For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ನೆರವಾಗುವ ಅಡುಗೆಮನೆಯ ಮಸಾಲೆ ಪದಾರ್ಥಗಳು

ಮಸಾಲೆ ಸಸ್ಯಗಳಲ್ಲಿ ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುವ ಸಾಮರ್ಥ್ಯವಿದ್ದು, ರುಚಿವತ್ತಾದ ಊಟದ ತೃಪ್ತಿಯನ್ನು ಇವು ನೀಡುತ್ತವೆ, ಜೊತೆಗೆ ತೂಕವನ್ನು ಇಳಿಸುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ

By Manu
|

ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ದೇಹದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಎತ್ತರಕ್ಕೆ ತಕ್ಕಂತೆ ಕಟ್ಟುಮಸ್ತಾದ ದೇಹವನ್ನು ಹೊಂದಿದ್ದರೆ ಆ ವ್ಯಕ್ತಿಗೆ ಸಮಾಜದಲ್ಲಿ ಸಿಗುವ ಸ್ಥಾನಮಾನವೇ ಬೇರೆಯಾಗಿರುತ್ತದೆ. ಇಂತಹ ವ್ಯಕ್ತಿಗಳನ್ನು ಎಷ್ಟೇ ಜನರ ನಡುವಿನಲ್ಲಿ ಇದ್ದರೂ ಅವರನ್ನು ಗುರುತಿಸಲಾಗುತ್ತದೆ. ದೇಹದ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಬೊಜ್ಜು ದೇಹವನ್ನು ಹೊಂದಿರುವವರಿಗೆ ತಮ್ಮ ದೇಹದ ಮೇಲೆ ಅಸಹನೀಯತೆ ಬಂದಿರುತ್ತದೆ. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ಇಂತಹ ವ್ಯಕ್ತಿಗಳನ್ನು ಹೀಯಾಳಿಸುವಂತಹ ಜನರು ಕೂಡ ಕಡಿಮೆಯಿಲ್ಲ. ಇದಕ್ಕಾಗಿಯೇ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಬೊಜ್ಜು ಕರಗಿಸಿಕೊಂಡು ಎಲ್ಲರ ಮುಂದೆ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲದೊಂದಿಗೆ ನೀವು ಸಿಕ್ಕಸಿಕ್ಕ ಮಾತ್ರೆಗಳು ಹಾಗೂ ಪೌಡರ್ ಗಳನ್ನು ಬಳಸಬೇಡಿ. ಇದರ ಬದಲಿಗೆ ಸರಳವಾಗಿರುವ ಕೆಲವೊಂದು ಸೂತ್ರಗಳನ್ನು ಅನುಸರಿಸಿಕೊಂಡು ಹೋದರೆ ಮುಂದೆ ಬೊಜ್ಜು ಕರಗಿ ನೀವು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಸುಂದರವಾಗಿ ಕಾಣಿಸಿಕೊಳ್ಳಬಹುದು.

ಮನೆಯಲ್ಲಿಯೇ ಕೆಲವೊಂದು ಗಿಡಮೂಲಿಕೆಗಳು ಹಾಗೂ ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಗಿಡಮೂಲಿಕೆ ಹಾಗೂ ಸಾಂಬಾರ ಪದಾರ್ಥಗಳಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್, ಖನಿಜಾಂಶ, ವಿಟಮಿನ್ ಮತ್ತು ಇತರ ಹಲವಾರು ಔಷಧೀಯ ಗುಣಗಳು ತುಂಬಾ ಪರಿಣಾಮಕಾರಿಯಾಗಿದೆ. ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ಬೊಜ್ಜು ಬೆಳೆಸಿಕೊಂಡು ಅದನ್ನು ಕಡಿಮೆ ಮಾಡಲು ಒದ್ದಾಡುತ್ತಿರುವಂತಹವರಿಗಾಗಿ ಬೋಲ್ಡ್ ಸ್ಕೈ ಕೆಲವೊಂದು ಗಿಡಮೂಲಿಕೆ ಹಾಗೂ ಸಾಂಬಾರ ಪದಾರ್ಥಗಳನ್ನು ಆಯ್ಕೆ ಮಾಡಿದೆ. ಇದನ್ನು ತಿಳಿದುಕೊಂಡು ನೀವು ಬೊಜ್ಜನ್ನು ಕರಗಿಸಬಹುದು. ನಿಮ್ಮನ್ನು ಬೆನ್ನ ಹಿಂದಿನಿಂದ ಹೀಯಾಳಿಸುತ್ತಾ ಇದ್ದವರಿಗೆ ಫಿಟ್ ಆಗಿ ಒಂದು ಉತ್ತರವನ್ನು ಕೊಡಬಹುದು.....

ಅರಿಶಿನ

ಅರಿಶಿನ

ಭಾರತೀಯರು ಹೆಚ್ಚಾಗಿ ತಮ್ಮ ಅಡುಗೆಗಳಲ್ಲಿ ಅರಿಶಿನವನ್ನು ಹಿಂದಿನಿಂದಲೂ ಬಳಸುತ್ತಾ ಬಂದಿದ್ದಾರೆ. ಆರೋಗ್ಯವನ್ನು ದೃಷ್ಟಿಯಲ್ಲಿರಿಸಿಕೊಂಡೇ ಅರಿಶಿನವನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆ. ಅರಿಶಿನವು ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆಹಾರದಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುವುದರ ಜೊತೆಗೆ ಸದ್ದಿಲ್ಲದೆ ಕೆಲವೊಂದು ಕಾಯಿಲೆಗಳನ್ನು ನಿವಾರಿಸುತ್ತದೆ. ಅದರಲ್ಲೂ ದಿನನಿತ್ಯ ಆಹಾರ ಕ್ರಮದಲ್ಲಿ ಅರಿಶಿನವನ್ನು ಬಳಸುವುದರಿಂದ ದೇಹದ ತೂಕವನ್ನು ಇಳಸಿಕೊಳ್ಳಬಹುದು

ದಾಲ್ಚಿನ್ನಿ

ದಾಲ್ಚಿನ್ನಿ

ನಮಗೆಲ್ಲರಿಗೂ ದಾಲ್ಚಿನ್ನಿ ಅಥವಾ ಚಕ್ಕೆ ಬಗ್ಗೆ ತಿಳಿದೇ ಇದೆ. ದಾಲ್ಚಿನ್ನಿ ಸಾಂಬಾರ ಪದಾರ್ಥಗಳಲ್ಲಿ ಪ್ರಮುಖವಾಗಿದೆ ಮತ್ತು ಸಿಹಿ ಹಾಗೂ ಖಾರ ಎರಡರಲ್ಲೂ ಇದನ್ನು ಬಳಸಲಾಗುತ್ತದೆ. ಇದರಲ್ಲಿರುವ ಔಷಧೀಯ ಗುಣಗಳು ಹಲವಾರು ರೀತಿಯ ರೋಗಗಳನ್ನು ಶಮನ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಅಷ್ಟೇ ದಾಲ್ಚಿನ್ನಿಯು ತೂಕತಗ್ಗಿಸುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತೆ!, ಹೌದು ದಿನನಿತ್ಯದ ಆಹಾರ ಕ್ರಮದಲ್ಲಿ ದಾಲ್ಚಿನ್ನಿಯನ್ನು ಸೇರಿಸುವುದರಿಂದ ನಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ದೃಢವಾಗಿಡುವದಲ್ಲದೇ, ಹಸಿವಿನ ಪ್ರಮಾಣವನ್ನು ತಗ್ಗಿಸಿ ಬಹಳ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡಬಲ್ಲದು.

ಮೆಣಸಿನ ಪುಡಿ

ಮೆಣಸಿನ ಪುಡಿ

ಮೆಣಸಿನ ಪುಡಿ ಹಾಕಿ ಮಾಡಿದ ಸಾಂಬರ್, ಅಥವಾ ಆಹಾರ ಪದಾರ್ಥಗಳೆಂದರೆ ನಾವೆಲ್ಲರೂ ಮುಖ ಸಿಂಡರಿಸಿ ಬಿಡುತ್ತೇವೆ, ಆದರೆ ದಿನಿತ್ಯ ಆಹಾರ ಕ್ರಮದಲ್ಲಿ ನಿಯಮಿತವಾಗಿ ಮೆಣಸಿನ ಪುಡಿ ಹಾಕಿ ಮಾಡಿದ ಖಾರ ಪದಾರ್ಥಗಳನ್ನು ಸೇವಿಸುವುದು ಅತ್ಯಗತ್ಯ.. ಇದು ಹಸಿವನ್ನು ನಿಯಂತ್ರಿಸುವುದರ ಮೂಲಕ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ, ಜೊತೆಗೆ ದೇಹವು ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಜೀರಿಗೆ

ಜೀರಿಗೆ

ಮಸಾಲೆ ಪದಾರ್ಥಗಳಲ್ಲಿಯೇ ಜೀರಿಗೆಗೆ ಅತ್ಯಂತ ವಿಶಿಷ್ಟ ಸ್ಥಾನವಿದೆ. ಜೀರಿಗೆ ರಸ, ಜೀರಿಗೆ ಕಷಾಯ, ಜೀರಿಗೆ ಚಿತ್ರಾನ್ನ, ಜೀರಿಗೆ ನೀರು, ಜೀರಾ ರೈಸ್ ಇತ್ಯಾದಿ ವಿಶೇಷ ಅಡುಗೆಗಳು ಇದರಿಂದ ತಯಾರಾಗುತ್ತವೆ. ಇದಕ್ಕೆ ಕಾರಣ ಜೀರಿಗೆಯಲ್ಲಿ ಸಿಕ್ಕುವ ವಿಶಿಷ್ಟವಾದ ರುಚಿಯೇ ಆಗಿರುತ್ತದೆ. ಇದರಲ್ಲಿ ರುಚಿಯ ಜೊತೆಗೆ ಆರೋಗ್ಯಕರ ಅಂಶಗಳು ಸಹ ಇವೆ... ಅಂತೆಯೇ ದಿನನಿತ್ಯದ ಅಡುಗೆ ಪದಾರ್ಥಗಳಿಗೆ ನಿಯಮಿತವಾಗಿ ಜೀರಿಗೆಯನ್ನು ಬಳಸುವುದರಿಂದ ಕೂಡ ದೇಹದ ತೂಕವನ್ನು ಇಳಿಸಿಕೊಳ್ಳಬಹುದು

ಶುಂಠಿ

ಶುಂಠಿ

ದಿನನಿತ್ಯ ಅಡುಗೆಯಲ್ಲಿ ರುಚಿಗೆಂದು ಸೇರಿಸುವ ಶುಂಠಿಗೂ ಆರೋಗ್ಯಕ್ಕೂ ಉತ್ತಮ ನಂಟಿದೆ. ಶುಂಠಿಗೆ ಆಯುರ್ವೇದದಲ್ಲಿ ಅತ್ಯುನ್ನತ ಸ್ಥಾನವಿದೆ. ಶುಂಠಿಯ ಬೇರನ್ನು ಮನುಷ್ಯನ ಅನೇಕ ಆರೋಗ್ಯ ಸಮಸ್ಯೆಗಳನ್ನು ನೀಗಿಸಲು ಬಳಸಲಾಗುತ್ತೆ... ಇನ್ನು ದೇಹದ ಕಲ್ಮಶಗಳನ್ನು ಶುದ್ಧೀಕರಿಸುವಲ್ಲಿ ಶುಂಠಿ ಅತ್ಯುತ್ತಮ ಪದಾರ್ಥವಾಗಿದೆ, ಅಲ್ಲದೆ ದೇಹದ ಬೊಜ್ಜನ್ನು ನಿಯಂತ್ರಿಸಿ, ದೇಹದ ತೂಕ ಹೆಚ್ಚಾಗದಂತೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ, ಎಂಬುದು ನಮಗೆಲ್ಲರಿಗೂ ಗೊತ್ತೇ ಇದೆ, ಅದರ ಜೊತೆಗೆ ಬೆಳ್ಳುಳ್ಳಿಯು ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

ಕರಿಮೆಣಸು

ಕರಿಮೆಣಸು

ಕರಿಮೆಣಸು ಅಥವಾ ಕಾಳುಮೆಣಸಿಗೆ ಖಾರ ನೀಡುವ ಪೋಷಕಾಂಶವೇ ಪೈಪರಿನ್ ಅಥವಾ ಪೈಪರೈನ್ (Piperine). ಕರಿಮೆಣಸನ್ನು ಔಷಧಿಗಿಂತಲೂ ರುಚಿ ಹೆಚ್ಚಿಸುವ ಸಾಂಬಾರ ಪದಾರ್ಥವಾಗಿಯೇ ಹೆಚ್ಚು ಸೇವಿಸಲಾಗುತ್ತದೆ.. ಅದರಲ್ಲೂ ಈ ಕರಿಮೆಣಸಿನ ನಿಜವಾದ ಸಾಮರ್ಥ್ಯವಿರುವುದು ಕೊಬ್ಬು ಕರಗಿಸುವಿಕೆಯಲ್ಲಿ. ಅಂದರೆ ಈ ಪೋಷಕಾಂಶವನ್ನು ಅರಗಿಸಿಕೊಳ್ಳಲು ಶರೀರಕ್ಕೆ ಹೆಚ್ಚು ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಇದು ತೂಕ ಕಳೆದುಕೊಳ್ಳುವವರಿಗೆ ಒಂದು ವರದಾನವಾಗಿದೆ.

ಏಲಕ್ಕಿ

ಏಲಕ್ಕಿ

ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಏಲಕ್ಕಿ, ತನ್ನ ಘಮಘಮ ಪರಿಮಳದ ಮೂಲಕವೇ ಎಲ್ಲರನ್ನು ಆಕರ್ಷಿಸುವ ಸಾಂಬರ ಪದಾರ್ಥ, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೆ, ಬೊಜ್ಜನ್ನು ಕರಗಿಸಿ, ದೇಹದ ತೂಕವನ್ನು ಯಂತ್ರಿಸುತ್ತದೆ

ಡ್ಯಾಂಡಲಿಯನ್

ಡ್ಯಾಂಡಲಿಯನ್

ಕಬ್ಬಿಣದ ಮತ್ತು ಪೊಟ್ಯಾಸಿಯಂಗಳಂತಹ ಖನಿಜಗಳೊಂದಿಗೆ ಎ, ಸಿ, ಇ ವಿಟಮಿನ್‌ಗಳನ್ನು ಹೆಚ್ಚಿಸಲು ಡ್ಯಾಂಡಲಿಯನ್ ತುಂಬಾನೇ ಸಹಕಾರಿ.. ಅಲ್ಲದೆ ಇದು ತೂಕವನ್ನು ನಿಯಂತ್ರಿಸುವುದರ ಜೊತೆಗೆ, ಹೊಟ್ಟೆಯ ಉಬ್ಬರವನ್ನೂ ನಿಯಂತ್ರಿಸುತ್ತದೆ

ಸಾಸಿವೆ ಕಾಳು

ಸಾಸಿವೆ ಕಾಳು

ನಮಗೆಲ್ಲಾ ಗೊತ್ತಿರುವ ಹಾಗೆ ಸಾರು, ಪಲ್ಯ ಮೊದಲಾದ ಖಾದ್ಯಗಳಲ್ಲಿ ಒಗ್ಗರಣೆ ಇಲ್ಲದೇ ರುಚಿಯೇ ಇರುವುದಿಲ್ಲ. ಒಗ್ಗರಣೆಗೆ ಅಗತ್ಯವಾದ ಸಾಮಾಗ್ರಿ ಎಂದರೆ ಸಾಸಿವೆ ಕಾಳು. ರಾಗಿಯಂತೆಯೇ ಕಾಣುವ ಆದರೆ ರಾಗಿಗಿಂತ ಕೊಂಚ ದೊಡ್ಡದಾಗಿರುವ ಈ ಪುಟ್ಟ ಕಾಳು ಹಲವು ಪೋಷಕಾಂಶಗಳ ಆಗರವೂ ಆಗಿದೆ.... ಸಂಶೋಧನೆಯ ಪ್ರಕಾರ ಸಾಸಿವೆ ಕಾಳು ಚಯಾಪಚಯ ಕ್ರಿಯೆಯನ್ನು 25% ಉತ್ತಮಗೊಳಿಸುತ್ತದೆ. ಅದರಲ್ಲೂ ಪ್ರತಿದಿನ 3/5 ಚಮಚ ಸಾಸಿವೆ ಕಾಳನ್ನು ನಮ್ಮ ದಿನಿನಿತ್ಯದ ಆಹಾರಕ್ರಮದಲ್ಲಿ ಸೇರಿಸುವ ಮೂಲಕ ಒಂದೇ ಗಂಟೆಯಲ್ಲಿ 45 ಕ್ಯಾಲೋರಿಗಳನ್ನು ಇಳಿಸಿಕೊಳ್ಳಬಹುದಂತೆ...

ಅತಿಯಾದ ದೇಹದ ತೂಕ ನಿಜಕ್ಕೂ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ವಿಶೇಷವಾಗಿ ಇಂದಿನ ದಿನಗಳಲ್ಲಿ ದೈಹಿಕ ಕಾರ್ಯವನ್ನು ಇಲ್ಲವಾಗಿಸುವ ಸಾವಿರಾರು ಸೌಕರ್ಯಗಳಿರುವಾಗ ತೂಕ ಕಳೆದುಕೊಳ್ಳುವುದು ಕೊಂಚ ಕಷ್ಟವೇ ಸರಿ... ಆದರೂ ಆಹಾರ ಪಥ್ಯಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸುವ ಮೂಲಕ ದೇಹದ ತೂಕವನ್ನು ನಿಯಂತ್ರಿಸಬಹುದು....ಅದರಲ್ಲೂ ದೇಹದ ತೂಕವನ್ನು ಇಳಿಸುವುದರಿಂದ, ಸಾಕಷ್ಟು ಮಹಾಮಾರಿ ಕಾಯಿಲೆಗಳಿಂದ ದೂರವಿರಬಹದು.....

ಕಾನ್ಸರ್‌ನ ಅಪಾಯ ಕಡಿಮೆ..

ಕಾನ್ಸರ್‌ನ ಅಪಾಯ ಕಡಿಮೆ..

ಅತೀಯಾದ ತೂಕ ಕೂಡ ಕ್ಯಾನ್ಸರ್ ನಂತಹ ಮಹಾಮಾರಿ ರೋಗಕ್ಕೆ ಮುಕ್ತ ಆಹ್ವಾನ ಎಂಬುದು ಈಗಾಗಲೇ ಸಾಬೀತಾಗಿದೆ...ಅದರಲ್ಲೂ ಸ್ತನ ಕ್ಯಾನ್ಸರ್‌ನಂತಹ ಕಾಯಿಲೆ ಕೂಡ ಅತಿಯಾದ ತೂಕದಿಂದ ಬರುತ್ತಿರುವುದು ಬೆಚ್ಚಿ ಬೀಳಿಸುವ ಸಂಗತಿಯಾಗಿ... ಹಾಗಾಗಿ ತೂಕವನ್ನು ನಿಯಂತ್ರಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಿ ಕಾನ್ಸರ್‌ ರೋಗದ ಅಪಾಯ ತಪ್ಪಿಸಿ

ವೃದ್ಧಾಪ್ಯದಲ್ಲಿ ಬುದ್ಧಿಮಾಂದ್ಯತೆ

ವೃದ್ಧಾಪ್ಯದಲ್ಲಿ ಬುದ್ಧಿಮಾಂದ್ಯತೆ

ಸ್ಥೂಲಕಾಯದಿಂದಾಗಿ ಜನರು ತಮ್ಮ ವೃದ್ಧಾಪ್ಯದಲ್ಲಿ ಬುದ್ಧಿಮಾಂದ್ಯತೆಯನ್ನು ಹೊಂದುವ ಅಪಾಯವನ್ನು ಎದುರಿಸುತ್ತಾರೆ. ಹಾಗಾಗಿ ದೇಹದ ತೂಕ ನಿಯಂತ್ರಿಸುವ ಕಡೆ ಸರಿಯಾದ ಕಾಳಜಿ ವಹಿಸಿ...

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ

ಅತೀಯಾದ ತೂಕದಿಂದಾಗಿ ಹೃದಯಾಘಾತದ ಸಮಸ್ಯೆ ಕಂಡುಬರುವುದು ಎಂಬುದು ಈಗಾಗಲೇ ಸಾಬೀತಾಗಿದೆ...ಅಷ್ಟೇ ಅಲ್ಲದೇ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯೂ ಕೂಡ ಬೆನ್ನೇರಿ ಕಾಡಲಿದೆ... ಹಾಗಾಗಿ ದೇಹದ ತೂಕವನ್ನು ಎಂದೂ ನಿರ್ಲಕ್ಷಿಸದಿರಿ

ಖಿನ್ನತೆ

ಖಿನ್ನತೆ

ಅತಿಯಾದ ತೂಕದಿಂದಾಗಿ, ಎಲ್ಲರ ಎದುರು ತಾನು ಎಲ್ಲಿ ಮುಜುಗರಕ್ಕೆ ಒಳಪಡುತ್ತೇನೋ ಎಂಬ ಅಳುಕಿನಿಂದ, ಎಲ್ಲರ ಒಟ್ಟಿಗೆ ಬೆರೆಯಲು ಆಗದೇ ಮಾನಸಿಕವಾಗಿ ಖಿನ್ನತೆ ರೋಗ ಕೂಡ ನಿಮ್ಮನ್ನು ಕಾಡಬಹುದು

 ಮಂಡಿ ನೋವಿನ ಸಮಸ್ಯೆಯಿಂದ ಮುಕ್ತಿ

ಮಂಡಿ ನೋವಿನ ಸಮಸ್ಯೆಯಿಂದ ಮುಕ್ತಿ

ದೇಹದ ತೂಕ ಇಳಿಸಿಕೊಳ್ಳುವುದರಿಂದ ಮಂಡಿ ನೋವಿನ ಸಮಸ್ಯೆಯಿಂದ ಕೂಡ ನೀವು ಮುಕ್ತಿ ಹೊಂದಬಹುದು

ನಿದ್ದೆ

ನಿದ್ದೆ

ಆರೋಗ್ಯಕರ ತೂಕ ಇಳಿಕೆಯಲ್ಲಿ ನಿದ್ದೆ ಪರಿಣಾಮಕಾರಿಯಾಗಿದೆ. ಸರಿಯಾದ ನಿದ್ದೆ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಜೊತೆಗೆ ಹಾರ್ಮೋನ್‌ನ ಸಮತೋಲನವನ್ನು ನಿರ್ವಹಿಸುತ್ತದೆ...

ಆರೋಗ್ಯಕರ ಸಮಸ್ಯೆ ಕಾಡಬಹುದು

ಆರೋಗ್ಯಕರ ಸಮಸ್ಯೆ ಕಾಡಬಹುದು

ಕೆಲವೊಮ್ಮೆ ಆರೋಗ್ಯಕರ ಸಮಸ್ಯೆ ಹಾಗೂ ರೋಗ ನಿರೋಧಕ ಶಕ್ತಿಯಿಂದಲೂ ದೇಹದ ತೂಕ ಇಳಿಕೆಯಾಗದೇ ಇರಬಹುದು....

ಅರಿಶಿನ ಹಾಲು

ಅರಿಶಿನ ಹಾಲು

*2 ಕಪ್‌ಗಳಷ್ಟು ತಾಜಾ ಹಾಲು

*½-1 ಚಮಚ ಅರಿಶಿನ ಪುಡಿ

*2-3 ಇಡೀ ಕಪ್ಪು ಮೆಣಸುಕಾಳುಗಳು

*2-3 ಇಡೀ ಏಲಕ್ಕಿ

*½ ಇಂಚಿನ ಶುಂಠಿ, ಚೆನ್ನಾಗಿ ಜಜ್ಜಿದ

*ಚಿಟಿಕೆಯಷ್ಟು ಕೇಸರಿ

ಅರಿಶಿನ ಹಾಲು

ಅರಿಶಿನ ಹಾಲು

ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಹಾಲಿಗೆ ಹಾಕಿ ಮುಚ್ಚಳ ಮುಚ್ಚದೇ ಸುಮಾರು ಹದಿನೈದು ನಿಮಿಷ ಕುದಿಸಿ....ಬಳಿಕ ತಣಿಯಲು ಬಿಡಿ... ಹಾಲು ತಣಿದ ಬಳಿಕವೇ ಕುಡಿಯಿರಿ, ಬೇಕಿದ್ದರೆ ರುಚಿಗಾಗಿ ಸ್ವಲ್ಪ ಜೇನನ್ನೂ ಕೂಡ ಸೇರಿಸಬಹುದು.

English summary

best spices and drinks to lose weight

In this article, we have handpicked the best spices that will help you lose weight. So, continue reading this article to know more about the spices and drinks that will help with weight loss. Now, you might have gotten an idea that losing weight is more than just fitting into your skinny jeans or just for looking good. It gives you a long, healthy and disease-free lifestyle.
X
Desktop Bottom Promotion