For Quick Alerts
ALLOW NOTIFICATIONS  
For Daily Alerts

ಮಸಾಲೆ ಪದಾರ್ಥಗಳು ನಾವು ಅಂದುಕೊಂಡಷ್ಟು ಆರೋಗ್ಯಕರವಲ್ಲ!

By Hemanth
|

ಮಸಾಲೆಗಳು ಪದಾರ್ಥಗಳ ರುಚಿ ಹಾಗೂ ಸುವಾಸನೆಯನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲೂ ಭಾರತದಲ್ಲಿ ಮಸಾಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಈಗೀಗ ವಿದೇಶಿ ಮಸಾಲೆಗಳು ಕೂಡ ಭಾರತೀಯರ ಅಡುಗೆ ಕೋಣೆಗಳನ್ನು ಸೇರಿಕೊಂಡಿದೆ.

ಟೊಮೆಟೊ ಸಾಸ್, ಸಾಸಿವೆ ಸಾಸ್, ಕ್ರೀಮ್ ಮೊದಲಾದವುಗಳನ್ನು ಪದಾರ್ಥಗಳಲ್ಲಿ ಸಾಮಾನ್ಯವಾಗಿ ಬಳಸುತ್ತೇವೆ. ಇದು ರುಚಿ ಹಾಗೂ ಸುವಾಸನೆಯನ್ನು ಹೆಚ್ಚಿಸುತ್ತದೆ. ಆದರೆ ನಾವು ಸೇವಿಸುವಂತಹ ಕೆಲವೊಂದು ಅತ್ಯಂತ ಕೆಟ್ಟ ಮಸಾಲೆಗಳ ಬಗ್ಗೆ ನೀವು ಕೇಳಿದ್ದೀರಾ?

Worst Condiments You Could Eat

ವಿದೇಶಗಳಲ್ಲಿ ಹಾಟ್ ಡಾಗ್ ಮತ್ತು ಬರ್ಗರ್ ಹೆಚ್ಚು ಜನಪ್ರಿಯ. ಇದನ್ನು ತಯಾರಿಸಲು ಮಿಸೊ, ಸೋಯಾಬಿನ್ ಸಾಸ್, ಹಮ್ಮುಸ್, ಕೆಚಪ್, ಸಾಸಿವೆ ಮತ್ತು ಮಯೋವನ್ನು ರುಚಿ ಹಾಗೂ ಸುವಾಸನೆಗೆ ಬಳಸಿಕೊಳ್ಳುತ್ತಾರೆ. ಟಾಕೋಸ್ ಮತ್ತು ನಾಚೊ ಚಿಪ್ಸ್ ಗಳಲ್ಲಿ ಸಾರ್ ಕ್ರೀಮ್ ಮತ್ತು ಗೌಕಮೊಲೆಯನ್ನು ಹೆಚ್ಚಾಗಿ ಬಳಸುತ್ತಾರೆ. ಕೆಲವೊಂದು ಸಲಾಡ್ ಗಳಿಗೂ ಮಸಾಲೆಯನ್ನು ಬಳಸಲಾಗುತ್ತದೆ.

ನೀವು ತಿನ್ನುವಂತಹ ಮಸಾಲೆಗಳಲ್ಲಿ ಕೆಚಪ್ ಅತ್ಯಂತ ಕೆಟ್ಟದ್ದಾಗಿದೆ. ಇದರಲ್ಲಿರುವ ಟೊಮೆಟೋ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದರಲ್ಲಿ ಒಳಗೊಂಡಿರುವ ಅಧಿಕ ಮಟ್ಟದ ಸಕ್ಕರೆ ಅಂಶವು ಆರೋಗ್ಯಕ್ಕೆ ಹಾನಿಕಾರಕ. ಕೆಚಪ್ ಬದಲಿಗೆ ಬಿಸಿಲಿನಲ್ಲಿ ಒಣಗಿಸಿದ ಟೊಮೆಟೋ ಬಳಸಿ.

ದೇಹಕ್ಕೆ ಅತ್ಯಂತ ಹಾನಿಕಾರವಾಗಿರುವ ಮತ್ತೊಂದು ಮಸಾಲೆಯೆಂದರೆ ಅದು ಬಾರ್ಬೆರಿಕ್ ಸಾಸ್. ಇದರಲ್ಲಿ ಅತ್ಯಧಿಕ ಮಟ್ಟದ ಕಾರ್ನ್ ಶುಗರ್ ಸಿರಪ್ ಹಾಗೂ ಕೆಲವೊಂದು ರಾಸಾಯನಿಕಗಳು ಇವೆ. ಈ ಹಾನಿಕಾರಕ ಮಸಾಲೆಯನ್ನು ಸೇವಿಸುವ ಬದಲಾಗಿ ನೈಸರ್ಗಿಕವಾಗಿ ಸಿಗುವಂತಹ ಗಿಡಮೂಲಿಕೆಗಳನ್ನು ಬಳಸಿಕೊಳ್ಳಿ.


ಸಲಾಡ್ ಗಳಿಗೆ ಮಾಡುವಂತಹ ಕೆಲವು ಹಗುರವಾದ ಡ್ರೆಸ್ಸಿಂಗ್ ದೇಹಕ್ಕೆ ತುಂಬಾ ಹಾನಿಯನ್ನು ಉಂಟು ಮಾಡುತ್ತದೆ. ಇದರಲ್ಲಿ ಮಾಮುಲಿಯಾದ ಸಲಾಡ್ ಡ್ರೆಸ್ಸಿಂಗ್ ಗೆ ಬಳಸುವಂತಹ ಕೊಬ್ಬು ಇದರಲ್ಲಿ ಇರಲ್ಲ. ಇದು ಅತ್ಯಧಿಕ ಮಟ್ಟದ ಸಕ್ಕರೆ ಅಂಶ ಮತ್ತು ಎಮುಲ್ಸಕಾರಕವನ್ನು ಒಳಗೊಂಡಿದೆ. ಇದರಿಂದ ಸಲಾಡ್ ದಪ್ಪಗೆ ಆಗುವುದು. ಈ ಮಸಾಲೆಗಳು ದೇಹಕ್ಕೆ ತುಂಬಾ ಹಾನಿಕರ. ಮಸಾಲೆ ಪದಾರ್ಥಗಳ ರಾಣಿ- ಪುಟ್ಟ ಏಲಕ್ಕಿ

ದೀರ್ಘ ಕಾಲದ ತನಕ ಮಯೋನಿಸ್ ಸೇವನೆ ಮಾಡುತ್ತಾ ಇದ್ದರೆ ಅದರಿಂದ ದೇಹಕ್ಕೆ ಹಾನಿಯಾಗಲಿದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಸೋಯಾಬಿನ್ ಎಣ್ಣೆಯಿಂದ ಮಾಡಿರುವ ಮಯೋನಿಸ್ ಸೇವನೆಯಿಂದಾಗಿ ರಕ್ತದೊತ್ತಡ ಹೆಚ್ಚಾಗಬಹುದು ಮತ್ತು ತೂಕ ಅಧಿಕವಾಗಬಹುದು. ಜೇನು ಸಾಸಿವೆ ನೀವು ತಿನ್ನುವಂತಹ ಮತ್ತೊಂದು ಹಾನಿಕಾರಕ ಮಸಾಲೆಯಾಗಿದೆ.

ಈ ಮಸಾಲೆಯನ್ನು ತಯಾರಿಸಲು ಜೇನಿನ ಬದಲು ಮುಸುಕಿನ ಜೋಳದ ಸಕ್ಕರೆಯನ್ನು ಬಳಸುವ ಕಾರಣದಿಂದ ಇದರಲ್ಲಿ ಅತ್ಯಧಿಕ ಮಟ್ಟದ ಸಕ್ಕರೆಯಿರುತ್ತದೆ. ಇದನ್ನು ಮನೆಯಲ್ಲಿಯೇ ತಯಾರಿಸಿಕೊಂಡು ತಿಂದರೆ ಒಳ್ಳೆಯದು.

ಕರಿದ ಮೀನು ಮತ್ತು ಇತರ ಕೆಲವೊಂದು ಆಹಾರಗಳಿಗೆ ಟಾರ್ಟರ್ ಸಾಸ್ ಅನ್ನು ಬಳಸುತ್ತಾರೆ. ಇದರಲ್ಲಿ ಮಯೋನಿಸ್ ಮತ್ತು ಉಪ್ಪಿನಕಾಯಿ ಒಳಗೊಂಡಿರುವ ಕಾರಣದಿಂದಾಗಿ ಇದು ಅತ್ಯಂತ ಕೆಟ್ಟ ಮಸಾಲೆಗಳಲ್ಲಿ ಒಂದಾಗಿದೆ.

English summary

Worst Condiments You Could Eat

A condiment is something used to improve the flavour of food. Ketchup, mustard sauce, sour cream, several sauces and spices are common condiments. Every one of these enhancesthe flavour of the foods they are served in or with. But are you aware of the worst condiments that you are eating?
Story first published: Sunday, September 25, 2016, 11:42 [IST]
X
Desktop Bottom Promotion