For Quick Alerts
ALLOW NOTIFICATIONS  
For Daily Alerts

ಶ್ವಾಸಕೋಶದ ಕ್ಯಾನ್ಸರ್ ಇರುವವರ ಆತ್ಮಹತ್ಯೆ ಸಂಖ್ಯೆ ಹೆಚ್ಚಳ!

By Hemanth
|

ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯ ನೋವು ಹಾಗೂ ಯಾತನೆ ಯಾರಿಗೂ ಬೇಡ. ಶತ್ರುವಿಗೂ ಕೂಡ ಇಂತಹ ನೋವು ಬರುವುದು ಬೇಡವೆಂದು ಇದನ್ನು ಅನುಭವಿಸಿದವರು ಹೇಳುವುದುಂಟು. ಕ್ಯಾನ್ಸರ್ ನಲ್ಲಿ ಹಲವಾರು ವಿಧದ ಕ್ಯಾನ್ಸರ್‌ಗಳಿವೆ. ಇದರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೊಂದಿರುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ 9ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನಗಳು ಹೇಳಿವೆ.

ಸ್ತನ, ಜನನಾಂಗ ಗ್ರಂಥಿ ಮತ್ತು ಕೋಲೋರೆಕ್ಟಲ್ ಕ್ಯಾನ್ಸರ್‌ಗಿಂತ ಶ್ವಾಸಕೋಶದ ಕ್ಯಾನ್ಸರ್ ಇರುವ ರೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ಸಾಮಾನ್ಯ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆಗಿಂತ ಕ್ಯಾನರ್ ರೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆಯು ಶೇ. 60ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನಗಳು ಹೇಳಿವೆ.

Lung cancer

ಶ್ವಾಸಕೋಶದ ಕ್ಯಾನ್ಸರ್ ಇರುವ ವ್ಯಕ್ತಿಗಳು ಅತ್ಯಧಿಕವಾಗಿ ಆತ್ಮಹತ್ಯೆ ಮಾಡಿಕೊಂಡರೆ ಸ್ತನ ಮತ್ತು ಜನನಾಂಗ ಗ್ರಂಥಿ ಕ್ಯಾನ್ಸರ್ ಹೊಂದಿರುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ತುಂಬಾ ಕಡಿಮೆ ಎನ್ನಲಾಗಿದೆ. ಕೋಲೋರೆಕ್ಟಲ್ ಕ್ಯಾನ್ಸರ್ ಹೊಂದಿರುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಶೇ. 40ರಷ್ಟಿದೆ.

ಧೂಮಪಾನ ಬಿಟ್ಟರೆ-ಶ್ವಾಸಕೋಶದ ಕ್ಯಾನ್ಸರ್ ಬಲು ದೂರ!

ವಯಸ್ಸಾಗಿರುವಂತಹ ರೋಗಿಗಳು, ವಿಧವೆಯರು, ಪುರುಷರು ಮತ್ತು ಗಾಳಿಸುದ್ದಿಗಳನ್ನು ಯಾವಾಗಲೂ ನಂಬುವಂತಹ ರೋಗಿಗಳು ಆತ್ಮಹತ್ಯೆಗೆ ಗುರಿಯಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ರೋಗಿಗಳ ಜೀವನದಲ್ಲಿ ಎಷ್ಟು ಒತ್ತಡದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ನಮಗೆ ತಿಳಿದಿರುವ ವಿಚಾರವಾಗಿದೆ ಎಂದು ಕೊರ್ನೆಲ್ ವಿಶ್ವವಿದ್ಯಾನಿಲಯದ ಅಧ್ಯಯನಕಾರ ಮೊಹಮದ್ ರಹೌಮಾ ತಿಳಿಸಿದ್ದಾರೆ.

ಹೆಚ್ಚಿನ ಆಸ್ಪತ್ರೆಗೆಳು ಕ್ಯಾನ್ಸರ್ ರೋಗಿಗಳ ಆತ್ಮಹತ್ಯೆ ಅಪಾಯದ ಬಗ್ಗೆ ಚಿಂತಿಸುವುದೇ ಇಲ್ಲ. ಕ್ಯಾನ್ಸರ್ ರೋಗಿಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ಕೆಲವೊಂದು ಕ್ರಮ ತೆಗೆದುಕೊಳ್ಳಬೇಕು ಎಂದು ರಹೌಮಾ ತಿಳಿಸಿದರು. ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಎಟಿಎಸ್ 2017 ಇಂಟರ್ ನ್ಯಾಷನಲ್ ಕಾನ್ಫರೆನ್ಸ್‌ನಲ್ಲಿ ಈ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಲಾಯಿತು.

ಸುಮಾರು 3,640,229 ಮಂದಿ ಕ್ಯಾನ್ಸರ್ ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಶ್ವಾಸಕೋಶ, ಜನನಾಂಗ ಗ್ರಂಥಿ, ಸ್ತನ ಮತ್ತು ಕೋಲೋರೆಕ್ಟಲ್ ಕ್ಯಾನ್ಸರ್‌ಗೆ ಸಂಬಂಧಿಸಿದ ರೋಗಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. 40 ವರ್ಷಗಳಿಂದ ಸುಮಾರು 6661 ಮಂದಿ ಕ್ಯಾನ್ಸರ್ ರೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

English summary

Dangerous risk of Lung cancer

While the highest risk of suicide was seen in patients with lung cancer, the lowest risk was seen in patients with breast cancer and prostate cancer (20 per cent higher). For patients with colorectal cancer the risk was 40 per cent higher. The increased risk was particularly in older patients, widowed, males, and patients with unfavourable tumour characteristics, the researchers said.
X
Desktop Bottom Promotion