For Quick Alerts
ALLOW NOTIFICATIONS  
For Daily Alerts

ಲಿಂಬೆ ಜ್ಯೂಸ್ ಕುಡಿದರೆ ಕೆಲವೊಂದು ರೋಗಗಳಿಗೆ ಮದ್ದೇ ಬೇಡ!

ಲಿಂಬೆ ಹಣ್ಣು ಸಿಹಿ ಅಂಶದಿಂದ ಕೂಡಿಲ್ಲದಿದ್ದರೂ ತನ್ನ ಚಮತ್ಕಾರಿ ಆರೋಗ್ಯ ಸುಧಾರಕ ಅಂಶಗಳಿಂದ ಶ್ರೀಮಂತವಾಗಿದೆ. ಲಿಂಬೆಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ....

By Hemanth
|

ನಾವು ಪ್ರತೀ ದಿನ ಬೆಳಿಗ್ಗೆ ಎದ್ದು ಉಪಹಾರ ಸೇವಿಸಿ ಚಹಾ ಕುಡಿಯುತ್ತೇವೆ. ಆದರೆ ಆರೋಗ್ಯಕವಾದ ಆಹಾರ ಸೇವನೆ ಬಗ್ಗೆ ನಮಗೆ ತಿಳಿದೇ ಇಲ್ಲ. ಆರೋಗ್ಯಕರವಾದ ಆಹಾರ ಮತ್ತು ಪಾನೀಯಗಳನ್ನು ಸೇವನೆ ಮಾಡಿದರೆ ಅದರಿಂದ ದೇಹವನ್ನು ರೋಗಗಳಿಂದ ದೂರವಿಡಬಹುದು. ಅದರಲ್ಲೂ ಪ್ರತೀ ದಿನ ಲಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ತುಂಬಾ ಒಳ್ಳೆಯದು. ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಬಿ, ವಿಟಮಿನ್ ಸಿ, ಪೊಟಾಶಿಯಂ ಮತ್ತು ಕಾರ್ಬೋಹೈಡ್ರೆಟ್ಸ್ ಗಳಿವೆ. ನಿಯಮಿತವಾಗಿ ಲಿಂಬೆಜ್ಯೂಸ್ ಅನ್ನು ಕುಡಿಯುವುದರಿಂದ ಪ್ರತಿರೋಧಕ ಶಕ್ತಿಯು ಹೆಚ್ಚಾಗಿ, ಜೀರ್ಣಕ್ರಿಯೆಯು ಸುಗಮವಾಗುವುದು ಮತ್ತು ದೇಹದಲ್ಲಿ ಪಿಎಚ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಲಿಂಬೆ ಹಣ್ಣಿನ ಜ್ಯೂಸ್ ನಿಂದ ನಿಮಗೆ ಯಾವ ರೀತಿಯ ಲಾಭಗಳು ಸಿಗಲಿದೆ ಎಂದು ಈ ಲೇಖನದಲ್ಲಿ ಹೇಳಲಾಗುವುದು. ಇವುಗಳನ್ನು ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ....

ಲಿಂಬೆಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ

ಕಿಡ್ನಿಯಲ್ಲಿನ ಕಲ್ಲು ನಿವಾರಣೆಗೆ

ಕಿಡ್ನಿಯಲ್ಲಿನ ಕಲ್ಲು ನಿವಾರಣೆಗೆ

ಮೂತ್ರಪಿಂಡದಲ್ಲಿ ಕಲ್ಲುಂಟಾಗಿದ್ದರೆ ನಿತ್ಯವೂ ಮುಂಜಾನೆ ಕೊಂಚವೇ ಬಿಸಿ ಇರುವ ನೀರಿನಲ್ಲಿ ಲಿಂಬೆಯೊಂದರ ರಸ ಹಾಕಿ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಈ ಕಲ್ಲು ನಿಧಾನವಾಗಿ ಕರಗುತ್ತಾ ಹೋಗುತ್ತದೆ. ಜೊತೆಗೇ ಮೇದೋಜೀರಕ ಗ್ರಂಥಿಯ ಕಲ್ಲು, ಪಿತ್ತಕೋಶದ ಕಲ್ಲುಗಳು ಮತ್ತು ಕ್ಯಾಲ್ಸಿಯಂ ಘನೀಕರಿಸಿದ್ದರೆ ಅವೂ ಕರಗಿ ನೀರಾಗಿ ಹೊರಹರಿದು ಹೋಗುತ್ತವೆ.

'ಕಿಡ್ನಿ'ಗೆ ತಗಲುವ ಸೋಂಕನ್ನು ಗುಣಪಡಿಸುವ ಮನೆಮದ್ದುಗಳು

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ಲಿಂಬೆ ಜ್ಯೂಸ್ ದುಗ್ದನಾಳಗಳ ಕಾರ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಪ್ರತಿರೋಧಕ ಶಕ್ತಿ ಹೆಚ್ಚುವುದು ಮತ್ತು ರೋಗಕಾರಕಗಳನ್ನು ತೆಗೆದುಹಾಕುವುದು.

ಹಸಿವು ಕಡಿಮೆ ಮಾಡಿ ತೂಕ ಕಡಿಮ ಮಾಡುವುದು

ಹಸಿವು ಕಡಿಮೆ ಮಾಡಿ ತೂಕ ಕಡಿಮ ಮಾಡುವುದು

ಲಿಂಬೆ ಜ್ಯೂಸ್ ನಲ್ಲಿ ಪೆಕ್ಟಿನ್ ಎನ್ನುವ ನಾರಿನಾಂಶವು ಇದ್ದು, ಇದು ಹಸಿವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಆಹಾರವನ್ನು ವಿಚ್ಛೇದಿಸಲು ಬೇಕಾಗುವ ಬೈಲೆ ಉತ್ಪತ್ತಿಯನ್ನು ಉತ್ತೇಜಿಸುವುದು.

ಶೀತ ಮತ್ತು ಜ್ವರಕ್ಕೆ

ಶೀತ ಮತ್ತು ಜ್ವರಕ್ಕೆ

ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿಯು ನೈಸರ್ಗಿಕ ಆ್ಯಂಟಿಆಕ್ಸಿಡೆಂಟ್ ನಂತೆ ವರ್ತಿಸುತ್ತದೆ. ಇದರಲ್ಲಿರುವ ಬಲವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಶೀತ ಹಾಗೂ ಜ್ವರವನ್ನು ಶಮನ ಮಾಡುವುದು. ಜ್ವರಕ್ಕೆ ಮಾತ್ರೆ ತೆಗೆದುಕೊಳ್ಳುವ ಬದಲು ಈ ನೈಸರ್ಗಿಕ ಔಷಧಿ ತುಂಬಾ ಒಳ್ಳೆಯದು.

ಜಠರದ ಹಿಮ್ಮುಖ ಹರಿವು ರೋಗಕ್ಕೆ

ಜಠರದ ಹಿಮ್ಮುಖ ಹರಿವು ರೋಗಕ್ಕೆ

ಜಠರದ ಹಿಮ್ಮುಖ ಹರಿವಿನ ರೋಗವಿದ್ದರೆ ಅದಕ್ಕೆ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟು ಲಿಂಬೆ ಜ್ಯೂಸ್ ಕುಡಿಯಿರಿ. ಎರಡೇ ವಾರದಲ್ಲಿ ನಿಮಗೆ ಫಲಿತಾಂಶ ಕಂಡುಬರುವುದು.

ಕರುಳಿನ ಸ್ವಚ್ಛತೆಗೆ

ಕರುಳಿನ ಸ್ವಚ್ಛತೆಗೆ

ಅನಿಯಮಿತ ಕರುಳಿನ ಚಲನೆಗಳಿಗೆ ಲಿಂಬೆ ನೀರನ್ನು ಸೇವಿಸುವುದು ನೈಸರ್ಗಿಕ ಪರಿಹಾರವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಇದು ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ನಿಯಮಿತವಾಗಿಸುತ್ತದೆ.

ಅಜೀರ್ಣ ಸಮಸ್ಯೆಗೆ

ಅಜೀರ್ಣ ಸಮಸ್ಯೆಗೆ

ಅಜೀರ್ಣವೆನ್ನುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಕಂಡುಬರುತ್ತಿದೆ. ಆದರೆ ಉಗುರು ಬಿಸಿನೀರು ಮತ್ತು ಲಿಂಬೆರಸವು ಅಜೀರ್ಣಕ್ಕೆ ಒಳ್ಳೆಯ ಮದ್ದು. ಅಷ್ಟೇ ಅಲ್ಲದೆ ಲಿಂಬೆರಸವು ರಕ್ತವನ್ನು ಶುದ್ಧೀಕರಿಸುತ್ತದೆ, ಅಜೀರ್ಣ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.ಲಿಂಬೆ ರಸ ಬೆರೆಸಿದ ನೀರು, ಅದೇನು ಮಾಯೆ, ಅದೇನು ಜಾದೂ!

English summary

Drink lemon juice instead of pills if you have one of these problems

This article deals with the top health benefits of having lemon juice, which is considered better than taking pills to cure a few diseases...
X
Desktop Bottom Promotion