ವಿಶ್ವ ಏಡ್ಸ್‌ ದಿನಾಚರಣೆ: ನೀವು ತಿಳಿದಿರಲೇಬೇಕಾದ ಸಂಗತಿಗಳು

ಡಿಸೆಂಬರ್ 1. ವಿಶ್ವ ಏಡ್ಸ್ ದಿನ. ವಿಶ್ವ ಆರೋಗ್ಯ ಸಂಸ್ಥೆಯು 1988 ರಲ್ಲಿ ಡಿಸೆಂಬರ್ 1 ವಿಶ್ವ ಏಡ್ಸ್ ದಿನವೆಂದು ಘೋಷಿಸಿತು. ಏಡ್ಸ್ ಎಂಬ ಮಾರಕ ರೋಗವನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುವುದು.

By: Arshad
Subscribe to Boldsky

HIV ಅಂದರೆ human immunodeficiency virus ಎಂಬುದರ ಹೃಸ್ವರೂಪ. ಏಡ್ಸ್ ಎಂಬ ಕಾಯಿಲೆಗೂ ಈ ವೈರಸ್ಸಿಗೂ ನಿಕಟ ಸಂಬಂಧವಿದೆ. ಇವೆರಡೂ ಅರ್ಥವಾಗುವ ಮುನ್ನ ಈ ಪದದ ನಡುವಣ immune ಎಂಬ ಪದವನ್ನು ಅರ್ಥ ಮಾಡಿಕೊಳ್ಳಬೇಕು. ಇಮ್ಯೂನ್ ಅಂದರೆ ರೋಗ ನಿರೋಧಕ ವ್ಯವಸ್ಥೆ ಎಂದು ಅರ್ಥ. 

world-aids-day
 

ಈ ಜಗತ್ತಿನಲ್ಲಿ ಯಾವುದೇ ರೋಗಾಣುಗಳ ಸೋಂಕು ಇಲ್ಲದ ಜೀವಿ ಎಂದರೆ ಈಗತಾನೇ ಹುಟ್ಟಿದ ಮಗು ಮಾತ್ರ. ಆ ಕ್ಷಣದಿಂದ ಗಾಳಿ, ನೀರು ಆಹಾರದಲ್ಲಿನ ನೂರಾರು ಬಗೆಯ ವೈರಾಣುಗಳು ದೇಹದ ಮೇಲೆ ಧಾಳಿ ಮಾಡುತ್ತವೆ. ನಮ್ಮ ದೇಹದಲ್ಲಿರುವ ಈ ರೋಗ ನಿರೋಧಕ ವ್ಯವಸ್ಥೆ ಈ ರೋಗಾಣುಗಳಿಗೆ ತಕ್ಕ ಪ್ರತಿರೋಧವನ್ನು ನೀಡಿ ದೇಹ ಈ ವೈರಾಣುವಿಗೆ ಪ್ರತಿಜೀವಕ ಅಥವಾ ಧಾಳಿಗೆ ವಿರುದ್ಧವಾದ ಶಕ್ತಿಯನ್ನು ಬೆಳೆಸಿಕೊಂಡು ಬಿಡುತ್ತದೆ. ಏಡ್ಸ್ ಬಗ್ಗೆ ಇರುವ ಸಾಮಾನ್ಯ ತಪ್ಪು ತಿಳುವಳಿಕೆಗಳು  

world-aids-day
 

ಈ ಪ್ರಕ್ರಿಯೆ ಹೆಚ್ಚೂ ಕಡಿಮೆ ಜೀವಮಾನವಿಡೀ ನಡೆಯುತ್ತಿರುತ್ತದೆ. ಪ್ರತಿಬಾರಿ ನಮಗೆ ಶೀತವಾದರೆ ಇದಕ್ಕೆ ಕಾರಣವಾದ ವೈರಸ್ಸುಗಳು ಬೇರೆಬೇರೆಯೇ ಇರುತ್ತವೆ. ಇದೇ ಕಾರಣಕ್ಕೆ ಮಕ್ಕಳಿಗೆ ಬೇಗನೇ ಶೀತವಾಗುತ್ತದೆ ಹಾಗೂ ವೃದ್ಧರಿಗೆ ಅತಿ ಕಡಿಮೆ. ಈಗ deficiency ಎಂಬ ಪದ ಅರ್ಥ ನೋಡೋಣ. ಇದರ ಅರ್ಥ ಕಡಿಮೆ ಮಾಡುವುದು ಎಂದರ್ಥ. 

world-aids-day
 

ಒಂದು ವೇಳೆ ನಮ್ಮ ಆರೋಗ್ಯವನ್ನು ರಕ್ಷಿಸುತ್ತಿರುವ ಈ ವ್ಯವಸ್ಥೆಗೇ ಧಾಳಿ ಮಾಡಿದರೆ? HIV ಎಂಬ ವೈರಸ್ಸು ಮಾಡುವುದೇ ಇದನ್ನು. ಈ ರಕ್ಷಣಾ ವ್ಯವಸ್ಥೆ ಇಲ್ಲದೇ ಇದ್ದಾಗ ಸಾಮಾನ್ಯ ಶೀತ ಜ್ವರಗಳ ವಿರುದ್ಧವೂ ದೇಹ ಹೋರಾಡದ ಸ್ಥಿತಿಗೆ ತಲುಪುತ್ತದೆ. ಈ ವೈರಸ್ಸು ಸುಖಾಸುಮ್ಮನೇ ಗಾಳಿಯಲ್ಲಿ ಹಾರಿ ಬರುವುದಿಲ್ಲ, ಬದಲಿಗೆ ಇದಕ್ಕೂ ಮುನ್ನ ಈ ವೈರಸ್ಸಿನ ಸೋಂಕು ಇರುವ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹರಡುವ ಮೂಲಕವೇ ಬರುತ್ತದೆ. 

world-aids-day
 

ಇದೇ ಕಾರಣಕ್ಕೆ acquired ಅಥವಾ ತಾನಾಗಿ ಪಡೆದ ಎಂಬ ಅರ್ಥದ ಪದವನ್ನು ಬಳಸಲಾಗಿದೆ. ಇನ್ನೊಬ್ಬ ವ್ಯಕ್ತಿಯಿಂದ ತಾನಾಗಿ ಪಡೆದು ತನ್ನ ರೋಗ ನಿರೋಧಕ ವ್ಯವಸ್ಥೆಯನ್ನು ಕುಂಠಿತಗೊಳಿಸುವ ರೋಗವೇ acquired immune deficiency syndrome ಅಥವಾ ಏಡ್ಸ್. ವಿಶ್ವ ಏಡ್ಸ್ ದಿನಾಚರಣೆ-ಹೆಚ್‌ಐವಿ ರೋಗದ ಸತ್ಯಾಸತ್ಯತೆ

ಈ ವೈರಸ್ಸು ಪ್ರಾಥಮಿಕವಾಗಿ ರಕ್ತದಲ್ಲಿರುವ ರಕ್ಷಣಾ ಸೈನಿಕರಾದ ಬಿಳಿ ರಕ್ತಕಣಗಳ ( T-helper cell) ಮೇಲೆ ಆಕ್ರಮಣ ಮಾಡಿ ಈ ಕಣಗಳ ಒಳಗೆ ಆಶ್ರಯ ಪಡೆದು ವಂಶಾಭಿವೃದ್ಧಿಗೊಳ್ಳುತ್ತದೆ. ಈ ವೈರಸ್ಸು ಅಶ್ರಯ ಪಡೆದ ಕಣಗಳನ್ನು CD4 cells ಎಂದು ಕರೆಯುತ್ತಾರೆ. ಬನ್ನಿ, ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೋಡೋಣ: 

world-aids-day
 

ಹೆಚ್ ಐ ವಿ ವೈರಸ್ಸುಗಳಲ್ಲಿ ಬಹಳ ವಿಧಗಳಿವೆ. ಆದರೆ ಇವುಗಳ ಕಾರ್ಯಾಚರಣೆಯನ್ನು ಅನುಸರಿಸಿ ಸ್ಥೂಲವಾಗಿ ಎರಡು ವಿಭಾಗಗಳಾಗಿ ವಿಂಗಡಿಸಿ ಎಲ್ಲವನ್ನೂ ಉಪವಿಭಾಗಗಳಲ್ಲಿ ಹಂಚಲಾಗಿದೆ.

ಪ್ರಮುಖವಾದ ಎರಡು ಗುಂಪುಗಳೆಂದರೆ:
HIV-1: ಅತಿ ಸಾಮಾನ್ಯವಾಗಿ ಕಂಡುಬರುವ ವೈರಸ್ಸು
HIV-2: ಪಶ್ಚಿಮ ಆಫ್ರಿಕಾದಲ್ಲಿ ಅತಿ ಹೆಚ್ಚಾಗಿ ಮತ್ತು ಅಪರೂಪದಲ್ಲಿ ಭಾರತ ಮತ್ತು ಯೂರೋಪ್ ನಲ್ಲಿ ಕಂಡುಬರುವ ವೈರಸ್ಸು.

ಹೆಚ್ ಐ ವಿ ಬಗ್ಗೆ ಕೆಲವು ಮಾಹಿತಿಗಳು
*ಈ ವೈರಸ್ಸು ಓರ್ವ ವ್ಯಕ್ತಿಯ ದೇಹ ಪ್ರವೇಶಿಸಿದ ಬಳಿಕ ಥಟ್ಟನೇ ಇದರ ಪರಿಣಾಮ ಕಾಣಲು ಸಾಧ್ಯವಿಲ್ಲ. ಬದಲಿಗೆ ಇದು ನಿಧಾನವಾಗಿ ಬಿಳಿರಕ್ತಕಣಗಳನ್ನು ಆಕ್ರಮಿಸಿಕೊಳ್ಳುತ್ತಾ ಬೆಳೆಯುತ್ತಾ ರೋಗ ನಿರೋಧಕ ಶಕ್ತಿಯನ್ನು ನಿಧಾನವಾಗಿ ಕ್ಷೀಣಿಸುತ್ತಾ ಒಂದು ಹಂತದಲ್ಲಿ ನಿಷ್ಪಲವಾಗಿಸುತ್ತದೆ. ಈ ಹಂತಕ್ಕೆ ಬರಲು ಸುಮಾರು ಹತ್ತರಿಂದ ಹದಿನೈದು ವರ್ಷಗಳೇ ಬೇಕಾಗಬಹುದು.

world-aids-day

*ಈ ವೈರಸ್ಸಿಗೆ ಇದುವರೆಗೆ ಸಮರ್ಥವಾದ ಮದ್ದನ್ನು ಕಂಡುಹಿಡಿಯಲಾಗಿಲ್ಲ. ಆದರೆ ಇದರ ಪ್ರಭಾವವನ್ನು ಕಡಿಮೆಗೊಳಿಸಿ ಇನ್ನಷ್ಟು ವೃದ್ದಿಯಾಗದಂತೆ ತಡೆಯುವ ಮದ್ದುಗಳು ಲಭ್ಯವಿವೆ. ಆದ್ದರಿಂದ ಯಾವಾಗ ಈ ವೈರಸ್ಸು ರಕ್ತದಲ್ಲಿ ಕಂಡುಬಂದಿತೋ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಈ ವೈರಸ್ಸಿನ ಬೆಳೆಯುವ ಗತಿಯನ್ನು ನಿಯಂತ್ರಿಸಿ ರೋಗವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಇದರಿಂದ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯ.

*ಈ ವೈರಸ್ಸಿಗೆ ದೇಹದ ದ್ರವಗಳೇ ಆಶ್ರಯದಾಣಗಳು. ಇವುಗಳಲ್ಲಿ ಪ್ರಮುಖವಾಗಿ ವೀರ್ಯ, ರಕ್ತ, ಮಹಿಳೆಯರ ಗುಪ್ತಾಂಗದ ಸ್ರಾವ, ಗುದದ್ವಾರದ ಒಳಗಿನ ದ್ರವ, ತಾಯಿಹಾಲು ಸೇರಿವೆ. ಈ ವೈರಸ್ಸು ದೇಹದ ಇತರ ದ್ರವಗಳಾದ ಬೆವರು, ಜೊಲ್ಲು, ಮೂತ್ರದ ಮೂಲಕ ಹರಡುವುದಿಲ್ಲ. ಇಂಗ್ಲೆಂಡಿನಲ್ಲಿ ನಡೆಸಿದ ಸಮೀಕ್ಷೆಗಳ ಪ್ರಕಾರ ಈ ವೈರಸ್ಸು ಹರಡಲು ಅತ್ಯಂತ ಸಮರ್ಥವಾದ ಮಾಧ್ಯಮವೆಂದರೆ ಸೋಂಕು ಹೊಂದಿರುವ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ.

world-aids-day
 

ಈ ವೈರಸ್ಸಿನ ಸೋಂಕು ಇರುವ ವ್ಯಕ್ತಿಯ ರಕ್ತವನ್ನು ಹೀರಿದ ಇಂಜೆಕ್ಷನ್ ಸಿರಿಂಜ್, ಸೂಜಿ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಇನ್ನೊಬ್ಬ ವ್ಯಕ್ತಿಯ ಮೇಲೆ ಪ್ರಯೋಗಿಸಿದಾಗ, ಸೋಂಕು ಇರುವ ಮಹಿಳೆಯ ಗರ್ಭಾವಸ್ಥೆಯಲ್ಲಿ ಗರ್ಭದಲ್ಲಿರುವ ಮಗುವಿಗೆ, ಸೋಂಕು ಇರುವ ತಾಯಿಯ ಹಾಲನ್ನು ಕುಡಿಯುವ ಮಕ್ಕಳಿಗೆ ಹರಡುತ್ತದೆ.

ಏಡ್ಸ್ ಎಂದರೇನು?
ಈ ಮೊದಲೇ ತಿಳಿಸಿದಂತೆ ಇನ್ನೊಬ್ಬ ವ್ಯಕ್ತಿಯಿಂದ ತಾನಾಗಿ ಪಡೆದು ತನ್ನ ರೋಗ ನಿರೋಧಕ ವ್ಯವಸ್ಥೆಯನ್ನು ಕುಂಠಿತಗೊಳಿಸುವ ರೋಗವೇ acquired immune deficiency syndrome ಅಥವಾ ಏಡ್ಸ್. ಸಾಮಾನ್ಯವಾಗಿ ಈ ರೋಗ ತಗುಲಿದ ವ್ಯಕ್ತಿಗೆ ಈ ವೈರಸ್ಸಿನ ಪ್ರಭಾವ ಉಲ್ಬಣಗೊಳ್ಳುವವರೆಗೆ ಗೊತ್ತೇ ಆಗದ ಕಾರಣ ತನಗೆ ಸೋಂಕು ಇದೆ ಎನ್ನುವುದೇ ಆತನಿಗೆ ತಿಳಿದಿರುವುದಿಲ್ಲ. ಎಚ್‌ಐವಿ ರೋಗದ ಮೂಲ ಹುಡುಕಿದರೆ ಕಾದಿದೆ ಅಚ್ಚರಿ!

ಆದರೆ ಉಲ್ಬಣಗೊಂಡ ಬಳಿಕ ರೋಗ ನಿರೋಧಕ ವ್ಯವಸ್ಥೆ ಕುಸಿದು ಸಾಮಾನ್ಯ ಶೀತ ಜ್ವರವನ್ನೂ ಎದುರಿಸಲಾಗದೇ ದೇಹ ಸೋಲನ್ನೊಪ್ಪಿಕೊಂಡು ಸಾವಿಗೆ ಆಹ್ವಾನ ನೀಡುತ್ತದೆ. ಈ ಹಂತದಲ್ಲಿ ಚಿಕಿತ್ಸೆ ಕಷ್ಟಕರವೂ ದುಬಾರಿಯೂ ಆಗಿರುವ ಕಾರಣ ಅನಿವಾರ್ಯವಾದ ಸಾವನ್ನು ಕೊಂಚದಿನ ಮುಂದೂಡಬಹುದಷ್ಟೇ, ಆದರೆ ಸಾವಿನ ತೂಗುಕತ್ತಿ ತಲೆಯ ಮೇಲೆ ತೂಗುತ್ತಿರುವ ಸ್ಥಿತಿ ಯಾವ ಸಾವಿಗೂ ಕಡಿಮೆಯಲ್ಲ. ಆದ್ದರಿಂದ ಎಷ್ಟು ಬೇಗನೇ ಈ ವೈರಸ್ಸಿನ ವಿರುದ್ದ ಚಿಕಿತ್ಸೆ ಸಾಧ್ಯವೋ ಅಷ್ಟು ಬೇಗನೇ ಪ್ರಾರಂಭಿಸಬೇಕು.

ಈ ರೋಗದ ಬಗ್ಗೆ ಕೆಲವು ಮಾಹಿತಿಗಳನ್ನು ನೋಡೋಣ:
ದೇಹವನ್ನು ಹೆಚ್ ಐ ವಿ ವೈರಸ್ಸು ಪ್ರವೇಶಿಸಿದಾಕ್ಷಣ ಏಡ್ಸ್ ಬರುವುದಿಲ್ಲ. ಬದಲಿಗೆ ಇದು ಒಂದು ಹಂತಕ್ಕೆ ಬೆಳೆದ ಬಳಿಕವೇ ರೋಗ ನಿರೋಧಕ ಶಕ್ತಿಯನ್ನು ಉಡುಗಿಸಲು ಪ್ರಾರಂಭಿಸುತ್ತದೆ. ಆಗಲೇ ವ್ಯಕ್ತಿಗೆ ಏಡ್ಸ್ ಇರುವುದನ್ನು ಖಚಿತಪಡಿಸಲಾಗುತ್ತದೆ. ಅಲ್ಲಿಯವರೆಗೆ ವ್ಯಕ್ತಿ ಕೇವಲ ಸೋಂಕು ಪೀಡಿತ ವ್ಯಕ್ತಿಯಾಗಿರುತ್ತಾನೆ. ಆದರೆ ಏಡ್ಸ್ ಸ್ಥಿತಿ ಪ್ರಾರಂಭವಾದ ಬಳಿಕ HIV infection ಅಥವಾ late-stage HIV ಎಂದು ಕರೆಯಲಾಗುತ್ತದೆ. ಏಡ್ಸ್ ರೋಗಿಗಳನ್ನು ಹೀಗೆ ನೋಡುವುದು ಸರಿಯೇ?  

world-aids-day
 

ಏಡ್ಸ್ ಬಂದ ಬಳಿಕ ರೋಗಿಯಲ್ಲಿ ನ್ಯುಮೋನಿಯಾ ಜ್ವರ, ತುರಿಕೆಯ ಬಳಿಕ ಚರ್ಮದಲ್ಲಿ ಸೂಕ್ಷ್ಮಗೆರೆಗಳು, ಶಿಲೀಂಧ್ರದ ಸೋಂಕು, ಕ್ಷಯ, toxoplasmosis ಮತ್ತು cytomegalovirus ಎಂಬ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಒಂದು ವೇಳೆ ರೋಗಿಯ ಆರೋಗ್ಯ ಇತಿಹಾಸದಲ್ಲಿ ಕ್ಯಾನ್ಸರ್ ಅಥವಾ ಮೆದುಳಿನ ಕ್ಷಮತೆ ಉಡುಗುವ ಇತರ ಕಾಯಿಲೆಗಳು ಆವರಿಸುವ ಸಾಧ್ಯತೆ ಇದ್ದರೆ ಈ ವೈರಸ್ಸು ಈ ಸಾಧ್ಯತೆಗಳನ್ನು ಸಾಧ್ಯವಾಗಿಸಿ ತೋರಿಸುತ್ತದೆ. ಅಂದರೆ ತಡೆಗಟ್ಟಬಹುದಾಗಿದ್ದ ಕ್ಯಾನ್ಸರ್ ಸುಲಭವಾಗಿ ಆವರಿಸುತ್ತದೆ.

world-aids-day
 

ನಮ್ಮ ರಕ್ತದ ಬಿಳಿರಕ್ತಕಣಗಳಲ್ಲಿ ಒಳ್ಳೆಯ ಕಣಗಳಾದ T-helper cells ಎಷ್ಟಿವೆ ಎಂಬ ಪ್ರಮಾಣವನ್ನು CD4 count ಎಂಬ ಮಾಪಕದ ಮೂಲಕ ಅಳೆಯಲಾಗುತ್ತದೆ. ಒಂದು ವೇಳೆ ಈ ಅಳತೆ ಒಂದು ಮಿಲಿಲೀಟರಿನಲ್ಲಿ ಇನ್ನೂರಕ್ಕೂ ಕಡಿಮೆಯಾದರೆ ವ್ಯಕ್ತಿಗೆ ಏಡ್ಸ್ ಇದೆ ಎಂದು ಗೊತ್ತಾಗುತ್ತದೆ.

ಹೋಲಿಕೆ ಮಾಡಿ ನೋಡಿ ಹಾಗೂ ಅತ್ಯುತ್ತಮ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿ

Story first published: Thursday, December 1, 2016, 10:44 [IST]
English summary

world-aids-day-2016-what-are-hiv-aids

HIV is a virus that gradually attacks the immune system, which is our body’s natural defence against illness. If a person becomes infected with HIV, they will find it harder to fight off infections and diseases. The virus destroys a type of white blood cell called a T-helper cell and makes copies of itself inside them. T-helper cells are also referred to as CD4 cells.1
Please Wait while comments are loading...
Subscribe Newsletter