For Quick Alerts
ALLOW NOTIFICATIONS  
For Daily Alerts

ನಿತ್ಯವೂ ಹಸಿ ಸೌತೆಕಾಯಿ ತಿನ್ನಿ, ಆರೋಗ್ಯಕ್ಕೆ ಬಹಳ ಒಳ್ಳೆಯದು....

ನಿತ್ಯವೂ ಒಂದು ಸೌತೆಕಾಯಿಯನ್ನು ಹಸಿಯಾಗಿ ತಿನ್ನುವ ಮೂಲಕ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು....

By Manu
|

ಸಾಲಾಡ್ ರೂಪದಲ್ಲಿ ಹಸಿಯಾಗಿ ತಿನ್ನಬಹುದಾದ ತರಕಾರಿಯಲ್ಲಿ ಸೌತೆಕಾಯಿ ಪ್ರಮುಖ ಆಯ್ಕೆಯಾಗಿದ್ದು ಇದರ ಸೇವನೆಯಿಂದ ಹಲವು ಕಾಯಿಲೆಗಳಿಗೆ ಚಿಕಿತ್ಸೆ ದೊರಕುತ್ತದೆ. ವಿಶೇಷವಾಗಿ ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಸುಲಭವಾಗಿ ಹೊರಹಾಕಲು ನೆರವಾಗುತ್ತವೆ. ಮುಖದ ಅಂದವನ್ನು ಹೆಚ್ಚಿಸುವ 'ಸೌತೆಕಾಯಿ' ಫೇಸ್ ಪ್ಯಾಕ್!

ಸಸ್ಯಶಾಸ್ತ್ರದ ಪ್ರಕಾರ ಸೌತೆಕಾಯಿಯೂ ಕುಂಬಳ, ಸಿಹಿಗುಂಬಳ ಮತ್ತು ಕಲ್ಲಂಗಡಿ ಹಣ್ಣುಗಳ ವರ್ಗಕ್ಕೆ ಸೇರಿದೆ. ಈ ಹಣ್ಣುಗಳಂತೆಯೇ ಸೌತೆಕಾಯಿಯಲ್ಲಿಯೂ ಇರುವುದು 95% ಅಪ್ಪಟ ನೀರು! ಆದ್ದರಿಂದ ಸೌತೆಕಾಯಿಯನ್ನು ತಿನ್ನುವುದು ಎಂದರೆ ನೀರನ್ನು ಕುಡಿದಂತೆ! ಇದು ದೇಹಕ್ಕೆ ಅಗತ್ಯವಾದ ನೀರನ್ನು ನೀಡುತ್ತದೆ. ದೇಹಕ್ಕೆ ತಂಪುಣಿಸುವ ಸೌತೆಕಾಯಿ ಜ್ಯೂಸ್‌ನ ಕರಾಮತ್ತೇನು?

ನಿತ್ಯವೂ ಒಂದು ಸೌತೆಕಾಯಿಯನ್ನು ಹಸಿಯಾಗಿ ತಿನ್ನುವ ಮೂಲಕ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದೆಂದು ಇದುವರೆಗೆ ನಿಮಗೆ ಗೊತ್ತಿತ್ತೇ? ಸೌತೆಯಲ್ಲಿ ನೀರಿನ ಹೊರತಾಗಿ ವಿಟಮಿನ್ ಕೆ, ಬಿ, ಸಿ, ತಾಮ್ರ, ಪೊಟ್ಯಾಶಿಯಂ ಹಾಗೂ ಮ್ಯಾಂಗನೀಸ್ ಹೇರಳವಾಗಿವೆ. ಇವು ಸುಲಭವಾಗಿ ಜೀರ್ಣಗೊಂದು ದೇಹದಲ್ಲಿ ಈ ಪೋಷಕಾಂಶಗಳ ಕೊರತೆಯನ್ನು ಸಮರ್ಥವಾಗಿ ನೀಗುತ್ತವೆ. ಬನ್ನಿ, ಸೌತೆಕಾಯಿಯನ್ನು ನಿತ್ಯವೂ ಸೇವಿಸುವುದರಿಂದ ಇನ್ನೂ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಪ್ರತಿದಿನವೂ ಸೌತೆಕಾಯಿಯೊಂದನ್ನು ತಿನ್ನುವ ಮೂಲಕ ಒಟ್ಟಾರೆ ಆರೋಗ್ಯ ಉತ್ತಮವಾಗುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆಯೂ ಚುರುಕುಗೊಳ್ಳುತ್ತದೆ. ಇದರಲ್ಲಿರುವ ಕರಗುವ ನಾರು ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ ಹಾಗೂ ಇದನ್ನು ಅರಗಿಸಿಕೊಳ್ಳಲು ಹೆಚ್ಚಿನ ಕೊಬ್ಬು ಬಳಕೆಯಾಗುವ ಮೂಲಕ ತೂಕ ಇಳಿಸುವುದು ಸುಲಭವಾಗುತ್ತದೆ. ಸೌತೆಯನ್ನು ನಿತ್ಯದ ಆಹಾರದ ಒಂದು ಭಾಗವಾಗಿಸುವುದರಿಂದ ಲಭ್ಯವಾಗುವ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಬಾಯಿಯ ದುರ್ವಾಸನೆ ಇಲ್ಲವಾಗಿಸುತ್ತದೆ

ಬಾಯಿಯ ದುರ್ವಾಸನೆ ಇಲ್ಲವಾಗಿಸುತ್ತದೆ

ಒಂದು ಹಸಿ ಸೌತೆಯ ಬಿಲ್ಲೆಯನ್ನು ಕತ್ತರಿಸಿ ದುರ್ವಸನೆ ಸೂಸುತ್ತಿರುವ ಬಾಯಿಯಲ್ಲಿ ಸುಮಾರು ಅರ್ಧ ನಿಮಿಷ ಹಾಗೇ ಇಟ್ಟು ಬಳಿಕ ಉಗುಳಿ ಬಿಡಿ. ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯಲ್ಲಿ ದುರ್ವಾಸನೆ ಸೂಸುತ್ತಿದ್ದ ಬ್ಯಾಕ್ಟೀರಿಯಾಗಳನ್ನು ಕೊಂದು ಉರಿಸಿನ ದುರ್ವಾಸನೆ ಮಾಯವಾಗುತ್ತದೆ.ಬಾಯಿ ದುರ್ವಾಸನೆಗೆ ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ

ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಗೊಳಿಸುತ್ತದೆ

ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಗೊಳಿಸುತ್ತದೆ

ಒಂದು ಸಂಶೋಧನೆಯ ಪ್ರಕಾರ ಸೌತೆಕಾಯಿಯಲ್ಲಿ ಕ್ಯಾನ್ಸರ್ ರೋಗದ ವಿರುದ್ದ ಹೋರಾಡುವ ಶಕ್ತಿಯಿದ್ದು ನಿತ್ಯದ ಊಟದೊಂದಿಗೆ ಸೇವಿಸಲು ವೈದ್ಯರೂ ಸಲಹೆ ಮಾಡುತ್ತಾರೆ. ನಿತ್ಯವೂ ಸೌತೆಕಾಯಿಯನ್ನು ಸೇವಿಸುವುದರಿಂದ ಲಭಿಸುವ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಮೂತ್ರಪಿಂಡಗಳಿಗೆ ನೆರವಾಗುತ್ತದೆ

ಮೂತ್ರಪಿಂಡಗಳಿಗೆ ನೆರವಾಗುತ್ತದೆ

ಸೌತೆಕಾಯಿಯ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಕಡಿಮೆಯಾಗುವ ಕಾರಣ ಮೂತ್ರಪಿಂಡಗಳ ಮೇಲೆ ಬೀಳುವ ಹೆಚ್ಚಿನ ಒತ್ತಡ ಇಲ್ಲವಾಗಿ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ.

ಕಣ್ಣಿಗೆ ಉತ್ತಮ

ಕಣ್ಣಿಗೆ ಉತ್ತಮ

ವಿಟಮಿನ್ ಎ ಮತ್ತು ಇತರ ಅಗತ್ಯ ಪ್ರೊಟೀನ್‌ಗಳೊಂದಿಗೆ ಮುಳ್ಳುಸೌತೆ ನಿಮ್ಮ ದೃಷ್ಟಿಗೆ ಉತ್ತಮ ಪರಿಣಾಮವನ್ನು ಬೀರುತ್ತದೆ. ನಿಮ್ಮ ಕಣ್ರೆಪ್ಪೆಗಳಿಗೆ ಮುಳ್ಳುಸೌತೆಯನ್ನು ತುಂಡರಿಸಿ ಇಡುವುದರಿಂದ ಕಣ್ಣು ತಂಪಾಗಿರುತ್ತದೆ. ಇಲ್ಲವೇ ಇದರ ಜ್ಯೂಸ್ ಸೇವನೆ ಕೂಡ ಕಣ್ಣಿಗೆ ಉತ್ತಮ.

English summary

Eat Cucumber Everyday And See How It Helps

Cucumber is known to be a potential cure for many diseases and is a very healthy vegetable. It helps to eliminate toxins from the body and also improves your health significantly. Cucumber belongs to the same family of squash, pumpkin and watermelon. It consists of 95% water and keeps you hydrated as well.
Story first published: Tuesday, February 21, 2017, 13:07 [IST]
X
Desktop Bottom Promotion