For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಕ್ಯಾನ್ಸರ್: ನೀವು ತಿಳಿಯಲೇಬೇಕಾದ ಸತ್ಯಾಸತ್ಯತೆ

ಹೊಟ್ಟೆಯ ಕ್ಯಾನ್ಸರ್ ಕೂಡ ಅಪಾಯಕಾರಿಯಾದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಪ್ರಾರಂಭಿಕ ಹಂತವನ್ನು ಹೊಟ್ಟೆನೋವಿನ ಇತರ ಕಾರಣಗಳಿರಬಹುದೆಂದು ತಿಳಿದು ಚಿಕಿತ್ಸೆ ನೀಡುವ ಮೂಲಕ ಅಮೂಲ್ಯವಾದ ಸಮಯವನ್ನು ಕಳೆದು ಉಲ್ಬಣಾವಸ್ಥೆ ತಲುಪಲು ಸಾಧ್ಯವಾಗಬಹುದು

By Manu
|

ಕ್ಯಾನ್ಸರ್ ಎಂದರೆ ಮರಣದ ಮುನ್ನಾರೂಪವೆಂದೇ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ಕ್ಯಾನ್ಸರ್ ಹಂತ ಹಂತಗಳಲ್ಲಿ ಆವರಿಸುತ್ತಾ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಪ್ರಾರಂಭಿಕ ಹಂತದಲ್ಲಿ ಈ ರೋಗ ಇರುವುದು ಖಚಿತವಾದರೆ ಸೂಕ್ತ ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದು. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಹೊಟ್ಟೆಯ ಕ್ಯಾನ್ಸರ್ ಸಹಾ ಒಂದು ಅಪಾಯಕಾರಿಯಾದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಪ್ರಾರಂಭಿಕ ಹಂತವನ್ನು ಹೊಟ್ಟೆನೋವಿನ ಇತರ ಕಾರಣಗಳಿರಬಹುದೆಂದು ತಿಳಿದು ಚಿಕಿತ್ಸೆ ನೀಡುವ ಮೂಲಕ ಅಮೂಲ್ಯವಾದ ಸಮಯವನ್ನು ಕಳೆದು ಉಲ್ಬಣಾವಸ್ಥೆ ತಲುಪಲು ಸಾಧ್ಯವಾಗಬಹುದು. ಹೊಟ್ಟೆಯ ಕ್ಯಾನ್ಸರ್ ಮೊದಲು ಹೊಟ್ಟೆಯ ಒಳಪದರದ ಒಳಗೆ ಪ್ರಾರಂಭಗೊಂಡು ಗಡ್ಡೆಯ ರೂಪ ಪಡೆದು ನಂತರ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ

ಹೊಟ್ಟೆಯ ಒಳಪದರ ಅತ್ಯಂತ ಆಮ್ಲೀಯವಾಗಿದ್ದು ಈ ಪದರವೂ ಸತತವಾಗಿ ಹೊಸದಾಗಿ ರೂಪುಗೊಳ್ಳುತ್ತಾ ಇರುತ್ತದೆ. ಈ ಪದರದ ಜೀವಕೋಶಗಳು ಈ ಆಮ್ಲೀಯ ವಾತಾವರಣದಲ್ಲಿಯೇ ಅನಿಯಂತ್ರಿತವಾಗಿ ವೃದ್ಧಿಗೊಂಡು ಕ್ಯಾನ್ಸರ್‌ಗೆ ತಿರುಗಬೇಕಾದರೆ ಯಾವ ಕಾರಣಗಳಿವೆ ಎಂಬುದನ್ನು ಇದುವರೆಗೆ ಸ್ಪಷ್ಟವಾಗಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ.....


ಮಾಹಿತಿ #1

ಮಾಹಿತಿ #1

ಒಂದು ವೇಳೆ ನೀವು ಅತಿ ಹೆಚ್ಚು ಧೂಮಪಾನ ಮಾಡುವ ವ್ಯಕ್ತಿಯಾಗಿದ್ದರೆ ನಿಮ್ಮ ಹೊಟ್ಟೆಯ ಒಳಗೆ ಉರಿಯೂತವಾಗುವ ಸಾಧ್ಯತೆ ಅತಿ ಹೆಚ್ಚಾಗಿದೆ. ಒಂದು ವೇಳೆ ಹೊಟ್ಟೆಯಲ್ಲಿ ಉರಿ ಆಗಾಗ ಬರುತ್ತಿದ್ದರೆ ಇದಕ್ಕೆ ಆಮ್ಲೀಯತೆಯ ಹೊರತಾಗಿ ಕ್ಯಾನ್ಸರ್‌ನ ಸಾಧ್ಯತೆಯೂ ಇಲ್ಲದಿಲ್ಲ. ತಕ್ಷಣ ತಪಾಸಣೆಗೊಳಪಡುವುದು ಅವಶ್ಯಕ.

ಮಾಹಿತಿ #2

ಮಾಹಿತಿ #2

ಒಂದು ವೇಳೆ ಕುಟುಂಬದ ಹಿರಿಯರಲ್ಲಿಯೂ ಈ ಕ್ಯಾನ್ಸರ್ ಇದ್ದ ಹಿನ್ನಲೆ ಇದ್ದರೆ ಈ ಕಾಯಿಲೆ ಕುಟುಂಬದ ಸದಸ್ಯರಿಗೆ ಬರುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಕಾಯಿಲೆ ಅನುವಂಶಿಯವಾಗಿ ಬರುವ ಸಾಧ್ಯತೆ ಹೆಚ್ಚು.

ಮಾಹಿತಿ #3

ಮಾಹಿತಿ #3

ಕೆಲವು ಬಗೆಯ ಬ್ಯಾಕ್ಟೀರಿಯಾಗಳು (ಉದಾಹರಣೆಗೆ H. Pylori) ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗುತ್ತವೆ. ಅಸಮರ್ಪಕ ಆಹಾರಕ್ರಮ, ಸ್ಥೂಲಕಾಯ ಮೊದಲಾದವೂ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದು.

ಮಾಹಿತಿ #4

ಮಾಹಿತಿ #4

ಹೊಟ್ಟೆಯ ಕ್ಯಾನ್ಸರ್‌ನ ಪ್ರಾರಂಭಿಕ ಹಂತದಲ್ಲಿ ಆಹಾರವನ್ನು ನುಂಗುವಾಗ ಕಷ್ಟವಾಗುವುದು ಮತ್ತು ಹೊಟ್ಟೆಯಲ್ಲಿ ತೀಕ್ಷ್ಣವಾದ ನೋವಾಗುವುದು ಕಂಡುಬರುತ್ತದೆ.

ಮಾಹಿತಿ #5

ಮಾಹಿತಿ #5

ಕೆಲವೊಮ್ಮೆ ಯಾವುದೇ ಕಾರಣವಿಲ್ಲದೇ, ತೂಕದಲ್ಲಿ ಭಾರೀ ಇಳಿಕೆಯಾಗುವುದು ಅತಿ ಕಡಿಮೆ ಊಟ ಮಾಡಿದರೂ ತುಂಬಾ ತಿಂದ ಬಳಿಕ ಆಗುವಂತೆ ಹೊಟ್ಟೆ ಉಬ್ಬರಿಸುವುದು ಸಹಾ ಕ್ಯಾನ್ಸರ್‌ನ ಪ್ರಾರಂಭಿಕ ಹಂತದ ಲಕ್ಷಣಗಳಾಗಿವೆ.

ಮಾಹಿತಿ #6

ಮಾಹಿತಿ #6

ಕೆಲವು ಸಂದರ್ಭಗಳಲ್ಲಿ ಕೆಲವು ದಿನಗಳವರೆಗೆ ಸತತವಾಗಿ ವಾಂತಿಯೂ ಆಗಬಹುದು.

ಮಾಹಿತಿ #7

ಮಾಹಿತಿ #7

ಒಂದು ವೇಳೆ ವಾಂತಿ ಅಥವಾ ಮಲದಲ್ಲಿ ರಕ್ತ ಕಂಡುಬಂದರೆ ಇದು ನಿಮ್ಮ ಜೀರ್ಣವ್ಯವಸ್ಥೆಯಲ್ಲಿ ಏನೋ ತೊಂದರೆ ಇರುವುದನ್ನು ಸೂಚಿಸುತ್ತದೆ. ತಕ್ಷಣ ವೈದ್ಯರನ್ನು ಭೇಟಿಯಾಗಿ ತಪಾಸಣೆಗೊಳಪಡುವುದು ಅಗತ್ಯವಾಗಿದೆ.

English summary

Facts About Stomach Cancer

Stomach cancer is dangerous. And the problem with it is that it doesn't show any symptoms in the starting stage. And when it shows symptoms, you might even think that it is just a minor digestive issue. Actually, stomach cancer is nothing but formation of cancer cells in your stomach. It could first occur in the stomach's inner lining. When the cells develop into a tumour, the situation worsens.
X
Desktop Bottom Promotion