದರೆಯನ್ನು ಹೇಗೆ ಎದುರಿಸುತ್ತಿದ್ದರು? ಇದಕ್ಕೆ ಉತ್ತರವೆಂದರೆ ಮನೆಮದ್ದುಗಳು. ನಮ್ಮ ಹಿರಿಯರು ಕೆಲವಾರು ಮದ್ದುಗಳನ್ನು ಅನುಸರಿಸುತ್ತಾ ಬಂದಿದ್ದು ಇವೆಲ್ಲವೂ ಅತ್ಯಂತ ಸುರಕ್ಷಿತ ಹಾಗೂ ಫಲಪ್ರದವೆಂದು ಸಮಯವೇ ಸಾಕ್ಷಿ ನುಡಿದಿದೆ....

ಅಪ್ಪಟ ಶುದ್ಧ ಜೇನು

ಅಪ್ಪಟ ಶುದ್ಧ ಜೇನು

ಶೀತವನ್ನು ಕಡಿಮೆಗೊಳಿಸಲು ಉತ್ತಮವೆಂದರೆ ಜೇನು. ಇದರ ಜೊತೆಗೆ ಹಸಿಶುಂಠಿ ಸಹಾ ಶೀತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇವುಗಳಲ್ಲಿರುವ ಪ್ರತಿಜೀವಕ ಗುಣಗಳು ಶೀತದ ರೋಗಾಣುಗಳನ್ನು ಕೊಲ್ಲಲು ಸಮರ್ಥವಾಗಿವೆ.ಜೇನು ಬೆರೆಸಿದ ಬೀಟ್‌ರೂಟ್ ಜ್ಯೂಸ್ ಕುಡಿದರೆ ಹತ್ತಾರು ಲಾಭ!

ಹಸಿಶುಂಠಿ+ ಜೇನು

ಹಸಿಶುಂಠಿ+ ಜೇನು

ಹಸಿಶುಂಠಿಯನ್ನು ಜಜ್ಜಿ ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ಅರ್ಧ ಲೋಟ ಬಿಸಿ ಹಾಲಿನೊಂದಿಗೆ ಸೇವಿಸುವ ಮೂಲಕ ಶೀತ ತಕ್ಷಣವೇ ಕಡಿಮೆಯಾಗುತ್ತದೆ. ಅಲ್ಲದೇ ಕಟ್ಟಿಕೊಂಡಿದ್ದ ಮೂಗನ್ನು ತೆರೆದು ಶ್ವಾಸ ಎಳೆದುಕೊಳ್ಳುವುದನ್ನು ಸುಲಭವಾಗಿಸುತ್ತದೆ ಹಾಗೂ ಕಫವನ್ನು ನಿವಾರಿಸಿ ಗಂಟಲ ಬೇನೆಯನ್ನು ಕಡಿಮೆಗೊಳಿಸುತ್ತದೆ.

ಅರಿಶಿನ

ಅರಿಶಿನ

ಶೀತವನ್ನು ಕಡಿಮೆಗೊಳಿಸಲು ಇರುವ ಇನ್ನೊಂದು ಸಾಮಾಗ್ರಿ ಎಂದರೆ ಅರಿಶಿನ. ಇದನ್ನು ಒಂದಕ್ಕಿಂತ ಹೆಚ್ಚು ವಿಧದಲ್ಲಿ ಬಳಸಬಹುದು. ಅರಿಶಿನದ ಹಸಿ ಕೊಂಬುಗಳಿದ್ದರೆ ಒಂದು ಕೊಂಬನ್ನು ಕೆಂಡದ ಮೇಲೆ ಸುಟ್ಟು ಇದರಿಂದ ಹೊಮ್ಮುವ ಹೊಗೆಯನ್ನು ಮೂಗಿನಿಂದ ಎಳೆದುಕೊಳ್ಳುತ ಮೂಲಕ ತಕ್ಷಣದ ಪರಿಹಾರ ದೊರಕುತ್ತದೆ. ಅರಿಶಿನದ ಪುಡಿಯನ್ನು ಕೊಂಚ ಹಾಲಿನೊಂದಿಗೆ ಕುದಿಸಿ ಕುಡಿದು ಮಲಗುವ ಮೂಲಕವೂ ಉತ್ತಮವಾದ ಪರಿಹಾರ ದೊರಕುತ್ತದೆ.ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಗಂಟಲ ಬೇನೆ ಇದ್ದರೆ

ಗಂಟಲ ಬೇನೆ ಇದ್ದರೆ

ಗಂಟಲ ಬೇನೆಗೆ ಬೆಲ್ಲ ಉತ್ತಮವ ಪರಿಹಾರವಾಗಿದೆ. ಕೊಂಚ ನೀರಿನಲ್ಲಿ ಕೆಲವು ಕಾಳುಮೆಣಸುಗಳನ್ನು ಅಥವಾ ಕರಿಮೆಣಸನ್ನು ಸೇರಿಸಿ ಕುದಿಸಿ. ಬಳಿಕ ಕೊಂಚ ಜೀರಿಗೆ ಹಾಕಿ ಪರಿಮಳ ಬೀರತೊಡಗಿದ ಬಳಿಕ ಕೆಲವು ತುಂಡು ಬೆಲ್ಲವನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಯುವುದನ್ನು ಮುಂದುವರೆಸಿ.ಹಾಲಿಗೆ ಬೆಲ್ಲ ಹಾಕಿ ಕುಡಿಯಿರಿ, ಆರೋಗ್ಯ ಪಡೆಯಿರಿ

ಗಂಟಲ ಬೇನೆ ಇದ್ದರೆ

ಗಂಟಲ ಬೇನೆ ಇದ್ದರೆ

ಬೆಲ್ಲ ಪೂರ್ಣವಾಗಿ ಕರಗುವವರೆಗೆ ಕುದಿಸಿ. ಈ ಪಾನೀಯವನ್ನು ಕುಡಿಯುವ ಮೂಲಕ ಗಂಟಲ ಬೇನೆ ಕಡಿಮೆಯಾಗುತ್ತದೆ ಹಾಗೂ ಎದೆಯಲ್ಲಿ ಕಟ್ಟಿಕೊಂಡಿದ್ದ ಕಫವನ್ನು ನಿವಾರಿಸಿ ಕೆಲವಾರು ಸೋಂಕುಗಳಿಂದ ರಕ್ಷಿಸುತ್ತದೆ.ಗಂಟಲು ನೋವಿನ ಕಿರಿಕಿರಿಯೇ? ಹಾಗಾದರೆ ಇನ್ನು ಚಿಂತೆ ಬಿಡಿ!

ಮಸಾಲಾ ಟೀ

ಮಸಾಲಾ ಟೀ

ಒಂದು ವೇಳೆ ನೀವು ಚಹಾಪ್ರಿಯರಾಗಿದ್ದರೆ ಮಸಾಲಾ ಟೀ ನಿಮಗೆ ಇಷ್ಟವಾಗಬಹುದು. ನಿಮ್ಮ ನೆಚ್ಚಿನ ಟೀ ತಯಾರಿಸುವಾಗ ಇದರ ಜೊತೆಗೆ ನಿಮಗೆ ಇಷ್ಟವಾಗುವ ಯಾವುದೇ ಮಸಾಲೆ ಪದಾರ್ಥಗಳನ್ನು ಬೆರೆಸಿ.

ಮಸಾಲಾ ಟೀ

ಮಸಾಲಾ ಟೀ

ಲವಂಗ, ಚೆಕ್ಕೆ, ಒಣ ಶುಂಠಿ, ಹಸಿಶುಂಠಿ, ಕಾಳುಮೆಣಸು ಇತ್ಯಾದಿಗಳನ್ನು ಬೆರೆಸಿ ಮುಚ್ಚಳ ಮುಚ್ಚಿ ಕುದಿಸಿ ಬಳಿಕ ಸೋಸಿ ಹಾಲಿಲ್ಲದೇ ಸೇವಿಸಿ. ಸಕ್ಕರೆ ಬದಲಿಗೆ ಬೆಲ್ಲ ಬೆರೆಸಿ. ಅಥವಾ ಜೇನನ್ನೂ ಬೆರೆಸಿ ಕುಡಿಯಬಹುದು.ಕೆಮ್ಮು ನೆಗಡಿ ಇದ್ರೆ ಚೆಕ್ಕೆ ಮಸಾಲಾ ಟೀ ಕುಡೀರಿ

Story first published: Thursday, January 12, 2017, 10:44 [IST]
English summary

Home Remedies To Fight Cold fast during winter

Here are the best home remedies that can work wonders for you. Try these remedies at home to fight cold fast.
Please Wait while comments are loading...
Subscribe Newsletter