ನುಗ್ಗೆ ಸೊಪ್ಪು+ಅರಿಶಿನ- ಬರೋಬ್ಬರಿ ಏಳು ರೋಗಕ್ಕೆ ಮದ್ದು....

ಕುಕ್ಕರ್‌ನಲ್ಲಿ ಸ್ವಲ್ಪ ನುಗ್ಗೆ ಎಲೆಗಳನ್ನು ಬೇಯಿಸಿ ಮೃದುವಾದ ಬಳಿಕ ಈ ಎಲೆಗಳಿಗೆ ಎರಡು ಚಿಕ್ಕಚಮಚ ಅರಿಶಿನ ಪುಡಿ ಸೇರಿಸಿ ಪ್ರತಿದಿನ ಮುಂಜಾನೆಯ ಉಪಾಹಾರದ ಬಳಿಕ ಸತತವಾಗಿ ಎರಡು ತಿಂಗಳುಗಳ ಕಾಲ ಸೇವಿಸಿದರೆ ಈ ಪ್ರಯೋಜನಗಳನ್ನು ಪಡೆಯಬಹುದು.

By: Arshad
Subscribe to Boldsky

ನಮ್ಮ ಆರೋಗ್ಯವನ್ನು ಕಾಪಾಡಲು ನಿಸರ್ಗ ನಮ್ಮ ಕೈತೋಟದಲ್ಲಿಯೇ ಹಲವಾರು ಔಷಧೀಯ ಸಸ್ಯಗಳನ್ನು ಕೊಡುಗೆಯಾಗಿ ನೀಡಿದೆ. ಸಾಂಬಾರ್‌ನ ಅವಿಭಾಜ್ಯ ಅಂಗವಾಗಿರುವ ನುಗ್ಗೇಕಾಯಿಯನ್ನು ಇಷ್ಟಪಡುವ ನಾವು ನುಗ್ಗೆಸೊಪ್ಪನ್ನು ಮರೆತೇ ಬಿಟ್ಟಿದ್ದೇವೆ. ನುಗ್ಗೆಕಾಯಿ ಎಲೆಗಳ ಸೌಂದರ್ಯವರ್ಧಕ ಗುಣಗಳು

ಈ ನುಗ್ಗೆಯ ಕೆಲವು ಎಲೆಗಳನ್ನು ಅರಿಶಿನದ ಜೊತೆಗೆ ಸೇವಿಸಿದರೆ ಕನಿಷ್ಠ ಏಳು ಆರೋಗ್ಯಕರ ಪ್ರಯೋಜನಗಳಿವೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಕುಕ್ಕರ್‌ನಲ್ಲಿ ಸ್ವಲ್ಪ ಎಲೆಗಳನ್ನು (ಸರಿ ಸುಮಾರು ಹತ್ತು ಎಲೆಗಳು) ಬೇಯಿಸಿ ಮೃದುವಾದ ಬಳಿಕ ಈ ಎಲೆಗಳಿಗೆ ಎರಡು ಚಿಕ್ಕಚಮಚ ಅರಿಶಿನ ಪುಡಿ ಸೇರಿಸಿ ಪ್ರತಿದಿನ ಮುಂಜಾನೆಯ ಉಪಾಹಾರದ ಬಳಿಕ ಸತತವಾಗಿ ಎರಡು ತಿಂಗಳುಗಳ ಕಾಲ ಸೇವಿಸಿದರೆ ಈ ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಈ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ...

ಮಧುಮೇಹವನ್ನು ಗುಣಪಡಿಸುತ್ತದೆ

ಮಧುಮೇಹವನ್ನು ಗುಣಪಡಿಸುತ್ತದೆ

ನುಗ್ಗೆಯ ಎಲೆಗಳಲ್ಲಿ ರೈಬೋಫ್ಲೇವಿನ್ ಎಂಬ ಪೋಷಕಾಂಶವಿದ್ದು ಇದು ರಕ್ತದಲ್ಲಿ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ತನ್ಮೂಲಕ ಮಧುಮೇಹದ ಪರಿಣಾಮಗಳನ್ನು ಸಮರ್ಥವಾಗಿ ನಿಭಾಯಿಸಿ ಮಧುಮೇಹ ತಹಬಂದಿಗೆ ಬರಲು ನೆರವಾಗುತ್ತದೆ.ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ- ನುಗ್ಗೆ ಸೊಪ್ಪು

ಗರ್ಭದಲ್ಲಿರುವ ಮಗುವಿನ ಆರೋಗ್ಯ ಉತ್ತಮಗೊಳ್ಳುತ್ತದೆ

ಗರ್ಭದಲ್ಲಿರುವ ಮಗುವಿನ ಆರೋಗ್ಯ ಉತ್ತಮಗೊಳ್ಳುತ್ತದೆ

ಗರ್ಭಿಣಿಯರು ಈ ವಿಧಾನವನ್ನು ಅನುಸರಿಸುವ ಮೂಲಕ ಈ ಎಲೆಗಳಲ್ಲಿರುವ ಫೋಲೇಟ್ ಎಂಬ ಪೋಷಕಾಂಶ ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆಗೆ ಹೆಚ್ಚಿನ ನೆರವು ನೀಡುವ ಮೂಲಕ ಆರೋಗ್ಯವಂತ ಮಗುವನ್ನು ಪಡೆಯಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಅರಿಶಿನ ಪುಡಿ ಮತ್ತು ನುಗ್ಗೆಯ ಎಲೆಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುವ ಮೂಲಕ ಹಲವು ರೋಗಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಕರುಳಿನಲ್ಲಿ ತ್ಯಾಜ್ಯಗಳನ್ನು ಸಡಿಲಿಸಿ ಸುಲಭವಾಗಿ ಹೊರಹಾಕಲು ನೆರವಾಗುತ್ತದೆ. ತನ್ಮೂಲಕ ಮಲಬದ್ದತೆಯ ತೊಂದರೆಯನ್ನು ನಿವಾರಿಸುತ್ತದೆ.

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ

ಈ ಎಲೆಗಳಲ್ಲಿರುವ ಕಿಣ್ವಗಳು ಹೊಟ್ಟೆಯಲ್ಲಿ ಜೀರ್ಣಗೊಳ್ಳುವ ವೇಳೆ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಹೀರಿಕೊಳ್ಳದಂತೆ ನೆರವಾಗುವ ಮೂಲಕ ರಕ್ತದಲ್ಲಿ ಅಧಿಕವಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ಬರಲು ನೆರವಾಗುತ್ತದೆ.

ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ

ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ

ನೂರಾರು ವರ್ಷಗಳಿಂದ ಭಾರತದಲ್ಲಿ ನುಗ್ಗೆಸೊಪ್ಪನ್ನು ಕಾಮೋತ್ತೇಜಕವಾಗಿ ಬಳಸಲಾಗುತ್ತಿದೆ. ಈ ಸೊಪ್ಪಿನ ಸೇವನೆಯ ಬಳಿಕ ರಕ್ತಸಂಚಾರದಲ್ಲಿ ಹೆಚ್ಚಳವಾಗುವ ಮೂಲಕ ನಿಮಿರು ದೌರ್ಬಲ್ಯದ ತೊಂದರೆ ಕಡಿಮೆಯಾಗುತ್ತದೆ.

 ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಈ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಫ್ಲೇವನಾಯ್ಡುಗಳು ಕೆಳಹೊಟ್ಟೆ ಹಾಗೂ ಮೂತ್ರ ಕೋಶದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆಯ ನೋವನ್ನು ಕಡಿಮೆಗೊಳಿಸಲು ಸಾಧ್ಯ.
ಊತ-ಸ್ನಾಯು ಸೆಳೆತಕ್ಕೆ, ಹಿಡಿಯಷ್ಟು 'ನುಗ್ಗೆ ಸೊಪ್ಪು' ಸಾಕು!

Story first published: Wednesday, January 25, 2017, 10:19 [IST]
English summary

Health benefits of drumstick leaves

As we know, our kitchens and gardens hold a lot of natural ingredients that are powerful enough to prevent and treat numerous ailments. Did you know that the mixture of drumstick leaves and turmeric has over 7 health benefits? have a look
Please Wait while comments are loading...
Subscribe Newsletter