For Quick Alerts
ALLOW NOTIFICATIONS  
For Daily Alerts

ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ-ಖಂಡಿತ ತೂಕ ಕಡಿಮೆಯಾಗುತ್ತೆ

ರಾತ್ರಿ ಮಲಗುವ ಮುನ್ನ ಕುಡಿಯಬೇಕಾದ ಪೇಯಗಳು ರಾತ್ರಿಯ ಅನೈಚ್ಛಿಕ ಕಾರ್ಯಗಳನ್ನು ಚುರುಕಾಗಿಸಿ ಮಲಗಿದ್ದ ಸಮಯದಲ್ಲಿಯೇ ಹೆಚ್ಚಿನ ಕೊಬ್ಬು ಕರಗಿಸುತ್ತವೆ. ಅಲ್ಲದೇ ಸುಖನಿದ್ದೆ ಬರುವಂತೆ ಮಾಡಿ ದಿನದ ಹೊತ್ತಿನಲ್ಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು

By Manu
|

ನೈಸರ್ಗಿಕ ರೂಪದಲ್ಲಿಯೇ ತೂಕ ಇಳಿಸುವ ಇರಾದೆಯೇ? ಹಾಗಾದರೆ ನಿಮಗೆ ಮಾಹಿತಿಗಳ ಹಾಗೂ ಸಲಹೆಗಳ ಮಹಾಪೂರವೇ ಸಿಗುತ್ತಿದ್ದಿರಬಹುದು. ಯಾವ ಆಹಾರವನ್ನು ತಿನ್ನಬೇಕು, ಯಾವ ಆಹಾರವನ್ನು ತಿನ್ನಬಾರದು ಎಂಬ ಬಗ್ಗೆ ಅಪಾರ ಮಾಹಿತಿ ನಿಮಗೆ ಲಭ್ಯವಾಗುತ್ತದೆ.

ಆದರೆ ತೂಕ ಇಳಿಸಲು ಬೇಕಾಗಿರುವುದು ಆಹಾರಕ್ರಮದಲ್ಲಿ ಸೂಕ್ತ ಬದಲಾವಣೆ ಹಾಗೂ ಸಾಕಷ್ಟು ವ್ಯಾಯಾಮ. ಆಹಾರಕ್ರಮದಲ್ಲಿ ಬದಲಾವಣೆ ಅಷ್ಟು ಸುಲಭವಲ್ಲ. ಏಕೆಂದರೆ ನಮ್ಮ ನಾಲಿಗೆಗೆ ಅಭ್ಯಾಸವಾಗಿ ಹೋಗಿರುವ ಖಾದ್ಯಗಳನ್ನು ಬಿಡಲು ನಮಗೆ ಸಾಧ್ಯವಾಗದು. ಆದರೆ ಅಂತರ್ಜಾಲದಲ್ಲಿ ಜಾಲಾಡಿದರೆ ಇಂದು ಈ ನಿಟ್ಟಿನಲ್ಲಿಯೂ ಹಲವಾರು ಹೊಸರುಚಿಗಳು ಲಭ್ಯವಿವೆ. ತೂಕ ಇಳಿಸಿಕೊಳ್ಳಲು ಸಿಂಪಲ್ ಟ್ರಿಕ್ಸ್! ಪ್ರಯತ್ನಿಸಿ ನೋಡಿ...

ಆದರೆ ಕೇವಲ ಆಹಾರಕ್ರಮದ ಮೇಲೆ ಮಾತ್ರವೇ ಏಕೆ ಹೆಚ್ಚಿನ ಆದ್ಯತೆ ನೀಡಬೇಕು? ನಾವು ಕುಡಿಯುವ ದ್ರವಾಹಾರಗಳ ಬಗ್ಗೆ ಏಕೆ ಚಿಂತಿಸಬಾರದು? ಈ ಹೊಸ ಚಿಂತನೆ ನಿಮ್ಮಲ್ಲೂ ಮೂಡಿದರೆ ತೂಕ ಇಳಿಸಲು ಇನ್ನಷ್ಟು ಹೆಚ್ಚಿನ ಬಲ ಸಿಗುತ್ತದೆ. ನಮ್ಮ ದ್ರವಾಹಾರಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಕೆಲವಾರು ದ್ರವಾಹಾರಗಳನ್ನು ಇಂದು ಉಲ್ಲೇಖಿಸಲಾಗಿದ್ದು ಇವು ರುಚಿಯಾಗಿರುವ ಜೊತೆಗೇ ಕೊಬ್ಬನ್ನು ಕರಗಿಸುವ ಹಾಗೂ ಆರೋಗ್ಯವನ್ನು ವೃದ್ಧಿಸುವ ಕೆಲಸವನ್ನೂ ಮಾಡುತ್ತವೆ. ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ನಿಯಮಿತವಾಗಿ ಇವುಗಳನ್ನು ಸೇವಿಸುವ ಮೂಲಕ ಕ್ರಮೇಣವಾಗಿ ಸ್ಥೂಲಕಾಯದಿಂದ ಮುಕ್ತಿ ದೊರಕುತ್ತದೆ. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಕುಡಿಯಬೇಕಾದ ಪೇಯಗಳು ರಾತ್ರಿಯ ಅನೈಚ್ಛಿಕ ಕಾರ್ಯಗಳನ್ನು ಚುರುಕಾಗಿಸಿ ಮಲಗಿದ್ದ ಸಮಯದಲ್ಲಿಯೇ ಹೆಚ್ಚಿನ ಕೊಬ್ಬು ಕರಗಿಸುತ್ತವೆ. ಅಲ್ಲದೇ ಸುಖನಿದ್ದೆ ಬರುವಂತೆ ಮಾಡಿ ದಿನದ ಹೊತ್ತಿನಲ್ಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸ್ಥಿರವಾಗಿಸುತ್ತದೆ. ಬನ್ನಿ, ಈ ಪೇಯಗಳು ಯಾವುವು ಎಂಬುದನ್ನು ನೋಡೋಣ...


ಹಸಿರು ಟೀ

ಹಸಿರು ಟೀ

ಈ ಟೀ ಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಈ ಟೀ ಸೇವನೆಯಿಂದ ಜೀವರಾಸಾಯನಿಕ ಕ್ರಿಯೆ ತೀವ್ರಗೊಂಡು ಹೆಚ್ಚಿನ ಪ್ರಮಾಣದ ಕೊಬ್ಬು ಕರಗಲು ಸಾಧ್ಯವಾಗುತ್ತದೆ. ಆದರೆ ಅತ್ಯುತ್ತಮ ಪರಿಣಾಮ ಪಡೆಯಲು ಈ ಪೇಯವನ್ನು ರಾತ್ರಿ ಮಲಗುವ ಕನಿಷ್ಟ ಮೂರು ಘಂಟೆಗಳಿಗೂ ಮುನ್ನ ಸೇವಿಸಿ ಕುಡಿಯುವ ಮೂಲಕ ಸುಖವಾದ ನಿದ್ದೆ ಆವರಿಸುವುದು ಮಾತ್ರವಲ್ಲ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ನೆರವಾಗುತ್ತದೆ.ಅಲ್ಲದೇ ತೂಕವೂ ನೈಸರ್ಗಿಕ ರೂಪದಲ್ಲಿ ಕಡಿಮೆಯಾಗಲು ಸಾಧ್ಯವಾಗುತ್ತದೆ.ತ್ವರಿತ ತೂಕ ಇಳಿಕೆಗೆ ಹಸಿರು ಚಹಾವನ್ನು ಒಮ್ಮೆ ಪ್ರಯತ್ನಿಸಿ

ಹಾಲು

ಹಾಲು

ಹಾಲಿನಲ್ಲಿರುವ ಟ್ರಿಫ್ಟೋಫ್ಯಾನ್ ಎಂಬ ಪೋಷಕಾಂಶ ಮತ್ತು ಕ್ಯಾಲ್ಸಿಯಂ ಸುಖನಿದ್ದೆಗೆ ನೆರವಾಗುತ್ತವೆ. ಸಂಶೋಧನೆಯ ಮೂಲಕ ಖಚಿತಪಡಿಸಿರುವ ಮಾಹಿತಿಯ ಪ್ರಕಾರ ದೇಹದಲ್ಲಿ ನಿದ್ದೆಯ ಸಮಯದಲ್ಲಿ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಂಡು ಹೆಚ್ಚಿನ ಕೊಬ್ಬು ಕರಗಲು ಸಾಧ್ಯವಾಗುತ್ತದೆ. ರಾತ್ರಿ ಸುಖವಾದ ನಿದ್ದೆ ಬೇಕು ಹಾಗೂ ತೂಕವೂ ಇಳಿಯಬೇಕು ಎಂದಿದ್ದರೆ ಮಲಗುವ ಕೊಂಚ ಹೊತ್ತಿನ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿದು ಕೊಂಚವೇ ನಡೆದಾಡಿ ಬಳಿಕ ಮಲಗುವ ಮೂಲಕ ಇದು ಸಾಧ್ಯವಾಗುತ್ತದೆ.

ಕ್ಯಾಮೋಮೈಲ್ ಟೀ

ಕ್ಯಾಮೋಮೈಲ್ ಟೀ

ನಾವೆಲ್ಲರೂ ತಿಳಿದಿರುವಂತೆ ಕ್ಯಾಮೋಮೈಲ್ ಟೀ ಸೇವನೆಯಿಂದ ಉತ್ತಮವ ನಿದ್ದೆ ಆವರಿಸುತ್ತದೆ. ಸಂಶೋಧನೆಗಳಲ್ಲಿ ಕಂಡುಕೊಂಡಿರುವಂತೆ ಒಂದು ಕಪ್ ಕ್ಯಾಮೋಮೈಲ್ ಟೀ ಕುಡಿದಾದ ಬಳಿಕ ದೇಹದ ತಾಪಮಾನ ಕೊಂಚವೇ ಏರುತ್ತದೆ. ಈ ಬಿಸಿ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಆದ್ದರಿಂದ ಪ್ರತಿದಿನ ಮಲಗುವ ಕೊಂಚ ಹೊತ್ತಿನ ಮುನ್ನ ಒಂದು ಲೋಟ ಕ್ಯಾಮೋಮೈಲ್ ಟೀ ಕುಡಿದು ಒಂದಿಷ್ಟು ಅಡ್ಡಾಡಿ ಬಳಿಕ ಮಲಗುವ ಮೂಲಕ ಸುಖನಿದ್ದೆಯೂ ಆವರಿಸುತ್ತದೆ, ಕೊಬ್ಬೂ ಕರಗುತ್ತದೆ.

ಸೋಯಾ ಹಾಲು

ಸೋಯಾ ಹಾಲು

ಸೋಯಾಮಿಲ್ಕ್ ಅಥವಾ ಸೋಯಾ ಅವರೆಯ ಹಾಲಿನ ಸೇವನೆಯೂ ಕೊಬ್ಬು ಕರಗಿಸಲು ಉತ್ತಮವಾದ ಆಹಾರವಾಗಿದೆ. ಮಲಗುವ ಮುನ್ನ ಸೋಯಾ ಹಾಲು ಅಥವಾ ಸೋಯಾ ಅವರೆಯ ಹಿಟ್ಟಿನಿಂದ ತಯಾರಿಸಿದ ಪ್ರೋಟೀನ್ ಪೌಡರ್ ಸೇವಿಸಿ ಕುಡಿಯುವ ಮೂಲಕ ಸುಖವಾದ ನಿದ್ದೆ ಬರುವುದು ಮಾತ್ರವಲ್ಲ ಸೊಂಟದ ಸುತ್ತ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸಲು ಸಹಾ ಸಾಧ್ಯವಾಗುತ್ತದೆ. ಸೋಯಾದಲ್ಲಿಯೂ ಟ್ರಿಪ್ಟೋಫ್ಯಾನ್ ಮತ್ತು ಮೆಲಟೋನಿನ್ ಎಂಬ ಪೋಷಕಾಂಶಗಳಿದ್ದು ಸಂಶೋಧನೆಗಳ ಮೂಲಕ ಇವು ಕೊಬ್ಬನ್ನು ಶೀಘ್ರವಾಗಿ ಕರಗಿಸುತ್ತವೆ ಎಂದು ಕಂಡುಕೊಳ್ಳಲಾಗಿದೆ.

English summary

Have These Bedtime Beverages If You Want To Lose Weight

Here is a list of some refreshing beverages that are not only delicious and healthful, but also assist you in burning your fats and become more slender in the long run. These are some bedtime beverages that will help you to burn away your fat while you are sleeping.
X
Desktop Bottom Promotion