For Quick Alerts
ALLOW NOTIFICATIONS  
For Daily Alerts

ಒಸಡಿನ ನೋವಿಗೆ ಸಾಂತ್ವನ ನೀಡುವ ಫಲಪ್ರದ ಮನೆಮದ್ದು

By Hemanth
|

ಸಹಿಸಲು ಅಸಾಧ್ಯವಾಗಿರುವ ಹಲ್ಲು ನೋವು, ದೇವರೇ ಹೇಗಾದರೂ ಈ ನೋವನ್ನು ಕಡಿಮೆ ಮಾಡಪ್ಪ ಎಂದು ಮೊರೆ ಇಡುತ್ತೇವೆ. ಹಲ್ಲು ನೋವಿನಿಂದ ಬಳಲಿರುವ ಪ್ರತಿಯೊಬ್ಬರಿಗೂ ಅದರ ನೋವಿನ ಬಗ್ಗೆ ತಿಳಿದೇ ಇದೆ. ಈ ನೋವಿನಿಂದ ಹೊರಬರಲು ತುಂಬಾ ಕಷ್ಟಪಡಬೇಕಾಗುತ್ತದೆ. ಆದರೆ ಹಲ್ಲಿಗಿಂತ ಮೊದಲು ಒಸಡಿನ ನೋವು ಕಾಣಿಸಿಕೊಳ್ಳುತ್ತದೆ. ಇದು ಕೂಡ ಹಲ್ಲಿನ ಸಮಸ್ಯೆಯೇ ಆಗಿದೆ. ಹಲ್ಲು ನೋವಿನ ಶಮನಕ್ಕೆ ಮನೆ ಮದ್ದು

ಒಸಡು ಊದಿಕೊಳ್ಳುವುದು, ರಕ್ತ ಬರುವುದು ಇತ್ಯಾದಿ ಒಸಡಿನ ನೋವಿನ ಸಮಸ್ಯೆಗಳಾಗಿವೆ. ಬಾಯಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಇತರ ಕೀಟಾಣುಗಳು ಉಂಟು ಮಾಡುವಂತಹ ಸೋಂಕಿನಿಂದಾಗಿ ಒಸಡಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಒಸಡಿನ ಸಮಸ್ಯೆಗೆ ಹೆಚ್ಚು ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ಇದಕ್ಕೆ ಹಲವಾರು ರೀತಿಯ ಮನೆಮದ್ದು ಲಭ್ಯವಿದೆ. ಹಲ್ಲುಜ್ಜುವಾಗ ಒಸಡಿನಿಂದ ರಕ್ತ ಬರುತ್ತಿದೆಯೇ? ಕಂಗಾಲಾಗದಿರಿ!

ಬೋಲ್ಡ್ ಸ್ಕೈ ಇಂದು ನಿಮಗೆ ಮನೆಮದ್ದಿನ ಬಗ್ಗೆ ತಿಳಿಸಿಕೊಡಲಿದೆ. ಈ ಮನೆಮದ್ದು ವಿಶ್ವದಾದ್ಯಂತ ಪ್ರಚಲಿತದಲ್ಲಿದೆ ಮತ್ತು ಒಸಡಿನ ನೋವನ್ನು ಕಡಿಮೆ ಮಾಡುವುದರೊಂದಿಗೆ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಶೇಖರಣೆಯಾಗದಂತೆ ತಡೆಯಲಿದೆ. ಸಮಸ್ಯೆ ನಿಮ್ಮನ್ನು ನಿರಂತರವಾಗಿ ಕಾಡುತ್ತಾ ಇದ್ದರೆ ತಕ್ಷಣ ಹಲ್ಲಿನ ವೈದ್ಯರನ್ನು ಭೇಟಿಯಾಗಿ. ಸೋಂಕನ್ನು ತಡೆದು ಒಸಡಿನ ನೋವನ್ನು ಕಡಿಮೆ ಮಾಡಬಲ್ಲ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳುವ....

ಅರಿಶಿನ

ಅರಿಶಿನ

ಭಾರತೀಯರು ಹೆಚ್ಚಾಗಿ ಅರಶಿನವನ್ನು ಪ್ರತಿಯೊಂದು ಖಾದ್ಯಗಳಲ್ಲೂ ಬಳಸುತ್ತಾರೆ. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣವು ಅಧಿಕವಾಗಿದೆ. ಒಂದು ಚಮಚ ಅರಿಶಿನವನ್ನು ನೀರಿನೊಂದಿಗೆ ಕಲಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.... ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅರಿಶಿನ

ಅರಿಶಿನ

ಈ ಪೇಸ್ಟ್‌ನಿಂದ ಹಲ್ಲುಜ್ಜಿಕೊಳ್ಳಿ. ಭಾದಿತ ಪ್ರದೇಶಕ್ಕೆ ಇದನ್ನು ಹಚ್ಚಿಕೊಳ್ಳಿ. ಪ್ರತೀ ದಿನವೂ ಅರಶಿನದಿಂದ ಹಲ್ಲುಜ್ಜುತ್ತಾ ಇದ್ದರೆ ಸೋಂಕು ರಹಿತ ಬಾಯಿ ನಿಮ್ಮದಾಗುತ್ತದೆ.

 ಉಪ್ಪು ನೀರು

ಉಪ್ಪು ನೀರು

ಒಸಡಿನಲ್ಲಿರುವ ನೋವು ಮತ್ತು ಊತವನ್ನು ಕಡಿಮೆ ಮಾಡಬೇಕಾದರೆ ಉಪ್ಪಿನ ನೀರಿನಿಂದ ಬಾಯಿ ತೊಳೆದುಕೊಳ್ಳಿ. ಒಸಡಿನ ಸೋಂಕನ್ನು ನಿವಾರಣೆ ಮಾಡಲು ದಿನದಲ್ಲಿ ಮೂರರಿಂದ ನಾಲ್ಕು ಸಲ ಹೀಗೆ ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

 ಉಪ್ಪು ನೀರು

ಉಪ್ಪು ನೀರು

ಉಪ್ಪಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಒಸಡಿನ ನೋವಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುವುದು.

ಬೇವು

ಬೇವು

ಬೇವನ್ನು ಅನಾದಿ ಕಾಲದಿಂದಲೂ ಆಯುರ್ವೇದದಲ್ಲಿ ಬಳಸುತ್ತಾ ಇದ್ದಾರೆ. ಅದರಲ್ಲೂ ಒಸಡಿನ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಒಣಗಿಸಿದ ಬೇವಿನ ಎಲೆಗಳನ್ನು ಬಳಸುತ್ತಾರೆ. ಒಸಡಿನ ಸಮಸ್ಯೆ ನಿವಾರಣೆ ಮಾಡಲು ಬೇವಿನ ಎಲೆಗಳನ್ನು ಜಗಿಯಬಹುದು. ಇದರಿಂದ ಹಲ್ಲು ಗುಳಿ ಬೀಳುವುದನ್ನು ತಡೆಯಬಹುದು ಮತ್ತು ಬಾಯಿಯ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಬಹುದು.

ಬೇವು

ಬೇವು

ಒಣಗಿಸಿ ಪುಡಿ ಮಾಡಿದ ಬೇವಿನ ಎಲೆಗಳನ್ನು ಅಡುಗೆ ಸೋಡಾ ಮತ್ತು ನೀರಿನೊಂದಿಗೆ ಹಾಕಿ ಮೌಥ್ ವಾಶ್ ಮಾಡಿಕೊಳ್ಳಬಹುದು. ಒಸಡಿನ ನೋವು ನಿವಾರಣೆ ಮಾಡಿಕೊಳ್ಳಲು ಇದನ್ನು ನಿಯಮಿತವಾಗಿ ಬಳಸಿಕೊಳ್ಳಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಹಲವಾರು ರೀತಿಯ ಆರೋಗ್ಯ ಲಾಭವನ್ನು ಉಂಟುಮಾಡುತ್ತದೆ. ಅದರಲ್ಲೂ ಹಸಿ ಬೆಳ್ಳುಳ್ಳಿ ತಿಂದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಹಸಿ ಬೆಳ್ಳುಳ್ಳಿಯನ್ನು ಜಗಿದು ತಿನ್ನಲು ಸಾಧ್ಯವಿಲ್ಲ. ಆದರೆ ಕೆಲವೊಂದು ಅಧ್ಯಯನಗಳ ಪ್ರಕಾರ ಬೆಳ್ಳುಳ್ಳಿಯಲ್ಲಿ ಒಸಡಿನ ನೋವನ್ನು ನಿವಾರಿಸುವಂತಹ ಗುಣಗಳು ಇವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದರಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು ಮತ್ತು ಅದು ಕೆಟ್ಟ ಮಟ್ಟಕ್ಕೆ ಹೋಗದಂತೆ ತಡೆಯುತ್ತದೆ.

English summary

Effective Home Remedies For Gum Disease

Gum disease is also referred to as periodontal disease. The symptoms of this disease heavily depend on the severity of the infection. People suffering from this disease often complain of swollen gums, bleeding, pain, etc. read on to know more about the potent home remedies that can help you fight off the infection.
X
Desktop Bottom Promotion