For Quick Alerts
ALLOW NOTIFICATIONS  
For Daily Alerts

ಅರಿಶಿನ ಹಾಕಿ ಕುದಿಸಿದ ನೀರು ಕುಡಿದರೆ, ಲಿವರ್-ಮೆದುಳಿಗೆ ಬಹಳ ಒಳ್ಳೆಯದು

ಪ್ರತಿದಿನವೂ ಕೊಂಚ ಅರಿಶಿನದೊಂದಿಗೆ ಕುದಿಸಿದ ನೀರನ್ನು ಕುಡಿಯುತ್ತಾ ಬಂದರೆ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಈ ನೀರಿನ ಸೇವನೆಯಿಂದ ದಿನವನ್ನು ಪ್ರಾರಂಭಿಸಿದರೆ ಇಡಿಯ ದಿನ ಉಲ್ಲಾಸದಿಂದಿರಲು ಸಾಧ್ಯವಾಗುತ್ತದೆ.

By Manu
|

ಅರಿಶಿನ ಎಷ್ಟು ಪ್ರಯೋಜನಕಾರಿ ಎಂದು ನಾವೆಲ್ಲಾ ಅರಿತಿದ್ದೇವೆ. ಇದರ ಆರೋಗ್ಯವೃದ್ದಿ ಗುಣದ ಕಾರಣ ಈ ಪುಡಿಯನ್ನು ಹಲವಾರು ತೊಂದರೆಗಳಿಗೆ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ಆದರೆ ಅರಿಶಿನ ಪುಡಿಯನ್ನು ಹಾಕಿ ಕುದಿಸಿದ ನೀರನ್ನು ಕುಡಿಯುವುದರಿಂದಲೂ ಹಲವರು ಆರೋಗ್ಯಕರ ಪ್ರಯೋಜನಗಳಿವೆ ಎಂದು ಗೊತ್ತಿತ್ತೇ? ವಿಶೇಷವಾಗಿ ದೇಹದ ಯಕೃತ್ (ಲಿವರ್) ಮತ್ತು ಮೆದುಳಿಗೆ ಈ ನೀರು ಉತ್ತಮವಾಗಿದೆ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಈ ನೀರಿನ ಸೇವನೆಯಿಂದ ಯಾವ ಪ್ರಯೋಜನಗಳಿವೆ ಎಂಬುದನ್ನು ಇಂದಿನ ಲೇಖನದಲ್ಲಿ ಸಂಗ್ರಹಿಸಲಾಗಿದೆ. ಪ್ರತಿದಿನವೂ ಕೊಂಚ ಅರಿಶಿನದೊಂದಿಗೆ ಕುದಿಸಿದ ನೀರನ್ನು ಕುಡಿಯುತ್ತಾ ಬಂದರೆ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಈ ನೀರಿನ ಸೇವನೆಯಿಂದ ದಿನವನ್ನು ಪ್ರಾರಂಭಿಸಿದರೆ ಇಡಿಯ ದಿನ ಉಲ್ಲಾಸದಿಂದಿರಲು ಸಾಧ್ಯವಾಗುತ್ತದೆ.

ಅಲ್ಲದೇ ಇದರ ಸೇವನೆಯಿಂದ ಹಲವಾರು ಬಗೆಯ ಬ್ಯಾಕ್ಟೀರಿಯಾ, ವೈರಸ್ಸುಗಳ ವಿರುದ್ಧ ರಕ್ಷಣೆ ಮತ್ತು ಉರಿಯೂತ ಹಾಗೂ ವಿಕಿರಣದ ದುಷ್ಪರಿಣಾಮಗಳ ವಿರುದ್ಧವೂ ರಕ್ಷಣೆ ಒದಗಿಸುತ್ತದೆ. ವಿಶೇಷವಾಗಿ ಮೆದುಳು ಮತ್ತು ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ...ಹಾಗಾದರೆ ಬನ್ನಿ ಇದರ ಇನ್ನಷ್ಟು ಪ್ರಯೋಜನಗಳ ಬಗ್ಗೆ ನೋಡೋಣ...

ಮೆದುಳಿನ ಕ್ಷಮತೆ ಹೆಚ್ಚಿಸಲು ಅರಿಶಿನದ ನೀರು

ಮೆದುಳಿನ ಕ್ಷಮತೆ ಹೆಚ್ಚಿಸಲು ಅರಿಶಿನದ ನೀರು

ಅರಿಶಿನದಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಅಲ್ಜೀಮರ್ಸ್ ಕಾಯಿಲೆಗೆ ಶಮನ ನೀಡುವ ಗುಣ ಹೊಂದಿದೆ. ಅಲ್ಲದೇ ಈ ಕಾಯಿಲೆ ಬರಲು ಕಾರಣವಾಗುವ beta-amyloid plaque ಎಂಬ ಕಣಗಳು ಮೂಡದಂತೆ ತಡೆಯುವ ಮೂಲಕ ಈ ಕಾಯಿಲೆಯನ್ನು ದೂರವಿರಿಸುತ್ತದೆ. ಅಲ್ಲದೇ ಮೆದುಳಿನ ಕ್ಷಮತೆಯನ್ನೂ ಹೆಚ್ಚಿಸುತ್ತದೆ.

ಯಕೃತ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ

ಯಕೃತ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ

ಒಂದು ಸಂಶೋಧನೆಯ ಪ್ರಕಾರ ಅರಿಶಿನದಲ್ಲಿರುವ ಪ್ರಬಲ ಉರಿಯೂತ ನಿವಾರಕ ಮತ್ತು ಆಂಟಿ ಆಕ್ಸಿಡೆಂಟ್ ಗುಣ ಯಕೃತ್‌ನ ಕಾರ್ಯಕ್ಷಮತೆಗೆ ಅತಿ ಹೆಚ್ಚು ಸಹಕಾರ ನೀಡುವ ಮೂಲಕ ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ

ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ

ಇದರಲ್ಲಿರುವ ಕುರ್ಕುಮಿನ್ ಪೋಷಕಾಂಶದ ನೆರವಿನಿಂದ ಯಕೃತ್ ಕ್ಯಾನ್ಸರ್ ಬರುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ. ಯಕೃತ್ ನಲ್ಲಿರುವ ಕೆಡಕುಕಾರಿ ಕಣಗಳ ಪರಿಣಾಮವನ್ನು ಕಡಿಮೆಗೊಳಿಸುವ ಮೂಲಕ ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ಈ ನೀರನ್ನು ತಯಾರಿಸುವ ಬಗೆಯನ್ನು ಈಗ ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*¼ ಚಿಕ್ಕ ಚಮಚ ಅರಿಶಿನ ಪುಡಿ

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*1-2 ಕಪ್ ನೀರು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಮೊದಲು ನೀರನ್ನು ಬಿಸಿಮಾಡಿ, ಕುದಿಯಲು ಆರಂಭವಾದೊಡನೆ ಅರಿಶಿನ ಪುಡಿಯನ್ನು ಬೆರೆಸಿ ಮಧ್ಯಮ ಉರಿಯಲ್ಲಿ ಇನ್ನೂ ಹತ್ತು ನಿಮಿಷ ಕುದಿಯಲು ಬಿಡಿ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

#2 ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಉಗುರುಬೆಚ್ಚನೆ ತಣಿದ ಬಳಿಕ ಕುಡಿಯಿರಿ. ಅಡುಗೆಮನೆಯ ರಾಣಿ, ಅರಿಶಿನದ ಚಿನ್ನದಂತಹ ಗುಣಗಳು

English summary

Consume Turmeric Water Daily and See the health benefits

This article deals with the top amazing health benefits of turmeric water. Boiled water when consumed on an everyday basis is known to give you a host of health benefits. Turmeric water is a great way to start your a day with a healthy boost. This incredible liquid is known to protect you from the bacteria, viruses, and from the harmful effects of inflammation and radiation.
X
Desktop Bottom Promotion