For Quick Alerts
ALLOW NOTIFICATIONS  
For Daily Alerts

ಫಿಟ್ ಹಾಗೂ ಆರೋಗ್ಯವಾಗಿರಲು ನಿತ್ಯ ಸೇವಿಸಿ 'ನೆಲ್ಲಿಕಾಯಿ ಜ್ಯೂಸ್'

ನೆಲ್ಲಿಕಾಯಿಯ ಜ್ಯೂಸ್ ಅನ್ನು ತಯಾರಿಸುವಾಗ ಕೊಂಚ ಕಾಳುಮೆಣಸಿನ ಪುಡಿ, ಒಂದು ಚಿಕ್ಕ ಚಮಚ ಜೇನು, ಒಂದು ಚಿಕ್ಕ ತುಂಡು ಶುಂಠಿ ಮತ್ತು ಚಿಟಿಕೆಯಷ್ಟು ಉಪ್ಪು ಸೇರಿಸಿದರೆ ಸಾಕು. ಸ್ವಾದಿಷ್ಟವಾದ ಜ್ಯೂಸ್ ಮಕ್ಕಳೂ ಇಷ್ಟಪಡುವಂತಿರುತ್ತದೆ.

By Arshad
|

ನೆಲ್ಲಿಕಾಯಿಯಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವಾರು ಅಂಶಗಳಿವೆ. ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಸಿ ಪ್ರಮಾಣ ಇತರ ಯಾವುದೇ ಲಿಂಬೆಯ ಜಾತಿಯ ಹಣ್ಣುಗಳಲ್ಲಿರುವುದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚಿದೆ! ಇದೇ ಕಾರಣಕ್ಕೆ ನೆಲ್ಲಿಕಾಯಿಯ ಜ್ಯೂಸ್ ಕುಡಿಯುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಮತ್ತು ವೈರಸ್ ಮತ್ತು ಬ್ಯಾಕ್ಟೀರೀಯಾಗಳ ಸೋಂಕಿನಿಂದ ಹೆಚ್ಚು ರಕ್ಷಣೆ ನೀಡುತ್ತದೆ.

ನೆಲ್ಲಿಕಾಯಿಯ ಜ್ಯೂಸ್ ಕುಡಿಯುವುದರಿಂದ ಏನೇನು ಲಾಭಗಳಿವೆ ಗೊತ್ತೇ? ಇದರಲ್ಲಿರುವ ಕಬ್ಬಿಣ, ವಿಟಮಿನ್ ಬಿ ಕಾಂಪ್ಲೆಕ್, ಕ್ಯಾರೋಟೀನ್, ಗಂಧಕ, ಕ್ಯಾಲ್ಸಿಯಂ, ವಿವಿಧ ಅಗತ್ಯ ಖನಿಜಗಳು, ಮಿಟಮಿನ್ನುಗಳು ಆರೋಗ್ಯಕ್ಕೆ ಪೂರಕವಾಗಿವೆ. ಅಲ್ಲದೇ ಹಲವು ಸಾಮಾನ್ಯ ಕಾಯಿಲೆಗಳನ್ನು ಬರದಂತೆ ತಡೆಗಟ್ಟುತ್ತದೆ.

ನೆಲ್ಲಿಕಾಯಿಯ ಜ್ಯೂಸ್ ಅನ್ನು ತಯಾರಿಸುವಾಗ ಕೊಂಚ ಕಾಳುಮೆಣಸಿನ ಪುಡಿ, ಒಂದು ಚಿಕ್ಕ ಚಮಚ ಜೇನು, ಒಂದು ಚಿಕ್ಕ ತುಂಡು ಶುಂಠಿ ಮತ್ತು ಚಿಟಿಕೆಯಷ್ಟು ಉಪ್ಪು ಸೇರಿಸಿದರೆ ಸಾಕು. ಸ್ವಾದಿಷ್ಟವಾದ ಜ್ಯೂಸ್ ಮಕ್ಕಳೂ ಇಷ್ಟಪಡುವಂತಿರುತ್ತದೆ. ಬನ್ನಿ, ಬೇಸಿಗೆಯಲ್ಲಿ ನೆಲ್ಲಿಕಾಯಿಯ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.....

ರಕ್ತಶುದ್ಧೀಕರಣ

ರಕ್ತಶುದ್ಧೀಕರಣ

ಇದರಲ್ಲಿರುವ ಆಂಟಿ ಆಕ್ಸಿಡೆಂಟು ಗುಣ ದೇಹದಿಂದ ಅನಗತ್ಯವಾದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಈ ಮೂಲಕ ರಕ್ತದಿಂದ ಕಲ್ಮಶಗಳು ನಿವಾರಣೆಯಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ. ಅಷ್ಟೇ ಅಲ್ಲ, ಜೀರ್ಣಾಂಗಗಳಿಂದಲೂ ಕಲ್ಮಶಗಳು ಹೊರಹಾಕಲು ನೆರವಾಗುತ್ತದೆ.

ನೆಲ್ಲಿಕಾಯಿ ಜ್ಯೂಸ್‌+ಮೆಂತೆ ಹುಡಿ-ಬರೋಬ್ಬರಿ 7 ಕಾಯಿಲೆಗೆ ರಾಮಬಾಣ!

ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು

ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು

ಬೇಸಿಗೆಯಲ್ಲಿ ನೆಲ್ಲಿಕಾಯಿಯ ಜ್ಯೂಸ್ ಸೇವನೆಯಿಂದ ದೇಹ ತಂಪಾಗಿರುತ್ತದೆ. ವಾತಾವರಣದಲ್ಲಿರುವ ಬಿಸಿ ಮತ್ತು ಬೆಳಕಿನಿಂದ ದೇಹದ ತಾಪಮಾನವೇರದಂತೆ ಟ್ಯಾನಿನ್ ಎಂಬ ಪೋಷಕಾಂಶ ನೋಡಿಕೊಳ್ಳುತ್ತದೆ. ನೆಲ್ಲಿಕಾಯಿಯ ಜ್ಯೂಸ್ ಸೇವನೆಯಿಂದ ಟ್ಯಾನಿನ್ ಮಟ್ಟ ಉತ್ತಮಗೊಳ್ಳುತ್ತದೆ. ತನ್ಮೂಲಕ ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳ ಪ್ರಭಾವದಿಂದ ದೇಹದ ಮೇಲೆ ದುಷ್ಪರಿಣಾಮವುಂಟಾಗದಂತೆ ತಡೆಯುತ್ತದೆ.

ಮೂತ್ರನಾಳಗಳ ಸೋಂಕಿನಿಂದ ರಕ್ಷಣೆ

ಮೂತ್ರನಾಳಗಳ ಸೋಂಕಿನಿಂದ ರಕ್ಷಣೆ

ಬೇಸಿಗೆಯಲ್ಲಿ ಹೆಚ್ಚು ದ್ರವ ಬೆವರಿನ ಮೂಲಕ ಹರಿಯುವ ಕಾರಣ ಮೂತ್ರ ಹೆಚ್ಚು ಸಾಂದ್ರೀಕೃತಗೊಂಡು ಸೋಂಕು ತಗಲುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ದಿನಕ್ಕೆರಡು ಬಾರಿ 30 ml ನೆಲ್ಲಿಕಾಯಿಯ ಜ್ಯೂಸ್ ಸೇವಿಸುವ ಮೂಲಕ ಈ ಸೋಂಕಿನಿಂದ ರಕ್ಷಣೆ ಪಡೆಯಬಹುದು. ಅಲ್ಲದೇ ಬೇಸಿಗೆಯಲ್ಲಿ ನೆಲ್ಲಿಕಾಯಿಯ ಜ್ಯೂಸ್ ಸೇವನೆಯಿಂದ ಉರಿಮೂತ್ರವಾಗುವುದನ್ನೂ ತಡೆಯಬಹುದು.

ಒತ್ತಡ ನಿವಾರಣೆಯಾಗುತ್ತದೆ

ಒತ್ತಡ ನಿವಾರಣೆಯಾಗುತ್ತದೆ

ನೆಲ್ಲಿಕಾಯಿಯ ಜ್ಯೂಸ್ ಸೇವನೆಯಿಂದ ದೇಹದಲ್ಲಿ ಒತ್ತಡಕ್ಕೆ (oxidative stress) ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ನಿವಾರಣೆಯಾಗುತ್ತವೆ. ಬೇಸಿಗೆಯಲ್ಲಿ ನೆಲ್ಲಿಕಾಯಿಯ ಜ್ಯೂಸ್ ಸೇವನೆಯಿಂದ ದೇಹ ತಂಪಾಗಿದ್ದು ಈ ಕಣಗಳ ಚಟುವಟಿಕೆ ಮುಂದುವರೆಯದಂತೆ ತಡೆಯುತ್ತದೆ.

ಅಪ್ಪಟ ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ, ಆರೋಗ್ಯದ ಕೀಲಿಕೈ

ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ

ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ

ಬೇಸಿಗೆಯಲ್ಲಿ ಬೆವರಿನೊಂದಿಗೆ ಕೂದಲೂ ಉದುರಬಹುದು. ನೆಲ್ಲಿಕಾಯಿಯ ಜ್ಯೂಸ್ ಕುಡಿಯುವ ಮೂಲಕ ಬಿಸಿಲಿನ ಕಾರಣ ಉದುರಬಹುದಾಗಿದ್ದ ಕೂದಲನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಕೂದಲ ಬುಡವನ್ನು ದೃಢಗೊಳಿಸಲು ನೆರವಾಗುತ್ತದೆ. ತನ್ಮೂಲಕ ಕೂದಲಿಗೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ.

ಬ್ಯೂಟಿ ಟಿಪ್ಸ್: ಬೆಟ್ಟದ ನೆಲ್ಲಿಕಾಯಿಯ ಚಮತ್ಕಾರ ನೋಡಿರಣ್ಣಾ....

English summary

Benefits Of Drinking Amla Juice In Summer

Do you know the health benefits of amla juice? It comprises of iron, vitamin B complex, carotene, phosphorus and calcium. The essential minerals and vitamins in amla are not only integral to our body's well being, but also important to prevent and manage some of the most common and widespread diseases.
Story first published: Tuesday, May 23, 2017, 20:34 [IST]
X
Desktop Bottom Promotion