For Quick Alerts
ALLOW NOTIFICATIONS  
For Daily Alerts

ಋತುಚಕ್ರದ ವೇಳೆ ನಿದ್ರಾಹೀನತೆ ಸಮಸ್ಯೆ! ಆಹಾರ ಪಥ್ಯ ಹೀಗಿರಲಿ...

ನಿದ್ರಾಹೀನತೆ ಋತುಚಕ್ರದ ವೇಳೆ ಕಾಡುವಂತಹ ಪ್ರಮುಖ ಸಮಸ್ಯೆಯಾಗಿದೆ. ಋತುಚಕ್ರದ ವೇಳೆ ಹಾರ್ಮೋನುಗಳಲ್ಲಿ ಆಗುವಂತಹ ಬದಲಾವಣೆಗಳಿಂದ ನಿದ್ರೆಯ ಸಮಸ್ಯೆ ಕಾಡುತ್ತದೆ.

By Hemanth
|

ಆ ದಿನಗಳ ತೊಳಲಾಟ, ಸಂಕಟ ಮತ್ತು ನೋವನ್ನು ಹೇಳಲು ಸಾಧ್ಯವೇ ಇಲ್ಲ. ಅದು ಪ್ರತೀ ತಿಂಗಳು ಅನುಭವಿಸುವಂತಹ ಹೆಣ್ಣು ಜೀವಕ್ಕೆ ಮಾತ್ರ ಗೊತ್ತು. ಋತುಚಕ್ರದ ಸಮಯದಲ್ಲಿ ಹಲವಾರು ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತದೆ. ಕೆಲವರನ್ನು ಹೊಟ್ಟೆನೋವು, ಸೊಂಟನೋವು, ಸ್ನಾಯುಸೆಳೆತ, ತಲೆನೋವು ಇತ್ಯಾದಿಗಳು ಆ ದಿನಗಳಲ್ಲಿ ಕೆಲವೊಮ್ಮೆ ನಿದ್ರೆ ಕೂಡ ಸರಿಯಾಗಿ ಬರುವುದಿಲ್ಲ. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಮಾನಸಿಕವಾಗಿಯೂ ಈ ಸಮಯದಲ್ಲಿ ಕುಗ್ಗಿ ಹೋಗಿರುತ್ತಾರೆ. ಇದರಿಂದ ಮತ್ತಷ್ಟು ಬಳಲಿಕೆ ದೇಹಕ್ಕೆ ಆಗುತ್ತದೆ. ನಿದ್ರಾಹೀನತೆ ಋತುಚಕ್ರದ ವೇಳೆ ಕಾಡುವಂತಹ ಪ್ರಮುಖ ಸಮಸ್ಯೆಯಾಗಿದೆ. ಋತುಚಕ್ರದ ವೇಳೆ ಹಾರ್ಮೋನುಗಳಲ್ಲಿ ಆಗುವಂತಹ ಬದಲಾವಣೆಗಳಿಂದ ನಿದ್ರೆಯ ಸಮಸ್ಯೆ ಕಾಡುತ್ತದೆ. ಮುಟ್ಟಿನ ನೋವಿಗೆ ಇಲ್ಲಿದೆ ಸುಲಭ ಪರಿಹಾರ!

ಋತುಚಕ್ರದ ವೇಳೆ ಆಗುವಂತಹ ನಿದ್ರಾಹೀನತೆಯನ್ನು ನಿವಾರಣೆ ಮಾಡಲು ಸರಿಯಾದ ಆಹಾರ ಕ್ರಮ ಮತ್ತು ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಋತುಚಕ್ರದ ವೇಳೆ ನಿದ್ರಾಹೀನತೆಯನ್ನು ನಿವಾರಿಸಲು ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಂಡು ಹೋಗಬೇಕಾಗುತ್ತದೆ. ಅದು ಯಾವುದೆಂದು ನೀವು ತಿಳಿಯಿರಿ.

ಕೆಫಿನ್ ಕಡೆಗಣಿಸಿ

ಕೆಫಿನ್ ಕಡೆಗಣಿಸಿ

ಕೆಫಿನ್ ಮತ್ತು ಚಹಾದಂತಹ ಪಾನೀಯಗಳನ್ನು ತ್ಯಜಿಸಿದರೆ ನಿಮಗೆ ನಿದ್ರಾಹೀನತೆಯ ಸಮಸ್ಯೆ ಕಾಡದು. ಋತುಚಕ್ರದ ಸಮಯದ ನೋವು ಹಾಗೂ ಸೆಳೆತವನ್ನು ಕಡಿಮೆ ಮಾಡಲು ನೀವು ಚಹಾ ಅಥವಾ ಕಾಫಿ ಸೇವನೆ ಮಾಡಬಹುದು. ಆದರೆ ಇದು ನಿದ್ರಾಹೀನತೆಗೆ ಕಾರಣವಾಗಬಹುದು. ಇದರಿಂದ ಋತುಚಕ್ರದ ವೇಳೆ ಕಾಫಿ ಹಾಗೂ ಚಹಾ ಸೇವನೆ ಆದಷ್ಟು ಕಡೆಗಣಿಸಿ.

ಮಲಗುವ ಮೊದಲು ಮದ್ಯಪಾನ ಬೇಡ

ಮಲಗುವ ಮೊದಲು ಮದ್ಯಪಾನ ಬೇಡ

ಮದ್ಯಪಾನದಿಂದ ನಿದ್ರೆ ಬರಬಹುದು. ಆದರೆ ಇದು ದೀರ್ಘ ನಿದ್ರೆಯನ್ನು ಉಂಟು ಮಾಡುವುದಿಲ್ಲ. ಮದ್ಯಪಾನ ಮಾಡಿದರೆ ನೀವು ಎದ್ದಾಗ ಉಲ್ಲಾಸಿತರಾಗಿರುವುದಿಲ್ಲ. ಋತುಚಕ್ರದ ಸಮಯದಲ್ಲಿ ಮಲಗುವ ಮೊದಲು ಆಲ್ಕೋಹಾಲ್ ಸೇವನೆಯನ್ನು ತ್ಯಜಿಸಬೇಕು.

ಮಲಗುವ ಮೊದಲು ವ್ಯಾಯಾಮ ಬೇಡ

ಮಲಗುವ ಮೊದಲು ವ್ಯಾಯಾಮ ಬೇಡ

ಋತುಚಕ್ರದ ವೇಳೆ ಕಠಿಣ ವ್ಯಾಯಾಮ ಮಾಡಲೇಬಾರದು. ಅದರಲ್ಲೂ ಮಲಗುವ ಮೊದಲು ಇಂತಹ ವ್ಯಾಯಾಮ ಮಾಡಬಾರದು. ಮಲಗುವ ಮೊದಲು ಸ್ವಲ್ಪ ಜಾಗಿಂಗ್ ಅಥವಾ ನಡೆಯುವುದು ಒಳ್ಳೆಯ ನಿದ್ರೆಯನ್ನು ತರಬಹುದು.

ವಿಟಮಿನ್ ಡಿ ಹೆಚ್ಚು ಸೇವಿಸಿ

ವಿಟಮಿನ್ ಡಿ ಹೆಚ್ಚು ಸೇವಿಸಿ

ಸೂರ್ಯನ ಬೆಳಕಿನಲ್ಲಿ ವಿಟಮಿನ್ ಡಿ ಇದೆ. ಇದರಿಂದ ಬಿಸಿಲಿನಲ್ಲಿ ಹೊರಗಡೆ ಹೋಗಿ. ನೀವು ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಂಡರೆ ಅದು ಒಳ್ಳೆಯದು. ಇದರಿಂದ ಹೊಟ್ಟೆ ತುಂಬಿದಂತೆ ಆಗಿ ಹೊಟ್ಟೆಯುಬ್ಬರ ಆಗುವುದಿಲ್ಲ ಮತ್ತು ಒಳ್ಳೆಯ ನಿದ್ರೆ ಬರುತ್ತದೆ.

ಕ್ಯಾಲ್ಸಿಯಂ ಸೇವಿಸಿ

ಕ್ಯಾಲ್ಸಿಯಂ ಸೇವಿಸಿ

ಕ್ಯಾಲ್ಸಿಯಂಯುಕ್ತ ಆಹಾರಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ, (ಉದಾಹರಣೆಗೆ ಹಾಲು) ಹೊಟ್ಟೆಯಲ್ಲಿ ಉಬ್ಬರ ಕಡಿಮೆಯಾಗುತ್ತದೆ. ಋತುಚಕ್ರದ ವೇಳೆ ಆಗುವಂತಹ ನಿದ್ರಾಹೀನತೆಯನ್ನು ಇದು ಕಡಿಮೆ ಮಾಡುವುದು.

ಹೊಟ್ಟೆಗೆ ಭಾರವಾಗುವ ತಿಂಡಿ ತಿನ್ನಬೇಡಿ

ಹೊಟ್ಟೆಗೆ ಭಾರವಾಗುವ ತಿಂಡಿ ತಿನ್ನಬೇಡಿ

ಋತುಚಕ್ರದ ಸಮಯದಲ್ಲಿ ಹೊಟ್ಟೆಗೆ ಭಾರವಾಗುವಂತಹ ಆಹಾರ ಸೇವನೆ ಮಾಡಿ ಮಲಗಲು ಹೋಗುವುದು ಸರಿಯಾದ ಕ್ರಮವಲ್ಲ. ಹೊಟ್ಟೆ ತುಂಬಿರುವ ಕಾರಣದಿಂದ ಅದು ಜೀರ್ಣವಾಗಲು ಸಮಯ ಬೇಕಾಗುತ್ತದೆ. ಇದರಿಂದ ನಿದ್ರೆಗೆ ಸಮಸ್ಯೆಯಾಗುತ್ತದೆ.

ದ್ರವ ಆಹಾರ ಹೆಚ್ಚು ಸೇವಿಸಿ

ದ್ರವ ಆಹಾರ ಹೆಚ್ಚು ಸೇವಿಸಿ

ದ್ರವ ಆಹಾರ ಮತ್ತು ನೀರನ್ನು ಹೆಚ್ಚಿಗೆ ಸೇವನೆ ಮಾಡುವುದರಿಂದ ದೇಹದಲ್ಲಿರುವ ಸೋಡಿಯಂ ಅಂಶವು ಹೋರಹೋಗುವುದು. ಇದರಿಂದ ಹೊಟ್ಟೆಯುಬ್ಬರ ಕಡಿಮೆಯಾಗಿ ನಿದ್ರೆ ಸರಿಯಾಗಿ ಆಗುವುದು. ಋತುಚಕ್ರದ ವೇಳೆ ಇದು ಸರಿಯಾದ ನಿದ್ರೆಯನ್ನು ನೀಡುವುದು.

English summary

Amazing Ways To Get Rid Of Sleep Problem (Insomnia) During Menstruation

Periods affecting your sleep is one of the major issues and this further leads to a host of other related health problems as well. So what exactly leads to sleep problem and insomnia during menstruation? Hormonal changes is one of the major factors. The oestrogen and progesterone levels drop down the moment you start having your periods. This is one of the factors that leads to problem during sleeping. Here are a few tips to sleep better during menstruation. Take a look.
X
Desktop Bottom Promotion