For Quick Alerts
ALLOW NOTIFICATIONS  
For Daily Alerts

ಈರುಳ್ಳಿ ನೋಡಲು ಚಿಕ್ಕದಾದರೂ ಮಾಡುವ ಕಾರುಬಾರು ದೊಡ್ಡದು

By Manu
|

ನಮ್ಮ ಅಡುಗೆಯಲ್ಲಿ ಅತಿ ಸಾಮಾನ್ಯವಾದ ತರಕಾರಿ ಎಂದರೆ ಈರುಳ್ಳಿ ಮತ್ತು ಆಲುಗಡ್ಡೆ. ಅತಿ ಹೆಚ್ಚು ಕಾಲ ಕೆಡದಂತೆ ಕಾಪಾಡ ಬಹುದಾದ ಇವುಗಳ ಗುಣವೇ ಇದರ ವೈಶಿಷ್ಟ್ಯತೆ, ಕಡಿಮೆ ಬೆಲೆ ಮತ್ತು ವರ್ಷದ ಎಲ್ಲಾ ಕಾಲ ಸುಲಭವಾಗಿ ಲಭ್ಯವಾಗುವ ಈ ಎರಡು ತರಕಾರಿಗಳು ಪ್ರತಿ ಮನೆಯ ಅಡುಗೆ ಮನೆಯಲ್ಲಿ ಸದಾ ಇರುತ್ತವೆ. ಅದರಲ್ಲೂ ಈರುಳ್ಳಿ ಕತ್ತರಿಸಿದಾದ ಕಣ್ಣೀರು ಬರುತ್ತದೆ ಎಂಬ ಒಂದೇ ಅವಗುಣವನ್ನು ಬಿಟ್ಟರೆ ಬೇರೆಲ್ಲಾ ರೀತಿಯಲ್ಲಿ ಆಹಾರಕ್ಕಿಂತಲೂ ಔಷಧೀಯ ರೂಪದಲ್ಲಿಯೇ ಆರೋಗ್ಯಕ್ಕೆ ಪೂರಕವಾಗಿದೆ.


ಈರುಳ್ಳಿ ಸಿಪ್ಪೆಯನ್ನು ಇನ್ನು ಅಪ್ಪಿತಪ್ಪಿಯೂ ಕಸದ ಬುಟ್ಟಿಗೆ ಬಿಸಾಡಬೇಡಿ!!

ಈರುಳ್ಳಿಯನ್ನು ಕತ್ತರಿಸುವಾಗ ನಮ್ಮ ಕಣ್ಣಲ್ಲಿ ನೀರು ಬರುತ್ತದೆಯಾದರೂ, ಹಾನಿಕಾರಕ ಗಾಳಿ ನಮಗೆ ತಗುಲದಂತೆ ನೋಡಿಕೊಳ್ಳುತ್ತದೆ. ನಾವು ತಯಾರಿಸುವ ಅಡುಗೆಯ ರುಚಿ ಮತ್ತು ಪರಿಮಳವನ್ನು ಕಾಪಾಡುವ ಈ ಈರುಳ್ಳಿಯ ಆರೋಗ್ಯ ಮಹಿಮೆ ಅಪಾರ. ಇದು ಕೇವಲ ಅಡುಗೆ ತಯಾರಿಸಲಷ್ಟೇ ಸೀಮಿತವಾಗಿಲ್ಲ. ಇದನ್ನು ಗಾಳಿಯಲ್ಲಿ ತೆರೆದಿಟ್ಟರೂ ಆರೋಗ್ಯ ಹೆಚ್ಚುವುದು. ಹಾಗಾದರೆ ಅದು ಹೇಗೆ ಎನ್ನುವ ನೂತನ ಮಾಹಿತಿ ಇಲ್ಲಿದೆ ನೋಡಿ...

ಸಲ್ಫ್ಯೂರಿಕ್ ಸಂಯುಕ್ತ

ಸಲ್ಫ್ಯೂರಿಕ್ ಸಂಯುಕ್ತ

ಈರುಳ್ಳಿಯಲ್ಲಿ ಕೆಲವು ಸಲ್ಫ್ಯೂರಿಕ್ ಸಂಯುಕ್ತಗಳಿವೆ. ಇವು ಗಾಳಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಎದುರಿಸಲು ಸಹಾಯ ಮಾಡುತ್ತವೆ. ಅಡುಗೆಯಲ್ಲಿ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಸಹ ಸಲ್ಫ್ಯೂರಿಕ್ ಸಂಯುಕ್ತಗಳೇ ಕಾರಣ.

ಕಾಲಲ್ಲಿ ಈರುಳ್ಳಿ

ಕಾಲಲ್ಲಿ ಈರುಳ್ಳಿ

ಮಲಗುವಾಗ ಸಾಕ್ಸ್ ಧರಿಸಿ. ಅದರಲ್ಲಿ ಈರುಳ್ಳಿ ಚೂರನ್ನು ಹಾಕಿಕೊಂಡು ಮಲಗಬೇಕು ಅಥವಾ ಅಂಗಾಲಿಗೆ ಈರುಳ್ಳಿಯ ಸ್ಲೈಸ್‍ಅನ್ನು ಇಟ್ಟು ಬಟ್ಟೆ ಕಟ್ಟಿಕೊಂಡು ಮಲಗಿ. ಬೆಳಗ್ಗೆ ಇದನ್ನು ತೆಗೆಯಿರಿ. ಈ ಅಭ್ಯಾಸದಿಂದ ಗಾಳಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದೇಹಕ್ಕೆ ಯಾವುದೇ ಸೋಂಕು ತಗಲದಂತೆ ನೋಡಿಕೊಳ್ಳುತ್ತದೆ.

ಈರುಳ್ಳಿ ಹಾಕಿದ ಸಾಕ್ಸ್‌ ಧರಿಸಿ-ವ್ಯತ್ಯಾಸ ನೀವೇ ನೋಡಿ!

ಈರುಳ್ಳಿ ಸೂಪ್

ಈರುಳ್ಳಿ ಸೂಪ್

ಈರುಳ್ಳಿ ಸೂಪ್ ಮಾಡಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು. ಇದರಲ್ಲಿ ಕ್ವೆರ್ಸೆಟಿನ್ ಗುಣ ಇರುವುದರಿಂದ ಪ್ರತಿರಕ್ಷಣಾ(ಆಂಟಿಆಕ್ಸಿಡೆಂಟ್)ಶಕ್ತಿಯನ್ನು ಹೆಚ್ಚಿಸುವುದು. ಜೊತೆಗೆ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಬಲಪಡಿಸುವುದು.

ಸೂಪ್ ತಯಾರಿಗೆ ಸಲಕರಣೆ

ಸೂಪ್ ತಯಾರಿಗೆ ಸಲಕರಣೆ

* ಒಂದು ಚಮಚ ಹಿಮಾಲಯನ್ ಉಪ್ಪು

* 4 ಕಪ್ ನೀರು

* 3 ಈರುಳ್ಳಿ

* 3 ಬೆಳ್ಳುಳ್ಳಿ ಎಸಳು

ಸೂಪ್ ತಯಾರಿಸುವ ವಿಧಾನ

ಸೂಪ್ ತಯಾರಿಸುವ ವಿಧಾನ

* ಮೊದಲು ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಕತ್ತರಿಸಿಕೊಳ್ಳಿ.

* ನಂತರ ಒಂದು ಪಾತ್ರೆಯಲ್ಲಿ ನೀರು ಮತ್ತು ಎಲ್ಲಾ ಸಲಕರಣೆಯನ್ನು ಸೇರಿಸಿ, ಕುದಿಸಿರಿ.

* 20 ನಿಮಿಷ ಕುದಿಸಿ. ಬಳಿಕ ಸೋಸಿ. ಬೆಚ್ಚಗಿರುವಾಗಲೇ ಸೇವಿಸಿ.

* ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು.

English summary

Cut An Onion And Leave It In Your Room!

Raw onion is said to have a tendency to absorb the bacteria that is present in the air. When the harmful bacteria in the air get reduced, your body will be safer. This will reduce the chances of suffering from infections. Onion has certain sulfuric compounds which can do a good job in fighting bacteria. Actually, the smell and the spicy flavor of onions come from those very sulphuric compounds.
X
Desktop Bottom Promotion