For Quick Alerts
ALLOW NOTIFICATIONS  
For Daily Alerts

ತಾನು ಎಂಟೆದೆ ಬಂಟ ಅಂದುಕೊಂಡರೆ ಅದು 100% ಸುಳ್ಳು..!

By Super
|

ಹೊಸವರ್ಷ ಕಳೆದು ಕೇವಲ ಬೆರಳೆಣಿಕೆ ದಿನಗಳು ಮಾತ್ರ ಉರುಳಿವೆ, ಹಲವರು ಹೊಸವರ್ಷದಲ್ಲಿ ಅನೇಕ ರೀತಿಯ ಹೊಸ ಸಂಕಲ್ಪಗಳನ್ನು ತೊಟ್ಟು ಆ ರೀತಿಯಲ್ಲಿ ನಡೆಯಲು ಮೊದಲ ಹೆಜ್ಜೆಯನ್ನೂ ಇಟ್ಟಿರಬಹುದು. ಹೆಚ್ಚಿನವರು ಆರೋಗ್ಯದ ಕುರಿತಾದ ಸಂಕಲ್ಪವನ್ನು ಹೊಂದಿದ್ದರೂ ಕೆಲವು ದಿನಗಳ ಬಳಿಕ ಈ ಆರಂಭಶೂರತ್ವ ಜಾಹೀರಾಗುತ್ತದೆ. ಏಕೆಂದರೆ ಎಲ್ಲಿಯವರೆಗೆ ಸಂಕಲ್ಪಗಳು ದೃಢಸಂಕಲ್ಪವಾಗಿ ಪರಿಣಮಿಸುವುದಿಲ್ಲವೋ ಅಲ್ಲಿಯವರೆಗೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಇದಕ್ಕೂ ಮುನ್ನ ನಮ್ಮ ದೇಹಕ್ಕೆ ನಾವು ಅರಿವಿಲ್ಲದೇ ನಮ್ಮ ಕೆಲವು ಅಭ್ಯಾಸಗಳಿಂದ ಭಾರೀ ಪ್ರಮಾಣದಲ್ಲಿ ಹಿಂಸಿಸುತ್ತಿದ್ದೇವೆಂದು ಗೊತ್ತಿತ್ತೇ? ಈ ತಪ್ಪುಗಳನ್ನು ಅರಿತು ಸರಿಪಡಿಸಿಕೊಂಡರೆ ಅದಕ್ಕಿಂತ ಉತ್ತಮವಾದ ಸಂಕಲ್ಪ ಇನ್ನೊಂದಿಲ್ಲ.

ಆದರೆ ನಮ್ಮ ದಿನಚರಿಯಲ್ಲಿ ಯಾವುದೇ ತೊಂದರೆ ಇಲ್ಲವಲ್ಲಾ, ಎಲ್ಲಾ ಸರಿಯಾಗಿದೆ ಎನ್ನುವವರಿಗೆ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ನಿಮ್ಮ ನಂಬಿಕೆಗಳನ್ನೇ ಅಲ್ಲಾಡಿಸಬಹುದು. ಉದಾಹರಣೆಗೆ ಬೆಳಿಗ್ಗೆ ಎಚ್ಚರಾದ ಬಳಿಕವೂ ಅಲಾರಾಂನ ಸ್ನೂಜ್ ಬಟನ್ ಒತ್ತಿ ಇನ್ನೊಂದು ಹದಿನೈದು ನಿಮಿಷ ಮಲಗುವುದು. ಎಲ್ಲರಿಗೂ ಇಷ್ಟವಾದ ಈ ಹೆಚ್ಚುವರಿ ಸಮಯದ ನಿದ್ದೆ ವಾಸ್ತವವಾಗಿ ನಮ್ಮ ರೋಗ ನಿರೋಧಕ ಶಕ್ತಿಯನ್ನೇ ಉಡುಗಿಸುತ್ತದೆ.

ಇನ್ನುಳಿದಂತೆ ಒಂದರ ಹಿಂದೊಂದರಂತೆ ಸತತವಾಗಿ ಚಲನಚಿತ್ರಗಳನ್ನು ವೀಕ್ಷಿಸುವುದು, ಒಂದರ ಹಿಂದೆ ಇನ್ನೊಂದು ಬಿಯರ್‌ನ ಮಗ್ಗುಗಳನ್ನು ಹೊಟ್ಟೆಗಿಳಿಸುವುದು ಇತ್ಯಾದಿ. ಇವು ದೇಹಕ್ಕೆ ಅರಿವಿಲ್ಲದಂತೆಯೇ ಹಲವಾರು ರೀತಿಯಲ್ಲಿ ಹಾನಿಕರವಾಗಿವೆ. ಇವುಗಳಿಂದ ಹೊರಬರುವುದು ಕಷ್ಟಕರವಾದರೂ ಅಸಾಧ್ಯವೇನೂ ಅಲ್ಲ. ಇದಕ್ಕೆ ಬೇಕಾದುದು ಈ ಅಭ್ಯಾಸಗಳ ಬಗ್ಗೆ ಅರಿವು ಮತ್ತು ಇದರಿಂದ ಹೊರಬರಲು ದೃಢಮನಸ್ಸು ಅಷ್ಟೇ....

ಸ್ನೂಜ್ ಬಟನ್

ಸ್ನೂಜ್ ಬಟನ್

ಇತ್ತೀಚಿನ ಎಲ್ಲಾ ಮೊಬೈಲುಗಳಲ್ಲಿ ಅಲಾರಾಂ ಇದ್ದೇ ಇರುತ್ತದೆ. ಇದು ಬೆಳಿಗ್ಗೆ ಎಚ್ಚರಿಸಲು ಅಲಾರಾಂ ಮೊಳಗಿಸುವ ಜೊತೆಗೇ ಐದು ಅಥವಾ ಹತ್ತು ನಿಮಿಷ ಬಿಟ್ಟು ಮತ್ತೊಮ್ಮೆ ಮೊಳಗಿಸಲು ಆಯ್ಕೆ ಇದೆ. ಹೆಚ್ಚಿನವರಿಗೆ ಬೆಳಗ್ಗಿನ ಸುಖನಿದ್ದೆಯನ್ನು ಇನ್ನೂ ಐದು ಅಥವಾ ಹತ್ತು ನಿಮಿಷ ವಿಸ್ತರಿಸುವ ಪರಿ ಇಷ್ಟವಾಗುತ್ತದೆ. ಆದರೆ ಈ ಪರಿ ದೇಹದ ರೋಗ ನಿರೋಧಕ ಶಕ್ತಿಯನ್ನೇ ಉಡುಗಿಸುತ್ತದೆ. ಇದು ಕಡಿಮೆ ವಿಶ್ರಾಂತಿ ಮತ್ತು ಕದಡಿದ ನಿದ್ದೆಗೆ ಕಾರಣವಾಗುತ್ತದೆ.

ಮಿತಿಮೀರಿದ ಮದ್ಯಪಾನ

ಮಿತಿಮೀರಿದ ಮದ್ಯಪಾನ

ಸಾಮಾನ್ಯವಾಗಿ ಹೊಸವರ್ಷ ಮೊದಲಾದ ಸಂದರ್ಭಗಳನ್ನು ಹೆಚ್ಚಿನವರು ಮದ್ಯಪಾನದ ಮೂಲಕ ಸ್ವಾಗತಿಸುತ್ತಾರೆ. ನಮ್ಮದಲ್ಲದ ಈ ಸಂಸ್ಕೃತಿ ಆರೋಗ್ಯಕ್ಕೆ ಮಾರಕವಾಗಿದೆ. ಏಕೆಂದರೆ ಸಂಭ್ರಮದ ಭರದಲ್ಲಿ ಒಬ್ಬರಿಗೊಬ್ಬರು ಶುಭಾಶಯ ಹೇಳುತ್ತಾ ಮದ್ಯದ ಸೇವನೆಗೆ ಮಿತಿಹೇರುವುದನ್ನೇ ಮರೆಯುತ್ತಾರೆ.

ಮಿತಿಮೀರಿದ ಮದ್ಯಪಾನ

ಮಿತಿಮೀರಿದ ಮದ್ಯಪಾನ

ಇದು ಆ ಸಮಯದಲ್ಲಿ ಸಂಭ್ರಮವನ್ನು ಹೆಚ್ಚಿಸಿದರೂ ಹೊಟ್ಟೆ ಸೇರಿದ ಮದ್ಯ ತನ್ನ ಪ್ರಭಾವವನ್ನು ಯಕೃತ್ ನ ಮೇಲೆ ತೋರುತ್ತದೆ. ನಿಧಾನವಾಗಿ ಯಕೃತ್ ಬಾಧೆಗೊಳಗಾಗುತ್ತದೆ (liver cirrhosis) ಮತ್ತು ಅಧಿಕ ರಕ್ತದೊತ್ತಡ ಮೊದಲಾದ ತೊಂದರೆಗಳು ಎದುರಾಗುತ್ತವೆ.

ಸತತವಾಗಿ ಚಲನಚಿತ್ರ ವೀಕ್ಷಿಸುವುದು

ಸತತವಾಗಿ ಚಲನಚಿತ್ರ ವೀಕ್ಷಿಸುವುದು

ಭಾರತೀಯರು ಚಲನಚಿತ್ರ ಪ್ರಿಯರು. ಅದರಲ್ಲೂ ಕೆಲವರು ಸತತವಾಗಿ ಚಲನಚಿತ್ರಗಳನ್ನು ನೋಡುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಒಂದರ ಹಿಂದೊಂದರಂತೆ ಚಲನಚಿತ್ರ ಅಥವಾ ಟೀವಿ ಧಾರಾವಾಹಿಗಳನ್ನು ವೀಕ್ಷಿಸುವ ಅಭ್ಯಾಸವಿರುತ್ತದೆ. ಇದು ದೇಹಕ್ಕೆ ಸರ್ವಥಾ ಒಳ್ಳೆಯದಲ್ಲ. ಏಕೆಂದರೆ ಈ ಸಮಯದಲ್ಲಿ ದೇಹದ ಚಟುವಟಿಕೆ ಕಡಿಮೆಯಾಗಿ ಮಾನಸಿಕ ಚಟುವಟಿಕೆ ಹೆಚ್ಚಾಗುವುದು, ಕಣ್ಣಿಗೆ ವಿಪರೀತವಾದ ದಣಿವು, ಕುಳಿತಲ್ಲೇ ಕುಳಿತ ಭಂಗಿಯ ಕಾರಣ ರಕ್ತಪರಿಚಲನೆಯಲ್ಲಿ ತಡೆ ಮೊದಲಾದ ತೊಂದರೆಗಳು ಎದುರಾಗುತ್ತವೆ. ಮಾನಸಿಕವಾಗಿಯೂ ಮೆದುಳು ದಣಿವು ಅನುಭವಿಸುತ್ತದೆ. ಪರೋಕ್ಷವಾಗಿ ಸಿನೆಮಾ ಮತ್ತು ಟೀವಿಗಳ ಕಾಲ್ಪನಿಕ ಘಟನೆಗಳನ್ನೇ ಮನಸ್ಸು ಮೆಲುಕು ಹಾಕುತ್ತಾ ವಾಸ್ತವದಿಂದ ದೂರಸರಿಯಲು ಕಾರಣವಾಗುತ್ತದೆ.

ಧೂಮಪಾನ

ಧೂಮಪಾನ

ಧೂಮಪಾನ ಆರೋಗ್ಯಕ್ಕೆ ಮಾರಕ ಎಂದು ಸಿಗರೇಟು ಪ್ಯಾಕೆಟ್ಟುಗಳ ಮೇಲೆ ಮುದ್ರಿಸಿರುವುದು ಮಾತ್ರವಲ್ಲ, ಎಲ್ಲಾ ಮಾಧ್ಯಮಗಳಲ್ಲೂ ತೋರಲಾಗುತ್ತದೆ. ಅಪ್ಪಟ ಸತ್ಯವಾದ ಈ ಮಾತಿಗೆ ಧೂಮಪಾನಿಗಳು ಸೊಪ್ಪು ಹಾಕದೇ ಇರಲು ಅವರ ಮಾನಸಿಕ ಶಕ್ತಿಯಲ್ಲಿ ಕೊರತೆಯೇ ಕಾರಣ. ದಿನಕ್ಕೊಂದು ಸಿಗರೇಟು ಸೇದಿದರೂ ಇದು ಆರೋಗ್ಯಕ್ಕೆ ಹಾನಿಕರವಾಗಿದೆ. ಅಷ್ಟೇ ಏಕೆ ಇತರರು ಸೇದಿ ಬಿಟ್ಟ ಹೊಗೆಯೂ ಅರೋಗ್ಯಕ್ಕೆ ಹಾನಿಕರ.

ಒತ್ತಡ ನೀಡುವ ಪಾದರಕ್ಷೆ

ಒತ್ತಡ ನೀಡುವ ಪಾದರಕ್ಷೆ

ನಮ್ಮ ಪಾದಗಳು ಇಡಿಯ ದೇಹದ ಭಾರವನ್ನು ಹೊರುವ ಜವಾಬ್ದಾರಿ ಇರುವುದರಿಂದ ಪಾದಗಳ ಸ್ವಾಭಾವಿಕ ಭಂಗಿಯನ್ನು ಬದಲಿಸಬೇಕಾಗುತ್ತದೆ. ಇದು ವಿಶೇಷವಾಗಿ ಬೆನ್ನುಹುರಿಯ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ.

ಒತ್ತಡ ನೀಡುವ ಪಾದರಕ್ಷೆ

ಒತ್ತಡ ನೀಡುವ ಪಾದರಕ್ಷೆ

ವಿಶೇಷವಾಗಿ ಹೈ ಹೀಲ್ಡ್ ಅಥವಾ ಹಿಮ್ಮಡಿ ಎತ್ತರ ಇರುವ ಪಾದರಕ್ಷೆ, ಪಾದಗಳ ಗಾತ್ರಕ್ಕೂ ಚಿಕ್ಕ ಅಥವಾ ದೊಡ್ಡ ಪಾದರಕ್ಷೆ ತೊಡುವುದು, ವಿಪರೀತ ಬಿಗಿಯಾದ, ಗಾಳಿಯಾಡದ ಪಾದರಕ್ಷೆ ತೊಡುವುದು, ಮೂತಿ ಚೂಪಾಗಿದ್ದು ಬೆರಳುಗಳ ಮೇಲೆ ಒತ್ತಡ ಹೇರುವ ಪಾದರಕ್ಷೆಗಳು ಅನಾರೋಗ್ಯಕರವಾಗಿದ್ದು ಇದನ್ನು ಬದಲಿಸುವುದು ಅನಿವಾರ್ಯವಾಗಿದೆ. ಬದಲಿಗೆ ಪಾದಗಳಿಗೆ ಸುಲಭವಾಗಿರುವ, ಚಪ್ಪಟೆಯಾದ ಪಾದರಕ್ಷೆಗಳೇ ಉತ್ತಮ.

ಆರೋಗ್ಯವನ್ನು ಕಡೆಗಣಿಸುವುದು

ಆರೋಗ್ಯವನ್ನು ಕಡೆಗಣಿಸುವುದು

ನಮ್ಮ ದೇಹಕ್ಕೆ ಯಾವುದೋ ತೊಂದರೆಯಾದರೆ, ಅಥವಾ ವೈರಾಣುಗಳ ಧಾಳಿಯಾದರೆ ನಮ್ಮ ರೋಗ ನಿರೋಧಕ ಶಕ್ತಿ ಇದಕ್ಕೆ ವಿರುದ್ಧವಾಗಿ ನಿಂತು ಹೋರಾಡುತ್ತದೆ. ಈ ತೊಂದರೆಗಳನ್ನು ನೋವು, ಸೋರುವ ಮೂಗು, ಉರಿ ಮೊದಲಾದ ಸೂಚನೆಗಳ ಮೂಲಕ ತೋರ್ಪಡಿಸುತ್ತದೆ. ಈ ಸೂಚನೆಗಳನ್ನು ನಿರ್ಲಕ್ಷಿಸುವ ಮೂಲಕ ದೇಹವನ್ನು ಇನ್ನಷ್ಟು ತೊಂದರೆಗೆ ಸಿಲುಕಿಸುತ್ತೇವೆ.

ಋಣಾತ್ಮಕ ಭಾವನೆಗಳು

ಋಣಾತ್ಮಕ ಭಾವನೆಗಳು

ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಋಣಾತ್ಮಕ ಶಕ್ತಿಗಳು ನಮ್ಮ ವಿರುದ್ಧ ಕೆಲಸಮಾಡುತ್ತವೆ. ಆದರೆ ಇವುಗಳಿಗೆ ಸೊಪ್ಪು ಹಾಕದೇ ಮುಂದುವರೆಯುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಸಾಧಿಸಬಹುದು.

ಋಣಾತ್ಮಕ ಭಾವನೆಗಳು

ಋಣಾತ್ಮಕ ಭಾವನೆಗಳು

ಹಾಗಾಗಿ 2016ರ ಈ ಹೊಸವರ್ಷದಲ್ಲಿ ಸದಾ ಧನಾತ್ಮಕ ಚಿಂತನೆ ಮತ್ತು ಒಂದು ಗುರಿಯತ್ತ ಚಿತ್ತವನ್ನು ಕೇಂದ್ರೀಕರಿಸುವ ಮೂಲಕ ಜೀವನ ಸಫಲಗೊಳಿಸಲು ಸಾಧ್ಯ. ಋಣಾತ್ಮಕ ಚಿಂತನೆ, ಸಲಹೆ ಮತ್ತು ವ್ಯಕ್ತಿಗಳಿಂದ ದೂರವಿರಿ.

English summary

Worst Things You Can Do To Your Body

It is time to begin the New Year 2016 on a positive note. This is also the apt time to let go of those nasty bad habits that curbed you from living a healthy lifestyle in 2015. Today, as you venture into the New Year it is best to make resolutions from those little things in life that will help to keep you active and fit. Getting rid of those worst things you can do to your body is the initial step to take. Boldsky introduces to you a handful of things you should say good-bye to this year.
X
Desktop Bottom Promotion