For Quick Alerts
ALLOW NOTIFICATIONS  
For Daily Alerts

ಬೆಂಡೆಕಾಯಿಯ ಪ್ರಯೋಜನಗಳು ತಿಳಿದರೆ-ದಿನಾ ಇಷ್ಟಪಟ್ಟು ತಿನ್ನುವಿರಿ!

ಬೆಂಡೆಯ ಒಳ್ಳೆಯ ಗುಣವೆಂದರೆ ಇದನ್ನು ಯಾವ ರೂಪದಲ್ಲಿ ಸೇವಿಸಿದರೂ, ಅಂದರೆ ಬೇಯಿಸಿ, ಹುರಿದು, ಕರಿದು ಅಥವಾ ಅರೆಬೇಯಿಸಿ ತಿಂದರೂ ಇದರ ಗುಣಗಳು ಬದಲಾಗುವುದಿಲ್ಲ...

By Manu
|

ನೋಡುವುದಕ್ಕೆ ಮಹಿಳೆಯರ ಬೆರಳಿನಂತೇನೂ ಇರದ ಬೆಂಡೇಕಾಯಿಗೆ Ladies Finger ಎಂಬ ಈ ಪಟ್ಟ ಹೇಗೋ ದೊರಕಿಬಿಟ್ಟಿದೆ. ಸಾಮಾನ್ಯವಾಗಿ ಇಡಿಯ ವರ್ಷ ಸಿಗುವ ಈ ತರಕಾರಿ ವಾಸ್ತವವಾಗಿ ವಿವಿಧ ವಿಟಮಿನ್ನುಗಳು, ಖನಿಜಗಳು ಮತ್ತು ಪೋಷಕಾಂಶಗಳ ಆಗರವಾಗಿದ್ದು ಅಗ್ಗವೂ ಆಗಿರುವುದರಿಂದ ಎಲ್ಲಾ ವರ್ಗದ ಜನರ ಮನೆಯ ಅಡುಗೆಯಲ್ಲಿ ಸಾಮಾನ್ಯವಾಗಿದೆ.

ಅದರಲ್ಲೂ ಎಳೆಯ ಬೆಂಡೆಕಾಯಿಯನ್ನು ಸಾರು, ಪಲ್ಯ, ಅಥವಾ ಇತರ ತರಕಾರಿಗಳ ಜೊತೆಸೇರಿಸಿ ವಿವಿಧ ಭಕ್ಷ್ಯಗಳನ್ನು ಮಾಡಿ ಅನ್ನ, ಚಪಾತಿ, ರೊಟ್ಟಿಗಳೊಂದಿಗೆ ಸೇವಿಸಬಹುದಾದ ಬಹುಪಯೋಗಿ ತರಕಾರಿಯಾಗಿದೆ. ಇದರ ಪ್ರಯೋಜನಗಳೇನು ಎಂದು ಪಟ್ಟಿಮಾಡಹೊರಟರೆ ಬಹಳ ಉದ್ದದ ಪಟ್ಟಿ ಮಾಡಬೇಕಾಗಿ ಬರಬಹುದು. ಕೊಂಚ ಬಲಿತ ಕೂಡಲೇ ನಾರು ದೃಢವಾಗುವ ಕಾರಣ ಎಳೆತಿರುವಾಗಲೇ ಅಡುಗೆ ಮಾಡಬೇಕಾಗಿರುವ ಬೆಂಡೆಕಾಯಿಯಲ್ಲಿ ಹಲವು ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣದಿಂದ ತೂಕ ಇಳಿಸಲು ಇಚ್ಛಿಸುವ ವ್ಯಕ್ತಿಗಳಿಗೆ ಉತ್ತಮವಾದ ಆಯ್ಕೆಯಾಗಿದೆ.....

ಮಧುಮೇಹ ಬರುವುದರಿಂದ ತಡೆಯುತ್ತದೆ

ಮಧುಮೇಹ ಬರುವುದರಿಂದ ತಡೆಯುತ್ತದೆ

ಬೆಂಡೆಕಾಯಿಯ ನಿಯಮಿತ ಸೇವನೆಯಿಂದ ದೇಹದಲ್ಲಿ ಉತ್ತಮ ಪ್ರಮಾಣದ ಇನ್ಸುಲಿನ್ ಉತ್ಪತ್ತಿಯಾಗಿ ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಮಧುಮೇಹ, ಅಸ್ತಮಾ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣ

ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ

ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ

ಉಪಯುಕ್ತವಾಗಿದೆ ಹೆರಿಗೆ ದಿನ ಸಮೀಪಿಸುತ್ತಿರುವ ಮತ್ತು ಬಾಣಂತಿಯರಿಗೆ ಹೆಚ್ಚಿನ ಕಬ್ಬಿಣದ ಅಂಶದ ಅಗತ್ಯವಿದೆ. ಬೆಂಡೆಕಾಯಿಯಲ್ಲಿ ಸಮಪ್ರಮಾಣದ ಕಬ್ಬಿಣದ ಅಂಶವಿದ್ದು ಹೆಚ್ಚಿನ ಶಕ್ತಿ ನೀಡಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ

ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ

ಬೆಂಡೆಕಾಯಿಯಲ್ಲಿರುವ ಇದರಲ್ಲಿ ಸಮಪ್ರಮಾಣದಲ್ಲಿರುವ ಕರುಗುವ ಮತ್ತು ಕರಗದ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಕಾಲಕಾಲಕ್ಕೆ ಸುಲಭವಾಗಿ ವಿಸರ್ಜನೆಯ ತೊಂದರೆಯುಳ್ಳವರು ಹೆಚ್ಚು ನಾರನ್ನು ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಮೈದಾ ಆಧಾರಿತ ಆಹಾರಗಳ ಬದಲಿಗೆ ಗೋಧಿ ಹಿಟ್ಟಿನ ರೊಟ್ಟಿ ಮತ್ತು ಬೆಂಡೆಕಾಯಿಯ ಪಲ್ಯ ಈ ನಿಟ್ಟಿನಲ್ಲಿ ಅದ್ಭುತವಾದ ಆಹಾರವಾಗಿದೆ.

ಕೊಲೆಸ್ಟ್ರಾಲ್ ರೋಗಿಗಳ ಪಾಲಿನ ಪಂಚಾಮೃತ

ಕೊಲೆಸ್ಟ್ರಾಲ್ ರೋಗಿಗಳ ಪಾಲಿನ ಪಂಚಾಮೃತ

ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇರುವ ರೋಗಿಗಳಿಗೆ ವೈದ್ಯರು ಹೆಚ್ಚಿನ ಆಹಾರಗಳನ್ನು ಸೇವಿಸದಂತೆ ಸಲಹೆ ಮಾಡುತ್ತಾರೆ. ಆದರೆ ಈ ರೋಗಿಗಳು ಬೆಂಡೆಕಾಯಿಯನ್ನು ಮಾತ್ರ ಸುರಕ್ಷಿತವಾಗಿ ಸೇವಿಸಬಹುದು. ಏಕೆಂದರೆ ಬೆಂಡೆಯಲ್ಲಿ ಯಾವುದೇ ಕೊಲೆಸ್ಟ್ರಾಲ್ ಆಗಲೀ ಕೊಲೆಸ್ಟ್ರಾಲ್ ಉಂಟುಮಾಡುವ ಕಣಗಳಾಗಲೀ ಇಲ್ಲದೇ ಇರುವುದರಿಂದ ಕೊಲೆಸ್ಟ್ರಾಲ್ ರೋಗಿಗಳ ಪಾಲಿನ ಪಂಚಾಮೃತವಾಗಿದೆ.

ಬಾಯಿಯಲ್ಲಿ ನೀರೂರಿಸುವ ರುಚಿಕರವಾದ ಬೆಂಡೆಕಾಯಿ ಪಲ್ಯ

ಅಸ್ತಮಾ ರೋಗಿಗಳಿಗೆ

ಅಸ್ತಮಾ ರೋಗಿಗಳಿಗೆ

ವರದಾನವಾಗಿದೆ ಶ್ವಾಸಕೋಶಗಳು ಕೆಟ್ಟರಕ್ತದಿಂದ ಇಂಗಾಲದ ಡೈ ಆಕ್ಸೈಡ್ ಹೊರಹಾಕಿ ಆಮ್ಲಜನಕವನ್ನು ಸೇರಿಸುವ ಕೆಲಸ ಮಾಡುತ್ತವೆ. ಅಸ್ತಮಾ ರೋಗವಿರುವವರಲ್ಲಿ ಈ ಕ್ಷಮತೆ ಕಡಿಮೆಯಾಗಿರುತ್ತದೆ. ಆದರೆ ಬೆಂಡೆಕಾಯಿಯ ನಿಯಮಿತ ಸೇವನಿಯಿಂದ ಶ್ವಾಸಕೋಶದ ಶಕ್ತಿ ಹೆಚ್ಚಿತ್ತದೆ ಮತ್ತು ಅಸ್ತಮಾ ವಿರುದ್ದ ಹೋರಾಡಲು ಸಾಧ್ಯವಾಗುತ್ತದೆ.

ಬೆಂಡೆಕಾಯಿ ನೆನೆಸಿದ ನೀರು

ಬೆಂಡೆಕಾಯಿ ನೆನೆಸಿದ ನೀರು

ಪ್ರತಿದಿನ, 3-4 ಬೆಂಡೆಕಾಯಿಯನ್ನು ಕತ್ತರಿಸಿಕೊಂಡು ಅದನ್ನು ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಒಂದು ಗ್ಲಾಸ್ ಕುಡಿಯುವುದರಿಂದ ಕಿಡ್ನಿ ಸಮಸ್ಯೆ, ಸಕ್ಕರೆ ಕಾಯಿಲೆ ಸಮಸ್ಯೆ, ಕೊಲೆಸ್ಟ್ರಾಲ್ ಸಮಸ್ಯೆ ಮತ್ತು ಅಸ್ತಮಾವನ್ನು ನಿವಾರಣೆಯಾಗುತ್ತದೆ.

ದೇಹದ ತೂಕ ಇಳಿಸುವಲ್ಲಿ ಸಹಕಾರಿ

ದೇಹದ ತೂಕ ಇಳಿಸುವಲ್ಲಿ ಸಹಕಾರಿ

ಬೆಂಡೆಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಮತ್ತು ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಈ ನಾರನ್ನು ಕಗರಿಸುವ ಪ್ರಯತ್ನದಲ್ಲಿ ಕೊಂಚ ಪ್ರಮಾಣದ ಕೊಬ್ಬು ವ್ಯರ್ಥವಾಗಿ ಹೋಗುವುದರಿಂದ ತೂಕ ಸಹಜವಾಗಿ ಕಡಿಮೆಯಾಗುತ್ತದೆ.

ವಿಧದ ಕಾಯಿಲೆಗಳಿಗೆ ರಾಮಬಾಣ

ವಿಧದ ಕಾಯಿಲೆಗಳಿಗೆ ರಾಮಬಾಣ

ಬೆಂಡೆಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಬೆಂಡೆಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಹಲವು ವಿಧದ ಕಾಯಿಲೆಗಳಿಂದ ದೇಹವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.

ಈ ಟಿಪ್ಸ್ ಅನುಸರಿಸಿ

ಈ ಟಿಪ್ಸ್ ಅನುಸರಿಸಿ

  • ಇದು ಸುಲಭವಾಗಿ ತುಂಡಾದ ಅನುಭವ ಬಂದರೆ ಮಾತ್ರ ಬೆಂಡೆ ಎಳೆಯದಾಗಿದೆ ಎಂದರ್ಥ.
  • ಬೆಂಡೆ ಫ್ರೈ ಮಾಡುವುದಾದರೆ ತೊಟ್ಟಿನ ಭಾಗವನ್ನು ನಿವಾರಿಸಬೇಡಿ. ಫ್ರೈ ಮಾಡಿದ ಬಳಿಕವೇ ಕತ್ತರಿಸಿ ನಿವಾರಿಸಿ, ಇದರಿಂದ ಬೆಂಡೆಯನ್ನು ಬುಡದವರೆಗೂ ಸೀಳಲು ಮತ್ತು ಮಸಾಲೆ ತುಂಬಿಸಲು ಸಾಧ್ಯವಾಗುತ್ತದೆ.
  • ತೊಟ್ಟು ತೆಗೆದರೆ ಪೂರ್ಣವಾಗಿ ತುಂಬಿಸಲು ಸಾಧ್ಯವಿಲ್ಲ. ಆಗ ತೊಟ್ಟಿನ ಭಾಗ ಚಪ್ಪೆಯಾಗಿಯೂ ತಳಭಾಗ ರುಚಿಯಾಗಿಯೂ ಇರುತ್ತದೆ.
English summary

Benefits of Lady Finger For Health and to Cure Diseases

When it comes to the benefits of lady's finger, you will be surprised to know that the list goes endless. Let us quickly discuss how this vegetable helps us in maintaining good health.
X
Desktop Bottom Promotion